ಹಕ್ಕು ನಿರಾಕರಣೆ

ಇದು ಅಲ್ಟ್ರಾಟೆಕ್ ಸಿಮೆಂಟ್‌ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್ ಆಗಿದೆ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಕುರಿತು ಸಾಮಾನ್ಯ ಮಾಹಿತಿಯನ್ನು ಒದಗಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗಿರುವ ಎಲ್ಲ ಪಠ್ಯ, ಗ್ರಾಫಿಕ್ಸ್, ಟ್ರೇಡ್‌ ಮಾರ್ಕ್‌ಗಳು ಮತ್ತು ಇತರ ಎಲ್ಲ ಕಂಟೆಂಟ್‌ಗಳ ಮಾಲೀಕತ್ವವನ್ನು ಅಥವಾ ಪರವಾನಗಿಯನ್ನು ಅಲ್ಟ್ರಾಟೆಕ್ ಸಿಮೆಂಟ್ ಹೊಂದಿದೆ.  (ಇನ್ನುಮುಂದೆ "ಅಲ್ಟ್ರಾಟೆಕ್" ಎಂದು ಕರೆಯಲಾಗುತ್ತದೆ). ಈ ಮಾಹಿತಿ ಮತ್ತು ಕಂಟೆಂಟ್ ಭಾರತದಲ್ಲಿ ಅನ್ವಯಿಸುವ ಕಾನೂನುಗಳನ್ನು ಆಧರಿಸಿದೆ.

 

ಈ ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ನಿಖರ ಮತ್ತು ಸಕಾಲಿಕವಾಗಿ ಇರಿಸಲು ಪ್ರಯತ್ನಗಳನ್ನು ಮಾಡಲಾಗುತ್ತದೆಯಾದರೂ, ಅದನ್ನು ಕಾನೂನಿನ ಹೇಳಿ ಎಂದು ಅರ್ಥೈಸಬಾರದು ಅಥವಾ ಯಾವುದೇ ಕಾನೂನು ಉದ್ದೇಶಗಳಿಗಾಗಿ ಬಳಸಬಾರದು. ಇಲ್ಲಿರುವ ಅಥವಾ ಇತರ ಯಾವುದೇ ಸರ್ವರ್‌ಗಳಲ್ಲಿ ಇರುವ ಮಾಹಿತಿ, ಪಠ್ಯ, ಗ್ರಾಫಿಕ್ಸ್, ಹೈಪರ್‌ಲಿಂಕ್‌ಗಳು ಅಥವಾ ಇತರ ಐಟಂಗಳ ಕಂಟೆಂಟ್, ನಿಖರತೆ ಅಥವಾ ಪೂರ್ಣತೆಯನ್ನು ಅಲ್ಟ್ರಾಟೆಕ್ ಖಾತ್ರಿಪಡಿಸುವುದಿಲ್ಲ ಅಥವಾ ಪ್ರಚಾರ ಮಾಡುವುದಿಲ್ಲ. ವೆಬ್‌ಸೈಟ್ ಮತ್ತು ಸಾಮಗ್ರಿಗಳು, ಮಾಹಿತಿ ಹಾಗೂ ಪಠ್ಯ, ಗ್ರಾಫಿಕ್ಸ್ ಮತ್ತು ಲಿಂಕ್‌ಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ ಇಲ್ಲಿರುವ ಯಾವುದೇ ಸೇವೆಗಳು ಮತ್ತು ಉತ್ಪನ್ನಗಳಿಗೆ ಉಲ್ಲೇಖಗಳನ್ನು, ಸ್ಪಷ್ಟ ಅಥವಾ ಸೂಚ್ಯವಾದ ಯಾವುದೇ ರೀತಿಯ ಪ್ರತಿನಿಧಿತ್ವಗಳು ಅಥವಾ ವಾರಂಟಿಗಳಿಲ್ಲದೆ "ಇರುವಂತೆ" ಒದಗಿಸಲಾಗಿದೆ.

 

ಸಾಧ್ಯವಿರುವ ಪೂರ್ಣ ಮಿತಿಯವರೆಗೆ, ವ್ಯಾಪಾರಾರ್ಹತೆ, ನಿರ್ದಿಷ್ಟ ಉದ್ದೇಶಕ್ಕಾಗಿ ಸದೃಢವಾಗಿರುವಿಕೆ, ಉಲ್ಲಂಘನೆ ಮಾಡದಿರುವಿಕೆ, ಕಂಪ್ಯೂಟರ್ ವೈರಸ್‌ನಿಂದ ಮುಕ್ತವಾಗಿರುವಿಕೆಯ ಸೂಚ್ಯ ವಾರಂಟಿಗಳು ಹಾಗೂ ವ್ಯವಹರಿಸುವಿಕೆ ಅಥವಾ ಕಾರ್ಯಕ್ಷಮತೆಯಿಂದ ಉದ್ಭವಿಸುವ ವಾರಂಟಿಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಸ್ಪಷ್ಟ/ಅಥವಾ ಸೂಚ್ಯವಾದ ಯಾವುದೇ ವಾರಂಟಿಗಳನ್ನು ಅಲ್ಟ್ರಾಟೆಕ್ ನಿರಾಕರಣೆ ಮಾಡುತ್ತದೆ. ವೆಬ್‌ಸೈಟ್‌ನಲ್ಲಿರುವ ಕಾರ್ಯವಿಧಾನಗಳು ಅಡಚಣೆರಹಿತ ಅಥವಾ ದೋಷಮುಕ್ತವಾಗಿರುತ್ತವೆ, ದೋಷಗಳನ್ನು ಸರಿಪಡಿಸಲಾಗುತ್ತದೆ ಅಥವಾ ವೆಬ್‌ಸೈಟ್ ಅಥವಾ ವೆಬ್‌ಸೈಟ್ ಅನ್ನು ಲಭ್ಯವಾಗಿಸುವ ಸರ್ವರ್ ವೈರ್‌ಸ್‌ಗಳು ಅಥವಾ ಇತರ ಹಾನಿಕಾರಕ ಕಾಂಪೊನೆಂಟ್‌ಗಳಿಂದ ಮುಕ್ತವಾಗಿರುತ್ತದೆ ಎಂದು ಅಲ್ಟ್ರಾಟೆಕ್ ಪ್ರತಿನಿಧಿಸುವುದಿಲ್ಲ ಅಥವಾ ವಾರಂಟಿ ನೀಡುವುದಿಲ್ಲ.  ವೆಬ್‌ಸೈಟ್‌ನಲ್ಲಿರುವ ಸಾಮಗ್ರಿಗಳ ಬಳಕೆಗೆ ಸಂಬಂಧಿಸಿ ಅವುಗಳ ಪೂರ್ಣತೆ, ಸಮರ್ಪಕತೆ, ನಿಖರತೆ, ಪರ್ಯಾಪ್ತತೆ, ಉಪಯುಕ್ತತೆ, ಸಕಾಲಿಕತೆ, ವಿಶ್ವಾಸಾರ್ಹತೆ ಅಥವಾ ಇತರ ಯಾವುದೇ ವಾರಂಟಿಗಳನ್ನು ಅಥವಾ ಪ್ರತಿನಿಧಿತ್ವಗಳನ್ನು ಅಲ್ಟ್ರಾಟೆಕ್ ಮಾಡುವುದಿಲ್ಲ. 

 

ವೆಬ್‌ಸೈಟ್‌ನಲ್ಲಿರುವ ಸಾಮಗ್ರಿಗಳನ್ನು ಅಲ್ಟ್ರಾಟೆಕ್ ಒದಗಿಸಿದೆಯೇ ಎನ್ನುವುದನ್ನು ಪರಿಗಣಿಸದೆ ವೆಬ್‌ ಸೈಟ್ ಮತ್ತು/ಅಥವಾ ವೆಬ್‌ಸೈಟ್‌ನಲ್ಲಿರುವ ಸಾಮಗ್ರಿಗಳ ಬಳಕೆ ಅಥವಾ ಬಳಸಲು ಸಾಧ್ಯವಾಗದಿರುವಿಕೆಯಿಂದ ಉದ್ಭವಿಸುವ ಯಾವುದೇ ವಿಶೇಷ, ಪರೋಕ್ಷ, ಆಕಸ್ಮಿಕ ಅಥವಾ ಪರಿಣಾಮದ ಹಾನಿಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಯಾವುದೇ ವೆಚ್ಚ, ನಷ್ಟ ಅಥವಾ ಹಾನಿಗೆ ಯಾವುದೇ ಸಂದರ್ಭದಲ್ಲೂ ಅಲ್ಟ್ರಾಟೆಕ್ ಹೊಣೆಗಾರನಾಗಿರುವುದಿಲ್ಲ.

 

ಈ ವೆಬ್‌ಸೈಟ್‌ನಲ್ಲಿರುವ ಕಂಟೆಂಟ್‌ಗಳು ಸೂಚನೆಯಿಲ್ಲದೆ ಬದಲಾವಣೆಗೆ ಒಳಪಟ್ಟಿರುತ್ತವೆ. ಬೇರೆ ರೀತಿ ಹೇಳದ ಹೊರತು ಈ ವೆಬ್‌ಸೈಟ್‌ನಲ್ಲಿರುವ ಕಂಟೆಂಟ್‌ಗಳು ಕೃತಿಸ್ವಾಮ್ಯ ರಕ್ಷಣೆಗೆ ಒಳಪಟ್ಟಿರುತ್ತವೆ. ಅಲ್ಟ್ರಾಟೆಕ್‌ನ ಅಧಿಕೃತ ವ್ಯಕ್ತಿಯ ಲಿಖಿತ ಪೂರ್ವಾನುಮತಿಯಿಲ್ಲದೆ ಈ ವೆಬ್‌ಸೈಟ್‌ನ ಯಾವುದೇ ಕಂಟೆಂಟ್‌ಗಳನ್ನು ಯಾವುದೇ ರೀತಿಯಲ್ಲಿ ವಾಣಿಜ್ಯ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ.  ವೆಬ್‌ಸೈಟ್‌ನ ಯಾವುದೇ ಭಾಗದ ಮರುಸೃಷ್ಟಿಯನ್ನು ವಾಣಿಜ್ಯ ಲಾಭಕ್ಕಾಗಿ ಮಾರಾಟ ಅಥವಾ ವಿತರಣೆ ಮಾಡುವಂತಿಲ್ಲ ಅಥವಾ ಇತರ ಯಾವುದೇ ವೆಬ್‌ಸೈಟ್‌ಗೆ ಪೋಸ್ಟ್ ಮಾಡುವುದು ಸೇರಿದಂತೆ, ಹಾರ್ಡ್‌ಕಾಪಿ ಅಥವಾ ಎಲೆಕ್ಟ್ರಾನಿಕ್ ಸ್ವರೂಪದಲ್ಲಿ, ಮಾರ್ಪಾಡು ಮಾಡಬಾರದು ಅಥವಾ ಇತರ ಯಾವುದೇ ಕಾರ್ಯ, ಪ್ರಕಟಣೆ ಅಥವಾ ವೆಬ್‌ಸೈಟ್‌ಗಳಲ್ಲಿ ಅಳವಡಿಸಿಕೊಳ್ಳಬಾರದು. ಇತರ ಹಕ್ಕುಗಳನ್ನು ಅಲ್ಟ್ರಾಟೆಕ್ ಕಾಯ್ದಿರಿಸಿದೆ.

 

ಈ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಮಾಹಿತಿಯು ಮೂರನೇ ಪಕ್ಷಗಳು/ಇತರ ಸಂಸ್ಥೆಗಳು ಸೃಷ್ಟಿಸಿರುವ ಮತ್ತು ನಿರ್ವಹಿಸುತ್ತಿರುವ ಮಾಹಿತಿಗೆ ಹೈಪರ್‌ಟೆಕ್ಸ್ಟ್ ಲಿಂಕ್‌ಗಳು ಅಥವಾ ಪಾಯಿಂಟರ್‌ಗಳನ್ನು ಒಳಗೊಂಡಿರಬಹುದು. ಹೊರಗಿನ ವೆಬ್‌ಸೈಟ್‌ಗೆ ನೀವು ಒಂದು ಲಿಂಕ್ ಅನ್ನು ಆಯ್ಕೆ ಮಾಡಿದಾಗ ನೀವು ಅಲ್ಟ್ರಾಟೆಕ್ ವೆಬ್‌ಸೈಟ್‌ನಿಂದ ಹೊರಹೋಗುತ್ತೀರಿ ಮತ್ತು ಹೊರಗಿನ ವೆಬ್‌ಸೈಟ್ ಮಾಲೀಕರ ಗೌಪ್ಯತೆ ನೀತಿಗಳು/ಸುರಕ್ಷತಾ ನೀತಿಗಳಿಗೆ ಒಳಪಡುತ್ತೀರಿ. ಈ ವೆಬ್‌ಸೈಟ್‌ನಿಂದ ಲಿಂಕ್ ಮಾಡಲಾಗಿರುವ ಯಾವುದೇ ಹೊರಗಿನ ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ನಿಖರತೆ ಮತ್ತು ಕಾನೂನು ಪರ್ಯಾಪ್ತತೆಗಾಗಿ ವಿಮರ್ಶಿಸಿಲ್ಲ. ಅಂಥ ಹೊರಗಿನ ಹೈಪರ್‌ಲಿಂಕ್‌ಗಳಿಗೆ ಅಲ್ಟ್ರಾಟೆಕ್ ಜವಾಬ್ದಾರವಲ್ಲ ಮತ್ತು ಯಾವುದೇ ಹೊರಗಿನ ಲಿಂಕ್‌ಗಳಿಗೆ ಉಲ್ಲೇಖಗಳನ್ನು ಆ ಲಿಂಕ್‌ಗಳು ಅಥವಾ ಅವುಗಳ ಕಂಟೆಂಟ್‌ನ ಪ್ರಚಾರ ಎಂದು ಅರ್ಥೈಸಬಾರದು.

 

ಈ ವೆಬ್‌ಸೈಟ್‌ನಲ್ಲಿರುವ ಯಾವುದೇ ಮಾಹಿತಿಯು ಆದಿತ್ಯ ಬಿರ್ಲಾ ಮಸೂಹ ಅಥವಾ ಅದರ ಯಾವುದೇ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ಆಹ್ವಾನವನ್ನು ರಚಿಸುವುದಿಲ್ಲ. ಯಾವುದೇ ನಷ್ಟ ಅಥವಾ ಲಾಭ, ಪರೋಕ್ಷ, ಆಕಸ್ಮಿಕ, ಪರಿಣಾಮದಿಂದಾದ ನಷ್ಟ ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಲ್ಲದಂತೆ, ಈ ವೆಬ್‌ಸೈಟ್ ಅಥವಾ ಅದಕ್ಕೆ ಲಿಂಕ್ ಮಾಡಿರುವ ಯಾವುದೇ ವೆಬ್‌ಸೈಟ್ ಪ್ರವೇಶ ಅಥವಾ ಬಳಕೆಯಿಂದ ಉದ್ಭವಿಸುವ ಯಾವುದೇ ನಷ್ಟ, ಹಾನಿ ಅಥವಾ ವೆಚ್ಚಗಳಿಗೆ ಅಲ್ಟ್ರಾಟೆಕ್ ಆಗಲಿ ಅಥವಾ ಆದಿತ್ಯ ಬಿರ್ಲಾ ಸಮೂಹದ ಸಂಸ್ಥೆಗಳಾಗಲಿ, ಅಥವಾ ಅವರ ಸಂಬಂಧಿತ ಅಧಿಕಾರಿಗಳು, ಉದ್ಯೋಗಿಗಳು ಅಥವಾ ಏಜೆಂಟರಾಗಲಿ ಹೊಣೆಗಾರರಾಗಿರುವುದಿಲ್ಲ. ಈ ವೆಬ್‌ಸೈಟ್ ನೋಡುವ ಮೂಲಕ, ಇದರಿಂದ ಉದ್ಭವಿಸುವ ಅಥವಾ ಇದಕ್ಕೆ ಸಂಬಂಧಿಸಿದ ಯಾವುದೇ ಕ್ರಮಗಳಿಗೆ ಸಂಬಂಧಿಸಿ ಭಾರತದ ಮುಂಬೈ ನ್ಯಾಯಾಲಯಗಳ ಕಾನೂನುವ್ಯಾಪ್ತಿಯನ್ನು ನೀವು ಒಪ್ಪಿಕೊಂಡಿದ್ದೀರಿ ಎಂದು ಪರಿಗಣಿಸಲಾಗುತ್ತದೆ.

 

ಈ ವೆಬ್‌ಸೈಟ್ ನೋಡುವ ಮೂಲಕ, ಇದರಿಂದ ಉದ್ಭವಿಸುವ ಅಥವಾ ಇದಕ್ಕೆ ಸಂಬಂಧಿಸಿದ ಯಾವುದೇ ಕ್ರಮಗಳಿಗೆ ಸಂಬಂಧಿಸಿ ಭಾರತದ ಮುಂಬೈ ನ್ಯಾಯಾಲಯಗಳ ಕಾನೂನುವ್ಯಾಪ್ತಿಯನ್ನು ನೀವು ಒಪ್ಪಿಕೊಂಡಿದ್ದೀರಿ ಎಂದು ಪರಿಗಣಿಸಲಾಗುತ್ತದೆ.

Get Answer to
your Queries

Enter a valid name
Enter a valid number
Enter a valid pincode
Select a valid category
Enter a valid sub category
Please check this box to proceed further