ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ

hgfghj


OPC ಮತ್ತು PPC ಸಿಮೆಂಟ್ ನಡುವಿನ ವ್ಯತ್ಯಾಸವೇನು?

ಕಟ್ಟಡ ನಿರ್ಮಾಣ ಜಗತ್ತಿನಲ್ಲಿ, ಸಿಮೆಂಟ್‌ನ ಆಯ್ಕೆಯು ರಚನೆಗಳ ಬಾಳಿಕೆ, ಸದೃಢತೆ ಮತ್ತು ಸುಸ್ಥಿರತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಲಭ್ಯವಿರುವ ಹಲವು ವಿಧಗಳಲ್ಲಿ, ಎರಡು ಸಾಮಾನ್ಯವಾಗಿ ಬಳಸುವ ವ್ಯತ್ಯಾಸಗಳು ಗಮನಾರ್ಹವಾಗಿವೆ: OPC ಮತ್ತು PPC. ಈ ಬ್ಲಾಗ್‌ನಲ್ಲಿ, ನಾವು OPC ಮತ್ತು PPC ಸಿಮೆಂಟ್‌ಗಳ ನಡುವಿನ ವ್ಯತ್ಯಾಸವನ್ನು ಅನ್ವೇಷಿಸುತ್ತೇವೆ.

Share:


• OPC ಮತ್ತು PPC ಸಿಮೆಂಟ್‌ಗಳು ನಿರ್ಮಾಣಕ್ಕೆ ಬಹಳ ಮಹತ್ವಪೂರ್ಣವಾಗಿದ್ದು ಕಟ್ಟಡ ರಚನೆಯ ಬಾಳಿಕೆ ಮತ್ತು ಸದೃಢತೆಯ ಮೇಲೆ ಪ್ರಭಾವ ಬೀರುತ್ತವೆ.

 

• ಆರ್ಡಿನರಿ ಪೋರ್ಟ್‌ಲ್ಯಾಂಡ್ ಸಿಮೆಂಟ್ (OPC) ಬಹುಪಯೋಗಿ ಸಾಮಗ್ರಿಯಾಗಿದ್ದು OPC 33, 43, ಮತ್ತು 53 ನಂತಹ ಗ್ರೇಡ್‌ಗಳಲ್ಲಿ ಬರುತ್ತದೆ, ಆ ಪ್ರತಿಯೊಂದೂ ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿವೆ.

 

• ಪೋರ್ಟ್‌ಲ್ಯಾಂಡ್ ಪೊಝೋಲಾನಾ ಸಿಮೆಂಟ್ (PPC) ಕಡಿಮೆ ಹೈಡ್ರೇಶನ್ ಶಾಖ ಮತ್ತು ರಾಸಾಯನಿಕಗಳ ಪ್ರತಿ ವರ್ಧಿತ ಪ್ರತಿರೋಧದಂತಹ ಪ್ರಯೋಜನಗಳನ್ನು ನೀಡುತ್ತದೆ.

 

• ಸಂಯೋಜನೆ, ವೆಚ್ಚ, ಕಾರ್ಯಸಾಧ್ಯತೆ, ಉಪಯೋಗಗಳು, ಶಕ್ತಿ ಮತ್ತು ಬಾಳಿಕೆಗಳಂತಹ ಮಾನದಂಡಗಳು OPC ಮತ್ತು PPC ಯನ್ನು ಪ್ರತ್ಯೇಕಿಸುತ್ತವೆ.

 

• OPC ಮತ್ತು PPC ನಡುವಿನ ಆಯ್ಕೆಯು, ಸದೃಢತೆ, ವೆಚ್ಚ ಮತ್ತು ಪಾರಿಸಾರಿಕ ಪ್ರಭಾವಗಳಂತಹ ಅಂಶಗಳನ್ನು ಪರಿಗಣಿಸಿ ಮಾಡಲಾದ ಒಂದು ಸಂಪೂರ್ಣ ವಿಶ್ಲೇಷಣೆಯನ್ನು ಅವಲಂಬಿಸಿರುತ್ತದೆ.

 

• ಎರಡೂ, ನಿರ್ದಿಷ್ಟ ನಿರ್ಮಾಣ ಅಗತ್ಯಗಳಿಗೆ ಸೂಕ್ತವಾಗುವಂತ ವಿಶಿಷ್ಟ ಪ್ರಯೋಜನಗಳನ್ನು ಹೊಂದಿರುತ್ತವೆ.



ಕಟ್ಟಡ ನಿರ್ಮಾಣದ ವಿಷಯವಾಗಿ ಸಿಮೆಂಟ್ ಒಂದು ಪ್ರಮುಖ ಮತ್ತು ನಿರ್ಣಾಯಕ ಅಂಶವಾಗಿದೆ. ಅದನ್ನು ಅಗ್ರಿಗೇಟ್‌ಗಳು ಮತ್ತು ನೀರಿನೊಂದಿಗೆ ಮಿಶ್ರಣಮಾಡಿ ಯಾವುದೇ ಕಟ್ಟಡ ರಚನೆಯ ನಿರಂತರತೆ, ಸದೃಢತೆ ಮತ್ತು ಜೀವಿತಾವಧಿಯನ್ನು ಖಾತ್ರಿಪಡಿಸುವ ಅಂಶವಾದ ಕಾಂಕ್ರೀಟ್ ಅನ್ನು ತಯಾರಿಸಲಾಗುತ್ತದೆ. ಕಾಲಮ್‌ಗಳು, ಬೀಮ್‌ಗಳು, ಅಡಿಪಾಯಗಳು, ಸ್ಲ್ಯಾಬ್‌ಗಳು ಇತ್ಯಾದಿಗಳಂತಹ ಯಾವುದೇ ರಚನಾತ್ಮಕ ಅಂಶವನ್ನು ನಿರ್ಮಿಸಲು ಇದನ್ನು ಬೈಂಡರ್ ಆಗಿ ಬಳಸಲಾಗುತ್ತದೆ ಮತ್ತು ಅವಕ್ಕೆ ಸದೃಢತೆ, ಸ್ಥಿರತೆ ಮತ್ತು ನಿರಂತರತೆಯನ್ನು ನೀಡುತ್ತದೆ. ನಿರ್ಮಾಣದಲ್ಲಿ ಸಾಮಾನ್ಯವಾಗಿ ಎರಡು ರೀತಿಯ ಸಿಮೆಂಟ್ ಅನ್ನು ಬಳಸಲಾಗುತ್ತದೆ: OPC ಮತ್ತು PPC ಸಿಮೆಂಟ್. ನಾವು OPC ಮತ್ತು PPC ಸಿಮೆಂಟ್‌ಗಳ ನಡುವಿನ ವ್ಯತ್ಯಾಸಗಳಿಗೆ ತೆರಳುವ ಮೊದಲು, PPC ಮತ್ತು OPC ಸಿಮೆಂಟ್ ಎಂದರೇನು ಎಂಬುದನ್ನು ಅರಿತುಕೊಳ್ಳೋಣ.


OPC ಸಿಮೆಂಟ್ ಎಂದರೇನು?



OPC ಸಿಮೆಂಟ್ ಎಂದರೆ ಆರ್ಡಿನರಿ ಪೋರ್ಟ್‌ಲ್ಯಾಂಡ್ ಸಿಮೆಂಟ್. ಇದು ನಿರ್ಮಾಣ ಉದ್ಯಮದಲ್ಲಿ ಸಾಮಾನ್ಯವಾಗಿ ಬಳಸಲಾಗುವ ಸಿಮೆಂಟ್ ವಿಧವಾಗಿದೆ. OPC ಸಿಮೆಂಟ್ ಅನ್ನು ಕ್ಲಿಂಕರ್, ಜಿಪ್ಸಮ್‌ಗಳನ್ನು ಸುಣ್ಣದ ಕಲ್ಲು, ಹಾರು ಬೂದಿ ಅಥವಾ ಸ್ಲ್ಯಾಗ್‌ನಂತಹ ಇತರ ವಸ್ತುಗಳನ್ನು ಸೂಕ್ಷ್ಮ ಪುಡಿಯಾಗುವಂತೆ ಅರೆಯುವ ಮೂಲಕ ತಯಾರಿಸಲಾಗುತ್ತದೆ. ಈ ರೀತಿಯ ಸಿಮೆಂಟ್ ತನ್ನ ಬಹುಪಯೋಗಿತೆಗೆ ಹೆಸರುವಾಸಿಯಾಗಿದ್ದು ಕಟ್ಟಡದ ಅಡಿಪಾಯಗಳು, ಸೇತುವೆಗಳು, ರಸ್ತೆಗಳು ಮತ್ತು ಇತರ ಅನೇಕ ರಚನೆಗಳಂತಹ ವಿವಿಧ ನಿರ್ಮಾಣ ಅನ್ವಯಿಕೆಗಳಲ್ಲಿ ಬಳಸಲಾಗುತ್ತದೆ. OPC ಸಿಮೆಂಟ್ ವಿಭಿನ್ನ ಗ್ರೇಡ್‌ಗಳಲ್ಲಿ ಬರುತ್ತದೆ, ಸಾಮಾನ್ಯವಾಗಿ OPC 33, OPC 43, ಮತ್ತು OPC 53; ಈ ಪ್ರತಿ ಗ್ರೇಡ್ ಬೇರೆಬೇರೆ ಸದೃಢತೆ ಗುಣಲಕ್ಷಣಗಳನ್ನು ಹೊಂದಿರುತ್ತವೆ.

 

 

PPC ಸಿಮೆಂಟ್ ಎಂದರೇನು?



PPC ಎಂದರೆ ಪೋರ್ಟ್‌ಲ್ಯಾಂಡ್ ಪೊಝೋಲಾನಾ ಸಿಮೆಂಟ್. ಇದು ಪೋರ್ಟ್‌ಲ್ಯಾಂಡ್ ಸಿಮೆಂಟ್ ಕ್ಲಿಂಕರ್, ಜಿಪ್ಸಮ್ ಮತ್ತು ಪೊಝೋಲಾನಿಕ್ ವಸ್ತುಗಳಾದ ಹಾರು ಬೂದಿ, ಜ್ವಾಲಾಮುಖಿ ಬೂದಿ, ಕ್ಯಾಲ್ಸಿನ್ಡ್ ಜೇಡಿಮಣ್ಣು ಅಥವಾ ಸಿಲಿಕಾ ಹುಡಿಗಳನ್ನು ಸಂಯೋಜಿಸಿ ತಯಾರಿಸಿದ ಸಿಮೆಂಟ್ ವಿಧವಾಗಿದೆ.

 

ಪೊಝೋಲಾನಿಕ್ ವಸ್ತುಗಳ ಸೇರ್ಪಡಿಕೆಯಿಂದಾಗಿ ಸಿಮೆಂಟ್ನ ಕೆಲವು ಗುಣಲಕ್ಷಣಗಳು ವರ್ಧಿಸುತ್ತವೆ, ಉದಾಹರಣೆಗೆ ಬಾಳಿಕೆ, ಕಾರ್ಯಸುಲಭತೆ ಮತ್ತು ದೀರ್ಘಾವಧಿಯ ಸದೃಢತೆ. OPC ಗೆ ಹೋಲಿಸಿದರೆ PPC ಸಿಮೆಂಟ್ ತನ್ನ ಕಡಿಮೆ ಹೈಡ್ರೇಶನ್ ಶಾಖವನ್ನು ಉತ್ಪಾದಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ, ಇದು ತಾಪಮಾನ ಏರಿಕೆಯನ್ನು ನಿಯಂತ್ರಿಸುವುದು ಮಹತ್ವಪೂರ್ಣವಾಗಿರುವಂತಹ ದೊಡ್ಡ ಕಾಂಕ್ರೀಟ್ ರಚನೆಗಳಲ್ಲಿ ಬಳಕೆಗೆ ಅನುಕೂಲಕರವಾಗಿರುತ್ತದೆ. ಹೆಚ್ಚುವರಿಯಾಗಿ, ಇದು ಆಕ್ರಮಣಕಾರಿ ರಾಸಾಯನಿಕಗಳ ವಿರುದ್ಧ ಕಾಂಕ್ರೀಟ್ನ ಪ್ರತಿರೋಧಕತೆಯನ್ನು ಸುಧಾರಿಸುತ್ತದೆ ಮತ್ತು ಉತ್ತಮ ಕಾರ್ಯಸುಲಭತೆಯನ್ನು ಒದಗಿಸುತ್ತದೆ.

 

PPC ಸಿಮೆಂಟ್ ಅನ್ನು ವಿವಿಧ ನಿರ್ಮಾಣ ಅನ್ವಯಿಕೆಗಳಲ್ಲಿ, ವಿಶೇಷವಾಗಿ ಪಾರಿಸಾರಿಕ ಪರಿಗಣನೆಗಳು ಮತ್ತು ದೀರ್ಘಾವಧಿಯ ಬಾಳಿಕೆ ಪ್ರಮುಖ ಅಂಶಗಳಾಗಿರುವ ಯೋಜನೆಗಳಲ್ಲಿ, ವ್ಯಾಪಕವಾಗಿ ಬಳಸಲಾಗುತ್ತದೆ.


PPC ಸಿಮೆಂಟ್ vs OPC ಸಿಮೆಂಟ್

OPC ಮತ್ತು PPC ಎರಡನ್ನೂ ನಿರ್ಮಾಣದಲ್ಲಿ ಬಳಸಲಾಗುತ್ತದೆ ಮತ್ತು ಎರಡೂ ಬೇರೆಬೇರೆ ಸಾಮಗ್ರಿಗಳಿಂದ ಮಾಡಲ್ಪಟ್ಟಿರುತ್ತವೆ ಮತ್ತು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುತ್ತವೆ. OPC ಅನ್ನು ಸುಣ್ಣದ ಕಲ್ಲು ಮತ್ತು ಜೇಡಿಮಣ್ಣಿನಿಂದ ತಯಾರಿಸಲಾಗುತ್ತದೆ, ಆದರೆ PPC ಅನ್ನು ಸುಣ್ಣದ ಕಲ್ಲು ಮತ್ತು ಜಿಪ್ಸಮ್ನಿಂದ ತಯಾರಿಸಲಾಗುತ್ತದೆ. ಹಾಗಾದರೆ, OPC ಮತ್ತು PPC ಸಿಮೆಂಟ್‌ಗಳ ನಡುವಿನ ವ್ಯತ್ಯಾಸವೇನು? ಇವೆರಡನ್ನೂ ಭಿನ್ನವಾಗಿಸುವ ವಿವಿಧ ಮಾನದಂಡಗಳ ಪಟ್ಟಿ ಇಲ್ಲಿದೆ.


ಮಾನದಂಡ OPC ಸಿಮೆಂಟ್ PPC ಸಿಮೆಂಟ್
ಸಂಯೋಜನೆ OPC ಮತ್ತು PPC ಸಿಮೆಂಟ್ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ಸಂಯೋಜನೆ. OPC ಅನ್ನು ಸುಣ್ಣದ ಕಲ್ಲು ಮತ್ತು ಕ್ಲಿಂಕರ್ ಮಿಶ್ರಣವನ್ನು ಇತರ ವಸ್ತುಗಳ ಜೊತೆಗೆ ಅರೆಯುವ ಮೂಲಕ ತಯಾರಿಸಲಾಗುತ್ತದೆ.

 

ಇದನ್ನು ಸುಣ್ಣದ ಕಲ್ಲು, ಜೇಡಿಮಣ್ಣು ಮತ್ತು ಹಾರುಬೂದಿಯ ಮಿಶ್ರಣವನ್ನು ಅರೆಯುವ ಮೂಲಕ ತಯಾರಿಸಲಾಗುತ್ತದೆ.

 

ವೆಚ್ಚ ಕ್ಲಿಂಕರ್ ತಯಾರಿಕೆಗೆ ಸಂಬಂಧಿಸಿದ ಉನ್ನತ ಶಕ್ತಿಯ ಬಳಕೆ ಮತ್ತು ಉತ್ಪಾದನಾ ವೆಚ್ಚದ ಕಾರಣದಿಂದಾಗಿ OPCಯ ಬೆಲೆ ದುಬಾರಿಯಾಗಬಹುದು.

 

ಇದು ಸಾಮಾನ್ಯವಾಗಿ OPC ಗಿಂತ ಅಧಿಕ ವೆಚ್ಚ-ಪರಿಣಾಮಕಾರಿಯಾಗಿರುತ್ತದೆ ಏಕೆಂದರೆ ಇದು ಹಾರುಬೂದಿ ಅಥವಾ ಸ್ಲ್ಯಾಗ್‌ನಂತಹ ಪೂರಕ ವಸ್ತುಗಳನ್ನು ಒಳಗೊಂಡಿರುತ್ತದೆ.

 

ಕಾರ್ಯಸುಲಭತೆಯು ನಿರ್ದಿಷ್ಟ ಗ್ರೇಡ್‌ನ ಆಧಾರದ ಮೇಲೆ, ಕಣಗಳ ಸೂಕ್ಷ್ಮತೆ ಮತ್ತು ಸೆಟ್ಟಿಂಗ್ ಸಮಯಗಳು OPC ಯ ಮೇಲೆ ಪರಿಣಾಮ ಬೀರಬಹುದು.

 

ಅದರ ಸೂಕ್ಷ್ಮ ಕಣಗಳು ಮತ್ತು ಪೊಝೋಲಾನಿಕ್ ಗುಣಲಕ್ಷಣಗಳಿಂದಾಗಿ ಸಾಮಾನ್ಯವಾಗಿ ಉತ್ತಮ ಕಾರ್ಯಸುಲಭತೆಯನ್ನು ನೀಡುತ್ತದೆ.

 

ಉಪಯೋಗಗಳು ಈ ರೀತಿಯ ಸಿಮೆಂಟ್ ಅನ್ನು ಕಾಂಕ್ರೀಟ್ ಅಷ್ಟೊಂದು ಬಲವಾಗಿರಬೇಕಾಗಿರದಿರುವ ನಿರ್ಮಾಣದಲ್ಲಿ ಬಳಸಲಾಗುತ್ತದೆ.

 

ಈ ರೀತಿಯ ಸಿಮೆಂಟ್ ಅನ್ನು ಕಾಂಕ್ರೀಟ್ ತುಂಬಾ ಬಲವಾಗಿರಬೇಕಾದ ನಿರ್ಮಾಣದಲ್ಲಿ ಬಳಸಲಾಗುತ್ತದೆ.

 

ಸದೃಢತೆ ಸಾಮಾನ್ಯವಾಗಿ ಉನ್ನತ ಆರಂಭಿಕ ಶಕ್ತಿಗೆ, ನಿರ್ದಿಷ್ಟವಾಗಿ OPC 53 ಗ್ರೇಡ್, ಹೆಸರುವಾಸಿಯಾಗಿದ್ದು ಇದು ಕ್ಯುರಿಂಗ್‌ನ ಆರಂಭಿಕ ಹಂತಗಳಲ್ಲಿ ಉನ್ನತ ಸಂಕೋಚನ ಸದೃಢತೆಯನ್ನು ಪ್ರದರ್ಶಿಸುತ್ತದೆ.

 

ಇದು ಸ್ವಲ್ಪ ಕಡಿಮೆ ಆರಂಭಿಕ ಶಕ್ತಿಯನ್ನು ಹೊಂದಿದ್ದರೂ, PPC ಕಾಲಾನಂತರದಲ್ಲಿ ಸದೃಢತೆಯನ್ನು ಸಾಧಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ OPC ಯ ಸದೃಢತೆಗೆ ಸಾಟಿಯಾಗುವ ಅಥವಾ ಮೀರುವ ಸದೃಢತೆಯನ್ನು ಹೊಂದುತ್ತದೆ.

 

ಬಾಳಿಕೆ ಕೆಲವು ಪರಿಸ್ಥಿತಿಗಳಲ್ಲಿ ಅದರ ಬಾಳಿಕೆ ಸ್ವಲ್ಪ ಕಡಿಮೆ ಇರಬಹುದಾದರೂ OPC ಉತ್ತಮ ಸದೃಢತೆಯನ್ನು ಒದಗಿಸುತ್ತದೆ.

 

PPC ಯಲ್ಲಿನ ಪೊಜೊಲಾನಿಕ್ ವಸ್ತುಗಳು ಉತ್ತಮ ಬಾಳಿಕೆಗೆ ಕೊಡುಗೆ ನೀಡುತ್ತವೆ, ಆಕ್ರಮಣಕಾರಿ ರಾಸಾಯನಿಕಗಳಿಗೆ ಪ್ರತಿರೋಧವನ್ನು ಹೆಚ್ಚಿಸುತ್ತವೆ ಮತ್ತು ದೀರ್ಘಾವಧಿಯ ಸದೃಢತೆಯನ್ನು ಸುಧಾರಿಸುತ್ತವೆ.

 


PPC ಸಿಮೆಂಟ್ vs OPC ಸಿಮೆಂಟ್‌ಗಳ ಪೈಕಿ, ಎರಡೂ ವಿಧದ ಸಿಮೆಂಟ್‌ಗಳು ತಮ್ಮ ವಿಶಿಷ್ಟ ಪ್ರಯೋಜನಗಳನ್ನು ಹೊಂದಿದ್ದು ಯೋಜನೆಯ ಅವಶ್ಯಕತೆಗಳು, ವೆಚ್ಚದ ಪರಿಗಣನೆಗಳು, ಪಾರಿಸಾರಿಕ ಅಂಶಗಳು ಮತ್ತು ನಿರ್ಮಾಣ ಅನ್ವಯಿಕೆಗಳ ನಿರ್ದಿಷ್ಟ ಅಗತ್ಯಗಳನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ. ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಬೇರೆಬೇರೆ ಮಾನದಂಡಗಳಲ್ಲಿ OPC ಮತ್ತು PPC ಸಿಮೆಂಟ್‌ಗಳ ನಡುವಿನ ವ್ಯತ್ಯಾಸವನ್ನು ಮೇಲೆ ಒದಗಿಸಲಾಗಿದೆ.



ಈ ಬ್ಲಾಗ್‌ನಲ್ಲಿ, ನಾವು OPC ಮತ್ತು PPC ಸಿಮೆಂಟ್‌ಗಳ ನಡುವಿನ ವ್ಯತ್ಯಾಸವನ್ನು ಚರ್ಚಿಸಿದ್ದೇವೆ. ಎರಡೂ ವಿಧಗಳು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದ್ದು ಹಾಗಾಗಿ ಇವುಗಳನ್ನು ಅರ್ಥಮಾಡಿಕೊಳ್ಳಬೇಕು. ಯಾವ ಸಿಮೆಂಟ್ ಉತ್ತಮ OPC ಯೋ ಅಥವಾ PPC ಯೋ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ನಿಮ್ಮ ಆಯ್ಕೆಯು, ಸದೃಢತೆ, ಬಾಳಿಕೆ, ವೆಚ್ಚ, ಕಾರ್ಯಸುಲಭತೆ ಮತ್ತು ಪಾರಿಸಾರಿಕ ಪ್ರಭಾವದಂತಹ ಅಂಶಗಳನ್ನು ಸಮತೋಲನಗೊಳಿಸುತ್ತ, ನಿಮ್ಮ ಪ್ರಾಜೆಕ್ಟ್‌ನ ಅಗತ್ಯತೆಗಳ ಒಂದು ಸಮಗ್ರ ಮೌಲ್ಯಮಾಪನವನ್ನು ಅವಲಂಬಿಸಿರುತ್ತದೆ. OPC ಮತ್ತು PPC ಎರಡೂ ತಮ್ಮದೇ ಆದ ವಿಶಿಷ್ಟ ಪ್ರಯೋಜನಗಳನ್ನು ಹೊಂದಿವೆ ಮತ್ತು ಈ ಪರಿಗಣನೆಗಳ ಆಧಾರದ ಮೇಲೆ ವಿವಿಧ ನಿರ್ಮಾಣ ಅನ್ವಯಿಕೆಗಳಲ್ಲಿ ಅವುಗಳನ್ನು ಬಳಸಲಾಗುತ್ತದೆ.



ಸಂಬಂಧಿತ ಲೇಖನಗಳು




ಶಿಫಾರಸು ಮಾಡಿದ ವೀಡಿಯೊಗಳು




ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....