ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ
ನಿಮ್ಮ ಮಕ್ಕಳೊಂದಿಗೆ ರಾತ್ರಿ ಆಟವಾಡುವುದಿರಬಹುದು, ಬೆಚ್ಚನೆಯ ಸೋಫಾದಲ್ಲಿ ಕೂತು ಕಾಫಿ ಹೀರುವುದಿರಬಹುದು ಅಥವಾ ಹದಿನೈದು ದಿನಕ್ಕೊಮ್ಮೆ ನಿಮ್ಮ ಆತ್ಮೀಯ ಸ್ನೇಹಿತರೊಂದಿಗೆ ಸೇರಿ ಹರಟೆ ಹೊಡೆಯುವುದಿರಬಹುದು ಎಲ್ಲವಕ್ಕೂ ಹಾಲ್, ನಿಮ್ಮ ಮನೆಯಲ್ಲಿ ಅತಿ ಹೆಚ್ಚು ಬಳಸಲ್ಪಡುವ ಸ್ಥಳವಾಗಿರುತ್ತದೆ. ಪ್ರಮಾದವಿಲ್ಲದ ಇಂಟೀರಿಯರ್ ವಿನ್ಯಾಸದ ಜೊತೆ, ಸ್ಥಳವನ್ನು ಶುಭಪ್ರದ, ಸಕಾರಾತ್ಮವಾಗಿ ಮತ್ತು ನಕಾರಾತ್ಮಕ ಶಕ್ತಿಗಳಿಂದ ಮುಕ್ತವಾಗಿ ಇರಿಸಲು ಹಾಲ್‌ಗೆ ಕೆಲವು ವಾಸ್ತು ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯ.
ನಿಮ್ಮ ಕುಟುಂಬದ ಪ್ರತಿಯೊಬ್ಬರಿಗೂ ಸಂತೋಷ, ಯಶಸ್ಸು ಮತ್ತು ಆರೋಗ್ಯಕರ ಜೀವನವನ್ನು ಖಚಿತಪಡಿಸಲು ವಾಸ್ತು ಪ್ರಕಾರವಾದ ಹಾಲ್ ಯೋಜನೆ ಮಾಡಿ ವಿನ್ಯಾಸಗೊಳಿಸಲು ಈ ಲೇಖನದಲ್ಲಿರುವ ವಾಸ್ತು ಸಲಹೆಗಳು ನಿಮಗೆ ನೆರವಾಗುತ್ತವೆ.
ನಿಮ್ಮ ಮನೆಗೆ ಪ್ರವೇಶಿಸುವ ಯಾವುದೇ ಸಂದರ್ಶಕರು ಮೊದಲು ಹಾಲ್‌ಗೆ ಆಗಮಿಸುತ್ತಾರೆ; ಆದ್ದರಿಂದ, ಮನೆಯ ಬಾಗಿಲನ್ನು ಪೂರ್ವ, ಉತ್ತರ ಅಥವಾ ಈಶಾನ್ಯದಂತಹ ಅನುಕೂಲಕರ ದಿಕ್ಕಿನಲ್ಲಿ ಇರಿಸುವುದು ಹಾಗೂ ಬಾಗಿಲ ಬಳಿ ಚೆನ್ನಾಗಿ ಬೆಳಕಿರುವಂತೆ ನೋಡಿಕೊಳ್ಳುವುದು ಮುಖ್ಯ. ಈ ಸ್ಥಳವನ್ನು ಸಾಮಾನ್ಯವಾಗಿ ಸಂತೋಷಕೂಟಗಳನ್ನು ನಡೆಸುವ ಸ್ಥಳ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ನಿಮ್ಮ ಸ್ನೇಹಿತರಿಗೆ ಆಗಾಗ ಔತಣಕೂಟ ನೀಡಲು ನೀವು ಇಷ್ಟಪಡುವುದಾದರೆ, ವಾಸ್ತುವಿನ ಪ್ರಕಾರ ಹಾಲ್‌ನ ದಿಕ್ಕು ನಿಮ್ಮ ಮನೆಯ ನೈರುತ್ಯ ದಿಕ್ಕಿಗಿರಬೇಕು.
ಹಾಲ್ ನಿಮ್ಮ ಮನೆಯ ಪ್ರವೇಶಸ್ಥಳವಾಗಿದೆ ಮತ್ತು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರಬೇಕು. ವಾಸ್ತುಶಾಸ್ತ್ರದ ಪ್ರಕಾರ, ಪೂರ್ವ ಮತ್ತು ಉತ್ತರಕ್ಕೆ ಮುಖಮಾಡಿರುವ ಮನೆಗಳಲ್ಲಿ ಹಾಲ್ ಅನ್ನು ವಾಯವ್ಯ ದಿಕ್ಕಿನಲ್ಲಿ ನಿರ್ಮಿಸಬೇಕು. ದಕ್ಷಿಣಕ್ಕೆ ಮುಖಮಾಡಿರುವ ಮನೆಗಳಾಗಿದ್ದರೆ, ವಾಸ್ತು ಪ್ರಕಾರ ಹಾಲ್ ಅನ್ನು ಆಗ್ನೇಯ ದಿಕ್ಕಿಗೆ ನಿರ್ಮಿಸಬೇಕು. ನಿರ್ದಿಷ್ಟಪಡಿಸಿದ ದಿಕ್ಕಿನಲ್ಲಿ ಹಾಲ್ ನಿರ್ಮಿಸುವುದರಿಂದ ಭರಪೂರ ಆರೋಗ್ಯ, ಸಂಪತ್ತು ಮತ್ತು ಯಶಸ್ಸನ್ನು ತಂದುಕೊಡಬಲ್ಲದು. ಆದ್ದರಿಂದ, ನೀವು ಭಾರೀ ಸಂಪತ್ತಿನ ನಿರೀಕ್ಷೆಯಲ್ಲಿದ್ದರೆ ಹಾಲ್‌ಗಾಗಿ ಈ ವಾಸ್ತು ಸಲಹೆಗಳನ್ನು ಅನುಸರಿಸಿ.
ವಾಸ್ತು ತಜ್ಞರ ಪ್ರಕಾರ ಹಾಲ್‌ನಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇಳಿಜಾರು ನೆಲ ನಿರ್ಮಿಸುವುದನ್ನು ಶುಭಕರ ಎಂದು ಪರಿಗಣಿಸಲಾಗಿದೆ. ಪೂರ್ವದ ಈಶಾನ್ಯ ದಿಕ್ಕು ಹಾಲ್‌ನಲ್ಲಿ ಇಳಿಜಾರು ನಿರ್ಮಿಸಲು ಅತ್ಯಂತ ಅನುಕೂಲಕರ ಸ್ಥಳವಾಗಿದೆ.
ಹಾಲ್‌ನೆಲದಲ್ಲಿ ತುಸು ಇಳಿಜಾರು ನಿರ್ಮಿಸುವುದು ಮನೆಯ ಮಕ್ಕಳಿಗೂ ಪ್ರಯೋಜನ ತಂದುಕೊಡುತ್ತದೆ, ಅಧ್ಯಯನದಲ್ಲಿ ಅವರ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಶಿಕ್ಷಣ ತಜ್ಞರಿಗೆ, ಪಶ್ಚಿಮ ಬಾಗಿಲು ಪ್ರಯೋಜನಕರವೆಂದು ಕಂಡುಬಂದಿದೆ.
ಇತರ ಯಾವುದೇ ಪ್ರಾಜೆಕ್ಟ್‌ನಂತೆ, ಟಿವಿಯನ್ನು ಸರಿಯಾದ ಸ್ಥಳದಲ್ಲಿ ಇರಿಸುವುದರಿಂದ ನಿಮ್ಮ ಮನೆಯ ಸೊಬಗನ್ನು ಹೆಚ್ಚಿಸುತ್ತದೆ. ವಾಸ್ತು ಪ್ರಕಾರ ನಿಮ್ಮ ಹಾಲ್‌ನಲ್ಲಿ ಟಿವಿಯನ್ನು ಮನೆಯ ಆಗ್ನೇಯ ಮೂಲೆಯಲ್ಲಿ ಇರಿಸಬೇಕು. ಒಂದು ವೇಳೆ ನಿಮ್ಮ ಮನೆಯ ವಾಯವ್ಯ ಭಾಗದಲ್ಲಿ ಟಿವಿ ಇರಿಸಿದರೆ ಈ ಮನರಂಜನೆಯ ವಲಯವು ಕುಟುಂಬ ಸದಸ್ಯರು ಟಿವಿ ನೋಡುತ್ತ ತಮ್ಮ ಅಮೂಲ್ಯ ಸಮಯವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.
ಹಾಲ್‌ಗೆ ಸಂಬಂಧಿಸಿದ ವಾಸ್ತು ಸಲಹೆಗಳು ಮನೆಯಲ್ಲಿ ವಾಸಿಸುವವರ ಆರೋಗ್ಯ, ಸಂಪತ್ತು ಮತ್ತು ಸಂತೋಷದ ಮೇಲೆ ಗಮನಾರ್ಹ ಪರಿಣಾಮವನ್ನು ಹೊಂದಿದೆ. ಆರಾಮದಾಯಕ ಸೋಫಾದಂತಹ ಪೀಠೋಪಕರಣಗಳನ್ನು ಸೇರಿಸುವುದರಿಂದ ನಿಮ್ಮ ಮನೆಯ ಅಂದವನ್ನು ಹೆಚ್ಚಿಸುತ್ತದೆ, ಆದರೆ ಇವುಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ಜಾಗದಲ್ಲಿ ಇರಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ. ಸೋಫಾ ಸೆಟ್‌ಗಳನ್ನು ಪೂರ್ವ ಅಥವಾ ಉತ್ತರದ ಗೋಡೆಗೆ ವಿರುದ್ಧವಾಗಿ ಇರಿಸುವಂತೆ ಸಲಹೆ ನೀಡಲಾಗಿದೆ, ಏಕೆಂದರೆ ಪೂರ್ವದಿಂದ ಬರುವ ಸೂರ್ಯನ ನೇರ ಕಿರಣಗಳನ್ನು ಈ ಗೋಡೆ ಪ್ರತಿಫಲಿಸುತ್ತದೆ.
ಆಕರ್ಷಕ ಕಲಾಕೃತಿಗಳು ಮತ್ತು ಭಾವಚಿತ್ರಗಳು ನಿಮ್ಮ ಹಾಲ್‌ನ ಅಂದವನ್ನು ಹೆಚ್ಚಿಸುತ್ತವೆ ಮತ್ತು ಅವುಗಳನ್ನು ಹಾಲ್‌ನ ಈಶಾನ್ಯ ಮೂಲೆಯಲ್ಲಿ ಇರಿಸಬೇಕು. ಈ ಕಲಾಕೃತಿಗಳು ಸಕಾರಾತ್ಮಕತೆ, ಸಂತೋಷ ಮತ್ತು ನೆಮ್ಮದಿಯನ್ನು ಮೂಡಿಸುವಂತಿರಬೇಕು. ಅಂಧಕಾರ, ದುಃಖ ಅಥವಾ ನಕಾರಾತ್ಮಕ ಭಾವನೆಗಳನ್ನು ಮೂಡಿಸುವ ಕಲಾಕೃತಿಗಳನ್ನು ಇರಿಸಬೇಡಿ.
ತೂಗುದೀಪದಂತಹ ಶೋಪೀಸ್‌ಗಳನ್ನು ಹಾಲ್‌ನ ಪಶ್ಚಿಮ ಅಥವಾ ದಕ್ಷಿಣ ಭಾಗದಲ್ಲಿ ತೂಗುಹಾಕಬೇಕು ಎಂದು ವಾಸ್ತುಶಾಸ್ತ್ರದಲ್ಲಿ ಸಲಹೆ ನೀಡಲಾಗಿದೆ. ಇವು ಸಕಾರಾತ್ಮಕತೆ ಮತ್ತು ಸ್ಥಳದ ಅಂದ ಹೆಚ್ಚಿಸಬಲ್ಲವು.
ಹಾಲ್‌ನ ಬಣ್ಣವು ಮನೆಯನ್ನು ಪ್ರವೇಶಿಸುವ ಸಕಾರಾತ್ಮಕ ಶಕ್ತಿಯನ್ನು ಹಿಡಿದಿಡಬಲ್ಲದು. ವಾಸ್ತುಶಾಸ್ತ್ರದ ಪ್ರಕಾರ, ಹಾಲ್‌ಗೆ ಬಿಳಿ, ಬೀಜ್, ಕ್ರೀಮ್, ಹಳದಿ ಅಥವಾ ನೀಲಿಯಂತಹ ತಿಳಿ ಬಣ್ಣಗಳನ್ನು ಬಳಿಯಬೇಕು. ಈ ಬಣ್ಣಗಳು ಸಕಾರಾತ್ಮಕತೆ, ಸಂತೋಷ ಮತ್ತು ತೃಪ್ತಿಯನ್ನು ಹೆಚ್ಚಿಸಬಲ್ಲವು.
ಕೆಲವು ಅಲಂಕಾರಿಕ ವಸ್ತುಗಳು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ತರಬಲ್ಲವು. ನಿಮ್ಮ ಹಾಲ್‌ನಿಂದ ಅಂತಹ ವಸ್ತುಗಳನ್ನು ತೆಗೆದುಹಾಕುವುದು ಮುಖ್ಯ. ವಾಸ್ತು ಅನುಸರಣೆಯ ಮನೆ ಹೊಂದಲು, ನೀವು ಇವುಗಳನ್ನು ತೆಗೆದುಹಾಕಬೇಕು :
1. ಹಾಳಾಗಿರುವ ಅಥವಾ ಕೆಲಸ ಮಾಡುತ್ತಿಲ್ಲದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಅಥವಾ ಸಲಕರಣೆಗಳು.
2. ಯುದ್ಧ, ಅಳುತ್ತಿರುವ ಮಗು ಅಥವಾ ಮುಳುಗುತ್ತಿರುವ ಹಡಗಿನಂತಹವುಗಳನ್ನು ಪ್ರದರ್ಶಿಸುವ ಕಲಾಕೃತಿಗಳು ಅಥವಾ ಭಾವಚಿತ್ರಗಳು.
3. ಮುರಿದಿರುವ ಅಥವಾ ಬಿರುಕು ಬಿಟ್ಟಿರುವ ಫ್ರೇಮ್‌ಗಳು, ಕನ್ನಡಿಗಳು ಮತ್ತು ಶೋಪೀಸ್‌ಗಳು.
ಫೋನ್ ಅನ್ನು ನಿರ್ದಿಷ್ಟವಾಗಿ ಹಾಲ್‌ನ ಪೂರ್ವ, ಉತ್ತರ ಅಥವಾ ಆಗ್ನೇಯದಲ್ಲಿ ಇರಿಸುವಂತೆ ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ನಿಮ್ಮ ಹಾಲ್‌ನ ನೈರುತ್ಯ ಅಥವಾ ಆಗ್ನೇಯ ಭಾಗದಲ್ಲಿ ದೂರವಾಣಿಯನ್ನು ಇರಿಸಬೇಡಿ.
ಹಾಲ್‌ನ ಈಶಾನ್ಯ ಭಾಗದಲ್ಲಿ ಪ್ರಾರ್ಥನೆಗಾಗಿ ದೇವರ ಫೋಟೋಗಳನ್ನು ಇರಿಸಬೇಕು ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಇದು ಶುಭಕರ ಮತ್ತು ಸಮೃದ್ಧಿಯನ್ನು ತರುವ ಮೂಲೆಯಾಗಿದೆ.
ಹಾಲ್‌ನ ಪಶ್ಚಿಮ, ದಕ್ಷಿಣ ಅಥವಾ ನೈರುತ್ಯ ಭಾಗದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಿದರೆ ಗರಿಷ್ಠ ಪ್ರಯೋಜನ ಸಿಗುತ್ತದೆ ಎಂದು ವಾಸ್ತು ಸಲಹೆಯಲ್ಲಿ ತಿಳಿಸಲಾಗಿದೆ.
ನಿಮ್ಮ ಹಾಲ್‌ನ ಈಶಾನ್ಯ ಮೂಲೆಯಲ್ಲಿ ಗಿಡಗಳನ್ನು ಇರಿಸುವ ಮೂಲಕ ನಿಸರ್ಗದ ಚೆಲುವನ್ನು ಮನೆಯೊಳಗೆ ತನ್ನಿ. ಇದು ಹಾಲ್‌ಗೆ ಸಕಾರಾತ್ಮಕ ಕಂಪನಗಳನ್ನು ತಂದುಕೊಡುತ್ತದೆ.
ಹಾಲ್‌ನ ತಾಪಮಾನದ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ನಿಮ್ಮ ಹಾಲ್‌ನ ವಾಯವ್ಯ, ಪೂರ್ವ ಅಥವಾ ಪಶ್ಚಿಮ ಭಾಗದಲ್ಲಿ ಏರ್ ಕಂಡೀಶನರ್ ಇರಿಸುವಂತೆ ವಾಸ್ತು ಶಾಸ್ತ್ರ ಸಲಹೆ ನೀಡುತ್ತದೆ.
ವಾಸ್ತು ಅನುಸರಣೆಯ ಸ್ಥಳದಲ್ಲಿ ನೆಲೆಸುವ ಮೂಲಕ ಆರೋಗ್ಯ, ಸಂಪತ್ತು, ಸಂತೋಷ ಮತ್ತು ಸಂತೃಪ್ತಿಯನ್ನು ಸ್ವಾಗತಿಸಿ. ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮತ್ತು ನಿಮ್ಮ ಅತಿಥಿಗಳನ್ನು ಸಕಾರಾತ್ಮಕ ಪರಿಸರಕ್ಕೆ ಸ್ವಾಗತಿಸಲು ಈ ಲೇಖನವನ್ನು ಓದಿ ಮಕ್ಕಳು ಮತ್ತು ಅತಿಥಿ ಕೋಣೆಗಳಿಗಾಗಿ ವಾಸ್ತು ಶಾಸ್ತ್ರ