ಮನೆಯ ಪೈಂಟಿಂಗ್ ಆದ ನಂತರ ಉತ್ತಮ ಫಲಿತಾಂಶಗಳನ್ನು ಪಡೆಯಲು ಈ ಸಲಹೆಗಳನ್ನು ಬಳಸಿ

25 ನೇ ಆಗಸ್ಟ್, 2020

ನಿಮ್ಮ ಮನೆಯ ನಿರ್ಮಾಣದ ಸಮಯದಲ್ಲಿನ ಅಂತಿಮ ಘಟ್ಟವೆಂದರೆ ಪೈಂಟಿಂಗ್ ಹಂತ. ನೀವು ಆಯ್ಕೆ ಮಾಡಿದ ಪೈಂಟ್‌ನ ಬಣ್ಣವು ನಿಮ್ಮ ಮನೆಯ ಸೊಗಸು ಮತ್ತು ಸೌಂದರ್ಯವನ್ನು ಒದಗಿಸುತ್ತದೆ. ಪೇಂಟ್‌ ಅನ್ನು ಬದಲಾಯಿಸಬಹುದು ಹಾಗೂ ಮತ್ತೆ ಹಚ್ಚಬಹುದಾರೂ ಸಹ ಇದಕ್ಕಾಗಿ ಸಮಯ ಮತ್ತು ಹಣ ಎರಡೂ ಖರ್ಚಾಗುತ್ತದೆ; ಅದಕ್ಕಾಗಿಯೇ ಮೊ

ದಲ ಬಾರಿಯೇ ಸರಿಯಾಗಿ ಮಾಡಿದಲ್ಲಿ ಮುಂದೆ ತಗುಲಬಹುದಾದ ಖರ್ಚನ್ನು ಉಳಿಸಬಹುದು.

ಪೈಂಟಿಂಗ್‌ನ ಪ್ರಕ್ರಿಯೆಯ ಮೊದಲು ಮತ್ತು ಮಾಡುವ ಸಮಯದಲ್ಲಿ ನೀವು ನೆನಪಿಟ್ಟುಕೊಳ್ಳಬೇಕಾದ ವಿವರಗಳು ಇಲ್ಲಿವೆ.

  • ಬಣ್ಣವನ್ನು ಆರಿಸುವಾಗ, ನಿಮ್ಮ ಮನೆಯ ಒಳಭಾಗ ಮತ್ತು ಬಾಹ್ಯ ಗೋಡೆಗಳನ್ನು ಪರಿಗಣಿಸಿ ಆರಿಸಿಕೊಳ್ಳಿ.
  • ಬಣ್ಣ ಮತ್ತು ಪೈಂಟಿಂಗ್‌ನ ಸಾಮಗ್ರಿಗಳನ್ನು ಸಗಟು ಪ್ರಮಾಣದಲ್ಲಿ ಖರೀದಿಸುವುದು ಆರ್ಥಿಕವಾಗಿ ಹೆಚ್ಚು ಸೂಕ್ತ ಎನ್ನುವುದನ್ನು ನೆನಪಿನಲ್ಲಿಡಿ. ನಿಮ್ಮ ಮನೆಗೆ ಬೇಕಾದ ಬಣ್ಣದ ಪ್ರಮಾಣಕ್ಕಾಗಿ ನಿಮ್ಮ ಗುತ್ತಿಗೆದಾರರೊಂದಿಗೆ ಸಮಾಲೋಚಿಸಲು ಮರೆಯದಿರಿ.
  • ನೀವು ಪೈಂಟಿಂಗ್ ಅನ್ನು ಪ್ರಾರಂಭಿಸುವ ಮೊದಲು, ಬಿರುಕುಗಳು ಮತ್ತು ಸಂದುಗಳಿಗಾಗಿ ಗೋಡೆಗಳನ್ನು ಪರಿಶೀಲಿಸಿ. ಫಿಲ್ಲರ್ ವಸ್ತುವನ್ನು ಬಳಸಿ ಅವುಗಳನ್ನು ಭರ್ತಿ ಮಾಡಿ ಮತ್ತು ಮರಳು ಕಾಗದದಿಂದ ಮೇಲ್ಮೈಯನ್ನು ಸ್ವಚ್ಚಗೊಳಿಸಿ.
  • ಒಳಗಿನ ಗೋಡೆಗಳಿಗೆ ತೊಳೆಯಬಹುದಾದ ಬಣ್ಣಗಳನ್ನು ಬಳಸುವುದನ್ನು ಪರಿಗಣಿಸಿ. ಇದರಿಂದ ಮತ್ತೆ ಮತ್ತೆ ಮಾಡಬೇಕಾಗುವ ಪೈಂಟಿಂಗ್‌ನ ವೆಚ್ಚದ ಉಳಿತಾಯವಾಗುತ್ತದೆ.
  • ಕೊನೆಯದಾಗಿ, ನಿಮ್ಮ ಮನೆಯು ಅತ್ಯಂತ ಸುಂದರವಾಗಿರಬೇಕು ಎಂದು ನೀವು ನಿಜವಾಗಿಯೂ ಬಯಸಿದ್ದಲ್ಲಿ ಒಳಾಂಗಣ ವಿನ್ಯಾಸಗಾರರನ್ನು ಸಂಪರ್ಕಿಸಿ.

ಈ ಅಂಶಗಳನ್ನು ಅನುಸರಿಸಿ ಹಾಗೂ ನಿಮ್ಮ ಪೈಂಟಿಂಗ್ ಪ್ರಕ್ರಿಯೆಯು ಸುಗಮವಾಗಿ ಸಾಗುತ್ತದೆ ಮತ್ತು ಉತ್ತಮ ಪರಿಪೂರ್ಣತೆಯೊಂದಿಗೆ ಕೊನೆಗೊಳ್ಳುತ್ತದೆ.

 


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ