ಮನೆ ಕಟ್ಟಡಕ್ಕಾಗಿ ಮೇಸ್ತ್ರಿ ತಪಾಸಣಾ ಚೆಕ್‌ಲಿಸ್ಟ್

ನೀವು ಕೈಗೊಂಡ ಯೋಜನೆಯು ಗುಣಮಟ್ಟದ ಮಾನದಂಡಗಳನ್ನು ಪೂರೈಸುವುದಲ್ಲದೆ, ಸಮಯಕ್ಕೆ ಮತ್ತು ನಿಗದಿತ ಬಜೆಟ್‌ನಲ್ಲಿ ಪೂರ್ಣಗೊಂಡಿದೆ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ? ಇದು ಟ್ರಿಕಿ ಆಗಿರಬಹುದು, ಅದಕ್ಕಾಗಿಯೇ ನಾವು ನಿರ್ಮಾಣದ ವಿವಿಧ ಹಂತಗಳನ್ನು ಸಂಗ್ರಹಿಸಿದ್ದೇವೆ ಅದು ನಿಮಗೆ ಉತ್ತಮ ಯೋಜನೆ ಮತ್ತು ನಾಕ್ಷತ್ರಿಕ ಯೋಜನೆಯನ್ನು ತಲುಪಿಸಲು ಸಹಾಯ ಮಾಡುತ್ತದೆ.

ಹವಾಮಾನ ನಿರೋಧಕ ಶೇಖರಣಾ ಶೆಡ್‌ನ ನೆಲದಲ್ಲಿ ಹರಡಿರುವ ಮರದ ಹಲಗೆಗಳು ಅಥವಾ ಟಾರ್ಪಾಲಿನ್‌ಗಳ ಮೇಲೆ ಸಿಮೆಂಟ್ ಅನ್ನು ಸಂಗ್ರಹಿಸಬೇಕು ಹಾಗೂ ತೇವಾಂಶವು ಒಳಬರುವುದನ್ನು ತಡೆಯಲು ಎಲ್ಲಾ ಬಾಗಿಲುಗಳು, ಕಿಟಕಿಗಳು ಮತ್ತು ವೆಂಟಿಲೇಟರ್‌ಗಳನ್ನು ಬಿಗಿಯಾಗಿ ಮುಚ್ಚಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಸಂಗ್ರಹಣದ ಜಾಗವು ಗೋಡೆಯಿಂದ 30 ಸೆಂಟಿಮೀಟರ್ ಮತ್ತು ಸೀಲಿಂಗ್‌ನಿಂದ 60 ಸೆಂಟಿಮೀಟರ್ ಅಂತರದಲ್ಲಿ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ, 12 ಚೀಲಗಳಿಗಿಂತ ಹೆಚ್ಚಿನ ಎತ್ತರಕ್ಕೆ ಸಿಮೆಂಟ್ ಅನ್ನು ಜೋಡಿಸಬೇಡಿ. ಸಿಮೆಂಟ್ ಅನ್ನು ಉದ್ದವಾದ ಹಾಗೂ ಅಡ್ಡವಾದ ರೀತಿಯ ಮಾದರಿಯಲ್ಲಿ ಜೋಡಿಸಿಡಿ. ಟಾರ್ಪಾಲಿನ್ ಅಥವಾ ಪಾಲಿಥೀನ್ ಹಾಳೆಯೊಂದಿಗೆ ಸಂಗ್ರಹವನ್ನು ಮುಚ್ಚಿ ಮೊದಲು-ಒಳಗೆ-ಮೊದಲು-ಹೊರಗೆ ಆಧಾರದ ಮೇಲೆ ಸಿಮೆಂಟ್ ಚೀಲಗಳನ್ನು ಬಳಸಿ. ಕೆಲಸದ ಸ್ಥಳದಲ್ಲಿನ ತಾತ್ಕಾಲಿಕ ಸಂಗ್ರಹಣೆಗಾಗಿ, ಸಿಮೆಂಟ್ ಚೀಲಗಳನ್ನು ಎತ್ತರಿಸಿದ ಒಣ ವೇದಿಕೆಯಲ್ಲಿ ಜೋಡಿಸಿ ಹಾಗೂ ಟಾರ್ಪಾಲಿನ್ ಅಥವಾ ಪಾಲಿಥೀನ್ ದುಪ್ಪಟಿಯಿಂದ ಮುಚ್ಚಿ. ಹಳೆಯ ಸಿಮೆಂಟ್ (90 ದಿನಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಲಾಗಿರುವುದನ್ನು) ಬಳಕೆ ಮಾಡುವ ಮೊದಲು ಅದರ ಶಕ್ತಿಗಾಗಿ ಪರೀಕ್ಷಿಸಬೇಕಾಗುತ್ತದೆ.


ಕಾಂಕ್ರೀಟ್ ಸ್ವಲ್ಪ ಗಟ್ಟಿಯಾದ ತಕ್ಷಣ ಕ್ಯೂರಿಂಗ್ ಮಾಡಲು ಪ್ರಾರಂಭಿಸಿ ಮತ್ತು ಅದನ್ನು ನಿರಂತರವಾಗಿ ಮಾಡಿ. ಹೊಸದಾಗಿ ಹಾಕಿದ ಕಾಂಕ್ರೀಟ್ ಮೇಲ್ಮೈಗಳ ಮೇಲೆ ಅದು ಸ್ವಲ್ಪ ಗಟ್ಟಿಯಾಗುವವರೆಗೆ ನೀರನ್ನು ಸಿಂಪಡಿಸುತ್ತಿರಬೇಕು. ಒದ್ದೆ ಮಾಡಿದ ಗೋಣಿ ಚೀಲಗಳು, ಬರ್ಲ್ಯಾಪ್ಸ್ ಅಥವಾ ಒಣಹುಲ್ಲಿನೊಂದಿಗೆ ಕಾಲಮ್ಮುಗಳನ್ನು, ಇಳಿಜಾರಿನ ಛಾವಣಿಗಳು ಮುಂತಾದ ಕಾಂಕ್ರೀಟ್ ಮೇಲ್ಮೈಗಳನ್ನು ಆವರಿಸುವಂತೆ ಮಾಡಿ ಹಾಗೂ ನಿರಂತರ ತೇವವನ್ನು ಖಚಿತಪಡಿಸಿ ಸ್ಲಾಬುಗಳು ಮತ್ತು ಪೇವ್ಮೆಂಟ್ ಮುಂತಾದ ಸಮತಟ್ಟಾದ ಕಾಂಕ್ರೀಟ್ ಮೇಲ್ಮೈಗಳಿಗಾಗಿ, ತೆಳ್ಳಗಿನ ಗಾರೆ ಅಥವಾ ಜೇಡಿಮಣ್ಣಿನಿಂದ ಸಣ್ಣ ಅಡ್ಡ ಬದಿಗಳನ್ನು ನಿರ್ಮಿಸಿ. ಅವುಗಳನ್ನು ನೀರಿನಿಂದ ತುಂಬಿಸಿ. ಕ್ಯೂರಿಂಗ್ ಪ್ರಕ್ರಿಯೆಯು ಮುಗಿಯುವವರೆಗೂ, ಸುಮಾರು 50 ಮಿಮೀ ನಷ್ಟು ಎತ್ತರದ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಿ. ಕ್ಯೂರಿಂಗ್ ಪ್ರಕ್ರಿಯೆಗಾಗಿ ಕುಡಿಯುವ ನೀರಿನ ಗುಣಮಟ್ಟವುಳ್ಳ ನೀರನ್ನು ಉಪಯೋಗಿಸಿ. ಸಾಮಾನ್ಯ ಹವಾಮಾನ ಪರಿಸ್ಥಿತಿಯಲ್ಲಿ, ಕನಿಷ್ಠ 10 ದಿನಗಳವರೆಗೂ ಕ್ಯೂರಿಂಗ್ ಅನ್ನು ಮುಂದುವರೆಸಬೇಕಾಗುತ್ತದೆ. ಬಿಸಿಯಾದ ವಾತಾವರಣದಲ್ಲಿ (40°ಸಿ ಗಿಂತ ಹೆಚ್ಚು), ಕನಿಷ್ಠ 14 ದಿನಗಳವರೆಗೆ ಕಾಂಕ್ರೀಟ್ ಅನ್ನು ಕ್ಯೂರ್ ಮಾಡಬೇಕಾಗುತ್ತದೆ.


ಮೇಲ್ಮೈಯಲ್ಲಿ ಕಡಿಮೆ ಅಥವಾ ನೀರು ಸಂಪೂರ್ಣವಾಗಿ ಕಾಣಿಸದಿದ್ದಾಗ ಕಡೆಯ ಮಜಲಿನ ಕಾರ್ಯಾಚರಣೆಯನ್ನು ಪ್ರಾರಂಭಿಸಿ. ಕೊನೆಯ ಮಜಲಿನ ಪ್ರಕ್ರಿಯೆಯನ್ನು ಕೈಗೊಳ್ಳುವುದನ್ನು ಈ ಕೆಳಗಿನ ಕ್ರಮದಲ್ಲಿ ಅನುಸರಿಸಿ - ಸ್ಕ್ರೀಡಿಂಗ್, ಫ್ಲೋಟಿಂಗ್ ಮತ್ತು ಟ್ರೋವೆಲಿಂಗ್. ಅದರ ಸಂಪೂರ್ಣ ಪ್ರದೇಶದಲ್ಲಿ, ನೇರವಾದ ಅಂಚನ್ನು ಹೊಂದಿದ ಪರಿಕರಣದಿಂದ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವ ಮೂಲಕ ಕಾಂಕ್ರೀಟ್ ಮೇಲ್ಮೈಯನ್ನು ಸಮಮಟ್ಟಗೊಳಿಸಿ. ಖಾಲಿಜಾಗಗಳನ್ನು ತುಂಬುವ ಸಲುವಾಗಿ ಸಣ್ಣ ಪ್ರಮಾಣದ ಕಾಂಕ್ರೀಟ್ ಮಿಶ್ರಣವನ್ನು ನೇರ ಅಂಚಿನ ಪರಿಕರದ ಮುಂದೆ ಇರಿಸಿಕೊಳ್ಳಿ. ಫ್ಲೋಟಿಂಗ್ ಕ್ರಿಯೆಯನ್ನು ಮಾಡುವಾಗ, 1.5 ಮೀಟರ್ ಉದ್ದ, 20 ಸೆಂಟಿಮೀಟರ್ ಅಗಲದ ಮರದ ಫ್ಲೋಟ್ ಅನ್ನು ಬಳಸಿ ಮತ್ತು ಅದನ್ನು ಮುಂದಕ್ಕೆ ಹಾಗೂ ಹಿಂದಕ್ಕೆ ಸರಿಸಿ, ರೇಖೆಗಳನ್ನು ಮಟ್ಟ ಮಾಡಿ, ಖಾಲಿಜಾಗಗಳನ್ನು ತುಂಬಿಸಿ ಮತ್ತು ಒರಟಾದ ಜಲ್ಲಿಕಲ್ಲುಗಳನ್ನು ಒಳತೂರಿಸಿ. ವಿಪರೀತ ಟ್ರಾವೆಲಿಂಗ್‌ ಅನ್ನು ತಪ್ಪಿಸಿ. ನೀರಿನ ಪಸೆಯು ಹೊರಗೆ ಬರುತ್ತಿರುವಾಗ ಅದನ್ನು ಹೀರಲು, ತೇವಾಂಶ ಹೊಂದಿರುವ ಮೇಲ್ಮೈ ಮೇಲೆ ಸಿಮೆಂಟ್ ಉದುರಿಸುವುದನ್ನು ತಪ್ಪಿಸಿ.


ಪರಿಣಾಮಕಾರಿ ಸಂಕೋಚನಕ್ಕಾಗಿ ವೈಬ್ರೇಟರ್‌ಗಳನ್ನು ಬಳಸಿ – ಫುಟಿಂಗ್‌ಗಳು, ಬೀಮ್‌ಗಳು ಮತ್ತು ಕಾಲಮ್‌ಗಳಿಗೆ ಸೂಜಿ ವೈಬ್ರೇಟರ್‌ಗಳು ಮತ್ತು ಸ್ಲ್ಯಾಬ್‌ಗಳು ಹಾಗೂ ಸಮತಟ್ಟಾದ ಮೇಲ್ಮೈಗಳಿಗಾಗಿ ಮೇಲ್ಮೈ ವೈಬ್ರೇಟರ್‌ಗಳು. ವೈಬ್ರೇಟರ್‌ ಸೂಜಿಯನ್ನು ಲಂಬವಾಗಿ ಪೂರ್ಣ ಆಳಕ್ಕೆ ಮುಳುಗಿಸಿಡಿ ಹಾಗೂ ಕಾರ್ಯಾಚರಣೆಯ ಸಮಯದ ಉದ್ದಕ್ಕೂ ಅದನ್ನು ಉಪಯೋಗಿಸಿ. ಕಾಂಕ್ರೀಟ್ ಅನ್ನು 15 ಸೆಕಂಡುಗಳವರೆಗೆ ವೈಬ್ರೇಟ್ ಮಾಡಿ ಹಾಗೂ ಸೂಜಿಯನ್ನು ನಿದಾನವಾಗಿ ಹೊರಗೆ ಎಳೆಯಿರಿ. ಇಮ್ಮರ್ಶನ್ ಪಾಯಿಂಟ್‌ಗಳು 15 ಸೆಂಟಿಮೀಟರ್ ದೂರದಲ್ಲಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ (20 ಮಿಲಿಮೀಟರ್ ವ್ಯಾಸದ ಸೂಜಿಗೆ) ಫಾರ್ಮ್‌ವರ್ಕ್ ಅಥವಾ ಬಲವರ್ಧನೆಯನ್ನು ಬಲಗೊಳಿಸಿರುವ ಫಲಕಗಳನ್ನು ವೈಬ್ರೇಟರ್‌ನ ಸೂಜಿಯೊಂದಿಗೆ ಸ್ಪರ್ಶಿಸಬೇಡಿ.


ನೀರನ್ನು ಸೇರಿಸಿದ 45 ನಿಮಿಷಗಳಲ್ಲಿ ಕಾಂಕ್ರೀಟ್ ಅನ್ನು ಸಾಗಿಸಿ ಮತ್ತು ಉಪಯೋಗಿಸಿ. ಅದರಲ್ಲಿನ ಅಡಕಗಳು ಬೇರ್ಪಡೆ ಆಗುವುದನ್ನು ತಡೆಯಲು ಕಾಂಕ್ರೀಟ್ ಅನ್ನು ಸಾಗಿಸುವಾಗ ತಳ್ಳುವಿಕೆಗಳನ್ನು ತಪ್ಪಿಸಿ, ಸಾಗಿಸುವ ಸಮಯದಲ್ಲಿ ಕಾಂಕ್ರೀಟ್ ಅನ್ನು ಬೇರ್ಪಡಿಸುವಿಕೆ, ಒಣಗಿಸುವಿಕೆ ಅಥವಾ ಗಟ್ಟಿಗೊಳಿಸುವಿಕೆ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕಾಂಕ್ರೀಟ್ ಸುರಿಯುವಾಗ ಫಾರ್ಮ್‌ವರ್ಕ್ ಮತ್ತು ಬಲವರ್ಧನೆಯ ಜೋಡಣೆಗಳ ಹೊಂದಾಣಿಕೆಗೆ ತೊಂದರೆಗೊಳಿಸಬೇಡಿ. ಏಕರೂಪದ ದಪ್ಪವನ್ನು ಹೊಂದಿದ ಸಮತಲ ಪದರಗಳಲ್ಲಿ ಕಾಂಕ್ರೀಟ್ ಅನ್ನು ಹಾಕಿರಿ. ವೈಬ್ರೇಟರ್‌ಗಳನ್ನು ಬಳಸಿಕೊಂಡು ಕಾಂಕ್ರೀಟ್ ಅನ್ನು ಪಾರ್ಶ್ವ ದಿಕ್ಕಿನಿಂದ ತಳ್ಳಬೇಡಿ. ಸ್ಲ್ಯಾಬ್ ಕಾಂಕ್ರೀಟಿಂಗ್ ಮಾಡುವ ಸಂದರ್ಭದಲ್ಲಿ, ಕಾಂಕ್ರೀಟ್ ಅನ್ನು ಹಿಂದಿನ ಪದರಗಳ ವಿರುದ್ಧ ಅಥವಾ ಅದರ ಕಡೆಗೆ ಇರಿಸಿ ಮತ್ತು ಅದರಿಂದ ದೂವಾಗಿ ಅಲ್ಲ. ಚಪ್ಪಟೆಯಾದ ಸ್ಲ್ಯಾಬ್‌ಗಳ ಸಂದರ್ಭದಲ್ಲಿ ಫಾರ್ಮ್‌ವರ್ಕ್‌ನ ಮೂಲೆಯಿಂದ ಮತ್ತು ಇಳಿಜಾರಿನ ಸ್ಲ್ಯಾಬ್‌ಗಳ ಸಂದರ್ಭದಲ್ಲಿ ಅತ್ಯಂತ ಕಡಿಮೆ ಮಟ್ಟದಿಂದ ಹಾಕಲು ಪ್ರಾರಂಭಿಸಿ. 1 ಮೀ ಗಿಂತ ಹೆಚ್ಚಿನ ಎತ್ತರದಿಂದ ಕಾಂಕ್ರೀಟ್ ಅನ್ನು ಸುರಿಯಬೇಡಿ; ಎತ್ತರವು 1 ಮೀ ಮೀರಿದಲ್ಲಿ ಶೂಟ್ ಅನ್ನು ಬಳಸಿ.


ಮಿಶ್ರಣ ಮಾಡುವ ಡ್ರಮ್ ಮತ್ತು ಬ್ಲೇಡ್‌ಗಳ ಒಳಭಾಗದಲ್ಲಿ ಯಾವುದೇ ಕಾಂಕ್ರೀಟ್ / ಗಾರೆ ಅಂಟಿಕೊಂಡಿದೆಯೇ ಎಂದು ಪರಿಶೀಲಿಸಿ. ಕೆಳಗೆ ಸೂಚಿಸಿರುವ ಅನುಕ್ರಮದಲ್ಲಿ ಹಾಪರ್ ಇಲ್ಲದ ಮಿಶ್ರಣ ಮಾಡುವ ಡ್ರಮ್‌ಗೆ ಮಿಶ್ರಣಾಂಶಗಳನ್ನು ಹಾಕಿರಿ:

ಹಾಪರ್ ಹೊಂದಿರುವ ಮಿಕ್ಸರ್ ಉಪಯೋಗಿಸುತ್ತಿದ್ದಲ್ಲಿ, ಮೊದಲು ಅಳತೆ ಮಾಡಿದ ಒರಟಾದ ಜಲ್ಲಿಕಲ್ಲುಗಳನ್ನು ಹಾಕಿರಿ, ನಂತರ ಮರಳು ಮತ್ತು ಸಿಮೆಂಟ್ ಅನ್ನು ಹಾಪರ್ ಒಳಗೆ ಹಾಕಿರಿ. ಕನಿಷ್ಠ 2 ನಿಮಿಷಗಳ ಕಾಲ ಮಿಶ್ರಣಾಂಶಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಅನಿವಾರ್ಯವಾಗಿ ಕೈಯಲ್ಲಿಯೇ ಬೆರೆಸಬೇಕಾದ ಸಂದರ್ಭದಲ್ಲಿ, ಅದನ್ನು 10% ಹೆಚ್ಚುವರಿ ಸಿಮೆಂಟ್‌ ಸೇರಿಸಿ ಸೋರಿಕೆ ಇಲ್ಲದ ವೇದಿಕೆಯ ಮೇಲೆ ಮಿಶ್ರಣವನ್ನು ಮಾಡಿ. ಕೈಯಲ್ಲಿ ಮಿಶ್ರಣ ಮಾಡುವಾಗ, ಮರಳು ಮತ್ತು ಸಿಮೆಂಟ್ ಅನ್ನು ಏಕರೂಪವಾಗಿ ಬೆರೆಸಿದ ನಂತರ ಒರಟಾದ ಜಲ್ಲಿಕಲ್ಲುಗಳ ಮೇಲೆ ಹರಡಿ ಮತ್ತು ಏಕರೂಪದ ಬಣ್ಣವನ್ನು ಪಡೆಯುವವರೆಗೆ ಮತ್ತೊಮ್ಮೆ ಚೆನ್ನಾಗಿ ಮಿಶ್ರಣವನ್ನು ಮಾಡಿ. ಸಣ್ಣ ಪ್ರಮಾಣದಲ್ಲಿ ನೀರನ್ನು ಬೆರೆಸಿ ಹಾಗೂ ಅದು ಏಕರೂಪ ಹೊಂದುವವವರೆಗೆ ಮಿಶ್ರಣವನ್ನು ಮಾಡಿ


ಸರಿಯಾದ ಪ್ರಮಾಣವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಮಿಶ್ರಣಾಂಶಗಳನ್ನು ನಿಖರವಾಗಿ ಅಳೆಯಿರಿ. ಜಲ್ಲಿಕಲ್ಲುಗಳನ್ನು ತೂಕದಿಂದ ಅಳೆಯುವುದು ಪರಿಮಾಣದ ಮೂಲಕ ಅಳೆಯುವುದಕ್ಕಿಂತ ಸೂಕ್ತವಾಗಿರುತ್ತದೆ. ಪರಿಮಾಣದ ರೀತ್ಯಾ ಅಳೆಯುವಾಗ 1.25 ಘನ ಅಡಿ ಅಳತೆ ಪೆಟ್ಟಿಗೆಗಳನ್ನು ಬಳಸುವುದು ಸೂಕ್ತವಾಗಿರುತ್ತದೆ. ಅಳತೆ ಪೆಟ್ಟಿಗೆಗಳಲ್ಲಿ ಅಥವಾ ಪ್ಯಾನುಗಳಲ್ಲಿ ಅಂಚಿನವರೆಗೂ ತುಂಬಿಸಬೇಕಾಗುತ್ತದೆ. ಪರಿಮಾಣದಿಂದ ಅಳೆಯುವಾಗ ಮರಳು ತೇವವಾಗಿದ್ದಲ್ಲಿ ಸಾಕಷ್ಟು ಪ್ರಮಾಣದ ಹೆಚ್ಚುವರಿ ಮರಳನ್ನು ಸೇರಿಸಬೇಕಾಗುತ್ತದೆ (ಅಂದಾಜು 25%). ಮಾಪನಾಂಕ ನಿರ್ಣಯಿಸಿದ ಕ್ಯಾನ್ ಅಥವಾ ಬಕೆಟ್ ಬಳಸಿ ನೀರನ್ನು ಅಳೆಯಿರಿ, ಇದರಿಂದಾಗಿ ಎಲ್ಲಾ ಬ್ಯಾಚ್‌ಗಳಲ್ಲಿ ಒಂದೇ ಪ್ರಮಾಣದ ನೀರನ್ನು ಬಳಸುವಿಕೆ ಹಾಗೂ ಸ್ಥಿರತೆಯನ್ನು ಖಚಿತಪಡಿಸಿದಂತೆ ಆಗುತ್ತದೆ.


ಒಂದು ಉತ್ತಮ ಇಟ್ಟಿಗೆಯು ಸೂಕ್ತವಾಗಿ ಸುಟ್ಟಿರಬೇಕು, ಹಾಗೂ ಅದು ಗಟ್ಟಿಯಾದ ಮತ್ತು ಏಕರೂಪದ ಗಾತ್ರ , ಆಕಾರ ಮತ್ತು ಬಣ್ಣವನ್ನು (ಸಾಮಾನ್ಯವಾಗಿ ಆಳವಾದ ಕೆಂಪು ಅಥವಾ ತಾಮ್ರ) ಹೊಂದಿರಬೇಕು, ವಿನ್ಯಾಸದಲ್ಲಿ ಏಕರೂಪದ ಮತ್ತು ನ್ಯೂನತೆಗಳು ಹಾಗೂ ಬಿರುಕುಗಳಿಂದ ಮುಕ್ತವಾಗಿರಬೇಕು. ಇದರ ಅಂಚುಗಳು ಚೌಕವಾಗಿ, ನೇರ ಮತ್ತು ತೀಕ್ಷ್ಣತೆಯನ್ನು ಹೊಂದಿರಬೇಕು. ಮತ್ತೊಂದು ಇಟ್ಟಿಗೆಗೆ ಅದನ್ನು ಹೊಡೆದಾಗ, ಲೋಹೀಯ ರಿಂಗಿಂಗ್ ಶಬ್ದವನ್ನು ನೀಡಬೇಕು. ಇನ್ನೊಂದು ಇಟ್ಟಿಗೆಗೆ ಹೊಡೆದಾಗ ಅಥವಾ 1.2 ರಿಂದ 1.5 ಮೀಟರ್ ಎತ್ತರದಿಂದ ಬೀಳಿಸಿದಾಗ ಅದು ಮುರಿಯಬಾರದು. ಬೆರಳಿನ ಉಗುರಿನಿಂದ ಗೀಚಿದಾಗ ಅದು ಯಾವುದೇ ಗುರುತನ್ನು ಮೇಲ್ಮೈಯಲ್ಲಿ ಉಂಟಾಗಬಾರದು. ಒಂದು ಗಂಟೆ ನೀರಿನಲ್ಲಿ ಮುಳುಗಿಸಿದ ನಂತರ ಇಟ್ಟಿಗೆಗಳು ಅದರ ತೂಕದ ಆರನೇ ಒಂದು ಭಾಗಕ್ಕಿಂತ ಹೆಚ್ಚು ನೀರನ್ನು ಹೀರಿಕೊಂಡಿರಬಾರದು. ಉತ್ತಮ ಗುಣಮಟ್ಟದ ಇಟ್ಟಿಗೆಗಳು ಪಡೆಯಲು ಕಷ್ಟವಾದ್ದರಿಂದ ಹೆಚ್ಚಿನ ಅಪವ್ಯಯ / ಒಡೆಯುವಿಕೆಯನ್ನು ಪ್ರದರ್ಶಿಸಬಾರದು  ಅವುಗಳನ್ನು ಫಲವತ್ತಾದ ಮೇಲಿನ ಮಣ್ಣಿನಿಂದ ಮಾಡಿರುವುದರಿಂದ ಅವು ಪರಿಸರ ಸ್ನೇಹಿಯಾಗಿರುವುದಿಲ್ಲ. ಬದಲಾಗಿ, ಕಾಂಕ್ರೀಟ್ ಬ್ಲಾಕ್‌ಗಳನ್ನು ಬಳಸುವುದು ಸೂಕ್ತವಾಗಿದೆ.


ಬಲವಾದ, ಬಾಳಿಕೆ ಬರುವ ಮತ್ತು ಪರಿಸರ ಸ್ನೇಹಿ ಕಟ್ಟಡಗಳಿಗಾಗಿ ಉತ್ತಮ ಗುಣಮಟ್ಟವನ್ನು ಹೊಂದಿದ ಅಲ್ಟ್ರಾಟೆಕ್ ಯೂಸ್ ಬ್ಲೆಂಡೆಡ್ PPC ಮತ್ತು PSC ಸಿಮೆಂಟ್ ಅನ್ನು ಆಯ್ಕೆಮಾಡಿ. ಸಿಮೆಂಟ್ ಖರೀದಿಸುವ ಮೊದಲು, ದಯವಿಟ್ಟು ಪರಿಶೀಲಿಸಿ:

ತಂಡದ ಸಂಖ್ಯೆ - ವಾರ / ತಿಂಗಳು / ಉತ್ಪಾದನೆಯ ವರ್ಷ BIS ಮೊನೊಗ್ರಾಮ್, IS ಕೋಡ್ ಸಂಖ್ಯೆ, MRP ಮತ್ತು ನೆಟ್ ತೂಕ 

ಸಿಮೆಂಟ್ ಚೀಲಗಳನ್ನು ಹಾಳು ಮಾಡಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಕಾಂಕ್ರೀಟ್‌ಗಾಗಿ ಸೂಕ್ತವಾದ ವಸ್ತುಗಳು 

ಜಲ್ಲಿಕಲ್ಲುಗಳು ಕಠಿಣ, ಬಲವಾದ ಹಾಗೂ ಧೂಳು, ಕೊಳಕು, ಜೇಡಿಮಣ್ಣು, ಹೂಳು ಮತ್ತು ತರಕಾರಿ ವಸ್ತುಗಳಿಂದ ಮುಕ್ತವಾಗಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಮರದ ಎಲೆಗಳು, ಒಣ ತಂಬಾಕು, ಹುಲ್ಲು, ಬೇರುಗಳು ಮತ್ತು ಸಕ್ಕರೆ ಪದಾರ್ಥಗಳಂತಹ ಸಾವಯವ ಪದಾರ್ಥಗಳಿದ್ದಲ್ಲಿ ಅವನ್ನು ತೆಗೆದುಹಾಕಿ. ಕಾಂಕ್ರೀಟ್ ಮಾಡಲು ಬೇಕಾದ ನಯವಲ್ಲದ / ಒರಟಾದ ಜಲ್ಲಿಕಲ್ಲುಗಳನ್ನು ಬಳಸಿ ಒರಟಾದ ಜಲ್ಲಿಕಲ್ಲುಗಳು ಸರಿಸುಮಾರು ಘನರೂಪ ಹೊಂದಿದ್ದು 10 ಮಿಲಿಮೀಟರ್ ಮತ್ತು 20 ಮಿಲಿಮೀಟರ್ ಸಂಯೋಜನೆಯೊಂದಿಗೆ 60:40 ರಿಂದ 70:30 ಅನುಪಾತದಲ್ಲಿರಬೇಕಾಗುತ್ತದೆ. ನೀಳವಾದ (ಉದ್ದವಾದ) ಮತ್ತು ಚಪ್ಪಟೆಯಾದ (ತೆಳ್ಳಗಿನ) ಜಲ್ಲಿಕಲ್ಲುಗಳನ್ನು ಬಳಸಬೇಡಿ - ಅಂತಹ ಜಲ್ಲಿಕಲ್ಲುಗಳ ಮಿತಿಯು ಸಂಯೋಜನೆಯಾಗಿದ್ದಲ್ಲಿ ದ್ರವ್ಯರಾಶಿಯ 30% ಹಾಗೂ ಪ್ರತ್ಯೇಕವಾಗಿದ್ದಲ್ಲಿ ದ್ರವ್ಯರಾಶಿಯ 15% ಆಗಿರಬೇಕಾಗುತ್ತದೆ. ಮರಳನ್ನು ಆರಿಸುವಾಗ, ಅದನ್ನು ಕೈಯಿಂದ ಹಿಂಡಿದಾಗ ಕಲೆಗಳು ಮತ್ತು ಸೂಕ್ಷ್ಮ ಕಣಗಳು ಅಂಗೈಗೆ ಅಂಟಿಕೊಳ್ಳಬಾರದು. ಕಲೆಗಳು ಜೇಡಿಮಣ್ಣಿನ ಉಪಸ್ಥಿತಿಯನ್ನು ಸೂಚಿಸುತ್ತವೆ ಹಾಗೂ ಸೂಕ್ಷ್ಮ ಕಣಗಳು ಅಂಟಿರುವುದು ಹೂಳು ಇರುವಿಕೆಯನ್ನು ಸೂಚಿಸುತ್ತದೆ. ಉಪಯೋಗಿಸುವ ನೀರು ಎಣ್ಣೆ, ಕ್ಷಾರಗಳು, ಆಮ್ಲಗಳು, ಸಕ್ಕರೆ ಮತ್ತು ಲವಣಗಳಿಂದ ಮುಕ್ತವಾಗಿರಬೇಕು. ಕುಡಿಯುವ ನೀರಿನ ಗುಣಮಟ್ಟವನ್ನು ಹೊಂದಿದ ನೀರು, ಕಾಂಕ್ರೀಟ್ ತಯಾರಿಕೆಗೆ ಹೆಚ್ಚು ಸೂಕ್ತವಾಗಿರುತ್ತದೆ. RCC ತಯಾರಿಸಲು ಸಮುದ್ರದ ನೀರು ಅಥವಾ ಸವಳು (ಉಪ್ಪು) ನೀರನ್ನು ಬಳಸಬಾರದು. ಪ್ರತಿ ಚೀಲ ಸಿಮೆಂಟಿಗೆ 26 ಲೀಟರ್‌ಗಿಂತ ಹೆಚ್ಚು ನೀರನ್ನು ಸೇರಿಸಬೇಡಿ.


ಅಂಟಿಕೊಳ್ಳುವ ಲೇಪನ, ಜೇಡಿಮಣ್ಣು, ಹೂಳು, ಧೂಳು ಮತ್ತು ಸಾವಯವ ಕಲ್ಮಶಗಳಿಂದ ಮರಳು ಮುಕ್ತವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ ಮೊದಲ ಕೋಟ್‌ಗೆ ಒರಟಾದ ಮರಳು (ರೆಂಡರಿಂಗ್ ಕೋಟ್) ಮತ್ತು ಫಿನಿಶಿಂಗ್ ಕೋಟ್‌ಗೆ ಸಣ್ಣ ಕಣಗಳ ಮರಳನ್ನು ಬಳಸಿ. ಗಾರೆ ಕಾಮಗಾರಿಯ ಸಂದುಗಳನ್ನು ಕನಿಷ್ಠ 12 ಮಿಲಿಮೀಟರ್ ಆಳಕ್ಕೆ ಕೆರೆಯಿರಿ. ಕೆರೆದ ಸಂದುಗಳಲ್ಲಿ ಮತ್ತು ಗಾರೆಯ ಮೇಲ್ಮೈಗಳಲ್ಲಿ ಇರುವ ಧೂಳು ಮತ್ತು ಸಡಿಲವಾದ ಗಾರೆಗಳನ್ನು ಬ್ರಷ್ ಮಾಡಿ. ಪರಿಪೂರ್ಣವಾದ ಹೊಂದಿಕೆಯನ್ನು ಖಚಿತಪಡಿಸಿಕೊಳ್ಳಲು ತಂತಿಯಿಂದ ಉಜ್ಜುವುದು / ಹ್ಯಾಕಿಂಗ್ ಮೂಲಕ ಪ್ಲ್ಯಾಸ್ಟರ್ ಮಾಡಬೇಕಾದ ನಯವಾದ ಮೇಲ್ಮೈಗಳನ್ನು ಒರಟುಗೊಳಿಸಿ. ಎಣ್ಣೆಯುಕ್ತ / ಜಿಡ್ಡಿನ ವಸ್ತು, ಪ್ಲಾಸ್ಟಿಕ್ ಟೇಪ್‌ಗಳು ಮತ್ತು ಕಾಂಕ್ರೀಟ್ ಮೇಲ್ಮೈಗಳಿಗೆ ಅಂಟಿಕೊಂಡಿರುವ ಯಾವುದೇ ಇತರ ವಸ್ತುಗಳ ಸ್ವಚ್ಚಗೊಳಿಸಿ ಮತ್ತು ತಂತಿ ಕುಂಚವನ್ನು ಬಳಸಿ ಚೆನ್ನಾಗಿ ತೊಳೆಯಿರಿ. ಪ್ಲ್ಯಾಸ್ಟರ್ ಅನ್ನು ಹಚ್ಚುವ ಮೊದಲು ಗೋಡೆಯನ್ನು ಸಮವಾಗಿ ತೇವಗೊಳಿಸಿ. ಸಣ್ಣ ಪ್ರಮಾಣದಲ್ಲಿ ಗಾರೆಗಳನ್ನು ಬೆರೆಸಿ ಹಾಗೂ ನೀರು ಸೇರಿಸಿದ 60 ನಿಮಿಷಗಳಲ್ಲಿ ಅದನ್ನು ಉಪಯೋಗಿಸಬಹುದು. ಪ್ಲ್ಯಾಸ್ಟರ್‌ನ ದಪ್ಪವು ಒಂದು ಕೋಟ್‌ಗೆ 15 ಮಿಲಿಮೀಟರ್ ಮತ್ತು ಎರಡು ಕೋಟ್‌ಗಳಿಗೆ 20 ಮಿಲಿಮೀಟರ್ ಮೀರಬಾರದು ಎನ್ನುವುದನ್ನು ಖಚಿತಪಡಿಸಿಕೊಳ್ಳಿ ಮೊದಲ ಕೋಟ್ (ರೆಂಡರಿಂಗ್ ಕೋಟ್) ಅನ್ನು ಒರಟುಗೊಳಿಸಿ ಮತ್ತು ಕನಿಷ್ಠ 2 ದಿನಗಳವರೆಗೆ ಅಥವಾ ಮುಂದಿನ ಕೋಟ್ ಅನ್ವಯಿಸುವವರೆಗೆ ಅದನ್ನು ಒದ್ದೆಯಾಗಿ ಇರಿಸಿ. 2 ರಿಂದ 5 ದಿನಗಳಲ್ಲಿ ರೆಂಡರಿಂಗ್ ಕೋಟ್ ಮೇಲೆ ಮುಕ್ತಾಯದ ಕೋಟ್ ಅನ್ನು ಅನ್ವಯಿಸಿ. ಪ್ಲಾಸ್ಟರ್ ಮಾಡಿದ ಮೇಲ್ಮೈಗಳನ್ನು ಕನಿಷ್ಠ 10 ದಿನಗಳವರೆಗೆ ಕ್ಯೂರಿಂಗ್ ಮಾಡಿ ಹಾಗೂ ವಿಪರೀತ ತಾಪಮಾನದಲ್ಲಿ (> 40 ° C) ಪ್ಲ್ಯಾಸ್ಟರಿಂಗ್ ಮಾಡುವುದನ್ನು ತಪ್ಪಿಸಿ. ಉತ್ತಮ-ಶ್ರೇಣಿಯ ಮರಳನ್ನು ಹಾಗೂ ಸಿಮೆಂಟ್ ಮತ್ತು ಮರಳನ್ನು ಹೆಚ್ಚು ಸೂಕ್ತವಾದ ಪ್ರಮಾಣದಲ್ಲಿ ಬಳಸಿ (1: 3 ರಿಂದ 1: 6). ಪ್ಲ್ಯಾಸ್ಟರ್ ಕಾಮಗಾರಿಯನ್ನು ಮುಗಿಸುವ ಸಮಯದಲ್ಲಿ ಅತಿಯಾದ ಟ್ರೋಲಿಂಗ್ ಅನ್ನು ತಪ್ಪಿಸಿ. ಮೇಲಿನ ಪದರವು ಕುಗ್ಗುವಿಕೆ ಆಗುವುದನ್ನು ತಪ್ಪಿಸಲು ಸಿಮೆಂಟ್ ಫಿನಿಶ್‌ಗಾಗಿ ಮಾಡುವ ಅತಿಯಾದ ಕೆಲಸವನ್ನು ತಪ್ಪಿಸಿ. ಪ್ಲಾಸ್ಟರ್ ಮೇಲ್ಮೈ ಕಾಮಗಾರಿ ಮುಗಿದ 30 ನಿಮಿಷಗಳ ನಂತರ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಚಿಮುಕಿಸಿ.


ಸೆಂಟರಿಂಗ್‌ಗಾಗಿ ನೀಡುವ ಆಧಾರಗಳನ್ನು (ಬ್ಯಾಲೀಸ್ / ಪ್ರಾಪ್ಸ್) ಸೂಕ್ತ ರೀತಿಯಲ್ಲಿ ಲಂಬವಾಗಿ ಇರಿಸಿ ಮತ್ತು ಅವುಗಳನ್ನು ಎರಡೂ ದಿಕ್ಕುಗಳಲ್ಲಿ ಬಿಗಿಗೊಳಿಸಿ. ಆಧಾರಗಳು ದೃಢವಾದ ತಳಹದಿಯನ್ನು ಹೊಂದಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಆಧಾರಗಳ ಮಧ್ಯದ ಅಂತರವು 1 ಮೀ ಮೀರಿರಬಾರದು ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಮಾಸ್ಟಿಕ್ ಟೇಪ್‌ನೊಂದಿಗೆ ಸೆಂಟರಿಂಗ್ ಫಲಕಗಳ ಸಂದುಗಳನ್ನು ಮುಚ್ಚಿರಿ. ಫಾರ್ಮ್‌ವರ್ಕ್‌ನ ಮೇಲ್ಮೈಯನ್ನು ಗ್ರೀಸ್ ಅಥವಾ ಶಟರ್ ಎಣ್ಣೆಯಿಂದ ನಯವಾಗಿ ಲೇಪಿಸಿ. ಕಾಂಕ್ರೀಟ್ ಹಾಕುವ ಮೊದಲು ಮರದ ಪುಡಿ, ಚಿಪ್ಪಿಂಗ್ ಮತ್ತು ಕಾಗದದ ತುಂಡುಗಳಂತಹ ಧೂಳಿನ ಕಣಗಳಿದ್ದಲ್ಲಿ ಅವುಗಳನ್ನು ಫಾರ್ಮ್‌ವರ್ಕ್‌ನಿಂದ ತೆಗೆದುಹಾಕಿ. ಫಾರ್ಮ್‌ವರ್ಕ್ ಅನ್ನು ತೆಗೆದುಹಾಕುವಾಗ ಈ ಆದೇಶವನ್ನು ಅನುಸರಿಸಿ - ಗೋಡೆಗಳು, ಬೀಮುಗಳು ಮತ್ತು ಕಾಲಮ್ ಬದಿಗಳ ಲಂಬ ಮುಖಗಳ ಶಟರಿಂಗ್ ಅನ್ನು ಮೊದಲು ತೆಗೆದುಹಾಕಿ ನಂತರ ಸ್ಲ್ಯಾಬುಗಳ ಕೆಳಭಾಗ ಮತ್ತು ಅದರ ನಂತರ ಬೀಮುಗಳ ಕೆಳಭಾಗವನ್ನು ತೆಗೆದುಹಾಕಿ. ಕಾಲಮ್, ಗೋಡೆಗಳು ಮತ್ತು ಬೀಮುಗಳ ಲಂಬ ಮುಖಗಳಿಗಾಗಿ ಹಾಕಿರುವ ಶಟರ್ ಅನ್ನು ಕನಿಷ್ಠ 24 ಗಂಟೆಗಳ ಕಾಲ ಇರಿಸಿ 4.5 ಮೀ ಸ್ಪಾನ್ ಇರುವ ಸ್ಲ್ಯಾಬುಗಳ ಆಧಾರವನ್ನು 7 ದಿನಗಳವರೆಗೆ ಇರಿಸಿ; 4.5 ಮೀ ಗಿಂತ ಹೆಚ್ಚಿನ ಸ್ಪಾನ್ ಇರುವ ಸ್ಲ್ಯಾಬುಗಳ ಆಧಾರವನ್ನು 14 ದಿನಗಳವರೆಗೆ ಇರಿಸಿ.


ಸರಿಯಾದ ಅಂಟಿಕೊಳ್ಳುವಿಕೆಯನ್ನು ಖಚಿತಪಡಿಕೊಳ್ಳುವ ಸಲುವಾಗಿ, ಬ್ಲಾಕ್ / ಇಟ್ಟಿಗೆಗಳನ್ನು ಗಾರೆಯ ಪೂರ್ಣ ಅಡಿಪಾಯದ ಮೇಲೆ ಇಟ್ಟು ಮತ್ತು ಅದನ್ನು ಸ್ವಲ್ಪ ಒತ್ತಿರಿ. ಮೇಲಿನ ಪದರವನ್ನು ಹೊರತುಪಡಿಸಿ ಇಟ್ಟಿಗೆಯನ್ನು ಫ್ರಾಗ್‌ಗಳು ಮೇಲಕ್ಕೆ ಮುಖ ಮಾಡಿರುವ ರೀತಿಯಲ್ಲಿ ಜೋಡಿಸಬೇಕು.  ಎಲ್ಲಾ ಬ್ಲಾಕ್ / ಇಟ್ಟಿಗೆ ಕೋರ್ಸ್‌ಗಳನ್ನು ಸೂಕ್ತ ರೀತಿಯಲ್ಲಿ ಅಡ್ಡಲಾಗಿ ಹಾಗೂ ಲಂಬವಾಗಿ ಇಡಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಲಂಬ ಸಂದಿಗಳನ್ನು ಒಂದೇ ಸಮನಾಗಿ ಇಡದೆ ಆ ಕಡೆ ಈ ಕಡೆ ಇರುವಂತೆ ಮಾಡಿ. ಸಂದುಗಳ ದಪ್ಪವು 10 ಮಿಲಿಮೀಟರ್‌ಗಿಂತ ಹೆಚ್ಚಿರಬಾರದು. ಪ್ಲ್ಯಾಸ್ಟರಿಂಗ್‌ಗೆ ಕೀಯನ್ನು ಒದಗಿಸಲು ಸಂದುಗಳನ್ನು 12 ಮಿಲಿಮೀಟರ್ ಆಳದಷ್ಟು ಕೆರೆಯಬೇಕು. 1: 6 ಅನುಪಾತದಲ್ಲಿ ಸಿಮೆಂಟ್ ಗಾರೆಯನ್ನು ಬಳಸಿ ಗಾರೆ ಕೆಲಸದ / ಕಲ್ಲು ಕೆಲಸದ ನಿರ್ಮಾಣದ ಎತ್ತರವು ದಿನಕ್ಕೆ 1 ಮೀ ಗಿಂತ ಹೆಚ್ಚಿರಬಾರದು. ಗಾರೆ ಕಾಮಗಾರಿ / ಕಲ್ಲಿನ ಕಾಮಗಾರಿಯಿಂದ ಕಟ್ಟುವ ಅರ್ಧ ಬ್ಲಾಕ್ / ಇಟ್ಟಿಗೆ ವಿಭಜನಾ ಗೋಡೆಗಳಲ್ಲಿ ಪ್ರತಿ 4 ನೇ ಕೋರ್ಸ್‌ನಲ್ಲಿ 6 ಮಿಲಿಮೀಟರ್‌ಗಳಷ್ಟು ಇರುವ ರಿಬಾರ್‌ಗಳನ್ನು ಸೇರಿಸಿ. ಬ್ಲಾಕ್ / ಇಟ್ಟಿಗೆ ಕಾಮಗಾರಿಯನ್ನು ಕನಿಷ್ಠ 10 ದಿನಗಳವರೆಗೆ ಕ್ಯೂರಿಂಗ್ ಮಾಡಿ.


ಏಕರೂಪದ ಆಕಾರ, ಗಾತ್ರ ಮತ್ತು ಬಣ್ಣವನ್ನು ಹೊಂದಿರುವ ಚೆನ್ನಾಗಿ ಸುಟ್ಟ ಜೇಡಿಮಣ್ಣಿನ ಇಟ್ಟಿಗೆಗಳನ್ನು ಬಳಸಿ. ಇಟ್ಟಿಗೆಗಳನ್ನು ಒಂದರ ಮೇಲೊಂದು ಹೊಡೆದಾಗ ಲೋಹೀಯ ರಿಂಗಿಂಗ್ ಶಬ್ದವನ್ನು ಉಂಟುಮಾಡಬೇಕು ಮತ್ತು ಬೆರಳಿನಿಂದ ಮಾಡಬಹುದಾದ ಉಗುರು ಗೀರುಗಳನ್ನು ವಿರೋಧಿಸುವಷ್ಟು ಗಟ್ಟಿಯಾಗಿರಬೇಕು. ನೀರಿನಲ್ಲಿ ಮುಳುಗಿಸಿದ ಒಂದು ಗಂಟೆಯ ನಂತರ ಅದರ ತೂಕದ ಆರನೇ ಒಂದು ಭಾಗಕ್ಕಿಂತ ಹೆಚ್ಚಿನ ನೀರನ್ನು ಹೀರಿಕೊಳ್ಳಬಾರದು ಇಟ್ಟಿಗೆಗಳನ್ನು ಬಳಸುವ ಮೊದಲು ಕನಿಷ್ಠ ಎಂಟು ಗಂಟೆಗಳ ಕಾಲ ನೀರಿನಲ್ಲಿ ಸಮರ್ಪಕವಾಗಿ ನೆನೆಸಿಡಿ, 3 - 4 ಅಡಿ ಎತ್ತರದಿಂದ ಬೀಳಿಸಿದಾಗ ಅದು ಮುರಿಯಬಾರದು.


ಕಾಂಕ್ರೀಟ್ ಬ್ಲಾಕ್‌ಗಳು 

ಕಾಂಕ್ರೀಟ್ ಬ್ಲಾಕ್‌ಗಳನ್ನು ಅದರ ವೆಚ್ಚವನ್ನು ಗಮನದಲ್ಲಿರಿಸಿಕೊಂಡು ಪರಿಣಾಮಕಾರಿಯಾಗಿ ಬಳಸಿ, ಮತ್ತು ವೇಗವಾದ ನಿರ್ಮಾಣ ಪ್ರಕ್ರಿಯೆ, ಫ್ಲೋರ್ ವಿಸ್ತೀರ್ಣ ಮತ್ತು ಪರಿಸರ ಸ್ನೇಹಪರತೆಯನ್ನು ಸಾಧ್ಯವಾಗಿಸಿ. ಅವುಗಳು ಧ್ವನಿ, ಶಾಖ ಮತ್ತು ತೇವದ ವಿರುದ್ಧ ಉತ್ತಮ ನಿರೋಧಕ ಶಕ್ತಿಯನ್ನು ಒದಗಿಸುತ್ತವೆ. ಕಾಂಕ್ರೀಟ್ ಬ್ಲಾಕ್‌ಗಳ ಒರಟು ಮೇಲ್ಮೈಗಳು ಪ್ಲಾಸ್ಟರ್ ಮಾಡಲು ಉತ್ತಮ ಬಂಧವನ್ನು ಒದಗಿಸುತ್ತದೆ. ಕಾಂಕ್ರೀಟ್ ಬ್ಲಾಕ್‌ಗಳ ಬಳಕೆಯು ಕಡಿಮೆ ಸಂಖ್ಯೆಯ ಸಂದುಗಳಿಂದಾಗಿ ಗಾರೆಯ ಉಳಿತಾಯಕ್ಕೆ ಕಾರಣವಾಗುತ್ತದೆ


ಅನುಮೋದಿತ ರಾಸಾಯನಿಕಗಳನ್ನು ಬೆರೆಸಿದ ನೀರಿನ ಎಮಲ್ಷನ್ ಅನ್ನು ಬಳಸಿ ಮೇಲ್ಪಾಯದ ಹಂತದವರೆಗಿನ ಮಣ್ಣನ್ನು ಸಂಸ್ಕರಿಸಿ ಟ್ರೀಟ್‌ಮೆಂಟ್‌ ಅನ್ನು ಕೈಗೊಳ್ಳಲು ವಿಶೇಷ ಏಜೆನ್ಸಿಯನ್ನು ನೇಮಿಸಿ, ಏಕೆಂದರೆ ಇದು ಒಂದು ವಿಶೇಷವಾದ ಕೆಲಸವಾಗಿರುತ್ತದೆ. ಗೋಡೆಗಳು ಮತ್ತು ನೆಲದ ಜಂಕ್ಷನ್‌ನಲ್ಲಿ ಮಣ್ಣಿನ ಅಡಿಪಾಯ ಕಂದಕಗಳಲ್ಲಿ (ನೆಲ ಮಟ್ಟ ಮತ್ತು ಬದಿಗಳು), ಮೇಲ್ಪಾಯದ ಭರ್ತಿ, ಇತ್ಯಾದಿಗಳಿಗೆ ಟ್ರೀಟ್‌ಮೆಂಟ್ ನೀಡಿ. ಟ್ರೀಟ್‌ಮೆಂಟ್‌ನ ಎಲ್ಲಾ ಹಂತಗಳಲ್ಲಿ ಶಿಫಾರಸು ಮಾಡಲಾದ ಡೋಸೇಜ್‌ಗಳನ್ನು ಸಿಂಪಡಿಸುವ ಮೂಲಕ ರಾಸಾಯನಿಕ ಎಮಲ್ಷನ್ ಅನ್ನು ಏಕಪ್ರಕಾರವಾಗಿ ಬಳಸಿ. ಸಂಸ್ಕರಿಸಬೇಕಾದ ಮೇಲ್ಮೈಗಳನ್ನು ಅವಲಂಬಿಸಿ, ರಾಸಾಯನಿಕ ಎಮಲ್ಷನ್ ಟ್ರೀಟ್‌ಮೆಂಟ್ ಅನ್ನು 5–7 ಲೀಟರ್ / ಚದರ ಮೀಟರ್‌ವರೆಗಿನ ವಿಸ್ತೀರ್ಣಕ್ಕೆ ನೀಡಲಾಗುತ್ತದೆ. ರಾಸಾಯನಿಕ ತಡೆಗೋಡೆಯು ಸಂಪೂರ್ಣ ಹಾಗೂ ನಿರಂತರವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಉಪಯೋಗಿಸುವ ಸಮಯದಲ್ಲಿ ರಾಸಾಯನಿಕಗಳು ಬಾವಿಗಳು ಅಥವಾ ಬುಗ್ಗೆಗಳು ಮತ್ತು ಇತರ ಕುಡಿಯುವ ನೀರಿನ ಮೂಲಗಳನ್ನು ಕಲುಷಿತಗೊಳಿಸದಂತೆ ನೋಡಿಕೊಳ್ಳಬೇಕು 


ಡ್ಯಾಂಪ್ ಪ್ರೂಫ್ ಕೋರ್ಸ್ (DPC) ಎನ್ನುವುದು ಗೋಡೆಯ ಕೆಳಭಾಗ ಮತ್ತು ಅಡಿಪಾಯದ ಮೇಲ್ಭಾಗದ ನಡುವಿನ ಸಮತಲ ತಡೆಗೋಡೆಯಾಗಿದ್ದು, ಅಡಿಪಾಯದಿಂದ ಯಾವುದೇ ತೇವಾಂಶವು ಮೇಲಕ್ಕೆ ಏರುವುದನ್ನು ತಡೆಯುವಂತೆ ವಿನ್ಯಾಸಗೊಳಿಸಲಾಗಿರುತ್ತದೆ ಶಿಫಾರಸು ಮಾಡಲಾದ ಡೋಸೇಜ್‌ ಉಪಯೋಗಿಸಿದ ಹಾಗೂ ಸೂಕ್ತವಾದ ವಾಟರ್ ಪ್ರೂಫಿಂಗ್ ಸಂಯುಕ್ತದೊಂದಿಗೆ ಬೆರೆಸಿದ, 1:1.5:3 ರ ಅನುಪಾತದಲ್ಲಿ ತಯಾರಾದ 25 ಮಿಲಿಮೀಟರ್ ದಪ್ಪದ ಸಿಮೆಂಟ್ ಕಾಂಕ್ರೀಟ್ ಅನ್ನು ಬಳಸಿ. ನೆಲದಿಂದ ಮೇಲಕ್ಕೆ ಬರಬಹುದಾದ ಯಾವುದೇ ನೀರು ತಲುಪಲು ಸಾಧ್ಯವಾಗದ ಮಟ್ಟದಲ್ಲಿ DPC ಯನ್ನು ಒದಗಿಸಿ. DPC ಯು ನೆಲದ ಗರಿಷ್ಠ ಮಟ್ಟಕ್ಕೆ ಹೋಲಿಸಿದಲ್ಲಿ 15 ಸೆಂಟಿಮೀಟರ್ ಎತ್ತರಕ್ಕಿಂತ ಕಡಿಮೆಯಿರಬಾರದು.


ಯಾವುದೇ ಚಲನೆಯು ಆಗದಂತೆ ನೋಡಿಕೊಳ್ಳಲು, ಉತ್ತಮ ಅಡಿಪಾಯವು ಮುಖ್ಯವಾಗುತ್ತದೆ - ಯಾವುದೇ ಚಲನೆ ಅಥವಾ ಕುಸಿತವು ಗೋಡೆಗಳಲ್ಲಿನ ಬಿರುಕುಗಳಿಗೆ ಕಾರಣವಾಗುತ್ತದೆ. ಅಡಿಪಾಯವನ್ನು ದೃಢವಾದ ಮಣ್ಣಿನವರೆಗೂ ತೆಗೆದುಕೊಂಡು ಹೋಗಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಸಾಮಾನ್ಯ ಮಣ್ಣಿನಲ್ಲಿ ಅಡಿಪಾಯದ ಆಳವು ಕನಿಷ್ಠ 1.2 ಮೀ (4 ಅಡಿ) ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕಪ್ಪು ಹತ್ತಿ (ಹಿಗ್ಗುವ) ಮಣ್ಣಿನಲ್ಲಿ, ಅಡಿಪಾಯದ ಆಳವು ಮಣ್ಣಿನಲ್ಲಿನ ಬಿರುಕುಗಳಿಗಿಂತ ಕೆಳಗೆ 15 ಸೆಂಟಿಮೀಟರ್‌ ಇರಬೇಕು. ಅಂತಹ ಮಣ್ಣಿನಲ್ಲಿ ಫುಟಿಂಗ್ ಸುತ್ತಲೂ ಮತ್ತು ಅದರ ಕೆಳಗೆ ಒಂದು ಮರಳಿನ ಪದರವನ್ನು ಹಾಕಬೇಕಾಗುತ್ತದೆ. ಫುಟಿಂಗ್ ಕೆಳಗಿನ ಕೋರ್ಸ್‌ನ ಅಗಲವು ಗೋಡೆಯ ದಪ್ಪಕ್ಕಿಂತ ಎರಡು ಪಟ್ಟಿಗಿಂತ ಕಡಿಮೆಯಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕೆಳಗಿನ ಕೋರ್ಸ್ಗಿಂತ ಕೆಳಗೆ ಕನಿಷ್ಠ 12 ಸೆಂಟಿಮೀಟರ್ ದಪ್ಪವಿರುವ ಸರಳ ಕಾಂಕ್ರೀಟ್ ಅಡಿಪಾಯವನ್ನು (1: 3: 6 ಅನುಪಾತದಲ್ಲಿ) ಹಾಕಿರಿ.


ಹೊಸ ಗೋಡೆಗಳಿಗೆ ಅಡಿಪಾಯವನ್ನು ಸೂಕ್ತವಾದ ರೀತಿಯಲ್ಲಿ ಗುರುತು ಮಾಡುವುದನ್ನು ಖಚಿತಪಡಿಸಿಕೊಳ್ಳಿ, ಇದರಿಂದಾಗಿ ಅವು ಸರಿಯಾದ ಗಾತ್ರದಲ್ಲಿರುತ್ತವೆ ಮತ್ತು ಗೋಡೆಯ ಭಾರವನ್ನು ಹೊರಲು ಸರಿಯಾದ ಸ್ಥಾನದಲ್ಲಿರುತ್ತವೆ ಎಂಜಿನಿಯರ್ರವರಿಂದ ಲೇಔಟ್ ಯೋಜನೆ / ಸೆಂಟರ್-ಲೈನ್ ನಕ್ಷೆಯನ್ನು ಪಡೆದುಕೊಳ್ಳಿ ಹಾಗೂ ಕಟ್ಟಡದ ಹೊರಗಿನ ಅತಿ ಉದ್ದದ ಗೋಡೆಯ ಮಧ್ಯ-ರೇಖೆಯಲ್ಲಿ ನೆಲದಲ್ಲಿ ಹೂಳುವ ಗೂಟಗಳ ನಡುವಿನ ಆಕಾರ ಸೂಚಕ ರೇಖೆಯಾಗಿ ಸ್ಥಾಪಿಸಿಕೊಳ್ಳಿ. ಗೋಡೆಗಳ ಮಧ್ಯದ ರೇಖೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಕಂದಕಗಳ ಉತ್ಖನನ ರೇಖೆಗಳನ್ನು ಗುರುತಿಸಿಕೊಳ್ಳಿ. ಮಾಡಿದ ಉತ್ಖನನವು ಮಟ್ಟಗಳು, ಇಳಿಜಾರು, ಆಕಾರ ಮತ್ತು ಮಾದರಿಗೆ ಪೂರಕವಾಗಿ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನೀರುಹಾಕುವುದು ಮತ್ತು ದಮ್ಮಸ್ಸು ಮಾಡುವ ಮೂಲಕ ಉತ್ಖನನದ ಅಡಿಪಾಯವನ್ನು ಕ್ರೋಢೀಕರಿಸಿ. ಮೃದುವಾದ ಅಥವಾ ದೋಷಯುಕ್ತ ಜಾಗಗಳನ್ನು ಅಗೆದು ಕಾಂಕ್ರೀಟ್ ತುಂಬಿಸಬೇಕಾಗುತ್ತದೆ. ಆಳವಾದ ಉತ್ಖನನಗಳಲ್ಲಿ, ಅದರ ಬದಿಗಳು ಕುಸಿಯುವುದನ್ನು ತಪ್ಪಿಸಲು, ಬಿಗಿಯಾದ ಶೋರಿಂಗ್ ಮೂಲಕ ಗಟ್ಟಿಯಾಗಿ ಜೋಡಿಸಿ 


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ