ಕಂಪನಿಯ ವಿತರಣೆ ಹಕ್ಕು ಮತ್ತು ರಿಟೇಲ್ ಔಟ್ಲೆಟ್ ಡೀಲರ್ಶಿಪ್ ಮತ್ತು ಬೃಹತ್ ಸಿಮೆಂಟ್ / ಉತ್ಪನ್ನಗಳನ್ನು ಬಹಳ ರಿಯಾಯಿತಿಯ ದರದಲ್ಲಿ ಒದಗಿಸುವ ಆಮಿಷದೊಂದಿಗೆ ಕೆಲವು ವ್ಯಕ್ತಿಗಳು ಗ್ರಾಹಕರನ್ನು ಸೆಳೆಯುತ್ತಿದ್ದಾರೆ ಮತ್ತು ಈ ಪ್ರಕ್ರಿಯೆ ಸಂದರ್ಭ ಮುಂಗಡ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ ಎನ್ನುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅವರು ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ (ಯುಟಿಸಿಎಲ್) ಹೆಸರು ಮತ್ತು ಲೋಗೋವನ್ನು ಅಕ್ರಮವಾಗಿ ಬಳಸುತ್ತಿದ್ದಾರೆ ಹಾಗೂ ಯುಟಿಸಿಎಲ್ನ ಅಧಿಕೃತ ಪ್ರತಿನಿಧಿಗಳು ಎಂದು ಹೇಳಿಕೊಳ್ಳುತ್ತಾರೆ.
ಯುಟಿಸಿಎಲ್ ತನ್ನ ಸರಕುಗಳ ಮಾರಾಟವನ್ನು ವಾಟ್ಸಪ್ ಸಂದೇಶ, ಕರೆಗಳು, ಇಮೇಲ್ಗಳು ಅಥವಾ ಯಾವುದೇ ಸಾಮಾಜಿಕ ಮಾಧ್ಯಮಗಳ ಮೂಲಕ ಮಾರಾಟ ಮಾಡುವುದಿಲ್ಲ ಹಾಗೂ ಅದಕ್ಕಾಗಿ ನೆಟ್ಬ್ಯಾಂಕ್ ಅಥವಾ ಬೇರೆ ವಿಧಾನದ ಮೂಲಕ ಮುಂಗಡ ಹಣ ಪಾವತಿಸುವಂತೆ ಎಂದಿಗೂ ಗ್ರಾಹಕರನ್ನು ಕೇಳುವುದಿಲ್ಲ ಎನ್ನುವುದನ್ನು ದಯವಿಟ್ಟು ಗಮನಿಸಿ.
ದಯವಿಟ್ಟು ಈ ವ್ಯಕ್ತಿಗಳನ್ನು ನಂಬಬೇಡಿ ಮತ್ತು ಯಾವುದೇ ಮಾಧ್ಯಮಗಳ ಮೂಲಕ ಯಾರಾದರೂ ಅಲ್ಟ್ರಾಟೆಕ್ ಉತ್ಪನ್ನಗಳ ಹೆಸರು ಹೇಳಿಕೊಂಡು ನಿಮ್ಮನ್ನು ಸಂಪರ್ಕಿಸಿದರೆ, ಅವರ ಬ್ಯಾಂಕ್ ಖಾತೆಗೆ ಮುಂಗಡ ಹಣ ಕಳುಹಿಸುವಂತೆ ಕೋರಿದರೆ, ದಯವಿಟ್ಟು ಘಟನೆಯನ್ನು ಸಮೀಪದ ಡೀಲರ್ ಅಥವಾ ಅಧಿಕೃತ ರಿಟೇಲ್ ಸ್ಟಾಕಿಸ್ಟ್ ಅಥವಾ ಕಂಪನಿಯ ಶುಲ್ಕರಹಿತ ಸಂಖ್ಯೆ 1800 210 3311 ಗೆ ವರದಿ ಮಾಡಿ.
ಯಾವುದೇ ಪ್ರಶ್ನೆ ಅಥವಾ ಸಹಾಯಕ್ಕಾಗಿ ದಯವಿಟ್ಟು ನಮ್ಮ ಶುಲ್ಕರಹಿತ ಸಂಖ್ಯೆ 1800 210 3311 ಗೆ ಕರೆ ಮಾಡಿ ಅಥವಾ ನಲ್ಲಿ ನಮ್ಮ ಅಧಿಕೃತ ವೆಬ್ಸೈಟ್ www.ultratechcement.com ಗೆ ಭೇಟಿ ನೀಡಿ