ಆರ್‌ಸಿಸಿ ಫೂಟಿಂಗ್ ಎಂದರೇನು?

25 ನೇ ಆಗಸ್ಟ್, 2020

ನಿಮ್ಮ ಮನೆಯು ಮುಂದಿನ ಹಲವಾರು ವರ್ಷಗಳವರೆಗೆ ಕೂಡಾ ಗಟ್ಟಿಮುಟ್ಟಾಗಿರಬೇಕಾಗುತ್ತದೆ, ಏಕೆಂದರೆ ಅದು ನಿಮ್ಮ ಮುಂದಿನ ಪೀಳಿಗೆಗೂ ಸಹ ಒಂದು ನೆಲೆಯಾಗುತ್ತದೆ. ಇದನ್ನು ಸಾಧಿಸುವ ಸಲುವಾಗಿ, ಅದಕ್ಕೆ ಬಲವಾದ ಅಡಿಪಾಯ ಬೇಕು ಮತ್ತು ಅಡಿಪಾಯವನ್ನು ಬಲಪಡಿಸುವ ಅತ್ಯುತ್ತಮ ಮಾರ್ಗವೆಂದರೆ ಆರ್‌ಸಿಸಿ ಆಧಾರಗಳು (ಫುಟಿಂಗ್ ಗಳು).

ಆರ್‌ಸಿಸಿ ಆಧಾರಗಳು (ಫುಟಿಂಗ್‌ಗಳು) ಅಂದರೆ ಏನು?

ಅವು ರಿಇನ್‌ಫೋರ್ಸ್ಡ್‌ ಸಿಮೆಂಟ್ ಕಾಂಕ್ರೀಟ್(ಆರ್‌ಸಿಸಿ) ಆಧಾರಗಳಾಗಿವೆ(ಫುಟಿಂಗ್‌ಗಳಾಗಿವೆ) ಮತ್ತು ಅವು ಸ್ಟೀಲ್ ಬಾರ್‌ಗಳಿಂದ ಮಾಡಲ್ಪಟ್ಟಿದ್ದು ಕಾಂಕ್ರೀಟ್ ಅಡಿಪಾಯಕ್ಕೆ ಬಲವರ್ಧಿತವಾಗಿ ಕಾರ್ಯನಿರ್ವಹಿಸುತ್ತವೆ, ಇದು ಮನೆಯ ಸಂಪೂರ್ಣ ತೂಕವನ್ನು ತಡೆದುಕೊಳ್ಳುತ್ತದೆ. ನಿಮ್ಮ ಮನೆಯ ರಚನೆಯ ಮೇಲಿನ ಭಾರಗಳನ್ನು ಕಡಿಮೆಗೊಳಿಸುವ ಸಲುವಾಗಿ ಆಧಾರಗಳು (ಫುಟಿಂಗ್‌ಗಳು) ಒಟ್ಟಾರೆ ತೂಕವನ್ನು ನೆಲಕ್ಕೆ ವರ್ಗಾಯಿಸುತ್ತವೆ. ರಚನೆಯ ಅವಶ್ಯಕತೆಗಳನ್ನು ಅವಲಂಬಿಸಿ, ಆಧಾರಗಳು (ಫುಟಿಂಗ್‌ಗಳು) ಟ್ರೆಪಿಜಾಯಿಡಲ್, ಬ್ಲಾಕ್ ಅಥವಾ ಮೆಟ್ಟಿಲಿನ-ಆಕಾರದಲ್ಲಿರಬಹುದು.

ಆರ್‌ಸಿಸಿ ಆಧಾರಗಳನ್ನು(ಫುಟಿಂಗ್‌ಗಳನ್ನು) ಅಳವಡಿಸುವ ಹಂತಗಳು ಯಾವುವು?

  • ಆಧಾರವನ್ನು(ಫುಟಿಂಗ್) ಸ್ಥಾಪಿಸುವ ಮೊದಲು, ಅದಕ್ಕಾಗಿ ಅಗೆತ ಮಾಡಿದ ನೆಲವನ್ನು ಚೆನ್ನಾಗಿ ದಮ್ಮಸ್ಸು ಮಾಡಬೇಕಾಗುತ್ತದೆ. ಇದರಿಂದಾಗಿ ಮಣ್ಣಿನ ದೃಢತೆ ಮತ್ತು ಸ್ಥಿರತೆಯು ಹೆಚ್ಚುತ್ತದೆ.
  • ಅದರ ನಂತರ, ಪ್ರದೇಶವನ್ನು 150 ಮಿಮೀ ಕಾಂಕ್ರೀಟ್‌ನಿಂದ ಮುಚ್ಚಿ, ನೆಲ ಮಟ್ಟವನ್ನು (ಬೆಡ್‌) ರಚಿಸಿ. ಇದು ನಿಮ್ಮ ಆಧಾರಕ್ಕೆ(ಫುಟಿಂಗ್) ಸರಳ ಮೇಲ್ಮೈಯನ್ನು ನೀಡುತ್ತದೆ.
  • ಬಲವರ್ಧನೆಯ ಪಂಜರವನ್ನು ಅಳವಡಿಸುವಾಗ, ಅದರ ಜೋಡಣೆ ಸರಿಯಾಗಿದೆಯೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
  • ಸಿಮೆಂಟಿನ ನೆಲ ಮಟ್ಟದ ಮೇಲೆ ಸಿಮೆಂಟ್ ಮತ್ತು ನೀರಿನ ಮಿಶ್ರಣವನ್ನು ಹರಡಿ ಅದರ ನಂತರ ಕಾಂಕ್ರೀಟ್ ಅನ್ನು ಸುರಿಯಿರಿ. ಬಳಸಿದ ಕಾಂಕ್ರೀಟ್ ಪ್ರಮಾಣವು ಅಡಿಪಾಯದ ಗಾತ್ರವನ್ನು ಆಧರಿಸಿದೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ಶಟ್ಟರಿಂಗ್ ಹಾಕಲು ಮರೆಯಬೇಡಿ.
  • ಕೊನೆಯದಾಗಿ ಆದರೆ ಕೊನೆಯದಲ್ಲದ ಅಂಶವಾಗಿ, ಆಧಾರವನ್ನು(ಫುಟಿಂಗ್)ಹಾಕಿದ ನಂತರ ಕ್ಯೂರಿಂಗ್ ಮಾಡಲು ಮರೆಯಬೇಡಿ. ಸಮಗ್ರ ಶಕ್ತಿಯನ್ನು ಅಭಿವೃದ್ಧಿಗೊಳಿಸಲು ಇದು ಅತ್ಯವಶ್ಯಕವಾಗಿದೆ.

ನಿಮ್ಮ ಮನೆಗೆ ಆರ್‌ಸಿಸಿ ಆಧಾರಗಳನ್ನು (ಫುಟಿಂಗ್) ಸರಿಯಾದ ರೀತಿಯಲ್ಲಿ ಅಳವಡಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಈ ಮಾರ್ಗಸೂಚಿಗಳನ್ನು ಅನುಸರಿಸಿ.


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ