ಮನೆಯನ್ನು ಸಮರ್ಪಕ ರೀತಿಯಲ್ಲಿ ಶಾಖ ಅಥವಾ ಶಬ್ಧ ನಿರೋಧಕವಾಗಿಸುವುದರಿಂದ ಹೊರಗಿನ ಶಾಖ, ತಂಪು ಮತ್ತು ಶಬ್ಧಗಳಿಂದ ಸಂರಕ್ಷಿಸುತ್ತದೆ. ಇದು ವಿದ್ಯುಚ್ಛಕ್ತಿಯನ್ನು ಉಳಿತಾಯ ಮಾಡುತ್ತದೆ ಮತ್ತು ನಿಮ್ಮ ಮನೆಯ ಒಳಗೆ ಒಂದು ಆರಾಮದಾಯಕ ವಾತಾವರಣವನ್ನು ನಿರ್ಮಿಸುತ್ತದೆ. ನಿಮ್ಮ ಮನೆಯ ಒಳಗೆ ಸೂಕ್ತ ಉಷ್ಣತೆಯ ಮಟ್ಟಗಳನ್ನು ಕಾಪಾಡಲು ನೀವು ಈ ನಾಲ್ಕು ಬಗೆಯ ಶಾಖ ನಿರೋಧಕ ವಿಧಾನವನ್ನು ಅನುಸರಿಸಬೇಕು.
ಬಹಳಷ್ಟು ಬಣ್ಣಗಳನ್ನು ಬಳಸಿದರೆ ನೋಡಲು ಗೊಂದಲ ಹುಟ್ಟಿಸುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಆದ್ದರಿಂದ ಬಣ್ಣಗಳನ್ನು ಆದಷ್ಟು ಸರಳವಾಗಿರಿಸಿ ಮತ್ತು ನಿಮ್ಮ ಮನೆಯ ಹೊರಗೋಡೆಗಳಿಗೆ ಒಂದು ಅಥವಾ ಎರಡು ಬಣ್ಣಗಳನ್ನು ಬಳಸಿ. ನಿಮಗೆ ಬಣ್ಣಗಳು ಬಹಳ ಸಾಮಾನ್ಯವಾಗಿದೆ ಎಂದೆನಿಸಿದರೆ, ನಿಮಗಿಷ್ಟವಾದ ಬಣ್ಣದ ವಿವಿಧ ಶೇಡ್‌ಗಳಿಂದ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
ಬಣ್ಣಗಳ ಆಯ್ಕೆಯ ವಿಷಯಕ್ಕೆ ಬಂದಾಗ, ನೀವು ಅನೇಕ ಆಯ್ಕೆಗಳನ್ನು ಪರಿಶೀಲಿಸಬಹುದು. ನೀವು ಯಾವ ಬಣ್ಣಗಳು ಇಷ್ಟವಾಗುತ್ತದೆ ಎಂಬುದನ್ನು ನೋಡಲು, ಎಲ್ಲಾದರೂ ಪ್ರೇರಣೆ ಅಥವಾ ಯಾರಿಂದಲಾದರೂ ಸಲಹೆ ಸಿಗಬಹುದೆ ಎಂದು ನೋಡಿ, ನಂತರ ಎಲ್ಲಾ ಆಯ್ಕೆಗಳ ಸಂಯೋಜನೆಗಳನ್ನು ಆರಿಸಿಕೊಳ್ಳಿ. ಸುಲಭವಾಗಿ ಧೂಳು ಅಂಟಿಕೊಳ್ಳುವಂತಹ ಕಪ್ಪು ಮತ್ತು ಗಾಢ ಬಣ್ಣಗಳನ್ನು ತಪ್ಪಿಸಿ.
ನೀವು ಶೇಡ್-ಕಾರ್ಡ್‌ನಲ್ಲಿ ಆಯ್ಕೆ ಮಾಡಿಕೊಳ್ಳುವ ಬಣ್ಣ ಮತ್ತು ಶೇಡ್ ಅನ್ನು ನಿಮ್ಮ ಮನೆಯ ಹೊರಗೋಡೆಗೆ ಹಚ್ಚಿದಾಗ ಬೇರೆಯ ರೀತಿಯೇ ಕಾಣುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಆ ಗೋಡೆಯ ಮೇಲೆ ಬೀಳುವ ಬೆಳಕಿನ ಗುಣಮಟ್ಟ ಮತ್ತು ಅದರ ಬಗೆ ಆಗಿರುತ್ತದೆ. ಗೋಡೆಗಳ ಮೇಲೆ ಕೆಲವು ಬಣ್ಣಗಳು ಮತ್ತು ಶೇಡ್‌ಗಳ ಒಂದು ಸ್ಯಾಂಪಲ್ ಅನ್ನು ಹಚ್ಚಿ ನೋಡುವುದು ಉತ್ತಮ. ಇದರಿಂದ ನಿಮಗೆ ಇದು ಅಂತಿಮವಾಗಿ ಹೇಗೆ ಕಾಣಿಸುತ್ತದೆ ಎಂಬ ಒಂದು ಉತ್ತಮ ಅಂದಾಜು ದೊರೆಯುತ್ತದೆ.
ಮನೆಯ ಹೊರಗೋಡೆಗಳಿಗೆ ಬಣ್ಣವನ್ನು ಆಯ್ಕೆ ಮಾಡುವಾಗ ಮನೆಯ ಇರುವ ಸ್ಥಳ ಮತ್ತು ಅದರ ಸುತ್ತಮುತ್ತ ಏನಿದೆ ಎಂಬುದನ್ನು ಪರಿಗಣಿಸಿಬೇಕು. ನಿಮ್ಮ ಮನೆಯು ಎದ್ದು ಕಾಣಿಸಬೇಕು ಎಂದು ನೀವು ಯೋಚಿಸುವುದರ ಜೊತೆಗೆ, ನಿಮ್ಮ ಮನೆಯ ಸುತ್ತಮುತ್ತಲಿನ ಪರಿಸರ ಮತ್ತು ಹಿನ್ನಲೆಯ ಲಹರಿ ಹಾಗೂ ಹವಾಮಾನಕ್ಕೆ ಒಗ್ಗಿಕೊಳ್ಳುವ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಿ.
ಅಂತಹ ಇನ್ನೂ ಹಲವಾರು ಸಲಹೆಗಳಿಗಾಹಿ ಅಲ್ಟ್ರಾಟೆಕ್ ಸಿಮೆಂಟ್‌ನ #ಮನೆಯಮಾತನ್ನು ಆಲಿಸಿ
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ