ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

ಒಪಿಸಿ ಸಿಮೆಂಟ್‌ ಎಂದರೇನು?

ಸಾಮಾನ್ಯ ಪೋರ್ಟ್‌ಲ್ಯಾಂಡ್ ಸಿಮೆಂಟ್ (ಒಪಿಸಿ) ವ್ಯಾಪಕ ಶ್ರೇಣಿಯ ಕಾರ್ಯಯೋಜನೆಗಳಿಗೆ ಸಾಮಾನ್ಯವಾಗಿ ಬಳಸುವ ಸಿಮೆಂಟ್ ಆಗಿದೆ. ಇದರಲ್ಲಿ ಆರ್‌ಸಿಸಿ ಮತ್ತು ಗಾರೆ ಕೆಲಸದಿಂದ ಪ್ಲಾಸ್ಟರ್ ಮಾಡುವುದು, ಪ್ರೀಕಾಸ್ಟ್‌ ಮತ್ತು ಪ್ರೆಸ್‌ಟ್ರೆಸ್‌ ಕೆಲಸಗಳು ಒಳಗೊಂಡಿರುತ್ತವೆ. ಈ ಸಿಮೆಂಟ್ ಅನ್ನು ಸಾಮಾನ್ಯ, ಪ್ರಮಾಣಿತ ಮತ್ತು ಹೆಚ್ಚಿನ-ಸಾಮರ್ಥ್ಯದ ಕಾಂಕ್ರೀಟ್, ಗಾರೆಗಳು, ಸಾಮಾನ್ಯ-ಉದ್ದೇಶದ ಸಿದ್ಧ-ಮಿಶ್ರಣಗಳು ಹಾಗೂ ಒಣ ತೆಳು ಮಿಶ್ರಣಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

logo


ಒಪಿಸಿ ಸಿಮೆಂಟ್‌ನ ವಿಧಗಳು

ಅಲ್ಟ್ರಾಟೆಕ್‌ ಒಪಿಸಿ ಸಿಮೆಂಟ್‌ ಸಿಮೆಂಟ್‌ನ ಪ್ರಾಥಮಿಕ ವಿಧವಾಗಿದೆ. ಆರ್ಡಿನರಿ ಪೋರ್ಟ್‌ಲ್ಯಾಂಡ್‌ ಸಿಮೆಂಟ್ ಅನ್ನು ಅದರ ಕ್ಯೂಬ್‌ ಕಂಪ್ರೆಸಿವ್ ಸಾಮರ್ಥ್ಯಗಳ ಆಧಾರದಲ್ಲಿ ನಾಲ್ಕು ಗ್ರೇಡ್‌ಗಳನ್ನಾಗಿ ವರ್ಗೀಕರಿಸಲಾಗಿದ್ದು, ಅವುಗಳೆಂದರೆ 28 ದಿನಗಳು: 33, 43, 53, ಮತ್ತು 53-ಎಸ್‌.
 

  • ಒಪಿಸಿ 33: 28 ದಿನದ ಕ್ಯೂಬ್‌ ಕಂಪ್ರೆಸಿವ್ ಸಾಮರ್ಥ್ಯವು 33N/mm2 ಗಿಂತ ಹೆಚ್ಚಾದರೆ, ಸಿಮೆಂಟ್ ಅನ್ನು 33 ಗ್ರೇಡ್ ಒಪಿಸಿ ಸಿಮೆಂಟ್ ಎಂದು ಕರೆಯಲಾಗುತ್ತದೆ.
 
  • ಒಪಿಸಿ 43: 28 ದಿನಗಳಲ್ಲಿ ಈ ಸಿಮೆಂಟ್‌ನ ಕ್ಯೂಬ್‌ ಕಂಪ್ರೆಸಿವ್ ಸಾಮರ್ಥ್ಯವು ಕನಿಷ್ಠ 43 N/mm2 ಆಗಿರುತ್ತದೆ. ಇದನ್ನು ಪ್ರಾಥಮಿಕವಾಗಿ ಸಾಮಾನ್ಯ ಗ್ರೇಡ್ ಕಾಂಕ್ರೀಟ್‌ ಮತ್ತು ಗಾರೆ ಅಪ್ಲಿಕೇಶನ್‌ಗಳಲ್ಲಿ ಬಳಸಲಾಗುತ್ತದೆ.
 
  • ಒಪಿಸಿ 53: 28 ದಿನಗಳಲ್ಲಿ ಈ ಸಿಮೆಂಟ್‌ನ ಕ್ಯೂಬ್‌ ಕಂಪ್ರೆಸಿವ್ ಸಾಮರ್ಥ್ಯವು ಕನಿಷ್ಠ 53 N/mm2 ಆಗಿರುತ್ತದೆ. ಇದನ್ನು ಅಧಿಕ ಗ್ರೇಡ್‌ ಮತ್ತು ಅಧಿಕ ಕಾರ್ಯಕ್ಷಮತೆಯ ಸ್ಟ್ರಕ್ಚರಲ್‌ ಅಪ್ಲಿಕೇಶನ್‌ಗಳಾದ ರೀಇನ್‌ಫೋರ್ಸ್‌ಡ್‌ ಸಿಮೆಂಟ್ ಕಾಂಕ್ರೀಟ್, ಪ್ರೆಸ್‌ಸ್ಟ್ರೆಸ್ಡ್‌ ಕಾಂಕ್ರೀಟ್, ಅಧಿಕ ವೇಗದ ನಿರ್ಮಾಣಗಳಾದ ಸ್ಲಿಪ್‌ಫಾರ್ಮ್‌ ಕೆಲಸ ಮತ್ತು ಪ್ರೀಕಾಸ್ಟ್‌ ಅಪ್ಲಿಕೇಶನ್‌ಗಳಲ್ಲಿ ಬಳಸಲಾಗುತ್ತದೆ. ಇದನ್ನು ಮಾಸ್ ಕಾಂಕ್ರೀಟ್, ಸ್ಟ್ರಕ್ಚರಲ್ ಅಲ್ಲದ ಅಪ್ಲಿಕೇಶನ್‌ಗಳು ಅಥವಾ ಗಡುಸಾದ ವಾತಾವರಣದಲ್ಲಿ ನಿರ್ಮಾಣಕ್ಕೆ ಬಳಸಲು ಶಿಫಾರಸು ಮಾಡಲಾಗಿಲ್ಲ.
 
  • ಒಪಿಸಿ53-ಎಸ್‌: ಇದು ಸ್ಪೆಷಲ್ ಗ್ರೇಡ್‌ ಒಪಿಸಿ ಆಗಿದ್ದು, ಪ್ರೀಸ್ಟ್ರೆಸ್ಡ್‌ ಕಾಂಕ್ರೀಟ್ ರೈಲ್ವೆ ಸ್ಲೀಪರ್‌ಗಳಿಗಾಗಿ ಮಾತ್ರ ವಿನ್ಯಾಸ ಮಾಡಲಾಗಿದೆ.
  • ಒಪಿಸಿ53-ಎಸ್‌: ಇದು ಸ್ಪೆಷಲ್ ಗ್ರೇಡ್‌ ಒಪಿಸಿ ಆಗಿದ್ದು, ಪ್ರೀಸ್ಟ್ರೆಸ್ಡ್‌ ಕಾಂಕ್ರೀಟ್ ರೈಲ್ವೆ ಸ್ಲೀಪರ್‌ಗಳಿಗಾಗಿ ಮಾತ್ರ ವಿನ್ಯಾಸ ಮಾಡಲಾಗಿದೆ.


43 ಮತ್ತು 53 ಒಪಿಸಿ ಸಿಮೆಂಟ್ ಗ್ರೇಡ್‌ಗಳ ಮಧ್ಯೆ ವ್ಯತ್ಯಾಸವೇನು?

43 ಮತ್ತು 53 ಸಿಮೆಂಟ್ ಗ್ರೇಡ್‌ 28 ದಿನಗಳ ನಂತರದಲ್ಲಿ ಅತ್ಯಧಿಕ ಸಾಮರ್ಥ್ಯವನ್ನು ಗಳಿಸಿರುತ್ತದೆ. ಇವು ಎರಡು ಆರ್ಡಿನರಿ ಪೋರ್ಟ್‌ಲ್ಯಾಂಡ್ ಸಿಮೆಂಟ್ ಗ್ರೇಡ್‌ಗಳಾಗಿದ್ದು, ಅತ್ಯಂತ ಸಾಮಾನ್ಯವಾಗಿ ಬಳಸಲಾಗುತ್ತದೆ.

ಇವುಗಳ ಮಧ್ಯದ ವ್ಯತ್ಯಾಸವು ಹೀಗಿದೆ:

 

  • 28 ದಿನಗಳ ನಂತರ 53 ಗ್ರೇಡ್‌ ಸಿಮೆಂಟ್ 530 ಕಿಲೋ/ಚದರ ಸೆಂ.ಮೀ ಸಾಮರ್ಥ್ಯವನ್ನು ಪಡೆಯುತ್ತದೆ ಮತ್ತು 43 ಗ್ರೇಡ್‌ ಸಿಮೆಂಟ್ 430 ಕಿಲೋ/ಚದರ ಸೆಂ.ಮೀ ಸಾಮರ್ಥ್ಯವನ್ನು ಪಡೆಯುತ್ತದೆ.
  • 53 ಗ್ರೇಡ್‌ ಸಿಮೆಂಟ್ ಅನ್ನು ಅತಿ ವೇಗದ ನಿರ್ಮಾಣ ಪ್ರಾಜೆಕ್ಟ್‌ಗಳಾದ ಸೇತುವೆ, ರಸ್ತೆ, ಬಹುಮಹಡಿ ಕಟ್ಟಡಗಳು ಮತ್ತು ಶೀತ ವಾತಾವರಣದ ಕಾಂಕ್ರೀಟ್‌ಗೆ ಬಳಸಲಾಗುತ್ತದೆ. ಅತ್ಯಂತ ಸಾಮಾನ್ಯವಾಗಿ ಬಳಸಲಾಗುವ ಸಾಮಾನ್ಯ ಉದ್ದೇಶದ ಸಿಮೆಂಟ್ 43 ಗ್ರೇಡ್ ಸಿಮೆಂಟ್ ಆಗಿದೆ.
  • 53 ಗ್ರೇಡ್ ಸಿಮೆಂಟ್‌ ಬೇಗ ಸೆಟ್ ಆಗುತ್ತದೆ ಮತ್ತು ತ್ವರಿತವಾಗಿ ಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತದೆ. 28 ದಿನಗಳ ನಂತರ ಸಾಮರ್ಥ್ಯವು ಗಮನಾರ್ಹವಾಗಿ ಹೆಚ್ಚಳವಾಗುವುದಿಲ್ಲ. ಇದ ಆರಂಭಿಕ ಸಾಮರ್ಥ್ಯ ಕಡಿಮೆ ಇದ್ದರೂ, 43 ಗ್ರೇಡ್‌ ಸಿಮೆಂಟ್ ನಿಧಾನವಾಗಿ ಉತ್ತಮ ಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತದೆ.
  • 43 ಗ್ರೇಡ್‌ ಸಿಮೆಂಟ್ ಕಡಿಮೆ ಹೈಡ್ರೇಶನ್ ಹೀಟ್ ಅನ್ನು ಉತ್ಪಾದಿಸುತ್ತದೆ. ಆದರೆ, 53 ಗ್ರೇಡ್ ಸಿಮೆಂಟ್ ಬೇಗ ಸೆಟ್ ಆಗುತ್ತದೆ ಮತ್ತು ಗಮನಾರ್ಹ ಪ್ರಮಾಣದ್ದನ್ನು ಬಿಡುಗಡೆ ಮಾಡುತ್ತದೆ. ಇದರಿಂದಾಗಿ 53 ಸಿಮೆಂಟ್ ಅತಿ ಸಣ್ಣ ಬಿರುಕುಗಳನ್ನು ತೋರಿಸಬಹುದು. ಇದು ಮೇಲ್ಮೈಯಲ್ಲಿ ಕಾಣಿಸದಿರಬಹುದು ಮತ್ತು ಸೂಕ್ತ ಕ್ಯೂರಿಂಗ್‌ ಮಾಡಬೇಕಿರುತ್ತದೆ.
  • 43 ಗ್ರೇಡ್‌ಗೆ ಹೋಲಿಸಿದರೆ 53 ಗ್ರೇಡ್‌ ಸಿಮೆಂಟ್ ಸ್ವಲ್ಪ ವೆಚ್ಚದಾಯಕವಾಗಿರುತ್ತದೆ.

     
logo


ಒಪಿಸಿ ಸಿಮೆಂಟ್‌ನ ಬಳಕೆ

ಒಪಿಸಿ ಸಿಮೆಂಟ್ ವಿಶ್ವದಲ್ಲಿ ಅತ್ಯಂತ ಹೆಚ್ಚು ಬಳಕೆ ಮಾಡುವಂಥದ್ದಾಗಿದೆ. ಇದರ ನಿರ್ಮಾಣ ವೆಚ್ಚ ಕಡಿಮೆ ಇರುವುದರಿಂದ, ನಿರ್ಮಾಣ ಉದ್ಯಮದಲ್ಲಿ ಇದು ಜನಪ್ರಿಯ ಸಿಮೆಂಟ್ ಆಗಿದೆ.

 

ಇದನ್ನು ಸಾಮಾನ್ಯವಾಗಿ ಇದರಲ್ಲಿ ಬಳಸಲಾಗುತ್ತದೆ:


ಅತಿ ಎತ್ತರದ ಕಟ್ಟಡಗಳ ನಿರ್ಮಾಣ

logo

ರಸ್ತೆ, ಆಣೆಕಟ್ಟೆ, ಸೇತುವೆಗಳು ಮತ್ತು ಫ್ಲೈಓವರ್‌ಗಳ ನಿರ್ಮಾಣ

logo

ಗ್ರೌಟ್ ಮತ್ತು ಮೋರ್ಟರ್‌ಗಳ ತಯಾರಿಕೆ

logo

ವಸತಿ ಮತ್ತು ಔದ್ಯಮಿಕ ಸಂಕೀರ್ಣಗಳ ನಿರ್ಮಾಣ

logo


ಸಾರಾಂಶ/ಉಪಸಂಹಾರ

ಕಾಂಕ್ರೀಟ್‌ನ ಇಮ್‌ಪರ್ಮೀಯಬಿಲಿಟಿ ಮತ್ತು ಸಾಂದ್ರತೆಯನ್ನು ಪಿಪಿಸಿ ಹೆಚ್ಚಿಸುತ್ತದೆ. ಏಕೆಂದರೆ, ಇದು ಅತ್ಯುತ್ತಮ ಬಂಧವನ್ನು ರೂಪಿಸುವುದಕ್ಕಾಗಿ ಪೋರ್ಟ್‌ಲ್ಯಾಂಡ್ ಸಿಮೆಂಟ್ ಅನ್ನು ಹೈಡ್ರೇಟ್ ಮಾಡುವ ಮೂಲಕ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಜೊತೆಗೆ ಪೊಜೊಲಾನಿಕ್ ಸಾಮಗ್ರಿಯು ಪ್ರತಿಕ್ರಿಯಿಸುತ್ತದೆ. ಹೈಡ್ರಾಲಿಕ್ ಸ್ಟ್ರಕ್ಚರ್‌ಗಳು, ಸಾಗರದಲ್ಲಿನ ಕೆಲಸಗಳು, ದೊಡ್ಡ ಪ್ರಮಾಣದಲ್ಲಿ ಕಾಂಕ್ರೀಟ್ ಹಾಕುವುದು ಇತ್ಯಾದಿಯಲ್ಲಿ ಅತ್ಯಂತ ವಿಶ್ವಾಸದಿಂದ ಇದನ್ನು ಬಳಸಬಹುದು. ಅಲ್ಕಲಿ-ಅಗ್ರಗೇಟ್‌ ರಿಯಾಕ್ಷನ್‌ ವಿರುದ್ಧ ಕಾಂಕ್ರೀಟ್ ಅನ್ನು ಇದು ರಕ್ಷಿಸುತ್ತದೆ.


Loading....