ಕನ್‌ಸ್ಟ್ರಕ್ಷನ್‌ಗಾಗಿ ನೀವು ಮರುಭೂಮಿಯ ಮರಳನ್ನು ಏಕೆ ಬಳಸುವುದಿಲ್ಲ?


ಮಾರ್ಚ್ 25, 2019 

ನಿಮ್ಮ ಮನೆಗಾಗಿ ಎಂದಿಗೂ ಸಮುದ್ರ ಅಥವಾ ಮರುಭೂಮಿಯ ಮರಳು ಬಳಸಬೇಡಿ. ಈ ಮರಳು ಮೆರುಗು ಮತ್ತು ಹೊಳಪಿನ ನೋಟ ಹೊಂದಿದೆ ಅದರೆ ಅದು ಬಹಳ ನಯ ಮತ್ತು ವೃತ್ತಾಕಾರವಾಗಿರುತ್ತದೆ. ಈ ರೀತಿಯ ಮರಳು ಬಳಸುವುದರಿಂದ ನಿರ್ಮಿತಿ ದುರ್ಬಲವಾಗಬಹುದು. ಅದಲ್ಲದೆ, ಸಮುದ್ರದ ಮರಳು ಉಪ್ಪನ್ನು ಹೊಂದಿದ್ದು ಸ್ಟೀಲ್ ಮತ್ತು ಪ್ಲಾಸ್ಟರ್‌ಗೆ ಹಾನಿ ಮಾಡುತ್ತದೆ. ದೀರ್ಘಕಾಲದಲ್ಲಿ ಈ ಮರಳು ನಿಮ್ಮ ಮನೆಯ ಬಾಳಿಕೆ ಮತ್ತು ಗಟ್ಟಿಮುಟ್ಟಾಗಿರುವಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. 

 

ಪರಿಸರದ ಮೇಲೆ ಉಂಟುಮಾಡುವ ಹಾನಿಯ ಕಾರಣಕ್ಕಾಗಿ, ಇತ್ತೀಚಿನ ವರ್ಷಗಳಲ್ಲಿ ನದಿ ತಟದಲ್ಲಿ ಅತಿಯಾದ ಮರಳು ಗಣಿಗಾರಿಕೆ ಮೇಲೆ ಸರ್ಕಾರ ನಿರ್ಬಂಧಗಳನ್ನು ವಿಧಿಸಿದೆ. ಪೂರೈಕೆ ಕೊರತೆಯ ಹಿನ್ನೆಲೆಯಲ್ಲಿ ನಿಮ್ಮ ಗುತ್ತಿಗೆದಾರರು ಸಮುದ್ರ ಅಥವಾ ಮರುಭೂಮಿಯ ಮರಳು ಬಳಸುವಂತೆ ಸಲಹೆ ನೀಡಬಹುದು; ಹಾಗೆ ಮಾಡದಂತೆ ಅವರಿಗೆ ಸೂಚನೆ ನೀಡಿ. ಕೇವಲ ನದಿಯ ಮರಳು ಅಥವಾ ಉತ್ಪಾದಿಸಿದ ಮರಳನ್ನು ಮಾತ್ರ ನಿರ್ಮಾಣ ಕಾಮಗಾರಿಗೆ ಬಳಸುವಂತೆ ಅವರಿಗೆ ಕಟ್ಟುನಿಟ್ಟಾಗಿ ಸೂಚಿಸಿ.  


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ