ಸೂಕ್ತವಾದ ಗುಣಮಟ್ಟದ ಕಬ್ಬಿಣವನ್ನು ಬಳಸುವುದರಿಂದ ನಿರ್ಮಾಣದ ಗುಣಮಟ್ಟವು ಸುಧಾರಿಸುತ್ತದೆ ಹಾಗೂ ನಿಮ್ಮ ಮನೆಯು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ. ನೀವು ಮನೆಯನ್ನು ನಿರ್ಮಿಸುವಾಗ ಸರಿಯಾದ ಕಬ್ಬಿಣವನ್ನು ಖರೀದಿಸುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಕೆಲವು ಕ್ರಮಗಳು ಇಲ್ಲಿವೆ.
ನೀವು ಪರಿಶೀಲಿಸಬೇಕಾದ ಮೊದಲನೆಯ ಅಂಶವೆಂದರೆ ISI ಗುರುತು, ಅದು ಇದ್ದಲ್ಲಿ ಕಬ್ಬಿಣದ ಕಂಬಿಯನ್ನು ಗುಣಮಟ್ಟಕ್ಕಾಗಿ ಪರೀಕ್ಷಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡಂತಾಗುತ್ತದೆ
ಹೆಸರಾಂತ ಬ್ರಾಂಡ್‌ಗಳ ಕಬ್ಬಿಣವನ್ನೇ ಯಾವಾಗಲೂ ಖರೀದಿಸಿ. ಕಂಬಿಗಳ ವ್ಯಾಸ, ದರ್ಜೆ ಮತ್ತು ತೂಕಗಳು ಎಂಜಿನಿಯರ್ ಸೂಚಿಸಿರುವ ರೀತಿಯಲ್ಲಿಯೇ ಇರಬೇಕು ಎನ್ನುವುದನ್ನು ನೆನಪಿಡಿ.
ಕಬ್ಬಿಣದ ಕಂಬಿಯನ್ನು ನಿಧಾನವಾಗಿ ಬಾಗಿಸಿ ಮತ್ತು ಯಾವುದೇ ಬಿರುಕುಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ
ಕಬ್ಬಿಣದ ಕಂಬಿಯು ತುಕ್ಕು ಮತ್ತು ಸಡಿಲವಾದ ಬಣ್ಣದ ಲೇಪನಗಳಿಂದ ಮುಕ್ತವಾಗಿದೆ ಹಾಗೂ ಅದರ ಅಡ್ಡಪಟ್ಟಿಗಳು ತುಂಡಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ನೆನಪಿಟ್ಟುಕೊಳ್ಳಿ, ನೆಲದಲ್ಲಿರುವ ತೇವಾಂಶವು ತುಕ್ಕು ಹಿಡಿಯಲು ಕಾರಣವಾಗುತ್ತದೆ, ಹಾಗಾಗಿ ಯಾವಾಗಲೂ ಕಬ್ಬಿಣದ ಕಂಬಿಗಳನ್ನು ಮರದ ಹಲಗೆಗಳ ಮೇಲೆ ಸಂಗ್ರಹಿಸಿಡಿ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ