ಮರೆಮಾಡುವ ಪ್ಲಂಬಿಂಗ್ ಅನ್ನು ಇನ್ಸ್ಟಾಲ್ ಮಾಡಲು ಕ್ರಮಗಳು

ನಿಮ್ಮ ಮನೆಯನ್ನು ನಿರ್ಮಿಸುವಾಗ ಪೈಪ್‌ಗಳು ಮತ್ತು ವೈರ್‌ಗಳನ್ನು ಗೋಡೆಗಳ ಒಳಗೆ ಅಡಗಿಸುವುದು ಬಹುಮುಖ್ಯವಾದ ಕೆಲಸವಾಗಿರುತ್ತದೆ. ಇದು ನಿಮ್ಮ ಮನೆಯ ನೋಟ ಮತ್ತು ಪರಿಪೂರ್ಣತೆಯನ್ನು ಕಾಪಾಡಿ, ಆಧುನಿಕತೆಯ ಸೊಬಗನ್ನು ನೀಡಿ, ನಿಮ್ಮ ಕುಟುಂಬಕ್ಕೆ ವಾಸಯೋಗ್ಯವಾಗಿಸುತ್ತದೆ. ಪೈಪ್‌ಗಳನ್ನು ನಿಮ್ಮ ಮನೆಯ ಗೋಡೆಯಲ್ಲಿ ಅಡಗಿಸುವ ವಿಧಾನವನ್ನು ಈ ಕೆಳಗೆ ಹಂತ-ಹಂತವಾಗಿ ವಿವರಿಸಲಾಗಿದೆ.

1

 

ಟ್ರ್ಯಾಕ್‌ಗಳನ್ನು ಗುರುತುಹಾಕಿ

 

1
 

ಟ್ರ್ಯಾಕ್‌ಗಳನ್ನು ಗುರುತುಹಾಕಿ

ಮೊದಲಿಗೆ, ಒಂದು ಸ್ಪಿರಿಟ್‌ ಲೆವೆಲ್‌ ಬಳಸಿಕೊಂಡು ಪೈಪ್‌ಗಳ ಔಟ್‌ಲೆಟ್‌ಗಳಾದಂತಹ ನಲ್ಲಿ, ಶವರ್‌ಗಳು, ಮತ್ತು ವಾಶ್‌ಬೇಸಿನ್‌ ಅನ್ನು ಗುರುತು ಹಾಕಿಕೊಳ್ಳಿ ನಂತರ ಕುಡಿಯುವ ನೀರಿನ ಪೈಪ್‌ ಮತ್ತು ಚರಂಡಿ ಪೈಪ್‌ಗಳು ಪರಸ್ಪರ ಒಂದರ ಮೇಲೆ ಇನ್ನೊಂದು ಹಾದುಹೋಗದಂತೆ ಖಾತ್ರಿಪಡಿಸಿಕೊಳ್ಳಿ.

2

 

ಕೊರೆಯುವಿಕೆಯ ಆಳ

 

2
 

ಕೊರೆಯುವಿಕೆಯ ಆಳ

ನಂತರ ಡಿಸ್ಕ್‌ ಬ್ಲೇಡ್‌ನ ಸಹಾಯದಿಂದ ಗುರುತುಹಾಕಿದ ಪ್ರದೇಶದವನ್ನು ಕೊರೆಯಿರಿ. ನೆನಪಿಡಿ, ಕೊರೆದ ಜಾಗವು ಪೈಪ್‌ನ ದಪ್ಪಕ್ಕಿಂತ 4-6 ಮಿಮೀ ನಷ್ಟು ಆಳವಾಗಿರಬೇಕು. ಈ ಪ್ರಕ್ರಿಯೆಯಲ್ಲಿ ನಿಮ್ಮ ಮನೆಯ ಕಾಲಂ ಅಥವಾ ಬೀಮ್‌ಗೆ ಹಾನಿಯಾಗದಂತೆ ನೋಡಿಕೊಳ್ಳಿ.

3

 

ಸೂಕ್ತವಾದ ಹಳ್ಳಗಳನ್ನು ಮಾಡಿ

 

3
 

ಸೂಕ್ತವಾದ ಹಳ್ಳಗಳನ್ನು ಮಾಡಿ

ಸನಿಕೆಯನ್ನು ಬಳಸಿಕೊಂಡು ಗುರುತುಹಾಕಿದ ಜಾಗದಲ್ಲಿ ಹಳ್ಳಗಳನ್ನು ಮಾಡಿ. ಗೋಡೆಯು ಯಾವುದೇ ಭಾರ ಹೊರುವ ಗೋಡೆಯಾಗಿದ್ದರೆ, ಸಂಪೂರ್ಣ ಜಾಗವನ್ನು ಒಂದೇ ಬಾರಿಗೆ ಕೊರೆಯದೇ ಇರುವಂತೆ ನೋಡಿಕೊಳ್ಳಿ.

4

 

ಪೈಪ್‌ಗಳನ್ನು ಜೋಡಿಸಿ

 

4
 

ಪೈಪ್‌ಗಳನ್ನು ಜೋಡಿಸಿ

ಮೊಳೆಗಳ ನೆರವಿನಿಂದ ಪೈಪ್‌ಗಳನ್ನು ಗೋಡೆಯಲ್ಲಿನ ಹಳ್ಳಗಳ ಒಳಗೆ ಜೋಡಿಸಿ.

5

 

ಖಾಲಿ ಜಾಗಗಳನ್ನು ಭರ್ತಿ ಮಾಡುವಿಕೆ

 

5
 

ಖಾಲಿ ಜಾಗಗಳನ್ನು ಭರ್ತಿ ಮಾಡುವಿಕೆ

ಪೈಪ್‌ಗಳು ಮತ್ತು ಗೋಡೆಗಳ ನಡುವಿನ ಅಂತರಗಳನ್ನು ಸಿಮೆಂಟ್‌ ಮತ್ತು ಮರಳಿನ ಗಾರೆಯಿಂದ ತುಂಬಿಸಿ.

6

 

ಬಿರುಕುಗಳನ್ನು ತಡೆಗಟ್ಟುವುದು

 

6
 

ಬಿರುಕುಗಳನ್ನು ತಡೆಗಟ್ಟುವುದು

ಗೋಡೆಗಳಲ್ಲಿ ಬಿರುಕುಗಳನ್ನು ತಡೆಗಟ್ಟಲು ಒಂದು ಸ್ಟೀಲ್‌ ಜಾಲರಿಯನ್ನು ಬಳಸಿ.  ಇದನ್ನು ಹಳ್ಳದಲ್ಲಿ ಇರಿಸಿ, ಹಾಗೂ ಮೊಳೆಗಳು ಮತ್ತು ಗಾರೆಯ ಸಹಾಯದಿಂದ ಭದ್ರಪಡಿಸಿ.

ಈ ಸರಳವಾದ ಕ್ರಮಗಳನ್ನು ಅನುಸರಿಸುವುದರಿಂದ, ನೀವು ಬೇಗನೇ ಹಾಗೂ ಸುಲಭವಾಗಿ ನಿಮ್ಮ ಮನೆಯ ಪೈಪ್‌ಗಳನ್ನು ಗೋಡೆಗಳ ಒಳಗೆ ಮುಚ್ಚಬಹುದು.

ಉತ್ತಮ ಪ್ಲಂಬಿಂಗ್‌ ಸಾಮಗ್ರಿಯನ್ನು ಪಡೆಯಲು ಮತ್ತು ಹೆಚ್ಚು ನುರಿತ ಪರಿಹಾರಗಳಿಗಾಗಿ, ನಿಮ್ಮ ಸಮೀಪದ ಅಲ್ಟ್ರಾಟೆಕ್‌ ಬಿಲ್ಡಿಂಗ್‌ ಸಲ್ಯೂಶನ್ಸ್‌ ಸ್ಟೋರ್‌ ಅನ್ನು ಸಂಪರ್ಕಿಸಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ