ಅಲ್ಟ್ರಾಟೆಕ್ ಅಧಿಕ ಕಾರ್ಯನಿರ್ವಹಣೆ & ಹೆಚ್ಚಿನ ಸಾಮರ್ಥ್ಯದ ಕಾಂಕ್ರೀಟ್

ಅಲ್ಟ್ರಾಟೆಕ್ ಕಾಂಕ್ರೀಟ್ ಭಾರತದ ಅತಿದೊಡ್ಡ ಮತ್ತು ವಿಶ್ವದ 10ನೇ ಅತಿದೊಡ್ಡ ಕಾಂಕ್ರೀಟ್ ಉತ್ಪಾದಕ ಸಂಸ್ಥೆಯಾಗಿದ್ದು, ದೇಶಾದ್ಯಂತ ಕೆಲವು ಅತಿದೊಡ್ಡ ನಿರ್ಮಾಣ ಯೋಜನೆಗಳಿಗೆ ಶಕ್ತಿ ತುಂಬುತ್ತಿದೆ. ಎಲ್ಲರ ಬೇಡಿಕೆಗಳಿಗೆ ಸರಿಹೊಂದುವ ರೀತಿ, ಉನ್ನತ ಗುಣಮಟ್ಟದ ಹಾಗೂ ಅಗ್ಗದ ಬೆಲೆಯ ಉತ್ಪನ್ನಗಳನ್ನು ತಯಾರಿಸಲು ಅಲ್ಟ್ರಾಟೆಕ್ ಕಾಂಕ್ರೀಟ್ ಬದ್ಧವಾಗಿದೆ.  ನಾವು ನಮ್ಮ ಉತ್ಪನ್ನದ ಗುಣಮಟ್ಟವನ್ನಷ್ಟೇ ಅಲ್ಲ ಅದರ ಸೌಂದರ್ಯದ ಆಯಾಮವನ್ನೂ ಪರಿಗಣಿಸುತ್ತದೆ. ಅಲ್ಟ್ರಾಟೆಕ್ ಕಾಂಕ್ರೀಟ್‌ನಲ್ಲಿ, ವಿನ್ಯಾಸ ಮತ್ತು ಬಾಳಿಕೆ ಜೊತೆಜೊತೆಯಾಗಿ ಸಾಗುತ್ತವೆ. ಕಾಲದ ಪರೀಕ್ಷೆಯನ್ನು ತಾಳಿಕೊಂಡಿರುವ ಕಾಂಕ್ರೀಟ್ ಪರಿಹಾರಗಳ ಪರಿಪೂರ್ಣ ಮಿಶ್ರಣವನ್ನು ನಾವು ಪ್ರತಿನಿಧಿಸುತ್ತೇವೆ. 

ಅಲ್ಟ್ರಾಟೆಕ್ ಕಾಂಕ್ರೀಟ್ ಎರಡು ದಶಕಗಳಿಗಿಂತ ಕಡಿಮೆ ಅವಧಿಯಲ್ಲಿ ದೇಶಾದ್ಯಂತದ ಉಪಸ್ಥಿತಿ ಸ್ಥಾಪಿಸಿದ ಭಾರತದಲ್ಲಿನ ಅತಿದೊಡ್ಡ ಆರ್‌ಎಂಸಿ ಉತ್ಪಾದಕ ಸಂಸ್ಥೆಯಾಗಿದೆ. ಐಟಿ ಪರಿಹಾರಗಳ ಮೂಲಕ ಅಲ್ಟ್ರಾಟೆಕ್ ಕಾಂಕ್ರೀಟ್ ಸ್ಥಿರವಾದ ಗುಣಮಟ್ಟ ಮತ್ತು ಸೇವೆಯನ್ನು ಸಾಧಿಸಿದೆ. ನಮ್ಮ ನುರಿತ ರವಾನೆ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ (ಇಡಿ ಮತ್ತು ಟಿಎಸ್) ಗರಿಷ್ಠ ಆರ್ಡರ್ ಬುಕ್ಕಿಂಗ್, ಗ್ರಾಹಕರಿಗೆ ಮಾಡಲಾದ ಡೆಲಿವರಿಗಳ ಗೋಚರತೆ ಮತ್ತು ಟ್ರ್ಯಾಕಿಂಗ್ ಅನ್ನು ಖಚಿತಪಡಿಸುತ್ತದೆ. ಗ್ರಾಹಕರ ಅಗತ್ಯಗಳಿಗೆ ಸರಿಹೊಂದುವ ಕಾಂಕ್ರೀಟ್ ಮಿಶ್ರಣಗಳನ್ನು ಸಿದ್ಧಪಡಿಸಲು ನಮ್ಮ ಕಂಪನಿಯ ಎಂಜಿನಿಯರ್‌ಗಳ ತಂಡ ಗ್ರಾಹಕರ ಅಗತ್ಯಗಳ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಸುತ್ತವೆ. ಕಂಪನಿಯು ತನ್ನ ವಿಶಾಲ ಗ್ರಾಹಕರಿಗಾಗಿ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಅನ್ವೇಷಣೆಗಳನ್ನು ಪ್ರೋತ್ಸಾಹಿಸುತ್ತದೆ. ಕೆಲವು ಸನ್ನಿವೇಶಗಳಲ್ಲಿ ಕಾಂಕ್ರೀಟ್ ಮಿಶ್ರಣ ಮಾಡುವಲ್ಲಿ ಗ್ರಾಹಕರಿಗೆ ಪರಿಣಿತಿಯ ಅಗತ್ಯವಿರುತ್ತದೆ, ಇನ್ನು ಕೆಲವರಿಗೆ ಸಲಕರಣೆ ಅಗತ್ಯವಿರುತ್ತದೆ ಹಾಗೂ ಮತ್ತೆ ಕೆಲವರಿಗೆ ಕಾಂಕ್ರೀಟ್ ಸಿದ್ಧಪಡಿಸಲು ನಿರ್ದಿಷ್ಟ ಘಟಕಗಳ ಅಗತ್ಯವಿರುತ್ತದೆ.  ಆದ ಕಾರಣ, ವೈಯಕ್ತಿಕಗೊಳಿಸಿದ ಪರಿಹಾರಗಳನ್ನು ಒದಗಿಸುವತ್ತ ಅಲ್ಟ್ರಾಟೆಕ್ ಗಮನ ಹರಿಸಿದೆ.

ಅಲ್ಟ್ರಾಟೆಕ್ ರೆಡಿ ಮಿಕ್ಸೆಡ್ ಕಾಂಕ್ರೀಟ್ ಯಾಕೆ?

ಸರಿಯಾದ ಗುಣಲಕ್ಷಣಗಳು, ವರ್ತನೆ, ಮಿಶ್ರಣ ಪ್ರಮಾಣ ಮತ್ತು ಕಾರ್ಯಕ್ಷಮತೆಯನ್ನು ಸಾಧಿಸಲು ಅಲ್ಟ್ರಾಟೆಕ್ ಕಾಂಕ್ರೀಟ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಸಾಂಪ್ರದಾಯಿಕ ಕಾಂಕ್ರೀಟ್‌ಗಿಂತ ಉತ್ಕೃಷ್ಟವಾಗಿದೆ ಮತ್ತು ಬಹು ಅನ್ವಯತೆಗಳನ್ನು ಹೊಂದಿದೆ. ಕಚ್ಚಾ ಸಾಮಗ್ರಿಗಳ ನಿರ್ವಹಣೆಗಾಗಿ ತಜ್ಞ ಗುಣಮಟ್ಟ ವ್ಯವಸ್ಥೆಗಳು, ದಕ್ಷತೆಯ ಕಚ್ಚಾ ಮಿಶ್ರಣ ವಿನ್ಯಾಸ, ಕ್ಯೂಬ್ ಪರೀಕ್ಷೆ ಫಲಿತಾಂಶಗಳು- ಇವೆಲ್ಲವೂ ಡೇಟಾವನ್ನು ವಿಶ್ಲೇಷಣೆ ಮಾಡಲು ಮತ್ತು ಗ್ರಾಹಕ ಅಗತ್ಯಗಳ ಅಧ್ಯಯನ ಮಾಡಲು ಸಹಾಯ ಮಾಡುತ್ತವೆ. ರವಾನೆ ಮತ್ತು ಟ್ರ್ಯಾಕಿಂಗ್‌ನಲ್ಲಿನ ಪರಿಣಿತಿ ಗರಿಷ್ಠ ಬುಕ್ಕಿಂಗ್ ಮತ್ತು ಡೆಲಿವರಿಗಳ ಗೋಚರತೆಯನ್ನು ಖಚಿತಪಡಿಸುತ್ತದೆ. ಭಾರತದಲ್ಲಿನ 36 ಸ್ಥಳಗಳಲ್ಲಿ ಇರುವ 100+ ಅತ್ಯಾಧುನಿಕ ಘಟಕಗಳಲ್ಲಿ ಅಲ್ಟ್ರಾಟೆಕ್ ಕಾಂಕ್ರೀಟ್‌ನ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
 

ಅಲ್ಟ್ರಾಟೆಕ್ ಬಹಳ ಅದ್ಭುತ ಕಾಂಕ್ರೀಟ್

ಹಸಿರು ಜಗತ್ತನ್ನು ನಿರ್ಮಿಸುವುದು

ಜಗತ್ತು ಹಸಿರೀಕರಣದತ್ತ ಸಾಗುತ್ತಿದೆ ಮತ್ತು ಭಾರತರ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಅಲ್ಟ್ರಾಟೆಕ್‌ನಲ್ಲಿ ನಾವು ಈ ಉದ್ದೇಶಕ್ಕೆ ಬದ್ಧರಾಗಿದ್ದೇವೆ, ಅಲ್ಟ್ರಾಟೆಕ್ ಕಾಂಕ್ರೀಟ್, ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನಿಂದ "ಗ್ರೀನ್ ಪ್ರೊ" ಪ್ರಮಾಣಪತ್ರಕ್ಕೆ ಅನುಸಾರವಾಗಿರುವ ಭಾರತದ ಮೊದಲ ಪರಿಸರಸ್ನೇಹಿ ಕಾಂಕ್ರೀಟ್ ಎನ್ನುವ ಅಂಶ ನಮ್ಮ ಬದ್ಧತೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. 

ಇಂದಿನ ಸಮಾಜಕ್ಕೆ ಸಿಮೆಂಟ್ ಒಂದು ಅತ್ಯವಶ್ಯಕ ಸಾಮಗ್ರಿಯಾಗಿದೆ, ಏಕೆಂದರೆ ಕಾಂಕ್ರೀಟ್ ಅನ್ನು ಸಿಮೆಂಟ್‌ನಿಂದ ತಯಾರಿಸಲಾಗುತ್ತದೆ ಹಾಗೂ ಮನೆಗಳು, ವಾಣಿಜ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಇದು ಬೇಕೇಬೇಕಾದ ಸಾಮಗ್ರಿಯಾಗಿದೆ. ತಲಾದಾಯಕ್ಕೆ ಕಿಲೋಗ್ರಾಂ ಆಧಾರದಲ್ಲಿ ಅಳೆಯಲಾಗುವ ಕಾಂಕ್ರೀಟ್ ಜಗತ್ತಿನಲ್ಲಿ ನೀರಿನ ಬಳಿಕ ಎರಡನೇ ಅತ್ಯಧಿಕ ಬಳಕೆ ಮಾಡುವ ಸಾಮಗ್ರಿಯಾಗಿದೆ. ಸಿಮೆಂಟ್ ಉತ್ಪಾದನಾ ಪ್ರಕ್ರಿಯೆಗಳಿಂದಾಗಿ ಸ್ಥಳೀಯ ಪರಿಣಾಮಗಳು (ಭೂಮಿಯ ಹಾನಿ, ಧೂಳಿನ ಮಾಲಿನ್ಯ) ಮತ್ತು ಜಾಗತಿಕ ಪರಿಣಾಮಗಳಲ್ಲಿ (ಕಾರ್ಬನ್ ಡೈಯಾಕ್ಸೈಡ್, ಸಲ್ಫರ್ ಡೈಯಾಕ್ಸೈಡ್ ಮತ್ತು ನೈಟ್ರೋಜನ್ ಡೈಯಾಕ್ಸೈಡ್ ಪ್ರದೂಷಣೆ) ಏರಿಕೆ ಕಂಡುಬಂದಿದೆ. ಈ ಪರಿಣಾಮಗಳ ಕಾರಣದಿಂದಾಗಿ, ವಿಶ್ವಾದ್ಯಂತದ ಸಿಮೆಂಟ್ ಉತ್ಪಾದಕರಿಗೆ ಸುಸ್ಥಿರ ಅಭಿವೃದ್ಧಿಯು ಪ್ರಮುಖ ಕಾರ್ಯತಂತ್ರದ ಸಮಸ್ಯೆಯಾಗಿದೆ. ಕಾರ್ಬನ್ ಡೈಯಾಕ್ಸೈಡ್ ಪ್ರದೂಷಣೆಗಳನ್ನು ನಿರ್ವಹಿಸುವುದಕ್ಕಾಗಿ ಸಿಮೆಂಟ್ ಉದ್ಯಮ ಬಹಳ ನಿರ್ದಿಷ್ಟವಾದ ಗಮನವನ್ನು ನೀಡುತ್ತಿದೆ. 

ಗಣಿಗಾರಿಕೆ ಸ್ಥಳಗಳಲ್ಲಿ ಪರಿಸರಕ್ಕೆ ಹಾನಿ, ಹೊಗೆ ಮತ್ತು ಧೂಳಿನ ಪ್ರಸರಣದಿಂದಾಗಿ ಗಾಳಿಯ ಮಾಲಿನ್ಯ ಮತ್ತು ಹಸಿರು ಮನೆ ಅನಿಲಗಳು ಮುಂತಾದ ಪರಿಸರ ಕಾಳಜಿಗಳ ಬಗ್ಗೆ ಸ್ಪರ್ಧಾತ್ಮಕ ಪರಿಹಾರೋಪಾಯ ಕಂಡುಕೊಳ್ಳಲು ಅಲ್ಟ್ರಾಟೆಕ್ ಕಾಂಕ್ರೀಟ್ ನಿರಂತರವಾಗಿ ಹುಡುಕಾಟ ನಡೆಸುತ್ತಿದೆ:

  • ಧೂಳಿನ ಪ್ರದೂಷಣೆ ನಿಯಂತ್ರಿಸಲು ಕಚ್ಚಾ ಸಾಮಗ್ರಿಯ ಶೆಡ್ ಹಾಗೂ ದಾಸ್ತಾನು ಬಿನ್‌ಗಳ ಮೇಲೆ ನೆಟ್‌ ಕವರ್.
  • ವೀಲ್ ಲೋಡರ್‌ನಿಂದ ಕಚ್ಚಾ ಸಾಮಗ್ರಿಗಳ ನಿರಂತರ ನಿರ್ವಹಣೆ ಕಾರ್ಯಾಚರಣೆಗಳ ಸಂದರ್ಭ ಧೂಳಿನ ಪ್ರಸರಣವನ್ನು ಸೃಷ್ಟಿಸುತ್ತದೆ.
  • ಘಟಕದ ಗಡಿಗಳ ಸುತ್ತ ಶೀಟ್ ತಡೆಗೋಡೆಗಳನ್ನು ಅಳವಡಿಸುವುದು.
  • ಸೈಕ್ಲೋನ್ ಘಟಕ, ಫಿಲ್ಟರ್ ಘಟಕ ಮತ್ತು ಹೀರುವಿಕೆ ಮತ್ತು ಜೋಡಿಸುವಿಕೆ ಘಟಕವನ್ನು ಒಳಗೊಂಡ 3 ಹಂತಗಳ ನೆಲದ ಧೂಳು ಸಂಗ್ರಹ ವ್ಯವಸ್ಥೆ.
  • ಸುಸ್ಥಿರ ನಿರ್ಮಾಣಕ್ಕಾಗಿ ಮೌಲ್ಯ ವರ್ಧಿತ ಕಾಂಕ್ರೀಟ್‌ಗೆ ಪ್ರೋತ್ಸಾಹ ನೀಡುವುದು.
  • ಲೀಡ್ (LEED) ಪ್ರಮಾಣಪತ್ರದ ಅಗತ್ಯವನ್ನು ಪೂರೈಸಿರುವ ಮತ್ತು ಪರಿಸರಸ್ನೇಹಿ ಅಂಶದಲ್ಲಿ ಅತ್ಯುತ್ತಮ ದರ್ಜೆಯ ಭಾರತದ 1ನೇ ಆರ್‌ಎಂಸಿ.
  • ತ್ಯಾಜ್ಯ ಸಾಮಗ್ರಿಗಳನ್ನು ಪರಿಣಾಮಕಾರಿಯಾಗಿ ಕಚ್ಚಾ ಸಾಮಗ್ರಿಗಳಂತೆ ಬಳಸುವುದು; ಹಾರು ಬೂದಿ, ಕಿಟ್ಟ ಮತ್ತು ಅತಿಸೂಕ್ಷ್ಮ ಮರಳು.
  • ತಿರಸ್ಕರಿಸಿದ ಅಥವಾ ಬಳಸದೆ ಇರುವ ಕಾಂಕ್ರೀಟ್‌ನಿಂದ 50% ಗೂ ಹೆಚ್ಚು ಕಚ್ಚಾ ಸಾಮಗ್ರಿಯನ್ನು ತಾಜಾ ಕಾಂಕ್ರೀಟ್ ಉತ್ಪಾದಿಸಲು ಮರುಸಂಸ್ಕರಣೆ ಮಾಡಲಾಗುತ್ತದೆ ಮತ್ತು ಸುಸ್ಥಿರತೆಗಾಗಿ ನಮ್ಮ ಬದ್ಧತೆಯ ಭಾಗವಾಗಿ ಪ್ರಕ್ರಿಯೆಯಲ್ಲಿ ಮರುಬಳಕೆ ಮಾಡಲಾಗುತ್ತದೆ. ಸ್ವಯಂ-ಸಂಚಾಲಿತ ಎಲೆಕ್ಟ್ರೋ ಕೆಮಿಕಲ್ ಆಟೊ ಲ್ಯೂಬ್ರಿಕೇಷನ್ ಸಿಸ್ಟಂ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ