ಸ್ಟ್ರಿಪ್ ಫೂಟಿಂಗ್ ವಿನ್ಯಾಸದ ವಿಧಗಳು
ಪ್ರತಿಯೊಂದು ವಿನ್ಯಾಸವೂ ಅದರದ್ದೇ ಆದ ಲಾಭಗಳನ್ನು ಹೊಂದಿದೆ ಮತ್ತು ನಿರ್ಮಾಣ ಪ್ರಕ್ರಿಯೆಯ ವಿವಿಧ ಅವಶ್ಯಕತೆಗಳನ್ನು ಪೊರೈಸುತ್ತದೆ. ನಿಮ್ಮ ಮನೆಗೆ ಬೇಕಾದ ಸೂಕ್ತ ವಿನ್ಯಾಸವನ್ನು ಪರಿಣಿತರ ಸಹಾಯದಿಂದ ನಿರ್ಧರಿಸಬಹುದು. ಸಾಮಾನ್ಯವಾಗಿ ಬಳಕೆಯಾಗುವ ಕೆಲವು ಸ್ಟ್ರಿಪ್ ಫೂಟಿಂಗ್ ವಿಧಗಳು ಇಂತಿವೆ:
೧. ಪ್ಲೇನ್ ಕಾಂಕ್ರೀಟ್ ಸ್ಟ್ರಿಪ್ ಫೂಟಿಂಗ್:
ಈ ವಿಧವು ಸ್ಥಿರವಾದ ಮಣ್ಣಿನ ಮೇಲೆ ಕಟ್ಟಿದ ಸಣ್ಣ ಮನೆಗಳು ಅಥವಾ ಕಡಿಮೆ ಎತ್ತರದ ಕಟ್ಟಡಗಳಿಗೆ ಸೂಕ್ತ. ಇದು ಕಡಿಮೆ ವೆಚ್ಚದ ವಿಧಾನವಾಗಿದ್ದು, ಕಟ್ಟಡದ ಭಾರವನ್ನು ಮಣ್ಣು ಸಹಜವಾಗಿಯೆ ತಡೆದುಕೊಳ್ಳುವುದರಿಂದ ಹೆಚ್ಚಿನ ರೀಇನ್ಫೋರ್ಸ್‍ಮೆಂಟ್ ಅಗತ್ಯವಿರುವುದಿಲ್ಲ.
೨. ರೀಇನ್ಫೋರ್ಸ್ಡ್ ಸ್ಟ್ರಿಪ್ ಫೂಟಿಂಗ್:
ಹೆಚ್ಚಿನ ಭಾರ ಅಥವಾ ಮಣ್ಣಿನ ಸ್ಥಿತಿ ಸವಾಲಿನಿಂದ ಕೂಡಿದ ಜಾಗಗಳಿಗೆ ಇದನ್ನು ರೂಪಿಸಲಾಗಿದೆ, ಇದರಲ್ಲಿ ಬಲ ಮತ್ತು ಬಾಳಿಕೆಯನ್ನು ಹೆಚ್ಚಿಸಲು ಸ್ಟೀಲ್ ರೀಇನ್ಫೋರ್ಸ್‍ಮೆಂಟ್‍ಗಳನ್ನು ಬಳಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಬೃಹತ್ ಕಟ್ಟಡಗಳು ಅಥವಾ ಮಣ್ಣಿನ ಭಾರ ತಡೆಯುವ ಸಾಮರ್ಥ್ಯ ಕಡಿಮೆಯಿದ್ದಾಗ ಬಳಸಲಾಗುತ್ತದೆ.
೩. ಸ್ಟೆಪ್ಡ್ ಸ್ಟ್ರಿಪ್ ಫೂಟಿಂಗ್:
ಸಮತಟ್ಟಾಗಿಲ್ಲದ ನೆಲದಲ್ಲ್ಲಿ ಸ್ಟೆಪ್ಡ್ ಸ್ಟ್ರಿಪ್ ಫೂಟಿಂಗನ್ನು ಬಳಸುವುದರಿಂದ ಅಸಮ ನೆಲದಲ್ಲೂ ಸಮನಾದ ಭಾರ ಹಂಚಿಕೆ ಸಾಧ್ಯ. ಈ ವಿನ್ಯಾಸವು ವಿಶೇಷವಾಗಿ ಇಳಿಜಾರು ನಿವೇಶನಗಳಿಗೆ ಉಪಯುಕ್ತವಾಗಿದ್ದು ಕಟ್ಟಡದ ಮೇಲಿನ ಒತ್ತಡವನ್ನು ತಡೆಯುವುದಲ್ಲದೆ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ.
ಸ್ಟ್ರಿಪ್ ಫೂಟಿಂಗ್‍ನ ಲಾಭಗಳು:
ಉತ್ತಮ ದರ್ಜೆಯ ಸಿಮೆಂಟಿನಿಂದ ನಿರ್ಮಾಣವಾದ ಧೃಡವಾದ ಅಡಿಪಾಯವು ನಿಮ್ಮ ಮನೆಯು ಬಲಿಷ್ಠ ಮತ್ತು ಸುಭದ್ರವಾಗಿರುವುದನ್ನು ಖಾತ್ರಿಗೊಳಿಸುತ್ತದೆ ಮತ್ತು ಮನೆಯ ಬಾಳಿಕೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ. ಇದರ ಪ್ರಮುಖ ಅನುಕೂಲಗಳು ಇಂತಿವೆ:
೧. ಕಡಿಮೆ ವೆಚ್ಚ: ಬೇರೆ ಫೌಂಡೇಶನ್ ವಿಧಗಳಿಗೆ ಹೋಲಿಸಿದರೆ ಆರ್ಥಿಕತೆಯ ದೃಷ್ಟಿಯಿಂದ ಉತ್ತಮ ಆಯ್ಕೆ.
೨. ಕಟ್ಟಡದ ಸಾಮರ್ಥ್ಯ: ಭಾರದ ಸಮನಾದ ಹಂಚಿಕೆಗೆ ಸಹಕಾರಿ, ಕಟ್ಟಡದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
೩. ಸರಳತೆ : ಕಟ್ಟುವ ಪ್ರಕ್ರಿಯೆಯಲ್ಲಿ ಸಂಕೀರ್ಣತೆ ಕಡಿಮೆಯಿರುವುದರಿಂದ ಕಟ್ಟಲು ಸುಲಭ.
೪. ಮೆಟಿರಿಯಲ್‍ನ ಹೊಂದಿಕೊಳ್ಳುವಿಕೆ: ಕಾಮಗಾರಿಯ ಅಗತ್ಯಕ್ಕೆ ತಕ್ಕಂತೆ ರೀಇನ್ಫೋರ್ಸ್ಡ್ ಅಥವಾ ಪ್ಲೇನ್ ಕಾಂಕ್ರೀಟಿನೊಂದಿಗೆ ಹೊಂದಿಕೊಳ್ಳಬಲ್ಲುದಾಗಿದೆ.
೫. ಹೊಂದಿಕೊಳ್ಳುವಿಕೆ: ಬೇರೆ ಬೇರೆ ಮಣ್ಣಿನ ವಿಧಗಳಿಗೆ ಮತ್ತು ರಚನೆಗಳಿಗೆ ತಕ್ಕಂತೆ ಬದಲಾಯಿಸಬಹುದಾಗಿದ್ದು ಎಲ್ಲಾ ಬಗೆಯ ನಿರ್ಮಾಣ ಕಾರ್ಯಕ್ಕೆ ತಕ್ಕುದಾಗಿದೆ.
೬. ಬಾಳಿಕೆ: ಉತ್ತಮ ಗುಣಮಟ್ಟದ ಸಿಮೆಂಟಿನಿಂದ ನಿರ್ಮಿಸಿದಾಗ ಸ್ಟ್ರಿಪ್ ಫೂಟಿಂಗ್ ಬಹುಕಾಲ ಉಳಿಯಬಲ್ಲುದಾಗಿದ್ದು ನಿಮ್ಮ ಮನೆಯನ್ನು ಸಧೃಡಗೊಳಿಸುತ್ತದೆ.
ಸ್ಟ್ರಿಪ್ ಫೂಟಿಂಗಿನ ಅನಾನುಕೂಲಗಳು
ಸ್ಟ್ರಿಪ್ ಫೂಟಿಂಗ್ ಕೆಲವು ಅನಾನುಕೂಲಗಳನ್ನು ಹೊಂದಿದ್ದರೂ ಜಾಗರೂಕತೆಯಿಂದ ಯೋಜನೆಯನ್ನು ರೂಪಿಸಿದಲ್ಲಿ ಮತ್ತು ಉತ್ತಮ ಸಾಮಗ್ರಿಗಳನ್ನು ಬಳಸಿದಲ್ಲಿ ಅನಾನುಕೂಲಗಳನ್ನು ತಗ್ಗಿಸಬಹುದು.
೧. ದುರ್ಬಲ ಮಣ್ಣಿಗೆ ಸೂಕ್ತವಲ್ಲ: ಮಣ್ಣಿನ ಪರಿಸ್ಥಿತಿ ದುರ್ಬಲವಾಗಿದ್ದರೆ ಇದು ಪರಿಣಾಮಕಾರಿಯಲ್ಲ.
೨. ಭಾರ ಕ್ಷಮತೆಯ ಮಿತಿ: ಎತ್ತರದ ಮತ್ತು ಭಾರೀ ಕಟ್ಟಡಗಳಿಗೆ ಸೂಕ್ತವಲ್ಲ.
೩. ನೈಸರ್ಗಿಕ ವಿಕೋಪಗಳಿಗೆ ಒಳಗಾಗುವ ಸಾಧ್ಯತೆ: ಅಂತರ್ಜಲ ಮೇಲ್ಮಟ್ಟದಲ್ಲಿದ್ದರೆ ಅಥವಾ ಭೂಕಂಪನವಾಗುವ ಸ್ಥಳವಾಗಿದ್ದರೆ ಸ್ಥಾನಪಲ್ಲಟವಾಗುವ ಸಾಧ್ಯತೆಯಿದೆ.
೪. ಅಸಮತೋಲನದ ಸಾಧ್ಯತೆ: ಮೇಲ್ಮಟ್ಟದ ಅಂತರ್ಜಲ ಅಥವಾ ಭೂಕಂಪ ಪೀಡಿತ ಜಾಗಗಳಲ್ಲಿ ಸ್ಟ್ರಿಪ್ ಫೂಟಿಂಗ್ ಸ್ಥಾನಪಲ್ಲಟವಾಗುವ ಅಥವಾ ಕುಸಿಯುವ ಸಾಧ್ಯತೆಯಿದೆ.
೫. ಹೊಂದಿಕೊಳ್ಳುವಿಕೆಯ ಮಿತಿ: ಈ ಬಗೆಯ ಅಡಿಪಾಯವು ಭಾರದ ಬದಲಾವಣೆ ಅಥವಾ ಭವಿಷ್ಯದ ವಿಸ್ತರಣೆಗಳಿಗೆ ಹೊಂದಿಕೊಳ್ಳುವ ಸಾಧ್ಯತೆ ಬೇರೆ ವಿಧಗಳಿಗೆ ಹೋಲಿಸಿದರೆ ಕಡಿಮೆ.
೬. ನಿರ್ವಹಣೆಯ ಸವಾಲು: ಸರಿಯಾಗಿ ಕಟ್ಟದಿದ್ದಲ್ಲಿ ಸ್ಟ್ರಿಪ್ ಫೂಟಿಂಗ್‍ನಲ್ಲಿ ನೀರು ಒಳನುಗ್ಗುವ ಅಥವಾ ಕುಸಿಯುವ ಸಾಧ್ಯತೆಯಿರುವುದರಿಂದ ಪದೇ ಪದೇ ನಿರ್ವಹಣೆಯ ಅಗತ್ಯವಿದೆ.