ಸ್ಟ್ರಕ್ಚರಲ್ ಇಂಜಿನಿಯರ್ ಯಾರು & ಸ್ಟ್ರಕ್ಚರಲ್ ಇಂಜಿನಿಯರ್ ಪಾತ್ರ ಏನು?

ನೀವು ನಿರ್ಮಿಸುವ ಮನೆಯು ನಿಮ್ಮ ಜೀವನದ ಅತಿ ಮಹತ್ವವಾದ ಕಾರ್ಯಗಳಲ್ಲಿ ಒಂದಾಗಿರುತ್ತದೆ ಹಾಗೂ ಅದರ ದೀರ್ಘಾಯುಷ್ಯವನ್ನು ಅದರ ಬಾಳಿಕೆಯು ನಿರ್ಧರಿಸುತ್ತದೆ. ನೀವು ನಿರ್ಮಿಸುವ ಮನೆಯು ತಲೆತಲಾಂತರದವರೆಗೂ ಇರುತ್ತದೆ ಎನ್ನುವುದನ್ನು ಸ್ಟ್ರಕ್ಚರಲ್ ಎಂಜಿನಿಯರ್‌ರವರು ಖಚಿತಪಡಿಸಬಹುದು. ಒಬ್ಬ ಸ್ಟ್ರಕ್ಚರಲ್ ಎಂಜಿನಿಯರ್ ಅನ್ನು ನೇಮಿಸಿಕೊಳ್ಳದೇ ಇರುವುದು, ನಿಮ್ಮ ಮನೆಯ ಸುದೀರ್ಘ ಬಾಳಿಕೆ ಸಾಧ್ಯತೆಯನ್ನು ಅಪಾಯಕ್ಕೆ ಒಡ್ಡಿದಂತೆ.

ಹಾಗಿದ್ದರೆ, ಸ್ಟ್ರಕ್ಚರಲ್ ಎಂಜಿನಿಯರ್ ಅಂದರೆ ಯಾರು?

ಸರಳವಾಗಿ ಹೇಳುವುದಾದಲ್ಲಿ, ಸ್ಟ್ರಕ್ಚರಲ್ ಎಂಜಿನಿಯರ್ ಒಬ್ಬ ಸಿವಿಲ್ ಎಂಜಿನಿಯರ್ ಆಗಿದ್ದು, ಅವರು ನಿಮ್ಮ ಮನೆಯ ಕಟ್ಟಡದ ಸಮಗ್ರತೆಯನ್ನು ನಿರ್ಣಯಿಸುವಲ್ಲಿ ಪರಿಣತಿ ಹೊಂದಿರುತ್ತಾರೆ. ಅವರು ಅಡಿಪಾಯದ ಶಕ್ತಿ, ಗೋಡೆಗಳ ಸ್ಥಿರತೆ ಮತ್ತು ಭಾರ ಹೊರುವ ಸಾಮರ್ಥ್ಯ ಹಾಗೂ ಬಳಸಿದ ಸಾಮಗ್ರಿಗಳಾದಂತಹ ಸಿಮೆಂಟ್, ಕಬ್ಬಿಣ, ಜಲ್ಲಿಕಲ್ಲುಗಳು ಇತ್ಯಾದಿಗಳ ಗುಣಮಟ್ಟ ಮುಂತಾದ ಪ್ರಮುಖ ಅಂಶಗಳನ್ನು ವಿಶ್ಲೇಷಿಸುತ್ತಾರೆ.

ನಿಮಗೆ ಏತಕ್ಕಾಗಿ
ಒಬ್ಬ ಸ್ಟ್ರಕ್ಚರಲ್ ಎಂಜಿನಿಯರ್ ಬೇಕಾಗುತ್ತಾರೆ?

ಹೊಸಬರಿಗಾಗಿ, ಸ್ಟ್ರಕ್ಚರಲ್ ಎಂಜಿನಿಯರ್‌ಗಳು ಕಟ್ಟಡವನ್ನು ನಿರ್ಮಿಸಲು ಬೇಕಾದ ವಿವಿಧ ಸಾಮಗ್ರಿಗಳ ಸಾಮರ್ಥ್ಯತೆಯನ್ನು ಅರ್ಥಮಾಡಿಕೊಂಡಿರುತ್ತಾರೆ. ನಿಮ್ಮ ಬಜೆಟ್ ಅನ್ನು ಗಮನದಲ್ಲಿರಿಸಿ, ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಪಡೆಯಲು ಅವರು ನಿಮಗೆ ಸಹಾಯ ಮಾಡಬಹುದು.

ಸುತ್ತಮುತ್ತಲಿನ ಪರಿಸ್ಥಿತಿಗಳು ಕಟ್ಟಡದ ಮೇಲೆ ಬೀರಬಹುದಾದ ದೀರ್ಘಕಾಲೀನ ಪರಿಣಾಮಗಳನ್ನು ಅವರು ಅರ್ಥಮಾಡಿಕೊಂಡಿರುತ್ತಾರೆ. ಸರಿಹೊಂದುವ ಸಾಮಗ್ರಿಗಳು ಹಾಗೂ ಕಟ್ಟಡದ ಯೋಜನೆಯನ್ನು ಬಳಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಎದುರಾಗಬಹುದಾದ ಸಾಕಷ್ಟು ದುರಸ್ತಿ ವೆಚ್ಚಗಳನ್ನು ಉಳಿಸುವಲ್ಲಿ ಅವರು ನಿಮಗೆ ಸಹಾಯ ಮಾಡುತ್ತಾರೆ.

ಅನ್ವಯವಾಗುವ ರಾಜ್ಯ ಕಟ್ಟಡದ ಕಾನೂನುಗಳು ಮತ್ತು ಮಾರ್ಗಸೂಚಿಗಳನ್ನು ಸ್ಟ್ರಕ್ಚರಲ್ ಎಂಜಿನಿಯರ್‌ಗಳು ಎಲ್ಲರಿಗಿಂತ ಚೆನ್ನಾಗಿ ಅರಿತುಕೊಂಡಿರುತ್ತಾರೆ, ಹಾಗಾಗಿ ನಿಮ್ಮ ಮನೆಯನ್ನು ಅದಕ್ಕೆ ಅನುಗುಣವಾಗಿ ನಿರ್ಮಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬಹುದು

ನಿಮ್ಮ ಮನೆಯು ಒಂದು ಗಣನೀಯ ದೀರ್ಘಕಾಲೀನ ಹೂಡಿಕೆಯಾಗಿರುತ್ತದೆ ಮತ್ತು ಸ್ಟ್ರಕ್ಚರಲ್ ಎಂಜಿನಿಯರ್‌ನ ಪರಿಣತಿಯು ಅದರ ಭವಿಷ್ಯ-ಉಳಿವಿಗೆ ಸಹಾಯ ಮಾಡುತ್ತದೆ

ಕೊನೆಯದಾದ ಮತ್ತು ಅತಿ ಮುಖ್ಯವಾದುದೆಂದರೆ, ಒಬ್ಬ ಸ್ಟ್ರಕ್ಚರಲ್ ಎಂಜಿನಿಯರ್ ನೀವು ನಿರ್ಮಿಸಿರುವ ಮನೆಯು ನಿಮಗಾಗಿ ಮತ್ತು ನಿಮ್ಮ ಕುಟುಂಬದ ವಾಸಕ್ಕಾಗಿ ಗಟ್ಟಿಮುಟ್ಟಾಗಿದೆ ಹಾಗೂ ಸುರಕ್ಷಿತವಾಗಿದೆ ಎನ್ನುವುದನ್ನು ಖಚಿತಪಡಿಸುತ್ತಾರೆ.

ಒಬ್ಬ ಸರಿಯಾದ ಸ್ಟ್ರಕ್ಚರಲ್ ಎಂಜಿನಿಯರ್ ಅನ್ನು
ನೀವು ಹೇಗೆ ಆಯ್ಕೆ ಮಾಡಿಕೊಳ್ಳಬಹುದು

ಅವರು ಪರವಾನಗಿ ಹೊಂದಿರುವವರೇ?
ಪರವಾನಗಿ ಪಡೆದ ಎಂಜಿನಿಯರ್‌ನಿಂದ ನಿಮ್ಮ ಮನೆಯ ನೀಲಿನಕ್ಷೆಗಳಿಗೆ ಸಹಿ ಮಾಡಿ ಮೊಹರು ಹಾಕಿದ್ದಲ್ಲಿ ಮಾತ್ರವೇ ರಾಜ್ಯ ಸರ್ಕಾರವು ನಿಮಗೆ ಕಟ್ಟಡವನ್ನು ನಿರ್ಮಿಸಲು ಅನುಮತಿ ನೀಡುತ್ತದೆ.

ಅಕ್ಕಪಕ್ಕದಲ್ಲಿ ವಿಚಾರಿಸಿ. ಒಬ್ಬ ಸ್ಟ್ರಕ್ಚರಲ್ ಎಂಜಿನಿಯರ್‌ನ ಪರಿಣತಿಯನ್ನು ಅರಿಯಲು, ಅವರ ಹಿಂದಿನ ಗ್ರಾಹಕರ ಪ್ರಶಂಸಾಪತ್ರಗಳಿಗಿಂತ ಹೆಚ್ಚಿನದು ಬೇರೆ ಬೇಕಾಗುವುದಿಲ್ಲ. ನಿಮ್ಮ ಕುಟುಂಬದವರು, ಸ್ನೇಹಿತರು ಮತ್ತು ಆಪ್ತರುಗಳು ಹಾಗೂ ನೀವು ನಂಬುವ ಜನಗಳಿಂದ ಪಡೆದ ಶಿಫಾರಸಿನ ಮೂಲಕ ಹುಡುಕುವುದು ಜಾಣತನವಾಗುತ್ತದೆ.

ಅವರುಗಳ ಅನುಭವದ ಬಗ್ಗೆ ಸಂಶೋಧನೆ ನಡಿಸಿ. ಅವರು ಕೈಗೊಂಡಿರುವ ಹಿಂದಿನ ಯೋಜನೆಗಳನ್ನು ನೋಡುತ್ತಲೇ ನೀವು ಇದನ್ನು ಮಾಡಬಹುದು.

ಅವರು ನಿಜವಾಗಲೂ ಪರಿಣತಿ ಹೊಂದಿದ್ದಾರೆಯೇ?

ಅವರು ಸೂಕ್ತ ಸಮಯ ಮತ್ತು ಬಜೆಟ್‌ನಲ್ಲಿ ಪೂರ್ಣಗೊಳಿಸಿದ್ದಾರೆಯೇ?

ರಚನಾತ್ಮಕವಾಗಿ ಸುರಕ್ಷಿತವಾದ ಮತ್ತು ಬಾಳಿಕೆ ಬರುವ ಮನೆಯನ್ನು ನೀವು ನಿರ್ಮಿಸುತ್ತಿದ್ದೀರಿ ಎನ್ನುವುದರಿಂದ ದೊರಕುವ ಮನಸ್ಸಿನ ಶಾಂತಿಯು ಯಾವುದಕ್ಕೂ ಸಾಟಿಯಾಗುವುದಿಲ್ಲ. ಆದ್ದರಿಂದ ಈ ಅಂಶಗಳ ಸಹಾಯದಿಂದ ನಿಮ್ಮ ನಿರ್ಮಾಣಕ್ಕೆ ಸರಿಹೊಂದುವ ಒಬ್ಬ ಸ್ಟ್ರಕ್ಚರಲ್ ಎಂಜಿನಿಯರ್ ಅನ್ನು ನೇಮಿಸಿಕೊಳ್ಳಿ.

ಮನೆಯ ನಿರ್ಮಾಣದ ಕುರಿತಾಗಿ ಇದೇ ರೀತಿಯ ಹೆಚ್ಚಿನ ಸಲಹೆಗಳಿಗಾಗಿ, ಅಲ್ಟ್ರಾಟೆಕ್ ಸಿಮೆಂಟ್‌ರವರ #ಬಾತ್ಘರ್ಕಿ ಅಲ್ಟ್ರಾಟೆಕ್ ಸಿಮೆಂಟ್

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ