ನಿಮ್ಮ ಮನೆಯು ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಇರುವ ಕೇವಲ ಒಂದು ಆಶ್ರಯತಾಣಕ್ಕೂ ಮೀರಿದ್ದಾಗಿರುತ್ತದೆ. ಇದು ನಿಮ್ಮ ಸುರಕ್ಷಿತ ತಾಣವಾಗಿರುತ್ತದೆ. ಇದು ಸೌಕರ್ಯ ನೀಡುವ ಮೃದುವಾದ ಕುಶನ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೊರಭಾಗದ ಅಂಶಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅದಕ್ಕಾಗಿಯೇ, ಮುಂದಿನ ಪೀಳಿಗೆಗೆ ಉಳಿಯುವಂತಹ ಮನೆಯನ್ನು ನಿರ್ಮಿಸಲು ನೀವು ಸಾಕಷ್ಟು ಸಮಯ, ಹಣ ಮತ್ತು ಶಕ್ತಿಯನ್ನು ಹೂಡಿಕೆ ಮಾಡಿರುತ್ತೀರಿ.
ತೇವ ಉಂಟಾಗಲು ಒಂದೇ ಒಂದು ಕಾರಣವಿರುವುದಿಲ್ಲ, ಆದರೆ ಮುನ್ನೆಚ್ಚರಿಕೆಯ ಒಂದು ಕೊರತೆಯು ಕೂಡಾ ಅದಕ್ಕೆ ಕಾರಣವಾಗಬಹುದು ಮತ್ತು ಅದು ನಿಮ್ಮ ರಚನೆಯ ಬಲದ ಮೇಲೆ ತೀವ್ರವಾದ ಪ್ರಭಾವ ಬೀರಲು ಕಾರಣವಾಗಬಹುದು. ತೇವ ಉಂಟಾಗಲು ಕೆಲವು ಪ್ರಮುಖ ಕಾರಣಗಳೆಂದರೆ:
ಅಸಮರ್ಪಕವಾದ ಇಳಿಜಾರು ಅಥವಾ ಕಲ್ಮಶ ತುಂಬಿದ ಮಳೆ ನೀರಿನ ಕೊಳವೆಗಳಿಂದಾಗಿ ಛಾವಣಿಯ ಸ್ಲ್ಯಾಬ್ ಮೇಲೆ ಮಳೆ ನೀರು ಸಂಗ್ರಹವಾದಾಗ ಸ್ಲಾಬ್‌ನಲ್ಲಿ ಸೋರಿಕೆ ಸಂಭವಿಸುತ್ತದೆ. ಕಳಪೆ ಗುಣಮಟ್ಟದ ಕಾಂಕ್ರೀಟ್ ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕಾಲ ಕಳೆದಂತೆ, ಈ ನಿಶ್ಚಲವಾದ ನೀರು ಕಾಂಕ್ರೀಟ್‌ನ ಒಳಕ್ಕಿಳಿಯುತ್ತದೆ, ಹಾಗೂ ಇದರಿಂದಾಗಿ ಒಳಗೆ ಇರುವ ಕಬ್ಬಿಣದಲ್ಲಿ ತುಕ್ಕು ಉಂಟಾಗುತ್ತದೆ ಮತ್ತು ಒಳಭಾಗದಲ್ಲಿ ತೇವವು ಉಂಟಾಗುತ್ತದೆ. ಇದರ ಪರಿಣಾಮವಾಗಿ, ಇದು ಕಾಂಕ್ರೀಟ್‌ನ ವಿಘಟನೆಗೆ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು, ಸ್ಲ್ಯಾಬ್ ಹಾಕುವ ಸಮಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಮತ್ತು ಮಳೆ ನೀರಿನ ಕೊಳವೆಗಳ ಮೂಲಕ ನೀರು ಸರಿಯಾಗಿ ಹರಿದು ಹೋಗಲು ಅನುಕೂಲವಾಗುವಂತೆ ಸಾಕಷ್ಟು ಇಳಿಜಾರನ್ನು ನೀಡಿರಬೇಕು. ಯಾವುದೇ ಮನೆಯಲ್ಲಿ ಸ್ಲ್ಯಾಬ್ ಸೋರಿಕೆಯು ಸಂಭವಿಸಬಹುದು, ಅದಕ್ಕಾಗಿಯೇ ನಿಮ್ಮ ಮನೆಯನ್ನು ಜಲ ನಿರೋಧಕವಾಗಿ ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ದೀರ್ಘಾವಧಿಯಲ್ಲಿ ನೀರಿನ ಸೋರಿಕೆಯಾಗದಂತೆ ನಿಮ್ಮ ಮನೆಯನ್ನು ರಕ್ಷಿಸಲು ಉತ್ತಮ ಪರಿಹಾರವೆಂದರೆ ಜಲನಿರೋಧಕ ಪ್ರಕ್ರಿಯೆಯನ್ನು ಮಾಡುವುದು. ಕಾಂಕ್ರೀಟ್ ಜಲನಿರೋಧಕವು ಕಾಂಕ್ರೀಟ್ ಮೇಲೆ ಜಲನಿರೋಧಕ ವಸ್ತುಗಳನ್ನು ಉಪಯೋಗಿಸಿ ಲೇಪಿಸುವುದನ್ನು ಒಳಗೊಂಡಿರುತ್ತದೆ, ಅದು ನೀರು ಮತ್ತು ತೇವಾಂಶವು ಗೋಡೆಗಳು, ಮೇಲ್ಚಾವಣಿ, ಮಹಡಿಗಳು ಇತ್ಯಾದಿಗಳ ಮೂಲಕ ಹರಡದಂತೆ ತಡೆಯುತ್ತದೆ. ಜಲನಿರೋಧಕ ಪ್ರಕ್ರಿಯೆಯು ಏಕೆ ಮುಖ್ಯ ಎನ್ನುವುದನ್ನು ಅರ್ಥಮಾಡಿಕೊಳ್ಳಲು, ನೀರಿನ ಸೋರಿಕೆ ನಿಜವಾಗಿಯೂ ಏಕೆ ಅನಪೇಕ್ಷಿತ ಎನ್ನುವುದನ್ನು ನೋಡಬೇಕಾಗುತ್ತದೆ:
ನಿಮ್ಮ ಮನೆಯು ಪ್ರವಾಹಕ್ಕೆ ಗುರಿಯಾಗುವ ಪ್ರದೇಶಗಳಲ್ಲಿ ಅಥವಾ ನೀರಿನೊಂದಿಗೆ ಆಗಾಗ್ಗೆ ಸಂಪರ್ಕದಲ್ಲಿರುವ ಪ್ರದೇಶಗಳಲ್ಲಿ ಇದ್ದಲ್ಲಿ ಕಾಂಕ್ರೀಟ್ ವಾಟರ್ ಪ್ರೂಫಿಂಗ್ ಅತೀ ಮುಖ್ಯವಾಗಿರುತ್ತದೆ. ಇವುಗಳಲ್ಲಿ ಸ್ನಾನಗೃಹಗಳು ಮತ್ತು ಅಡಿಗೆಮನೆಗಳು ಅಥವಾ ವಾತಾವರಣಕ್ಕೆ ತೆರೆಯಲ್ಪಟ್ಟ ಪ್ರದೇಶಗಳು ಮೇಲ್ಛಾವಣಿ, ಬಾಲ್ಕನಿ, ಹೊರಗಿನ ಗೋಡೆಗಳು, ನೆಲಮಾಳಿಗೆ ಮತ್ತು ನೀರು ಸಂಗ್ರಹವಾಗಿರುವ ಪ್ರದೇಶಗಳು ಸೇರಿವೆ.
ಇಂದು ಅನೇಕ ರೀತಿಯ ವಾಟರ್ ಪ್ರೂಫಿಂಗ್ ವಿಧಾನಗಳು ಲಭ್ಯವಿವೆ. ನಿಮ್ಮ ಮನೆಗೆ ಬೇಕಾದ ಉತ್ತಮ ಪರಿಹಾರವನ್ನು ಕಂಡುಕೊಳ್ಳಲು ನಿಮ್ಮ ವಾಟರ್‌ಪ್ರೂಫಿಂಗ್ ಗುತ್ತಿಗೆದಾರರೊಂದಿಗೆ ಮಾತನಾಡಿ. ಒಂದು ಜನಪ್ರಿಯ ಪರಿಹಾರವೆಂದರೆ ಅಲ್ಟ್ರಾಟೆಕ್ ಸೀಲ್ & ಡ್ರೈ - ನಿಮ್ಮ ಮನೆಯ ವಿವಿಧ ಭಾಗಗಳಿಗಾಗಿ ವಿಶೇಷವಾಗಿ ರೂಪಿಸಲಾದ ವಾಟರ್ ಪ್ರೂಫಿಂಗ್ ಏಜೆಂಟ್‌ಗಳ ಒಂದು ಶ್ರೇಣಿ. ಅವುಗಳನ್ನು ಪ್ಲ್ಯಾಸ್ಟರ್, ಗಾರೆ ಮತ್ತು ಕಾಂಕ್ರೀಟ್‌ನ ಜಲ ನಿರೋಧಕ ಗುಣಲಕ್ಷಣಗಳನ್ನು ಸುಧಾರಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅದರ ಮೂಲಕ, ನಿಮ್ಮ ಮನೆಯನ್ನು. ನಿಮ್ಮ ಕಟ್ಟಡದಲ್ಲಿ ತೇವವನ್ನು ತಡೆಗಟ್ಟುವ ಕೆಲವು ಮಾರ್ಗಗಳನ್ನು ನೋಡೋಣ:
ಮನೆ ನಿರ್ಮಾಣದ ಕುರಿತಾಗಿ ಆ ರೀತಿಯ ಹೆಚ್ಚಿನ ಸಲಹೆಗಳಿಗಾಗಿ, ಅಲ್ಟ್ರಾಟೆಕ್ ಸಿಮೆಂಟ್ ರವರ #ಮನೆಯ ಬಗ್ಗೆಮಾತನಾಡೋಣ ಅಲ್ಟ್ರಾಟೆಕ್ ಸಿಮೆಂಟ್ ಮೂಲಕ
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ