ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

hgfghj


ಬೀಮ್‌ಗಳ ವಿಧಗಳು: ಒಂದು ನಿರ್ಮಾಣದ ಮೂಲ ಆಧಾರದ ಬಗ್ಗೆ ಅರಿತುಕೊಳ್ಳುವುದು

ನಿರ್ಮಾಣ ಅಥವಾ ರಚನೆಯ ಹಂತದಲ್ಲಿ, ಕಟ್ಟಡಗಳು, ಸೇತುವೆಗಳು, ಮತ್ತು ಇತರೆ ನಿರ್ಮಾಣದಲ್ಲಿ ಬೀಮ್‌ಗಳು ಮೂಲಭೂತ ಪಾತ್ರವಹಿಸುತ್ತವೆ. ಈ ಸಮತಲವಾದ ಅಥವಾ ಇಳಿಜಾರಾದ ಆಧಾರಗಳು ಲೋಡ್‌ಗಳನ್ನು ಮತ್ತು ಬಲಗಳನ್ನು ಎಲ್ಲಾ ಕಡೆ ಹರಡುವುದರಿಂದ ಮತ್ತು ಸಂಪೂರ್ಣ ಕಟ್ಟಡದ ಸ್ಥಿರತೆ ಮತ್ತು ಸಮಗ್ರತೆಯನ್ನು ಖಾತ್ರಿಪಡಿಸುತ್ತವೆ. ಇವು ಎತ್ತರದ ಗಗನಚುಂಬಿ ಕಟ್ಟಡಗಳಿಂದ ಹಿಡಿದು ಸಂಕೀರ್ಣವಾದ ಸೇತುವೆಗಳವರೆಗೆ ಎಲ್ಲಾ ರೀತಿಯ ಯೋಜನೆಯಲ್ಲಿ ಬಳಸಲಾದ ಬೀಮ್‌ಗಳು ಅವುಗಳ ಒಟ್ಟಾರೆ ಬಲವನ್ನು ಮತ್ತು ದೀರ್ಘ ಬಾಳಿಕೆಯನ್ನು ನಿರ್ಧರಿಸಲು ಅತಿ ಮುಖ್ಯವಾಗಿರುತ್ತವೆ.

Share:


ಕಟ್ಟಡ ನಿರ್ಮಾಣ ಜಗತ್ತಿನಲ್ಲಿ, ಬೀಮ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ವಿವಿಧ ರಚನೆಗಳಿಗೆ ಅಗತ್ಯವಾದ ಬೆಂಬಲವನ್ನು ನೀಡಿ ಸ್ಥಿರತೆಯನ್ನು ಕಾಪಾಡುತ್ತವೆ. ಸಮತಲ ಅಥವಾ ಇಳಿಜಾರಾದ ನಿರ್ಮಾಣ ಮಾಡುವ ಸದಸ್ಯರು ಲೋಡುಗಳು ಮತ್ತು ಕಾರ್ಮಿಕರನ್ನು ಒದಗಿಸುವಲ್ಲಿ, ಸಂಪೂರ್ಣ ರಚನೆಯ ಸಮಗ್ರತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ನೀವು ಸರಳವಾದ ವಸತಿ ಕಟ್ಟಡ ಅಥವಾ ಸಂಕೀರ್ಣವಾದ ಸೇತುವೆಯನ್ನು ಕಟ್ಟುವ ಸಂದರ್ಭದಲ್ಲಿ ಬಾಳಿಕೆ ಬರುವಂತಹ ಬೀಮ್‌ಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ.

 

ಈ ಬ್ಲಾಗ್‌ನಲ್ಲಿ, ನಿರ್ಮಾಣ ಕಾರ್ಯದಲ್ಲಿ ಬಳಸಲಾಗುವ ವಿವಿಧ ರೀತಿಯ ಬೀಮ್‌ಗಳು ಮತ್ತು ಅವುಗಳ ವಿಶಿಷ್ಟ ಗುಣಲಕ್ಷಣಗಳನ್ನು ತಿಳಿದುಕೊಳ್ಳಬಹುದು. ಈ ಅಗತ್ಯ ಅಂಶಗಳನ್ನು ತಿಳಿದುಕೊಳ್ಳುವುದರಿಂದ ಅತ್ಯದ್ಭುತ ಕಟ್ಟಡಗಳಿಗೆ ಹೇಗೆ ಆಧಾರವಾಗಿರುತ್ತವೆ ಮತ್ತು ಕಾಲದ ಹೊಡೆತಗಳನ್ನು ತಡೆದುಕೊಳ್ಳುತ್ತವೆ ಎಂಬುದರ ಮೇಲೆ ಈ ಲೇಖನವು ಬೆಳಕು ಚೆಲ್ಲುತ್ತದೆ. ಕೊನೆಯಲ್ಲಿ, ಈ ಸರಳ ಅಂಶಗಳು ಹೇಗೆ ಅದ್ಭುತ ಕಟ್ಟಡಗಳ ಆಧಾರಸ್ತಂಭವಾಗಿ ನಿಲ್ಲುತ್ತವೆ ಹಾಗೂ ಕಾಲದ ಹೊಡೆತಗಳನ್ನು ತಾಳಿಕೊಳ್ಳುತ್ತವೆ ಎಂಬುದರ ಬಗ್ಗೆ ಆಳವಾಗಿ ತಿಳಿದುಕೊಳ್ಳುತ್ತೀರಿ.



ಬೀಮ್‌ ರಚನೆ ಎಂದರೇನು?



ನಿರ್ಮಾಣ ಕಾರ್ಯದಲ್ಲಿ, ಬೀಮ್‌ಗಳು ಲಂಬವಾದ ಭಾರಗಳನ್ನು, ವಿಭಜನೆಯ (ಶಿಯರ್‌) ಶಕ್ತಿಯನ್ನು, ಮತ್ತು ಬಾಗುವ ಚಲನೆಯನ್ನು ಪ್ರತಿರೋಧಿಸುವ ಪ್ರಮುಖ ಲೋಡ್-ತಾಳಿಕೊಳ್ಳುವ ಅಂಶವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಬೀಮ್‌ಗಳು ಸಮತಲ ಅಥವಾ ಇಳಿಜಾರಾಗಿದ್ದು, ಅವು ಎರಡು ಅಥವಾ ಹೆಚ್ಚಿನ ಆಧಾರದ ಮೇಲೆ ನಿಂತಿರುತ್ತವೆ ಹಾಗು ತಮ್ಮ ಮೇಲೆ ಬಿದ್ದ ಭಾರವನ್ನು ತಮ್ಮ ಆಧಾರಗಳಿಗೆ ವರ್ಗಾಯಿಸಿ ಸಮತೋಲನವನ್ನು ಕಾಪಾಡಿಕೊಳ್ಳುತ್ತವೆ. ಇದರಿಂದ ಕಟ್ಟಡವು ತನ್ನದೇ ಭಾರದಿಂದ ಅಥವಾ ಬಾಹ್ಯ ಶಕ್ತಿಗಳಿಂದ ಕುಸಿಯದಂತೆ ತಡೆಯುವುದು ಬೀಮ್‌ನ ಪ್ರಾಥಮಿಕ ಕೆಲಸವಾಗಿರುತ್ತದೆ.

 

ಬೀಮ್‌ಗಳನ್ನು ಮುಖ್ಯವಾಗಿ ಕಟ್ಟಡಗಳು, ಸೇತುವೆಗಳು, ಛಾವಣಿಗಳು ಮತ್ತು ಇತರ ಹಲವಾರು ರಚನೆಗಳಲ್ಲಿ ಬಳಸಲಾಗುತ್ತದೆ. ಇದು ಉತ್ತಮ ಶಕ್ತಿ ಮತ್ತು ಸ್ಥಿರತೆಯನ್ನು ನೀಡುತ್ತದೆ. ಸೂಕ್ತ ರೀತಿಯ ಬೀಮ್‌ಗಳ ಆಯ್ಕೆಯು ನಿರ್ದಿಷ್ಟ ಅವಶ್ಯತೆಗಳು ಮತ್ತು ರಚನೆಯ ವಿನ್ಯಾಸದ ಮೇಲೆ ಅವಲಂಬಿತವಾಗಿರುತ್ತದೆ.


ನಿರ್ಮಾಣ ಕಾರ್ಯದಲ್ಲಿ ಬಳಸಲಾಗುವ ವಿವಿಧ ಪ್ರಕಾರದ ಬೀಮ್‌ಗಳು

ಇಂಜಿನಿಯರ್ ಗಳು ಮತ್ತು ವಾಸ್ತುಶಿಲ್ಪಿಗಳು ವಿವಿಧ ಅಗತ್ಯಗಳಿಗೆ ತಕ್ಕಂತೆ ವಿವಿಧ ರೀತಿಯ ಬೀಮ್‌ಗಳನ್ನು ರಚಿಸುತ್ತಾರೆ. ಇವುಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಕೆಲವು ವಿಧಗಳು ಈ ಕೆಳಗಿನಂತಿವೆ.

 

 

1. ಕ್ಯಾಂಟಿಲಿವರ್ ಬೀಮ್‌ಗಳು (ಚಾಚು ತೊಲೆಗಳು)



ಕ್ಯಾಂಟಿಲಿವರ್ ಬೀಮ್‌ಗಳು ಒಂದು ವಿಶಿಷ್ಟ ರೀತಿಯ ಬೀಮ್‌ಗಳಾಗಿದ್ದು, ಇದರ ಒಂದು ತುದಿಯಲ್ಲಿ ಬಂಧಿಸಲಾಗಿರುತ್ತದೆ ಮತ್ತು ಇನ್ನೊಂದು ತುದಿ ಮುಕ್ತವಾಗಿದ್ದು, ಮೇಲ್ಛಾವಣಿಗೆ ಅಡ್ಡಲಾಗಿ ಇದು ಚಾಚಿಕೊಂಡಿರುತ್ತದೆ. ಈ ವಿನ್ಯಾಸವು ಹೆಚ್ಚಿನ ಸಮಯದಲ್ಲಿ ಆಧಾರವಿಲ್ಲದ ಜಾಗದಲ್ಲಿ ಹೆಚ್ಚುವರಿ ಬೆಂಬಲದ ಅಗತ್ಯವಿರದೆ ಭಾರವನ್ನು ಹೊರುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಬೀಮ್‌ಗಳನ್ನು ಸಾಮಾನ್ಯವಾಗಿ ಬಾಲ್ಕನಿಗಳು ಮತ್ತು ಸೇತುವೆಗಳಂತಹ ರಚನೆಗಳಲ್ಲಿ ಬಳಸಲಾಗುತ್ತದೆ.

 

 

2. ಸರಳ ಬೆಂಬಲಿತ ಬೀಮ್‌ಗಳು



ನಿರ್ಮಾಣದ ಕಾರ್ಯದಲ್ಲಿ ಬಳಸಲಾಗುವ ಅತ್ಯಂತ ಸರಳವಾದ ಮತ್ತು ಸಾಮಾನ್ಯವಾದ ಬೀಮ್‌ಗಳೆಂದರೆ ಸರಳ ಬೆಂಬಲಿತ ಬೀಮ್‌ಗಳಾಗಿವೆ. ಹೆಸರೇ ಸೂಚಿಸುವಂತೆ, ಇದು ಎರಡು ತುದಿಗಳಲ್ಲಿ ಆಧಾರವನ್ನು ಹೊಂದಿರುತ್ತದೆ ಮತ್ತು ಅದರ ವ್ಯಾಪ್ತಿಯ ಉದ್ದಕ್ಕೂ ಭಾರವನ್ನು ಹೊರುತ್ತದೆ. ಭಾರವನ್ನು ಆಧಾರಕ್ಕೆ ವರ್ಗಾಯಿಸಲಾಗುತ್ತದೆ, ಇದರಿಂದಾಗಿ ಮೇಲ್ಮುಖ ಒತ್ತಡ ಉಂಟಾಗುತ್ತದೆ. ಈ ಬಲಗಳಿಂದ ಬೀಮ್‌ ಬಾಗದೇ ಇರುವಂತೆ ಇದು ತಡೆಯುತ್ತದೆ. ಇದನ್ನು ಹಲವು ಕಡೆಗಳಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ, ಕಟ್ಟಡಗಳಲ್ಲಿನ ಫ್ಲೋರ್‌ ಬೀಮ್‌ಗಳಿಂದ ಹಿಡಿದು ಸೇತುವೆಗಳು ಮತ್ತು ಕ್ರೇನ್‌ ಗರ್ಡರ್‌ಗಳಲ್ಲಿ ಬಳಸಲಾಗುತ್ತದೆ.

 

 

3. ಸ್ಥಿರ ಬೀಮ್‌ಗಳು



ಸ್ಥಿರ ಬೀಮ್‌ಗಳು ಎರಡೂ ತುದಿಗಳಲ್ಲಿ ಭದ್ರವಾಗಿ ಹಾಗೂ ಸ್ಥಿರವಾಗಿ ಜೋಡಿಸಲಾಗಿರುತ್ತದೆ. ಈ ರೀತಿಯ ಬೀಮ್ಗಳು ಬೆಂಬಲವಾಗಿ ನಿಂತಿರುವ ಸ್ಥಳದ ಸುತ್ತಲೂ ತಿರುಗುವಿಕೆಯನ್ನು ತಡೆಯುತ್ತದೆ ಮತ್ತು ಇದರಿಂದ ಬಾಗುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ. ಸ್ಥಿರ ಬೀಮ್‌ಗಳನ್ನು ಸಾಮಾನ್ಯವಾಗಿ ಉದ್ದನೆಯ ಸೇತುವೆಗಳು ಮತ್ತು ದೊಡ್ಡ ಕಟ್ಟಡಗಳಂತಹ ನಿರಂತರವದಾ ರಚನೆಗಳಲ್ಲಿ ಬಳಲಾಗುತ್ತದೆ.

 

 

4. ಓವರ್‌ಹ್ಯಾಂಗಿಂಗ್‌ ಬೀಮ್‌

ಈ ಪ್ರಕಾರದ ಬೀಮ್‌ನಲ್ಲಿ ಅದರ ಒಂದು ಅಥವಾ ಎರಡೂ ತುದಿಗಳು ಅದರ ಆಧಾರವನ್ನು ಮೀರಿ ಹೊರಕ್ಕೆ ಚಾಚಿಕೊಂಡಿರುತ್ತದೆ. ಈ ರೀತಿ ಚಾಚಿಕೊಂಡ ಬೀಮ್‌ ಇಳಿಬಿದ್ದ ರೀತಿ ರಚನೆಯಾಗಿದ್ದು, ಇದರ ವಿನ್ಯಾಸದ ಅವಶ್ಯಕತೆಗಳಿಗೆ ಅನುಗುಣವಾಗಿ ಉದ್ದದಲ್ಲಿ ಬದಲಾವಣೆ ಹೊಂದಿರುತ್ತದೆ. ಮೇಲಾವರಣಗಳು ಅಥವಾ ಬಾಲ್ಕನಿಗಳಂತಹ ವಿಸ್ತರಣೆ ಮಾಡಿದ ಸ್ಥಳಗಳಲ್ಲಿ ಈ ಜೋತುಬೀಳುವ ಬೀಮ್‌ಗಳನ್ನು ಅಳವಡಿಸಬಹುದಾಗಿರುತ್ತದೆ.

 

 

5. ಉದ್ದವಾದ (ಕಂಟಿನ್ಯೂವಸ್) ಬೀಮ್‌ಗಳು

ಉದ್ದವಾದ ಬೀಮ್‌ಗಳು ಹಲವಾರು ಆಧಾರ ಆಧಾರಗಳ ಮೇಲೆ ಹರಡಿರುವಂತಹ ತುಂಡರಿಸದೇ ಇರುವಂತೆ ಒಟ್ಟಿಗೆ ಜೋಡಿಸಲಾದ ಹಲವು ಬೀಮ್‌ಗಳ ಜೋಡಣೆಯಾಗಿದೆ. ಉದ್ದನೆಯ ಬೀಮ್‌ಗಳ ಪ್ರಾಥಮಿಕ ಕೆಲಸವೆಂದರೆ, ಸಮನಾಂತರವಾಗಿ ಭಾರವನ್ನು ತಡೆದು, ಬಾಗುವಿಕೆಯನ್ನು ಕಡಿಮೆ ಮಾಡುವುದು ಮತ್ತು ಒಟ್ಟಾರೆಯಾಗಿ ನಿರ್ಮಾಣದ ಸ್ಥಿರತೆಯನ್ನು ಕಾಪಾಡುವುದಾಗಿರುತ್ತದೆ. ಅವುಗಳನ್ನು ಸಾಮಾನ್ಯವಾಗಿ ದೊಡ್ಡದಾದ ತೆರೆದ ಸ್ಥಳಗಳನ್ನು ಹೊಂದಿರುವಂತಹ ಸೇತುವೆಗಳು ಮತ್ತು ಬೃಹತ್ ರಚನೆಗಳಲ್ಲಿ ಬಳಸಲಾಗುತ್ತದೆ.

 

 

6. ಪ್ಲಿಂತ್‌ ಬೀಮ್‌



ಪ್ಲಿಂತ್‌ ಬೀಮ್‌ಗಳು ಕಟ್ಟಡದ ಎಲ್ಲಾ ಘಟಕಗಳನ್ನು ಜೋಡಿಸುವಂತೆ ನೆಲ ಮಟ್ಟದಲ್ಲಿ ರಿಇನ್‌ಫೋರ್ಸಡ್‌ ಕಾಂಕ್ರಿಟ್‌ನಿಂದ ನಿರ್ಮಿಸಲಾದ ಬೀಮ್‌ ಆಗಿದೆ. ಇದರ ಮುಖ್ಯ ಕಾರ್ಯವು ಕಟ್ಟಡಕ್ಕೆ ಸ್ಥಿರವಾದ ವೇದಿಕೆಯನ್ನು ಒದಗಿಸುವುದು ಮತ್ತು ರಚನೆಯ ನೆಲೆಗೊಳಿಕೆಯಲ್ಲಿ ಉಂಟಾಗುವ ವ್ಯತ್ಯಾಸಗಳನ್ನು ತಡೆಯುವುದಾಗಿದೆ. ಮಣ್ಣಿನ ಸವೆತ, ಭೂಕಂಪಗಳು ಮತ್ತು ಇತರೆ ನೆಲನಡುಗುವಿಕೆಯ ಚಟುವಟಿಕೆಗಳಿಗೆ ಒಳಗಾಗುವ ಪ್ರದೇಶಗಳಲ್ಲಿ ಈ ರೀತಿಯ ಬೀಮ್‌ಗಳನ್ನು ಬಳಕೆ ಮಾಡುವುದು ತುಂಬಾ ಅಗತ್ಯವಿರುತ್ತವೆ.



ನಿರ್ಮಾಣ ಪ್ರಕ್ರಿಯೆಯಲ್ಲಿ ಬೀಮ್‌ಗಳು ವಿವಿಧ ರಚನೆಗಳ ಆಧಾರ ಸ್ತಂಭವಾಗಿ ಕಾರ್ಯನಿರ್ವಹಿಸುತ್ತವೆ, ಮತ್ತು ರಚನೆಗೆ ಅಗತ್ಯವಿರುವ ಶಕ್ತಿಯನ್ನು ನೀಡಿ ದೀರ್ಘಕಾಲದವರೆಗೆ ಬಾಳಿಕೆ ನೀಡುತ್ತವೆ. ಪರಿಣಾಮಕಾರಿಯಾಗಿ ಕಟ್ಟಡಗಳನ್ನು ಕಟ್ಟಲು ಮತ್ತು ಸೇತುವೆಗಳನ್ನು ವಿನ್ಯಾಸಗೊಳಿಸಲು ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಗಳಿಗೆ ವಿವಿಧ ಪ್ರಕಾರದ ಬೀಮ್‌ಗಳು ಮತ್ತು ಅವುಗಳ ವಿಶಿಷ್ಟ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಸೂಕ್ತವಾದ ಬೀಮ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕಟ್ಟಡಗಳು ಮತ್ತು ಸೇತುವೆಗಳು ಎದ್ದು ಕಾಣಿಸುತ್ತವೆ ಮತ್ತು ದೀರ್ಘಕಾರದವರೆಗೆ ಉಳಿದುಕೊಳ್ಳುತ್ತವೆ ಎಂದು ಎಂಜಿನಿಯರ್‌ಗಳು ಖಚಿತಪಡಿಸಿಕೊಳ್ಳಬಹುದು.



ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

 

1. ಯಾವ ಬೀಮ್‌ ಅತ್ಯಂತ ಬಲಯುತವಾಗಿರುತ್ತದೆ?

ಬಲಯುತವಾದ ಬೀಮ್‌ ಪ್ರಕಾರವು ಅದಕ್ಕೆ ಬಳಸಿದ ವಸ್ತುಗಳು ಮತ್ತು ವಿನ್ಯಾಸದ ಮೇಲೆ ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಉಕ್ಕಿನಿಂದ ಬಲಯುತಗೊಳಿಸಲಾದ ಬೀಮ್‌ಗಳು ಹೆಚ್ಚು ಬಲಶಾಲಿಯಾಗಿದ್ದು, ಉತ್ತಮ ಭಾರವನ್ನು ಹೊರುವ ಶಕ್ತಿಯನ್ನು ಹೊಂದಿರುತ್ತದೆ. ಯಾವುದೇ ನಿರ್ಮಾಣ ಕಾರ್ಯದಲ್ಲಿ ಈ ರೀತಿಯ ಬೀಮ್‌ ಅನ್ನು ಆಯ್ಕೆ ಮಾಡಿಕೊಳ್ಳುವುದು ಒಂದು ಪ್ರಬಲ ಆಯ್ಕೆಯಾಗಿರುತ್ತದೆ. ನಿಮ್ಮ ಯೋಜನೆಗೆ ಯಾವ ಬೀಮ್‌ಗಳನ್ನು ಸೂಕ್ತ ಎಂದು ತಿಳಿಯಲು ಎಂಜಿನಿಯರ್‌ರವರೊಂದಿಗೆ ಸಮಾಲೋಚನೆ ನಡೆಸುವುದು ಉತ್ತಮ.

 

2. ಕಡಿಮೆ ವೆಚ್ಚದ ಬೀಮ್‌ ಯಾವುದು?

ಸರಳ ಬೆಂಬಲಿತ ಬೀಮ್‌ಗಳು ಸಾಮಾನ್ಯವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ರಚನೆಗಳಿಗೆ ವೆಚ್ಚದ ದೃಷ್ಟಿಯಿಂದ ಉತ್ತಮ ಆಯ್ಕೆಯಾಗಿರುತ್ತವೆ. ಇತರೆ ವಿಧದ ಬೀಮ್‌ಗಳಿಗೆ ಹೋಲಿಸಿದರೆ ಅವುಗಳನ್ನು ನಿರ್ಮಿಸಲು ಸುಲಭ ಮತ್ತು ಇವುಗಳಿಗೆ ಕಡಿಮೆ ಸಾಮಗ್ರಿಗಳ ಅಗತ್ಯವಿರುತ್ತದೆ.

 

3. ಬೀಮ್‌ಗಳು ಮತ್ತು ಪಿಲ್ಲರ್‌ಗಳು ಒಂದೇ ಆಗಿರುತ್ತವೆಯೇ?

ಇಲ್ಲ, ಬೀಮ್‌ಗಳು ಮತ್ತು ಪಿಲ್ಲರ್‌ಗಳು ಎರಡೂ ಒಂದೇ ಆಗಿರುವುದಿಲ್ಲ. ಬೀಮ್‌ಗಳು ಭಾರವನ್ನು ತಾಳಿಕೊಳ್ಳಲು ಮತ್ತು ಅದರ ಆಧಾರಕ್ಕೆ ಆ ಭಾರವನ್ನು ವರ್ಗಾಯಿಸಲು ಅಡ್ಡಲಾಗಿ ಅಥವಾ ಇಳಿಜಾರಾಗಿ ನಿರ್ಮಿಸಲಾಗಿರುತ್ತದೆ. ಆದರೆ ಪಿಲ್ಲರ್‌ಗಳು ಬೀಮ್‌ಗಳಿಗೆ ಆಧಾರವಾಗಿರುವ ಲಂಬವಾದ ರಚನೆಯಾಗಿದ್ದು ತನ್ನ ಭಾರವನ್ನು ಅಡಿಪಾಯಕ್ಕೆ ಸಾಗಿಸುತ್ತದೆ.

 

4. ಬೀಮ್‌ಗಳ ನಡುವೆ ಕನಿಷ್ಠ ಅಂತರ ಎಷ್ಟಿರಬೇಕು?

ಬೀಮ್‌ಗಳ ನಡುವಿನ ಕನಿಷ್ಟ ಅಂತರವು ನಿರ್ದಿಷ್ಟ ನಿರ್ಮಾಣದ ವಿನ್ಯಾಸ ಮತ್ತು ಹೊರುವ ಭಾರದ ಅವಶ್ಯಕತೆಯ ಮೇಲೆ ಅವಲಂಬಿತವಾಗಿರುತ್ತದೆ. ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ, ಇಂಜಿನಿಯರ್‌ಗಳು ರಚನೆಯಲ್ಲಿ ಸಾಕಷ್ಟು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಬೀಮ್‌ಗಳ ನಡುವೆ ಕನಿಷ್ಠ 3 ಮೀಟರ್ ದೂರವನ್ನು ಇರಿಸಿಕೊಳ್ಳುವ ಗುರಿಯನ್ನು ಹೊಂದಿರುತ್ತಾರೆ.

 

5. ಬೀಮ್‌ಗಳಲ್ಲಿ ಉತ್ತಮ ಕಾಂಕ್ರಿಟ್ ಮಿಶ್ರಣದ ಪ್ರಮಾಣ ಎಷ್ಟಿರಬೇಕು?

ಬೀಮ್‌ಗಳಿಗಾಗಿ ಮಿಶ್ರಣ ಮಾಡುವ ಕಾಂಕ್ರೀಟ್‌ನ ಅನುಪಾತವು ರಚನೆಯ ಸಾಮರ್ಥ್ಯ ಮತ್ತು ಬಾಳಿಕೆಗೆ ಅನುಗುಣವಾಗಿರುತ್ತದೆ. ಸಾಮಾನ್ಯವಾಗಿ ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿನ ಬೀಮ್‌ಗಳಿಗೆ 1 ಭಾಗ ಸಿಮೆಂಟ್, 2 ಭಾಗ ಮರಳು ಮತ್ತು 3 ಅಗ್ರಿಗೇಟ್‌ ಅನ್ನು ಮಿಶ್ರಣವನ್ನು ಬಳಸಲಾಗುತ್ತದೆ.


ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....