25 ನೇ ಮಾರ್ಚ್, 2019
ಗುತ್ತಿಗೆದಾರ ಮತ್ತು ವಾಸ್ತುಶಿಲ್ಪಿಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ವಾಸ್ತುಶಿಲ್ಪಿ ಅಥವಾ ಆರ್ಕಿಟೆಕ್ಟ್ ಅಂದರೆ ಯಾರು? ಸರಳವಾಗಿ ಹೇಳುವುದಾದಲ್ಲಿ, ವಾಸ್ತುಶಿಲ್ಪಿಯು ನಿಮ್ಮ ಇಡೀ ಮನೆಯ ವಿನ್ಯಾಸದ ಉಸ್ತುವಾರಿಯನ್ನು ವಹಿಸಿರುತ್ತಾರೆ. ನಿರ್ಮಾಣದ ಪ್ರಕ್ರಿಯೆಯ ಉದ್ದಕ್ಕೂ ವಾಸ್ತುಶಿಲ್ಪಿ ತನ್ನನ್ನು ತೊಡಗಿಸಿಕೊಂಡಿರುತ್ತಾರೆ, ಆದರೆ ಅವರ ಕೆಲಸದ ನಾಲಕ್ಕರಲ್ಲಿ ಮೂರರಷ್ಟು ಭಾಗವು ಯೋಜನಾ ಹಂತದಲ್ಲಿರುತ್ತದೆ.
ವಾಸ್ತುಶಿಲ್ಪಿಯನ್ನು ಉಪಯೋಗಿಸಿಕೊಳ್ಳುವುದರಿಂದ ಉತ್ತಮವಾಗಿ ಯೋಜನೆಯನ್ನು ಮಾಡಲು ಮತ್ತು ವೆಚ್ಚವನ್ನು ನಿರ್ವಹಿಸುವಲ್ಲಿ ನಿಮಗೆ ಹೆಚ್ಚಿನ ಸಹಾಯ ಸಿಗುತ್ತದೆ. ನಿಮ್ಮ ಮನೆಯನ್ನು ವಿನ್ಯಾಸಗೊಳಿಸುವುದು ಮತ್ತು ಯೋಜಿಸುವುದರ ಹೊರತಾಗಿ, ನಿಮ್ಮ ವಾಸ್ತುಶಿಲ್ಪಿ ಈ ರೀತಿಯಲ್ಲಿಯೂ ಸಹಾ ನಿಮಗೆ ಸಹಾಯ ಮಾಡಬಹುದು:
• ಅಗತ್ಯವಾದ ಪರವಾನಗಿಗಳನ್ನು ಪಡೆಯುವುದು - ನಿರ್ಮಾಣವನ್ನು ಪ್ರಾರಂಭಿಸಲು ಅನುಮತಿ, ಸುತ್ತು ಪ್ರಮಾಣಪತ್ರ ಇತ್ಯಾದಿ.
• ನಿಮ್ಮ ಮನೆಯ ನಿರ್ಮಾಣಕ್ಕಾಗಿ ವಿಶ್ವಾಸಾರ್ಹ ಗುತ್ತಿಗೆದಾರನನ್ನು ಹುಡುಕುವುದು
• ಯೋಜನೆಯು ಯಾವುದೇ ಪರಿಸರ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು.
ನಿಮ್ಮ ಯೋಜನೆಯನ್ನು ಪೂರ್ಣಗೊಳಿಸಲು ನಿಮಗೆ ಸಹಾಯ ಮಾಡಿದ ನಂತರ, ವಾಸ್ತುಶಿಲ್ಪಿಯ ಕೆಲಸವೆಂದರೆ ಮಾನಿಟರ್ ಆಗಿ ಕಾರ್ಯನಿರ್ವಹಿಸುವುದು ಮತ್ತು ನಿರ್ಮಾಣವು ಒಟ್ಟಾರೆಯಾಗಿ ಕಟ್ಟಡ ವಿನ್ಯಾಸವನ್ನು ಅನುಸರಿಸುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು.
This website uses cookies to serve content relevant for you and to improve your overall website
experience.
By continuing to visit this site, you agree to our use of cookies.
Accept
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ
UltraTech is India’s No. 1 Cement
Address
"B" Wing, 2nd floor, Ahura Center Mahakali Caves Road Andheri (East) Mumbai 400 093, India
© 2020 ಎಲ್ಲ ಹಕ್ಕುಗಳನ್ನು ಒಳಗೊಂಡಿದೆ, ಅಲ್ಟ್ರಾಟೆಕ್ ಸಿಮೆಂಟ್ ಲಿ.