ಹಂತ ೯: ಸವಾಲಿನ ಸ್ಥಿತಿಗಳಿಗೆ ಹೊಂದಿಕೊಳ್ಳಿ.
ಗೃಹನಿರ್ಮಾಣದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಕೊರತೆ ಅಥವಾ ಹವಾಮಾನ ವೈಪರಿತ್ಯದಂತಹ ಸನ್ನಿವೇಶಗಳು ದಿಡೀರನೆ ಎದುರಾಗಬಹುದು. ಅವಶ್ಯಕತೆ ಬಿದ್ದಾಗ ನಿಮ್ಮ ಯೋಜನೆಯನ್ನು ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲು ಸಿದ್ದರಾಗಿರಿ. ತುರ್ತು ಪರಿಸ್ಥಿತಿಗಳಿಗಾಗಿ ಒಂದಿಷ್ಟು ಹೆಚ್ಚಿಗೆ ಹಣವನ್ನು ನಿಮ್ಮ ಬಜೆಟ್‍ನಲ್ಲಿ ಇರಿಸಿಕೊಳ್ಳುವುದು ಸಹಾಯಕವಾಗುತ್ತದೆ.
ಹಂತ ೧೦: ಕಾಂಟ್ರ್ಯಾಕ್ಟರ್ ಸಹಯೋಗದೊಂದಿಗೆ ಕಾಮಗಾರಿಯನ್ನು ಅಂತಿಮಗೊಳಿಸಿ
ನಿರ್ಮಾಣ ಕಾರ್ಯ ಮುಗಿಯುವ ಹಂತಕ್ಕೆ ಬಂದಾಗ:
ನಿಮ್ಮ ಗುತ್ತಿಗೆದಾರರೊಂದಿಗೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಎಲ್ಲಾ ಕೆಲಸಗಳು ನಿರೀಕ್ಷೆಗೆ ತಕ್ಕಂತೆ ನಡೆದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಅಗತ್ಯ ದಾಖಲೆಗಳಾದ ವಾರಂಟಿ, ಅನುಮತಿಗಳು ಮತ್ತು ತಪಾಸಣಾ ವರದಿಗಳನ್ನು ಸಂಗ್ರಹಿಸಿಟ್ಟುಕೊಳ್ಳಿ.
ನಿರ್ಮಾಣ ಸ್ಥಳದ ಪರಿಣಾಮಕಾರಿ ನಿರ್ವಹಣೆಗೆ ಅಗತ್ಯ ಸಲಹೆಗಳು
ನಿರ್ಮಾಣ ಸ್ಥಳದ ನಿರ್ವಹಣೆ ಎಂದರೆ ಏನೆಂದು ಅರಿತ ನಂತರ ಈಗ ಮೊದಲ ಬಾರಿ ಮನೆ ಕಟ್ಟುವವರು ಯಾವುದೇ ಗೊಂದಲಗಳಿಲ್ಲದೆ ಪರಿಣಾಮಕಾರಿಯಾಗಿ ನಿರ್ಮಾಣ ಸ್ಥಳ ನಿರ್ವಹಣೆಯನ್ನು ಮಾಡಲು ಕೆಲವು ಅಂಶಗಳನ್ನು ತಿಳಿದುಕೊಳ್ಳುವ ಸಮಯ. ಕೆಲವು ಅಗತ್ಯ ಸಲಹೆಗಳನ್ನು ಈ ಕೆಳಗೆ ವಿವರಿಸಲಾಗಿದೆ:
೧. ಸ್ಪಷ್ಟವಾದ ಯೋಜನೆ ರೂಪಿಸಿ: ಮೊದಲಿಗೆ ಕಾಮಗಾರಿಯ ಎಲ್ಲಾ ಆಶಯಗಳನ್ನು ಒಳಗೊಂಡ ಒಂದು ವಿಸ್ಕೃತವಾದ ನಿರ್ಮಾಣ ಸ್ಥಳ ನಿರ್ವಹಣಾ ಯೋಜನೆಯನ್ನು ಸಿದ್ದಪಡಿಸಿಟ್ಟುಕೊಳ್ಳಿ. ಇದು ಎಲ್ಲರೂ ಸಂಘಟಿತರಾಗಿ ಯೋಜನೆಯ ಮೇಲೆ ಗಮನ ಕೇಂದ್ರೀಕರಿಸುವಂತೆ ಮಾಡಲು ಸಹಕಾರಿಯಾಗಿದೆ.
೨. ನುರಿತ ವೃತ್ತಿಪರರನ್ನು ನೇಮಿಸಿಕೊಳ್ಳಿ: ನಿಮ್ಮ ಕಾಂಟ್ರ್ಯಾಕ್ಟರ್ ಆಯ್ಕೆಯ ವಿಷಯ ಬಂದಾಗ ಎಂದಿಗೂ ರಾಜಿಯಾಗಬೇಡಿ. ನಿಮ್ಮ ಕಟ್ಟಡದ ಗುಣಮಟ್ಟ ಅವರ ಪರಿಣತಿಯ ಮೇಲೆ ಅವಲಂಬಿತವಾಗಿದೆ. ನುರಿತ ಮತ್ತು ಅನುಭವಿ ಗುತ್ತಿಗೆದಾರರು ನಿರ್ಮಾಣ ಸ್ಥಳದ ಸಂಕೀರ್ಣತೆಗಳನ್ನು ನಿಭಾಯಿಸುವ ಚಾತುರ್ಯ ಹೊಂದಿರುತ್ತಾರೆ, ಹಾಗಾಗಿ ಕಾಮಗಾರಿಯ ಎಲ್ಲ ಆಶಯಗಳೂ ಯೋಜನೆಯ ಅನುಸಾರ ಯಾವುದೇ ಅಡೆತಡೆಗಳಿಲ್ಲದೇ ಕಾರ್ಯಗತವಾಗುವುದನ್ನು ಖಾತ್ರಿಗೊಳಿಸುತ್ತಾರೆ. ಕಾಮಗಾರಿಯ ನಡುವಿನಲ್ಲಿ ಕಾಂಟ್ರ್ಯಾಕ್ಟರ್ರನ್ನು ಬದಲಿಸುವುದು ಅಸ್ಥಿರತೆಗೆ ಕಾರಣವಾಗಿ ಅಂತಿಮ ಫಲಿತಾಂಶದ ಮೇಲೂ ಪರಿಣಾಮ ಬೀರಬಹುದು.
೩. ಪ್ರಗತಿಯನ್ನು ಗಮನಿಸಿ: ಯೋಜನೆಯು ನಿಮ್ಮ ಬಜೆಟ್ ಮತ್ತು ಕಾಲಮಿತಿಗೆ ಅನುಗುಣವಾಗಿ ನಡೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಾಮಗಾರಿಯ ಪ್ರಗತಿಯನ್ನು ನಿಯಮಿತವಾಗಿ ಗಮನಿಸುತ್ತಿರಿ.
೪. ಸುರಕ್ಷತೆಗೆ ಆದ್ಯತೆ ನೀಡಿ: ನಿಮ್ಮ ನಿರ್ಮಾಣ ಸ್ಥಳದಲ್ಲಿ ಸುರಕ್ಷತೆಗೆ ಆದ್ಯತೆ ಇರಲಿ. ಎಲ್ಲಾ ಕಾರ್ಮಿಕರೂ ಸುರಕ್ಷತಾ ಪ್ರೊಟೊಕಾಲ್‍ನ ತರಬೇತಿ ಹೊಂದಿದ್ದಾರೆ ಮತ್ತು ಅಗತ್ಯವಿರುವ ಉಪಕರಣಗಳನ್ನು ಹೊಂದಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಿ.
೫. ಬದಲಾವಣೆಗಳಿಗೆ ಸಿದ್ದರಾಗಿರಿ: ನಿರ್ಮಾಣ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ಅನಿರೀಕ್ಷಿತ ಸವಾಲುಗಳು ಎದುರಾಗುತ್ತವೆ. ಹೊಂದಿಕೊಳ್ಳುವಿಕೆ ಮತ್ತು ನಿಮ್ಮ ಯೋಜನೆಯನ್ನು ಸನ್ನಿವೇಶಕ್ಕೆ ಅನುಗುಣವಾಗಿ ಮಾರ್ಪಾಟು ಮಾಡುವ ಗುಣ ನಿಮ್ಮಲ್ಲಿದ್ದರೆ ಈ ಸವಾಲುಗಳನ್ನು ಸುಲಭವಾಗಿ ದಾಟಿ ಮುಂದುವರೆಯಬಹುದು.
೬. ನಿಯಮಿತ ಸಂವಹನ ನಡೆಸಿ: ಕಾಮಗಾರಿಯಲ್ಲಿ ತೊಡಗಿರುವ ಎಲ್ಲರೊಂದಿಗೂ ಮುಕ್ತ ಸಂವಹನ ನಡೆಸುತ್ತಿರಿ. ಕಾಂಟ್ರ್ಯಾಕ್ಟರ್ ಮತ್ತು ಕಾರ್ಮಿಕರನ್ನು ಆಗಾಗ್ಗೆ ಭೇಟಿ ಮಾಡುವುದರಿಂದ ಯಾವುದೇ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬಹುದು.
೭. ವಿಸ್ಕೃತ ದಾಖಲೆಗಳನ್ನು ಇಟ್ಟುಕೊಳ್ಳಿ: ಯೋಜನೆಯಲ್ಲಿನ ಯಾವುದೇ ಬದಲಾವಣೆಗಳು ಮತ್ತು ಮಾತುಕತೆಗಳು ಸೇರಿದಂತೆ ನಿರ್ಮಾಣ ಸ್ಥಳದಲ್ಲಿನ ಎಲ್ಲ ಚಟುವಿಟೆಕೆಗಳ ದಾಖಲೆಯನ್ನು ಇಟ್ಟುಕೊಳ್ಳಿ. ಈ ದಾಖಲೆಗಳು ಭವಿಷ್ಯದ ನಿರ್ಣಯಗಳಿಗೆ ಸಹಕಾರಿಯಾಗುತ್ತವೆ.