ಮನೆಗೆ ಬಲವಾದ ಛಾವಣಿಯನ್ನು ಹೇಗೆ ನಿರ್ಮಿಸುವುದು?

ಛಾವಣಿಯು ನಿಮ್ಮ ಮನೆಯ ಮುಖ್ಯ ಭಾಗವಾಗಿದ್ದು, ಮನೆಯನ್ನು ಹೊರಗಿನ ಗಾಳಿ, ನೀರು ಮತ್ತು ಸೂರ್ಯನ ಶಾಖದಿಂದ ರಕ್ಷಿಸುತ್ತದೆ. ಆದ ಕಾರಣ ಈ ಅಂಶಗಳನ್ನು ತಡೆದುಕೊಳ್ಳಬಲ್ಲ ಸದೃಢವಾದ ಛಾವಣಿ ನಿರ್ಮಿಸುವುದು ಅಗತ್ಯವಾಗಿದೆ. ಅನೇಕ ಬಗೆಯ ಛಾವಣಿಗಳಿದ್ದರೂ, ಆರ್‌ಸಿಸಿ ಛಾವಣಿಯನ್ನು ಸಾಮಾನ್ಯವಾಗಿ ದೇಶದಲ್ಲಿ ಬಳಸಲಾಗುತ್ತದೆ. ಈ ವಿಧದ ಛಾವಣಿ ನಿರ್ಮಾಣದ ಹಂತಗಳು ಈ ಕೆಳಗಿನಂತಿವೆ.

1

 

 

1
 

 

ಕಾಲಂಗಳು, ಬೀಮ್‌ಗಳು  ಮತ್ತು ಗೋಡೆ ನಿರ್ಮಾಣದ ಮೂಲಕ ಆರಂಭಿಸಿ.

2

 

 

2
 

 

ನಂತರ, ಮರ ಅಥವಾ ಸ್ಟೀಲ್‌ನಿಂದ ಮಾಡಲಾದ ಛಾವಣಿಯ ಶಟರಿಂಗ್ ಕೆಲಸ ಮಾಡಿ.  ಅದಕ್ಕೆ ಬೆಂಬಲ ನೀಡಲು ಬಿದಿರಿನ ಗಳ ಅಥವಾ ಸ್ಕಾಫೋಲ್ಡಿಂಗ್ ಬ್ಲಾಕ್‌ಗಳನ್ನು ಬಳಸಿ, ಇದರಿಂದ ಸ್ಲ್ಯಾಬ್‌ನ ಭಾರಕ್ಕೆ ಅದು ಕುಸಿದು ಬೀಳುವುದಿಲ್ಲ.

3

 

 

3
 

 

ಸ್ಲ್ಯಾಬ್ ಮೇಲ್ಭಾಗದಲ್ಲಿ ಸ್ಟೀಲ್‌ನ ಮೆಷ್ ಅನ್ನು ಇರಿಸಿ. ಬದಿಗಳಲ್ಲಿ ಬಾಗಿಸಿದ ಬಾರ್‌ಗಳು ಇರಬೇಕು. ಸ್ಟೀಲ್‌ ರಾಡ್‌ಗಳ ಕೆಳಗೆ ಕವರ್ ಬ್ಲಾಕ್‌ಗಳನ್ನು ಇರಿಸಲಾಗುತ್ತದೆ, ಇದು ಬಾರ್‌ಗಳ ಸ್ಥಾನವನ್ನು ಹೊಂದಾಣಿಕೆ ಮಾಡುತ್ತದೆ.

4

 

 

4
 

 

ನಂತರ, ಸಿಮೆಂಟ್, ಮರುಳು ಮತ್ತು ಅಗ್ರಿಗೇಟ್‌ ಹಾಗೂ ವೆದರ್‌ ಪ್ರೊನಂತಹ ವಾಟರ್‌ಪ್ರೂಫಿಂಗ್ ಸಂಯುಕ್ತದೊಂದಿಗೆ ಕಾಂಕ್ರೀಟ್ ಮಿಶ್ರಣವನ್ನು ತಯಾರಿಸಿ.

5

 

 

5
 

 

ಕಾಂಕ್ರೀಟ್ ಹಾಕಿ ಮತ್ತು ಅದನ್ನು ಚೆನ್ನಾಗಿ ಸಮತಟ್ಟು ಮಾಡಿ, ಅದು ಕಾಂಪ್ಯಾಕ್ಟ್ ಆಗುವ ತನಕ ಕಾಯಿರಿ ಮತ್ತು ನಂತರ ಫಿನಿಶಿಂಗ್‌ ಕೆಲಸ ಆರಂಭಿಸಿ.

6

 

 

6
 

ಸ್ಲ್ಯಾಬ್‌ಗಳನ್ನು ಕ್ಯೂರ್ ಮಾಡಲು ಸಣ್ಣ ಕೊಳಗಳನ್ನು ನಿರ್ಮಿಸಿ. ಕ್ಯೂರಿಂಗ್ ಪ್ರಕ್ರಿಯೆಯನ್ನು 2-3 ವಾರಗಳ ಕಾಲ ಮಾಡಬೇಕು. ನಿಮ್ಮ ಸ್ಲ್ಯಾಬ್ ಗಟ್ಟಿಯಾದ ಬಳಿಕ, ನೀವು ಶಟರಿಂಗ್ ಅನ್ನು ಜಾಗರೂಕತೆಯಿಂದ ತೆಗೆದುಹಾಕಬಹುದು.

ಈ 6 ಸರಳ ಕ್ರಮಗಳ ಮೂಲಕ, ನೀವು ನಿಮ್ಮ ಮನೆಯ ಆರ್‌ಸಿಸಿ ಛಾವಣಿ ನಿರ್ಮಿಸಬಹುದು.

ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಅಂತಹ ಇನ್ನಷ್ಟು ಮಾಹಿತಿಗಾಗಿ ಅಲ್ಟ್ರಾಟೆಕ್‌ ಸಿಮೆಂಟ್‌ನ #ಮನೆಯಮಾತು ಆಲಿಸಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ