ಬಲವಾದ ಇಟ್ಟಿಗೆಗಳು ಬಲವಾದ ಗೋಡೆಗಳನ್ನುನಿರ್ಮಾಣ ಮಾಡುತ್ತವೆ, ಇದರ ಪರಿಣಾಮವಾಗಿ ನಿಮ್ಮ ಮನೆಯನ್ನು ನಿರ್ಮಿಸುವ ಸಮಯದಲ್ಲಿ ಉತ್ತಮ ರಚನಾತ್ಮಕ ಶಕ್ತಿಯನ್ನು ನೀಡುತ್ತದೆ. ನಿಮ್ಮ ಮನೆಯ ನಿರ್ಮಾಣಕ್ಕಾಗಿ ಬೇಕಾದ ಇಟ್ಟಿಗೆಗಳ ಗುಣಮಟ್ಟವನ್ನು ಪರೀಕ್ಷಿಸುವ ನಾಲ್ಕು ಪರಿಣಾಮಕಾರಿ ವಿಧಾನಗಳು ಇಲ್ಲಿವೆ.
ನೀವು ಎರಡು ಇಟ್ಟಿಗೆಗಳನ್ನು ಒಂದರ ಮೇಲೊಂದು ಹೊಡೆದಾಗ, ನಿಮಗೆ ಒಂದು ಲೋಹದ ‘ಶಬ್ಧ’ ಬರಬೇಕು. ಉತ್ತಮ ಗುಣಮಟ್ಟದ ಇಟ್ಟಿಗೆಗಳು ಹೊಡೆತದಿಂದಾಗಿ ಮುರಿಯುವುದಿಲ್ಲ ಅಥವಾ ಬಿರುಕು ಬಿಡುವುದಿಲ್ಲ. ಹಠಾತ್ ಹೊಡೆತದ ಸಮಯದಲ್ಲಿ ಇಟ್ಟಿಗೆಯಲ್ಲಿ ಇರಬಹುದಾದ ಗಟ್ಟಿತನವನ್ನು ನಿರ್ಧರಿಸಲು ಈ ಪರೀಕ್ಷೆಯನ್ನು ಬಳಸಲಾಗುತ್ತದೆ.
ಇಟ್ಟಿಗೆಯಲ್ಲಿನ ಗಟ್ಟಿತನವನ್ನು ಪರೀಕ್ಷಿಸುವ ಸಲುವಾಗಿ ಇದು ಮತ್ತೊಂದು ಸೂಕ್ತ ವಿಧಾನವಾಗಿರುತ್ತದೆ. ನೀವು 4 ಅಡಿ ಎತ್ತರದಿಂದ ಒಂದು ಇಟ್ಟಿಗೆಯನ್ನು ಬೀಳಿಸಿದಲ್ಲಿ ಅದು ಮುರಿಯಬಾರದು ಅಥವಾ ಬಿರುಕು ಬಿಡಬಾರದು.
ಪ್ರತಿ ಇಟ್ಟಿಗೆಯನ್ನು ಪರೀಕ್ಷಿಸಿಕೊಳ್ಳಿ ಹಾಗೂ ಅವು ಎಲ್ಲಾ ಬದಿಯಲ್ಲೂ ಸಮತಟ್ಟಾಗಿವೆ ಮತ್ತು ಯಾವುದೇ ಬಿರುಕುಗಳಿಲ್ಲದೆ ಅಂಚುಗಳಲ್ಲಿ ನಯವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇಟ್ಟಿಗೆಗಳೆಲ್ಲವೂ ಏಕರೂಪದ ಆಕಾರ ಮತ್ತು ಗಾತ್ರವನ್ನು ಹೊಂದಿರಬೇಕು. ಇದನ್ನು ಪರೀಕ್ಷಿಸಲು ಉತ್ತಮ ಮಾರ್ಗವೆಂದರೆ, ಎಲ್ಲಾ ಇಟ್ಟಿಗೆಗಳನ್ನು ಒಟ್ಟಿಗೆ ಜೋಡಿಸಿಡುವುದು.
ಈ ಪರೀಕ್ಷೆಯಿಂದಾಗಿ ಇಟ್ಟಿಗೆಯು ಹೀರಿಕೊಳ್ಳಬಹುದಾದ ತೇವಾಂಶ ಪ್ರಮಾಣವನ್ನು ಗುರುತಿಸಬಹುದು. ಒಣ ಇಟ್ಟಿಗೆಯ ತೂಕವನ್ನು ಪರಿಶೀಲಿಸಿ ಅದನ್ನು ಗುರುತು ಮಾಡಿಟ್ಟುಕೊಳ್ಳಿ ಹಾಗೂ ನಂತರ ಅದೇ ಇಟ್ಟಿಗೆಯನ್ನು ದೀರ್ಘಕಾಲದವರೆಗೆ ನೀರಿನಲ್ಲಿ ಮುಳುಗಿಸಿಡಿ. ನಂತರ ಆ ಇಟ್ಟಿಗೆಯನ್ನು ತೆಗೆದು ಮತ್ತೊಮ್ಮೆ ಅದರ ತೂಕವನ್ನು ಪರೀಕ್ಷಿಸಿ; ಅದರ ತೂಕವು 15% ಗಿಂತ ಹೆಚ್ಚಾಗಿರದಿದ್ದಲ್ಲಿ, ಅದು ಉತ್ತಮ ಗುಣಮಟ್ಟ ಹೊಂದಿದೆ ಎನ್ನುವುದು ಖಾತ್ರಿಯಾಗುತ್ತದೆ
ಅಲ್ಟ್ರಾಟೆಕ್ ಟೈಲ್‌ಫಿಕ್ಸೋವನ್ನು ಪಡೆಯಲು, ನಿಮ್ಮ ಹತ್ತಿರದ ಅಲ್ಟ್ರಾಟೆಕ್ ಬಿಲ್ಡಿಂಗ್ ಸಲ್ಯೂಷನ್ಸ್ (UBS) ಕೇಂದ್ರಕ್ಕೆ ಭೇಟಿ ನೀಡಿ ಅಥವಾ
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ