ಮನೆ ಕನ್‌ಸ್ಟ್ರಕ್ಷನ್‌ ಸಲಹೆಗಳು

Home Building Tips Banner

ಅಸಹ್ಯವಾದ ಬಿರುಕುಗಳು ಹೊಂದಿರುವ ವಾಲ್ ಪ್ಲ್ಯಾಸ್ಟರ್‌ಗಳು ಮತ್ತು ಹಾಳಾದ ಒಳಾಂಗಣ / ಬಾಹ್ಯ ಫಿನಿಶ್‌ಗಳು ಸಾಮಾನ್ಯವಾಗಿರುತ್ತವೆ. ನೀವು ಅದನ್ನು ಹೇಗೆ ತಪ್ಪಿಸಬಹುದು ಎನ್ನುವುದು ಇಲ್ಲಿದೆ:

 • ಸರಿಯಾಗಿ ಅಂಟಿಕೊಳ್ಳದೇ ಇರುವ ಕಾರಣ ಪ್ಲಾಸ್ಟರ್ ಮಾಡಿದ ಮೇಲ್ಮೈಗಳಲ್ಲಿ ಬಿರುಕುಗಳನ್ನು ಉಂಟಾಗುತ್ತವೆ ಹಾಗೂ ಕೆಲವೊಮ್ಮೆ ಒಡೆದು ಒಳಗಾಗುತ್ತವೆ.
 • ಅಂಟಿಕೊಳ್ಳುವಿಕೆಯನ್ನು ಖಾತ್ರಿಪಡಿಸುವ ಸಲುವಾಗಿ ಮೇಲ್ಮೈಯನ್ನು ಸೂಕ್ತ ರೀತಿಯಲ್ಲಿ ತಯಾರಿಸುವುದು ಪ್ರಮುಖ ಪಾತ್ರ ವಹಿಸುತ್ತದೆ. ಮೇಲ್ಮೈಯು ಯಾವುದೇ ಸಡಿಲವಾದ ಕಣಗಳು, ಧೂಳು ಇತ್ಯಾದಿಗಳಿಂದ ಮುಕ್ತವಾಗಿರಬೇಕು ಹಾಗೂ ಇಟ್ಟಿಗೆಗಳು / ಬ್ಲಾಕ್‌ಗಳ ನಡುವಿನ ಸಂದುಗಳನ್ನು ಸರಿಯಾಗಿ ಕೆರೆದಿರಬೇಕು.
 • ಸಮೃದ್ಧವಾದ ಮತ್ತು ದುರ್ಬಲ ಮಿಶ್ರಣಗಳು ಬಿರುಕುಗಳನ್ನು ಹೆಚ್ಚಿಸುವ ಸಾಧ್ಯತೆ ಹೊಂದಿರುವುದರಿಂದ ಪ್ಲ್ಯಾಸ್ಟರಿಂಗ್‌ ಮಾಡುವ ಸಲುವಾಗಿ ತೆಳು ಮಿಶ್ರಣಗಳಿಗೆ ಆದ್ಯತೆ ನೀಡಲಾಗುತ್ತದೆ.
 • ಸಾಮಾನ್ಯವಾಗಿ, ಎರಡು ಲೇಪನಗಳ ನಡುವೆ ಸಾಕಷ್ಟು ಸಮಯವನ್ನು ಇರುವಂತೆ ನೋಡಿಕೊಂಡು ಪ್ಲ್ಯಾಸ್ಟರಿಂಗ್ ಮಾಡುವುದು ಉತ್ತಮ.

ಉತ್ತಮವಾಗಿ ತಯಾರಿಸಿದ ಕಾಂಕ್ರೀಟ್ ಅನ್ನು ಸ್ಥಳದಲ್ಲಿ ಸೂಕ್ತವಾಗಿ ಕಾಂಪ್ಯಾಕ್ಟ್‌ ಮಾಡದಿದ್ದಲ್ಲಿ ಹಾಗೂ ಸಮರ್ಪಕವಾಗಿ ಕ್ಯೂರ್‌ ಮಾಡದೇ ಇದ್ದಲ್ಲಿ ಅದು ವ್ಯರ್ಥವಾಗಬಹುದು. ನೀವು ಕಾಂಪ್ಯಾಕ್ಟ್‌ ಅನ್ನು ಸೂಕ್ತ ರೀತಿಯಲ್ಲಿ ಹೇಗೆ ಮಾಡಬೇಕು ಎನ್ನುವುದು ಇಲ್ಲಿದೆ:

 • ಅಸಮರ್ಪಕ ಕಾಂಪ್ಯಾಕ್ಶನ್‌ನಿಂದಾಗಿ ಉಂಟಾಗುವ ಟೊಳ್ಳು ಸ್ಥಳಗಳು ದೃಢತ್ವವನ್ನು ಕಡಿಮೆ ಮಾಡುತ್ತವೆ ಹಾಗೂ ಇದು ಬಾಳಿಕೆಯನ್ನು ಕಡಿಮೆ ಮಾಡಬಹುದು.
 • ಅತಿಯಾಗಿ ಕಾಂಪ್ಯಾಕ್ಶನ್‌ ಮಾಡಿದಲ್ಲಿ ಸಿಮೆಂಟ್ ಪೇಸ್ಟ್ ಬೇರ್ಪಡಲು ಮತ್ತು ಚಲಿಸುವಿಕೆಗೆ ಕಾರಣವಾಗುತ್ತದೆ, ಹಾಗಾಗಿ ಅದು ದುರ್ಬಲಗೊಳ್ಳುತ್ತದೆ.
 • ಪರಿಣಾಮಕಾರಿಯಾದ ಕಾಂಪ್ಯಾಕ್ಶನ್‌ ಮಾಡಿದಲ್ಲಿ ಮಿಶ್ರಣಗಳು ಸೂಕ್ತ ರೀತಿಯಲ್ಲಿ ಪ್ಯಾಕಿಂಗ್‌ ಆಗುವುದಕ್ಕೆ ಕಾರಣವಾಗುತ್ತದೆ, ಇದು ದೃಢವಾದ ಕಾಂಕ್ರೀಟ್‌ಗೆ ಕಾರಣವಾಗುತ್ತದೆ.
 • ಕ್ಯೂರಿಂಗ್ ಮೊದಲೇ ಪ್ರಾರಂಭಿಸಬೇಕು ಹಾಗೂ ಅದರಿಂದಾಗಿ ಅಪೇಕ್ಷಿತ ದೃಢತೆಯು ಅಭಿವೃದ್ಧಿಯಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ಬಿರುಕು ಬಿಡುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಅವಧಿಯವರೆಗೆ ಕ್ಯೂರಿಂಗ್ ಅನ್ನು ಮುಂದುವರಿಸಬೇಕಾಗುತ್ತದೆ.
 • ಬಿಟ್ಟು ಬಿಟ್ಟು ಕ್ಯೂರಿಂಗ್ ಮಾಡುವುದನ್ನು ತಪ್ಪಿಸಿ, ಏಕೆಂದರೆ ಇದರಿಂದಾಗಿ ಹಾನಿ ಉಂಟಾಗುತ್ತದೆ.

ಬಲವರ್ಧನೆಯನ್ನು ನೀಡುವ ಕಂಬಿಗಳು RCC ಯ ಒಂದು ಪ್ರಮುಖ ಭಾಗವಾಗಿದೆ. RCC ಯ ಘಟಕಗಳಲ್ಲಿ ಉಂಟಾಗಬಹುದಾದ ಬಿರುಕು ಅಥವಾ ನಾಶವನ್ನು ತಡೆಗಟ್ಟಲು ಸೂಕ್ತವಾದ ಕಬ್ಬಿಣವನ್ನು ಆರಿಸುವುದು ಮತ್ತು ಅದನ್ನು ಸರಿಯಾದ ರೀತಿಯಲ್ಲಿ ಜೋಡಿಸುವುದು ಮುಖ್ಯವಾಗುತ್ತದೆ.

 • ನೀವು ಕಬ್ಬಿಣವನ್ನು ಸಂಗ್ರಹಿಸುವ ಸಮಯದಲ್ಲಿ, ಅದನ್ನು ಹೆಸರಾಂತ ಉತ್ಪಾದಕರಿಂದ ಪಡೆಯುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
 • ತಪ್ಪಾದ ರೀತಿಯಲ್ಲಿ ಇರಿಸಲಾಗುವ ಬಲವರ್ಧನೆಯ ಕಂಬಿಗಳು ನಿಷ್ಪರಿಣಾಮಕಾರಿಯಾಗಿರುತ್ತವೆ ಮತ್ತು RCC ಘಟಕಗಳ ವೈಫಲ್ಯಕ್ಕೆ ಕಾರಣವಾಗುತ್ತವೆ.
 • ಕಂಬಿಗಳನ್ನು ಸೇರಿಸುವಾಗ, ಸಾಕಷ್ಟು ಲ್ಯಾಪ್ ಉದ್ದವನ್ನು ಕಾಪಾಡಿಕೊಳ್ಳಬೇಕು ಮತ್ತು ಲ್ಯಾಪ್‌ಗಳನ್ನು ಬೇರೆ ಬೇರೆ ಜಾಗದಲ್ಲಿ ಇಡಬೇಕು.
 • ಬಲವರ್ಧನೆಯ ಕಂಬಿಗಳ ಒತ್ತೊತ್ತಾಗಿ ಇಲ್ಲದಿರುವಂತೆ ಹಾಗೂ ಕಂಬಿಗಳ ನಡುವೆ ಸಾಕಷ್ಟು ಕಾಂಕ್ರೀಟ್ ತುಂಬಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ದುರ್ಬಲ ಮತ್ತು ಅಸ್ಥಿರ ಸೆಂಟರಿಂಗ್ ಹಾಗೂ ಫಾರ್ಮ್‌ವರ್ಕ್ ಕಾರಣದಿಂದ ಸಾಮಗ್ರಿಯ ನಷ್ಟ ಹಾಗೂ ಹೆಚ್ಚುವರಿ ಗಾಯಗಳು / ಪ್ರಾಣಹಾನಿಗಳು ಉಂಟಾಗಬಹುದು. ಸೆಂಟರಿಂಗ್ ಹಾಗೂ ಫಾರ್ಮ್‌ವರ್ಕ್ ಅನ್ನು ಹೇಗೆ ಮಾಡಬೇಕು ಎನ್ನುವುದು ಇಲ್ಲಿದೆ:

 • ತಾಜಾ ಕಾಂಕ್ರೀಟ್ ಗಟ್ಟಿಯಾಗುವವರೆಗೆ ಅದನ್ನು ಹಿಡಿದಿಟ್ಟುಕೊಳ್ಳಲು ಸೆಂಟರಿಂಗ್ ಬಲವಾಗಿರಬೇಕು.:
 • ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ, ಸೆಂಟರಿಂಗ್ ಅನ್ನು ಸಮರ್ಪಕವಾಗಿ ನಿರ್ದಿಷ್ಟ ಅಂತರಗಳಲ್ಲಿ ಆಧಾರಗಳನ್ನು ನೀಡಿ ಸೂಕ್ತ ರೀತಿಯಲ್ಲಿ ಬಿಗಿಪಡಿಸುವಿಕೆಯ ಮೂಲಕ ಹಿಡಿದಿಡಬೇಕಾಗುತ್ತದೆ.
 • ಗಾರೆ ಮಿಶ್ರಣದ ಸೋರಿಕೆಯನ್ನು ತಡೆಗಟ್ಟುವ ಸಲುವಾಗಿ ಸೆಂಟರಿಂಗ್‌ನಲ್ಲಿ ಉಪಯೋಗಿಸಿರುವ ಶೀಟ್‌ಗಳ ನಡುವಿನ ಅಂತರವನ್ನು ಸೂಕ್ತ ರೀತಿಯಲ್ಲಿ ಮುಚ್ಚಬೇಕು, ಇಲ್ಲದಿದ್ದರೆ ಹನೀ ಕೂಂಬ್ದ್ ಕಾಂಕ್ರೀಟ್ ಉಂಟಾಗುತ್ತದೆ.

ನಿಮ್ಮ ಮನೆಯ ಗೋಡೆಗಳು ಬಲವಾಗಿ ಮತ್ತು ಗಟ್ಟಿಮುಟ್ಟಾಗಿಲ್ಲದಿದ್ದಲ್ಲಿ ಅದನ್ನು ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ. ನೀವು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು:

 • ಇಟ್ಟಿಗೆ / ಬ್ಲಾಕ್‌ಗಳನ್ನು ಪೂರ್ಣವಾಗಿ ಹರಡಿದ ಗಾರೆಯ ಮೇಲೆ ಇರಿಸಬೇಕಾಗುತ್ತದೆ.
 • ಜೋಡಣೆಗಳನ್ನು ಸಂಪೂರ್ಣವಾಗಿ ಗಾರೆಯಿಂದ ತುಂಬಿಸಬೇಕು.
 • ಲಂಬ ಜೋಡಣೆಗಳು ಬೇರೆ ಬೇರೆ ಜಾಗದಲ್ಲಿರಬೇಕು.
 • ಇಟ್ಟಿಗೆ ಕೆಲಸವನ್ನು ಬಲಪಡಿಸುವ ಸಲುವಾಗಿ ಚೆನ್ನಾಗಿ ಕ್ಯೂರಿಂಗ್ ಮಾಡಬೇಕು

ಕಳಪೆ ಗುಣಮಟ್ಟದ ಜಲ್ಲಿ ಕಲ್ಲುಗಳು ಕೆಳ ದರ್ಜೆಯ ಕಾಂಕ್ರೀಟ್‌ಗೆ ಕಾರಣವಾಗುತ್ತದೆ, ಇದರಿಂದಾಗಿ ರಚನೆಯ ಬಾಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸೂಕ್ತ ಪಾಯಿಂಟರ್‌ಗಳು ಇಲ್ಲಿವೆ:

 • ಉಪಯೋಗಿಸುವ ಜಲ್ಲಿಕಲ್ಲುಗಳು ಕಠಿಣ, ಬಲವಾದ, ರಾಸಾಯನಿಕವಾಗಿ ಜಡವಾದ ಹಾಗೂ ಹಾನಿಕಾರಕ ವಸ್ತುಗಳಿಂದ ಮುಕ್ತವಾಗಿರಬೇಕು.
 • ಉದುರುವಂತಹ ಹಾಗೂ ಉದ್ದವಾದ ಅಗ್ರಿಗೇಟ್‌ಗಳು / ಜಲ್ಲಿಕಲ್ಲುಗಳು ಹೆಚ್ಚಿನ ಪ್ರಮಾಣದಲ್ಲಿ ಇದ್ದಲ್ಲಿ, ಅದು ಕಾಂಕ್ರೀಟ್ ಬಲವು ಕಡಿಮೆ ಆಗಲು ಕಾರಣವಾಗುತ್ತದೆ.
 • ಘನ ಮತ್ತು ಒರಟಾದ ರಚನೆಯನ್ನು ಹೊಂದಿದ ಜಲ್ಲಿಕಲ್ಲುಗಳಿಗೆ ಇತರ ಮಾದರಿಗಳಿಗಿಂತ ಆದ್ಯತೆ ನೀಡಲಾಗುತ್ತದೆ.
 • ಉಪಯೋಗಿಸುವ ಮರಳು, ಹೂಳು, ಜೇಡಿಮಣ್ಣಿನ ಉಂಡೆಗಳು, ಮೈಕಾ ಇತ್ಯಾದಿಗಳಿಂದ ಮುಕ್ತವಾಗಿರಬೇಕು. 
 •  ಯಾವುದೇ ಜಲ್ಲಿಕಲ್ಲುಗಳನ್ನು ಅತಿಯಾದ ಪ್ರಮಾಣದಲ್ಲಿ ಉಪಯೋಗಿಸುವುದರಿಂದ, ಕಾಂಕ್ರೀಟ್‌ನ ಸೆಟ್ಟಿಂಗ್, ಗಟ್ಟಿಯಾಗುವಿಕೆ, ದೃಢತೆ ಮತ್ತು ಬಾಳಿಕೆಗೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಸಿಮೆಂಟ್ ತೇವಾಂಶಕ್ಕೆ ಹೆಚ್ಚು ಸೂಕ್ಷ್ಮತೆಯನ್ನು ಹೊಂದಿರುತ್ತದೆ. ತೇವಾಂಶಕ್ಕೆ ಒಡ್ಡಿಕೊಂಡಲ್ಲಿ, ಅದು ಗಟ್ಟಿಯಾಗುತ್ತದೆ ಸಿಮೆಂಟ್ ಅನ್ನು ಹೇಗೆ ಸಂಗ್ರಹಿಸಿಡಬೇಕು ಎನ್ನುವುದು ಇಲ್ಲಿದೆ:

 • ಸಿಮೆಂಟ್ ಅನ್ನು ನೀರು ಬಾರದಂತಹ ಶೆಡ್‌ಗಳಲ್ಲಿ / ಕಟ್ಟಡಗಳಲ್ಲಿ ಸಂಗ್ರಹಿಸಿಡಬೇಕು.
 • ನಿವೇಶನಗಳಲ್ಲಿ ತಾತ್ಕಾಲಿಕ ಸಂಗ್ರಹಣೆಗಾಗಿ, ಸಿಮೆಂಟ್ ಚೀಲಗಳನ್ನು ಎತ್ತರಿಸಿದ ಒಣ ವೇದಿಕೆಯ ಮೇಲೆ ಜೋಡಿಸಿಡಬೇಕು ಹಾಗೂ ಟಾರ್ಪಾಲಿನ್ / ಪಾಲಿಥೀನ್ ಹಾಳೆಗಳಿಂದ ಮುಚ್ಚಬೇಕು.

ಗೆದ್ದಲು ಮುತ್ತಿಕೊಳ್ಳುವಿಕೆಯು ನಿರ್ಮಿತಿಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಮರದ ಮೇಲ್ಮೈಗಳನ್ನು ಹಾನಿಗೊಳಿಸುತ್ತದೆ. ನಿರ್ಮಾಣ ಕಾರ್ಯ ಪ್ರಾರಂಭವಾಗುವ ಮೊದಲೇ ಗೆದ್ದಲು-ವಿರೋಧಿ ಕ್ರಮವನ್ನು ಪ್ರಾರಂಭಿಸಬೇಕು. ನಿಮ್ಮ ಮನೆಯನ್ನು ಗೆದ್ದಲುಗಳಿಂದ ಮುಕ್ತವಾಗಿರಿಸಲು ನೀವು ತಿಳಿದುಕೊಳ್ಳಬೇಕಾದ ವಿವರಗಳು ಇಲ್ಲಿದೆ:

 • ಸೂಕ್ತ ರಾಸಾಯನಿಕಗಳನ್ನು ಉಪಯೋಗಿಸಿ ಅಡಿಪಾಯದ ಸುತ್ತಲಿನ ಮಣ್ಣನ್ನು ಮೇಲ್ಪಾಯದ ಹಂತದವರೆಗೆ ಸಂಸ್ಕರಿಸಬೇಕು.
 • ರಾಸಾಯನಿಕ ತಡೆಗೋಡೆಯು ನಿರಂತರವಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ಇರಬೇಕು.
 • ನಿರ್ಮಾಣದ ವಿವಿಧ ಹಂತಗಳಲ್ಲಿ, ಅಂದರೆ ನಿರ್ಮಾಣ ಪೂರ್ವ, ನಿರ್ಮಾಣದ ಸಮಯದಲ್ಲಿ ಹಾಗೂ ನಿರ್ಮಾಣ ಪೂರ್ಣಗೊಂಡ ನಂತರದಲ್ಲಿ ಕ್ರಮವನ್ನು ಕೈಗೊಳ್ಳುವುದು ಒಳ್ಳೆಯದು.
 • ರಾಸಾಯನಿಕಗಳು ಮನೆಬಳಕೆಯ ನೀರಿನ ಮೂಲಗಳನ್ನು ಕಲುಷಿತಗೊಳಿಸದಂತೆ ಜಾಗ್ರತೆ ವಹಿಸಬೇಕು.

 • ಹೊಸ ಗೋಡೆಗಳಿಗೆ ಅಡಿಪಾಯವನ್ನು ಸೂಕ್ತವಾದ ರೀತಿಯಲ್ಲಿ ಗುರುತು ಮಾಡುವುದನ್ನು ಖಚಿತಪಡಿಸಿಕೊಳ್ಳಿ, ಇದರಿಂದಾಗಿ ಅವು ಸರಿಯಾದ ಗಾತ್ರದಲ್ಲಿರುತ್ತವೆ ಮತ್ತು ಗೋಡೆಯ ಭಾರವನ್ನು ಹೊರಲು ಸರಿಯಾದ ಸ್ಥಾನದಲ್ಲಿರುತ್ತವೆ
 • ಎಂಜಿನಿಯರ್‌ಗಳಿಂದ ಲೇಔಟ್ ಯೋಜನೆ / ಸೆಂಟರ್-ಲೈನ್ ನಕ್ಷೆಯನ್ನು ಪಡೆದುಕೊಳ್ಳಿ ಹಾಗೂ ಕಟ್ಟಡದ ಹೊರಗಿನ ಅತಿ ಉದ್ದದ ಗೋಡೆಯ ಮಧ್ಯ-ರೇಖೆಯಲ್ಲಿ ನೆಲದಲ್ಲಿ ಹೂಳುವ ಗೂಟಗಳ ನಡುವಿನ ಆಕಾರ ಸೂಚಕ ರೇಖೆಯಾಗಿ ಸ್ಥಾಪಿಸಿಕೊಳ್ಳಿ.
 • ಗೋಡೆಗಳ ಮಧ್ಯದ ರೇಖೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಗುಂಡಿಗಳ ಉತ್ಖನನ ರೇಖೆಗಳನ್ನು ಗುರುತಿಸಿಕೊಳ್ಳಿ.
 • ಕೈಗೊಂಡಿರುವ ಉತ್ಖನನವು ಮಟ್ಟಗಳು, ಇಳಿಜಾರು, ಆಕಾರ ಮತ್ತು ಮಾದರಿಯ ರೀತಿಯೇ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
 • ನೀರುಹಾಕಿ ಧಮ್ಮಸ್ಸು ಮಾಡುವ ಮೂಲಕ ಉತ್ಖನನದ ನೆಲ ಮಟ್ಟವನ್ನು ಗಟ್ಟಿಗೊಳಿಸಿ. ಮೃದುವಾದ ಅಥವಾ ದೋಷಯುಕ್ತ ಜಾಗಗಳನ್ನು ಅಗೆದು ಕಾಂಕ್ರೀಟ್ ತುಂಬಿಸಬೇಕು.
 • ಆಳವಾದ ಉತ್ಖನನವನ್ನು ಮಾಡಿದಾಗ ಉತ್ಖನನ ಪ್ರದೇಶದ ಬದಿಗಳು ಕುಸಿಯುವುದನ್ನು ತಪ್ಪಿಸುವುದಕ್ಕಾಗಿ ಅದರ ಬದಿಗಳನ್ನು ಬಿಗಿಯಾದ ಶೋರಿಂಗ್ ಕೆಲಸದಿಂದ ಬಿಗಿ ಮಾಡಿ.

ನಿಮ್ಮ ಕಟ್ಟಡದ ಅಡಿಪಾಯ ಸೂಕ್ತವಾಗಿರದಿದ್ದಲ್ಲಿ, ಇಡೀ ರಚನೆಯು ಕುಸಿಯುತ್ತದೆ ಅಥವಾ ಜರಿಯುತ್ತದೆ. ಬಲವಾದ ಅಡಿಪಾಯವನ್ನು ಹಾಕುತ್ತಿದ್ದೇವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಈ ಪಾಯಿಂಟರ್‌ಗಳನ್ನು ನೆನಪಿನಲ್ಲಿತ್ತುಕೊಳ್ಳಿ:

 • ಅಡಿಪಾಯವು ದೃಢವಾದ ಮಣ್ಣಿನ ಮೇಲೆ ಸರಿಯಾಗಿ ಕೂತುಕೊಳ್ಳಬೇಕು ಹಾಗೂ ಅದನ್ನು ನೆಲಮಟ್ಟದಿಂದ ಕನಿಷ್ಠ 1.2 ಮೀ ಆಳದವರೆಗೂ ಹಾಕಿರಬೇಕು
 • ಮಣ್ಣು ಸಡಿಲವಾಗಿದ್ದಲ್ಲಿ ಮತ್ತು / ಅಥವಾ ಉತ್ಖನನದ ಆಳವು ಹೆಚ್ಚು ಇದ್ದಲ್ಲಿ, ಉತ್ಖನನದ ಬದಿಗಳು ಕುಸಿಯದಂತೆ ತಡೆಯುವ ಸಲುವಾಗಿ ಅದಕ್ಕೆ ಬೆಂಬಲವನ್ನು ನೀಡಬೇಕು.
 • ಮೇಲೆ ಬೀಳುವ ಭಾರವನ್ನು ಸುರಕ್ಷಿತವಾಗಿ ಕೆಳಗಿರುವ ನೆಲಕ್ಕೆ ವರ್ಗಾಯಿಸುವ ಸಲುವಾಗಿ ಅಡಿಪಾಯದ ವಿಸ್ತೀರ್ಣವು ಸಾಕಷ್ಟು ಇರಬೇಕಾಗುತ್ತದೆ.
 • ಅಡಿಪಾಯದ ವಿಸ್ತೀರ್ಣವು ಮಣ್ಣಿನ ಹೊರೆ ಹೊರುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಉತ್ಖನನಕ್ಕೆ ಮುಂಚಿತವಾಗಿಯೇ ಅಡಿಪಾಯದ ಸ್ಥಳ ಮತ್ತು ಗಾತ್ರವನ್ನು ಗುರುತಿಸುವುದು ಮುಖ್ಯವಾಗಿರುತ್ತದೆ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ