ಪ್ರತಿಯೊಂದು ವಿಧವೂ ನಿರ್ದಿಷ್ಟವಾದ ಉದ್ದೇಶಗಳಿಗೆ ಬಳಸಲಾಗುವುದರಿಂದ ನಿಮ್ಮ ಜಾಗದ ಅವಶ್ಯಕತೆಗಳನ್ನು ಮೊದಲು ತಿಳಿದುಕೊಳ್ಳಬೇಕು. ಒಂದೇ ತರಹದ ಸ್ಟ್ರ್ಯಾಪ್ ಫೂಟಿಂಗನ್ನು ಎಲ್ಲ ಸಮಯದಲ್ಲಿ ಬಳಸಲಾಗದು. ಅವಶ್ಯಕತೆಗಳಿಗೆ ತಕ್ಕಂತೆ ವಿಧಗಳು ಇಲ್ಲಿವೆ.
೧. ಸಮತೋಲಿತ ಸ್ಟ್ರ್ಯಾಪ್ ಫೂಟಿಂಗ್
ಸಮತೋಲಿತ ಸ್ಟ್ರ್ಯಾಪ್ ಫೂಟಿಂಗ್ ಜಾಗದೆಲ್ಲೆಡೆ ಭಾರವು ಸಮನಾಗಿ ಹಂಚಿಕೆಯದಾಗ ಬಳಸಲಾಗುತ್ತದೆ. ಇದರಲ್ಲಿ ಒಂದು ಸೆಂಟ್ರಲ್ ಬೀಮ್ ನಿಂದ ಜೋಡಿಸಲ್ಪಟ್ಟ ಎರಡು ಪ್ರತ್ಯೇಕ ಅಡಿಪಾಯಗಳಿರುತ್ತವೆ. ಈ ವಿನ್ಯಾಸವು ಎರಡು ಅಡಿಪಾಯಗಳ ಮಧ್ಯೆ ಭಾರವು ಸಮನಾಗಿ ಹಂಚಿಕೆಯಾಗುವಂತೆ ಮಾಡುತ್ತದೆ ಹಾಗೂ ನಿರ್ಮಾಣಕ್ಕೆ ಸ್ಥಿರವಾದ ಬೆಂಬಲವನ್ನು ಒದಗಿಸಿ ಅಸಮ ನೆಲೆಗೊಳ್ಳುವಿಕೆಯನ್ನು ತಪ್ಪಿಸುತ್ತದೆ. ಇದು ಸಮವಾದ ಮಣ್ಣಿರುವ ಪರಿಸ್ಥಿತಿಗಳಲ್ಲಿ ಬಲಸಲಾಗುತ್ತದೆ.
೨. ಕ್ಯಾಂಟಿಲಿವರ್ ಸ್ಟ್ರ್ಯಾಪ್ ಫೂಟಿಂಗ್
ಕಟ್ಟಡದ ಮೇಲೆ ಅಸಮವಾದ ಭಾರವಿದ್ದಾಗ ಕ್ಯಾಂಟಿಲಿವರ್ ಸ್ಟ್ರ್ಯಾಪ್ ಫೂಟಿಂಗ್ ಬಳಸಲಾಗುತ್ತದೆ. ಉದಾಹರಣೆಗೆ, ಕಟ್ಟಡದ ಒಂದು ಭಾಗ ಇನ್ನೊಂದು ಭಾಗಕ್ಕಿಂತ ಭಾರವಿದ್ದಾಗ ಅಥವಾ ಕಟ್ಟಡದ ವಿನ್ಯಾಸ ಅಸಮವಿತವಿದ್ದಾಗ ಕ್ಯಾಂಟಿಲಿವರ್ ಸ್ಟ್ರ್ಯಾಪ್ ಫೂಟಿಂಗ್ ಕ್ಯಾಂಟಿಲಿವರ್ ಬೀಮ್ ಅನ್ನು ಬಳಸಿ ಭಾರದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಮಣ್ಣಿನ ಸ್ಥಿತಿ ದುರ್ಬಲವಾಗಿದ್ದು ಒಂದು ಕಡೆಯಲ್ಲಿ ಬೇಕಾದಷ್ಟು ಬೆಂಬಲವಿಲ್ಲದಿದ್ದಾಗಲೂ ಈ ಥರದ ಫೂಟಿಂಗ್ ಸಹಾಯಕವಾಗಿದೆ.
೩. ಓವರ್ ಹ್ಯಾಂಗಿಂಗ್ ಸ್ಟ್ರ್ಯಾಪ್ ಫೂಟಿಂಗ್:
ಓವರ್ ಹ್ಯಾಂಗಿಂಗ್ ಸ್ಟ್ರ್ಯಾಪ್ ಫೂಟಿಂಗ್ ಅಡಿಪಾಯದ ಸಾಮಾನ್ಯ ಮಿತಿಗಿಂತ ಹೆಚ್ಚು ವಿಸ್ತರಿಸಿರುತ್ತದೆ. ಇಲ್ಲಿ ಭಾರದ ಸಮತೋಲನ ಕಾಯ್ದುಕೊಳ್ಳಲು ಒಂದು ಬೀಮ್ ಅಡಿಪಾಯದ ತುದಿಗಿಂತಲೂ ಮುಂದೆ ಚಾಚಿಕೊಂಡಿರುತ್ತದೆ. ಈ ವಿನ್ಯಾಸ ಹೆಚ್ಚಾಗಿ ಕಿರಿದಾದ ಜಾಗ ಇರುವಾಗ ಹಾಗೂ ಕಟ್ಟಡದ ಅಡಿಯಲ್ಲಿ ಸಂಪೂರ್ಣ ಅಡಿಪಾಯ ಹಾಕಲು ಜಾಗವಿಲ್ಲದ ಸಂದರ್ಭಗಳಲ್ಲಿ ಬಳಕೆಯಾಗುತ್ತದೆ. ಮುಂದಕ್ಕೆ ಚಾಚುವಂತಹ ಗುಣವಿರುವ ಈ ಅಡಿಪಾಯ ಹೆಚ್ಚು ಜಾಗವನ್ನು ಬಳಸದೇ ಭಾರವನ್ನು ಸಮನಾಗಿ ಹಂಚುತ್ತದೆ.
ಸ್ಟ್ರ್ಯಾಪ್ ಫೂಟಿಂಗ್ ವಿನ್ಯಾಸ: ಮುಖ್ಯ ಪರಿಗಣನೆಗಳು
ಸ್ಟ್ರ್ಯಾಪ್ ಫೂಟಿಂಗ್ ನ ವಿನ್ಯಾಸವು ವಿಜ್ಞಾನ ಮತ್ತು ತಂತ್ರದ ಮಿಶ್ರಣವಾಗಿದೆ. ಮುಖ್ಯಾಂಶಗಳು:
ಮಣ್ಣಿನ ವಿಶ್ಲೇಷಣೆ:
ಮಣ್ಣಿನ ವಿಧವನ್ನು ಅರಿಯುವುದು ಮತ್ತು ಅದರ ಭಾರ ಹೊರುವ ಸಾಮರ್ಥ್ಯವನ್ನು ತಿಳಿದುಕೊಳ್ಳುವುದು ಬಹು ಮುಖ್ಯ. ಮಣ್ಣನ್ನು ಆಮೂಲಾಗ್ರವಾಗಿ ಪರಿಶೀಲಿಸುವುದರಿಂದ ನಿಮ್ಮ ಕಟ್ಟಡದ ಭಾರವನ್ನು ಮಣ್ಣು ತಡೆಯಬಲ್ಲುದೇ ಎಂಬುದನ್ನು ತಿಳಿಯಬಹುದು, ಇದು ಫೂಟಿಂಗ್‍ನ ಆಳ ಮತ್ತು ವಿನ್ಯಾಸದ ಮೇಲೆ ಪರಿಣಾಮ ಬೀರುತ್ತದೆ.
ಭಾರದ ಹಂಚಿಕೆ:
ಸ್ಟ್ರಾಪ್ ಬೀಮ್ ಅಡಿಪಾಯದ ಉದ್ದಕ್ಕೂ ಭಾರವನ್ನು ಸಮರ್ಥವಾಗಿ ಹಂಚಬೇಕು. ಸರಿಯಾದ ಭಾರದ ಹಂಚಿಕೆಯಿಂದ ಬಲವು ಸಮನಾಗಿ ಹರಡಿಕೊಂಡು ಕಟ್ಟಡದ ಮೇಲೆ ಅನಗತ್ಯ ಒತ್ತಡ ಅಥವಾ ಕುಸಿತವನ್ನು ತಡೆಯುತ್ತದೆ.
ಸಾಮಗ್ರಿಯ ಆಯ್ಕೆ:
ವಿಶೇಷವಾಗಿ ಕಾಂಕ್ರೀಟ್ ಮತ್ತು ರೀಇನ್ಫೋರ್ಸ್‍ಮೆಂಟಿಗೆ ಅತ್ಯುತ್ತಮ ದರ್ಜೆಯ ಸಾಮಗ್ರಿಗಳನ್ನು ಆಯ್ಕೆಮಾಡಿಕೊಳ್ಳುವುದು ಅತ್ಯಗತ್ಯ. ಹೆಚ್ಚು ಬಾಳಿಕೆ ಬರುವ ಸಾಮಗ್ರಿಗಳನ್ನು ಬಳಸುವುದರಿಂದ ಅಡಿಪಾಯವು ಸ್ಥಿರ, ಸಧೃಡವಾಗುವುದಲ್ಲದೇ ಸುಲಭವಾಗಿ ಹಾನಿಗೊಳಗಾಗುವುದಿಲ್ಲ - ಅಗ್ಗದ ಸಾಮಗ್ರಿಗಳನ್ನು ಬಳಸುವುದು ಭವಿಷ್ಯದಲ್ಲಿ ಸಮಸ್ಯೆಗಳನ್ನು ತಂದೊಡ್ಡಬಹುದು.
ಸ್ಟ್ರಾಪ್ ಫೂಟಿಂಗ್‍ನ ನಿರ್ಮಾಣಕ್ಕೆ ಹಂತ ಹಂತದ ಸೂಚನೆಗಳು
ಈ ಹಂತಗಳನ್ನು ಅನುಸರಿಸುವುದರಿಂದ ನಿಮ್ಮ ಮನೆಗೆ ಸಧೃಡ ಮತ್ತು ವಿಶ್ವಾಸಾರ್ಹ ಅಡಿಪಾಯವನ್ನು ನಿರ್ಮಿಸಬಹುದು.
೧. ಜಾಗವನ್ನು ನಿರ್ಣಯಿಸಿ
ಮಣ್ಣಿನ ಭಾರ ಹೊರುವ ಸಾಮರ್ಥ್ಯವನ್ನು ತಿಳಿಯಲು ಮೊದಲು ಮಣ್ಣು ಪರೀಕ್ಷೆಯಿಂದ ಆರಂಭಿಸಿ. ಮಣ್ಣಿನ ಧೃಡತೆಯನ್ನು ತಿಳಿಯುವುದರಿಂದ ನಿಮ್ಮ ಮನೆಯ ಭಾರವನ್ನು ಅಡಿಪಾಯ ತಡೆಯಬಲ್ಲುದೇ ಎಂದು ತಿಳಿಯಬಹುದು ಮತ್ತು ಭವಿಷ್ಯದಲ್ಲಿ ಕುಸಿತದ ಅಥವಾ ಪಲ್ಲಟದ ಅಪಾಯವನ್ನು ತಡೆಯಬಹುದು.
೨. ವಿನ್ಯಾಸವನ್ನು ಯೋಜಿಸಿ
ಫೂಟಿಂಗ್ ಮತ್ತು ಸ್ಟ್ರಾಪ್ ಬೀಮ್‍ನ ಜಾಗವನ್ನು ನಿರ್ದಿಷ್ಟವಾಗಿ ಗುರುತಿಸಿ. ಸರಿಯಾದ ವಿನ್ಯಾಸವನ್ನು ಯೋಜಿಸುವುದರಿಂದ ನಿಮ್ಮ ಕಟ್ಟಡದ ರೂಪುರೇಷೆಯೊಂದಿಗೆ ಅಡಿಪಾಯದ ಹೊಂದಿಕೆ ಮತ್ತು ಭಾರದ ಸಮನಾದ ಹಂಚಿಕೆಯನ್ನು ಖಾತ್ರಿಗೊಳಿಸಬಹುದು.
೩. ನೆಲವನ್ನು ಅಗೆಯಿರಿ
ಅಡಿಪಾಯದ ವಿನ್ಯಾಸಕ್ಕೆ ಅನುಗುಣವಾಗಿ ಕಂದಕಗಳನ್ನು ತೆಗೆಯಿರಿ. ಫೂಟಿಂಗ್ ಮತ್ತು ಬೀಮ್‍ಗಳು ಸರಿಯಾದ ಆಳ ಮತ್ತು ಜಾಗದಲ್ಲಿ ನೆಲೆಯಾಗಿ ಸರಿಯಾದ ಆಧಾರವನ್ನು ಒದಗಿಸಲು ಪಾಯವನ್ನುನಿಖರವಾಗಿ ತೆಗೆಯಬೇಕು.
೪. ರೀಇನ್ಫೋರ್ಸ್
ಅಗೆದ ಕಂದಕಗಳಲ್ಲಿ ಸ್ಟೀಲ್ ರೀಬಾರ್‌ಗಳನ್ನು ಇರಿಸಿ. ಫೂಟಿಂಗ್ಸ್ ಮತ್ತು ಬೀಮ್‍ಗಳನ್ನು ರೀಬರ್‌ನೊಂದಿಗೆ ರೀಇನ್ಫೋರ್ಸ್ ಮಾಡುವುದರಿಂದ ಕಾಂಕ್ರೀಟ್ ಧೃಡವಾಗಿ, ಅಡಿಪಾಯದ ಮೇಲೆ ಕಾಲಕ್ರಮದಲ್ಲಿ ಬೀಳಬಹುದಾದ ಒತ್ತಡ ಮತ್ತು ಭಾರವನ್ನು ತಡೆಯಲು ಶಕ್ತವಾಗುತ್ತದೆ.
೫. ಕಾಂಕ್ರೀಟ್ ಸುರಿಯಿರಿ
ರೀಇನ್ಫೋರ್ಸ್‍ಮೆಂಟ್ ಒಮ್ಮೆ ಇರಿಸಲ್ಪಟ್ಟ ನಂತರ ಉತ್ತಮ ದರ್ಜೆಯ ಕಾಂಕ್ರೀಟನ್ನು ಕಂದಕದಲ್ಲಿ ಸುರಿಯಿರಿ. ಈ ಹಂತವು ಅಡಿಪಾಯದ ಬಲ, ಬಾಳಿಕೆ ಮಾತ್ರವಲ್ಲದೆ ಪಲ್ಲಟ ಅಥವಾ ಬಿರುಕು ನಿರೋಧಕವಾಗಲು ಅತ್ಯವಶ್ಯ.
೬. ಕಾಂಕ್ರೀಟ್ ಕ್ಯೂರಿಂಗ್ ಮಾಡಿ
ಕಾಂಕ್ರೀಟನ್ನು ಕನಿಷ್ಠ ೭ ದಿನಗಳ ಕಾಲ ಕ್ಯೂರ್ ಆಗಲು ಬಿಡಿ. ಸರಿಯಾದ ಕ್ಯೂರಿಂಗಿನಿಂದ ಕಾಂಕ್ರೀಟ್ ಧೃಡತೆ ಮತ್ತು ಸ್ಥಿರತೆಯನ್ನು ಪಡೆಯುತ್ತದೆ ಹಾಗೂ ಇದು ದೀರ್ಘಬಾಳಿಕೆಗೂ ಸಹಕಾರಿ.