ನಿವೇಶನವನ್ನು ಖರೀದಿಸುವುದು ನಿಮ್ಮ ಮನೆ ನಿರ್ಮಾಣದ ಮೊದಲ ದೊಡ್ಡ ಹೆಜ್ಜೆಯಾಗಿರುತ್ತದೆ. ನಂತರದಲ್ಲಿ ಕಾನೂನಿನ ತೊಡಕುಗಳಿಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ, ನಿಮ್ಮ ಮನೆಯ ನಿರ್ಮಾಣವನ್ನು ಪ್ರಾರಂಭಿಸುವ ಮೊದಲೇ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ನೀವು ಹೊಂದಿರುವಿರಿ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.
ಆಸ್ತಿಯ ಮಾಲೀಕತ್ವವನ್ನು ನಿರ್ಧರಿಸುವಲ್ಲಿ ಮೂಲ ಪತ್ರವು ಮುಖ್ಯ ದಾಖಲೆಯಾಗಿರುತ್ತದೆ. ಇದು ಭೂಮಿಯ ಮಾಲೀಕತ್ವದ ಬಗ್ಗೆ ಇರುವ ಸರಪಳಿಯನ್ನು ಗುರುತು ಹಿಡಿಯುತ್ತದೆ ಮತ್ತು ನಿವೇಶನದ ಚರಿತ್ರೆಗೆ ಸಂಬಂಧಿಸಿದ ದಾಖಲೆಯನ್ನು ಒದಗಿಸುತ್ತದೆ.
ಜಮೀನು ಮಾರಾಟ ಮಾಡುವವರು ಮಾಲೀಕರಲ್ಲದಿದ್ದ ಪಕ್ಷದಲ್ಲಿ, ಅವರು ಪವರ್ ಆಫ್ ಅಟಾರ್ನಿ ಹೊಂದಿರಬೇಕು ಹಾಗೂ ಅದರಲ್ಲಿ ಅವರಿಗೆ ನಿವೇಶನವನ್ನು ಮಾರಾಟ ಮಾಡಲು ಅಧಿಕಾರ ನೀಡಿರಬೇಕು. ಯಾವುದೇ ಮಾರಾಟಗಾರರಿಂದ ಜಮೀನನ್ನು ಖರೀದಿಸಬೇಕೆಂದಿದ್ದಲ್ಲಿ, ಯಾವಾಗಲೂ ಪವರ್ ಆಫ್ ಅಟಾರ್ನಿಯನ್ನು ಪರಿಶೀಲಿಸಬೇಕಾಗುತ್ತದೆ.
ಮಾರಾಟಗಾರರು ಖರೀದಿದಾರರಿಗೆ ಭೂ ಮಾಲೀಕತ್ವವನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಕ್ರಯದ ಕರಾರು ಪತ್ರವು ದಾಖಲಿಸುತ್ತದೆ. ನೀವು ಅದನ್ನು ಉಪ-ರಿಜಿಸ್ಟ್ರಾರ್ ಕಚೇರಿಯಲ್ಲಿ ಮೌಲ್ಯೀಕರಣ ಮಾಡಬೇಕಾಗುತ್ತದೆ.
ಋಣಭಾರ ದೃಢೀಕರಣ ಪ್ರಮಾಣಪತ್ರದಲ್ಲಿ ಭೂಮಿಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳನ್ನು ದಾಖಲಿಸಲಾಗಿರುತ್ತದೆ. ನೀವು ಖರೀದಿಸುತ್ತಿರುವ ಭೂಮಿಯು ಯಾವುದೇ ಹಣ ಸಂಬಂಧಿತ ಅಥವಾ ಕಾನೂನುಬದ್ಧ ಬಂಧನಗಳಿಂದ ಮುಕ್ತವಾಗಿದೆ ಎನ್ನುವುದಕ್ಕೆ ಇದು ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
ಕಟ್ಟಡವನ್ನು ನಿರ್ಮಿಸಲು ಬೇಕಾದ ಪರವಾನಗಿಯನ್ನು ಪಡೆಯಲು ಖಾತ ಪ್ರಮಾಣ ಪತ್ರವು ಬೇಕಾಗುತ್ತದೆ. ಇದು ಆಸ್ತಿಯಲ್ಲಿನ ಸ್ಥಳದ, ಗಾತ್ರದ, ನಿರ್ಮಿಸಲಾಗಿರುವ ವಿಸ್ತೀರ್ಣ ಇತ್ಯಾದಿ ವಿವರಗಳನ್ನು ಒಳಗೊಂಡಿರುತ್ತದೆ ಮತ್ತು ಆಸ್ತಿ ತೆರಿಗೆ ಪಾವತಿಸಲು ಹಾಗೂ ಕಟ್ಟಡ ಪರವಾನಗಿ ಪಡೆಯಲು ಇದು ಅತ್ಯಗತ್ಯವಾಗಿರುತ್ತದೆ.
ಎಲ್ಲಾ ರೀತಿಯಲ್ಲಿ ಸೂಕ್ತವಾಗಿರುವ ಕಾನೂನು ದಾಖಲಾತಿಗಳನ್ನು ಹೊಂದಿದ್ದಲ್ಲಿ, ಭವಿಷ್ಯದಲ್ಲಿ ಯಾವುದೇ ವಿವಾದಗಳಿಂದ ನಿಮ್ಮ ಭೂಮಿ ಮತ್ತು ಮನೆಯನ್ನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ. ದಸ್ತಾವೇಜನ್ನು ತಯಾರಿಸುವ ಪ್ರಕ್ರಿಯೆಯ ಪ್ರತಿಯೊಂದು ಘಟ್ಟದಲ್ಲೂ ನಿಮಗೆ ಸಹಾಯ ಮಾಡುವ ಸಲುವಾಗಿ ವಕೀಲರನ್ನು ಸಂಪರ್ಕಿಸಿ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ