ತಜ್ಞರ ಪರೀಕ್ಷಾ ವ್ಯಾನ್

ಇದು ಗ್ರಾಹಕರಿಗೆ ನೀಡುವ ಮೌಲ್ಯವರ್ಧಿತ ಸೇವೆಯಾಗಿದ್ದು, ಕಾಂಕ್ರೀಟ್‌ ಹಾಕುವ ಸಮಯದಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಕಾಂಕ್ರೀಟ್‌ನಲ್ಲಿನ ಗುಣಮಟ್ಟ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ತಾಂತ್ರಿಕ ನೆರವು ನೀಡುವ ಗುರಿಯನ್ನು ಹೊಂದಿದೆ. ಒಂದು ವ್ಯಾನ್ ಮೂಲಕ ಅರ್ಹ ಮತ್ತು ತರಬೇತಿ ಪಡೆದ ಸಿವಿಲ್ ಎಂಜಿನಿಯರ್‌ನ ಮೇಲ್ವಿಚಾರಣೆಯಲ್ಲಿ ಈ ಸೇವೆಯನ್ನು ಸ್ಥಳದಲ್ಲಿಯೇ ಒದಗಿಸಲಾಗುತ್ತದೆ. ನಿವೇಶನದಲ್ಲಿರುವ ಸಾಮಗ್ರಿಗಳನ್ನು ಪರೀಕ್ಷಿಸಲು ಅಗತ್ಯವಾದ ಪರೀಕ್ಷಾ ಸೌಲಭ್ಯಗಳು / ಉಪಕರಣಗಳನ್ನು ಈ ವ್ಯಾನ್ ಹೊಂದಿರುತ್ತದೆ. ನಿರ್ಮಾಣದಲ್ಲಿ ಬಳಸುವ ಕಚ್ಚಾ ಸಾಮಗ್ರಿಗಳನ್ನು ನಿವೇಶನದಲ್ಲಿಯೇ ಪರೀಕ್ಷಿಸಲಾಗುತ್ತದೆ ಮತ್ತು ಶ್ರೇಷ್ಠ ಗುಣಮಟ್ಟದ ಕಾಂಕ್ರೀಟ್ ಉತ್ಪಾದಿಸುವ ಸೂಕ್ತವಾದ ವಿಧಾನಗಳ ಬಗ್ಗೆ ಗ್ರಾಹಕರಿಗೆ ಸಲಹೆ / ಸಹಾಯ ನೀಡಲಾಗುತ್ತದೆ. ಸಾಮರ್ಥ್ಯ ಮತ್ತು ಬಾಳಿಕೆಗೆ ಧಕ್ಕೆಯಾಗದಂತೆ ಹಣದ ವೆಚ್ಚದ ಮೇಲೆ ಹಿಡಿತ ಸಾಧಿಸಲು ಕಾಂಕ್ರೀಟ್ ಮಿಶ್ರಣ ವಿನ್ಯಾಸಗಳನ್ನು (ಸಿಮೆಂಟ್, ಮರಳು, ಲೋಹ ಮತ್ತು ನೀರಿನ ಅನುಪಾತ) ಗ್ರಾಹಕರಿಗೆ ಒದಗಿಸಲಾಗುತ್ತದೆ. ಶ್ರೇಷ್ಠ ಗುಣಮಟ್ಟದ ಭರವಸೆಯ ಅನುಸಾರವಾಗಿ, ನಿವೇಶನದಲ್ಲಿಯೇ ಕಾಂಕ್ರೀಟ್ ಅನ್ನು ಅದರ ಸಂಕೋಚಕ (ಕಂಪ್ರೆಸೀವ್‌) ಶಕ್ತಿಗಾಗಿ ಪರೀಕ್ಷಿಸಲಾಗುತ್ತದೆ ಮತ್ತು ಪರೀಕ್ಷಾ ವರದಿಯನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಸ್ಥಳದಲ್ಲಿಯೇ ನಿರೂಪಣೆಯನ್ನು ನೀಡುವ ಮೂಲಕ ಕವರ್ ಬ್ಲಾಕ್‌ಗಳು ಮತ್ತು ಮರೆಮಾಚುವ ಟೇಪ್‌ಗಳನ್ನು ಬಳಸುವ ಮಹತ್ವದ ಬಗ್ಗೆ ಗ್ರಾಹಕರಿಗೆ ಶಿಕ್ಷಣವನ್ನು ನೀಡಲಾಗುತ್ತದೆ. ಈ ಸೇವೆಯನ್ನು ಪಡೆಯಲು, ಗ್ರಾಹಕರು ಕೇವಲ 1800 210 3311 ಗೆ ಕರೆ ಮಾಡಿದರೆ (ಟೋಲ್ ಫ್ರೀ) ಸಾಕು.

Expert Testing Van

Get Answer to
your Queries

Enter a valid name
Enter a valid number
Enter a valid pincode
Select a valid category
Enter a valid sub category
Please check this box to proceed further
LOADING...