ನಿಮ್ಮ ಮನೆಯ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಉಂಟಾಗಬಹುದಾದ ಅನಿರೀಕ್ಷಿತ ಬಜೆಟ್ ಅನ್ನು ತಪ್ಪಿಸಲು ಬಯಸುವಿರಾ?

ಜೀವನದಲ್ಲಿ ನೀವು ಮಾಡಿರಬಹುದಾದ ಉಳಿತಾಯದ ಬಹುಪಾಲು ಭಾಗವನ್ನು ನೀವು ಖರ್ಚು ಮಾಡಬೇಕಾಗುತ್ತದೆ, ಅದಕ್ಕಾಗಿಯೇ ನೀವು ಬಜೆಟ್ ಅನ್ನು ಮೊದಲೇ ಯೋಜಿಸುವುದು ಸರಿ ಎಂದು ತೋರುತ್ತದೆ, ಏಕೆಂದರೆ ನಿರ್ಮಾಣಕ್ಕೆ ಮುಂಚಿತವಾಗಿ ಬಜೆಟ್ ಮಾಡುವುದರಿಂದ ನಂತರ ಬಹಳಷ್ಟು ಹಣ ಉಳಿತಾಯ ಮಾಡುವಲ್ಲಿ ಅದು ಸಹಾಯ ಮಾಡುತ್ತದೆ.
ನಿಮ್ಮ ವೆಚ್ಚದ ಬಹು ದೊಡ್ಡ ಭಾಗವನ್ನು ಭೂಮಿಯನ್ನು ಖರೀದಿಸುವ ಸಲುವಾಗಿಯೇ ಖರ್ಚು ಮಾಡಬೇಕಾಗುತ್ತದೆ. ಸಾಮಗ್ರಿಗಳನ್ನು ಖರೀದಿಸುವುದು ಹಾಗೂ ಕಾರ್ಮಿಕ ವೆಚ್ಚಗಳು ಎರಡನೆಯ ಸ್ಥಾನದಲ್ಲಿ ಬರುತ್ತವೆ. ಸಾಮಾನ್ಯವಾಗಿ, ಕಾರ್ಮಿಕ ವೆಚ್ಚಗಳ ಹಾಗೂ ಸಾಮಗ್ರಿಗಳ ವೆಚ್ಚದ ಅನುಪಾತವು ಸುಮಾರು 65:35 ಆಗಿರುತ್ತದೆ.
ಹೆಚ್ಚುವರಿ ತಿಳುವಳಿಕೆಗಾಗಿ, ಒಂದು 1000 ಚದರ ಅಡಿ ಮನೆಯ ನಿರ್ಮಾಣದಲ್ಲಿನ ವಿವಿಧ ಘಟ್ಟಗಳ ಅಂದಾಜು ವೆಚ್ಚಗಳು ಇಲ್ಲಿವೆ:

ಒಟ್ಟು ವೆಚ್ಚಕ್ಕೆ ಹೋಲಿಸಿದಲ್ಲಿ, ನಿರ್ಮಾಣದ ವಿವಿಧ ಘಟ್ಟಗಳ ಶೇಕಡಾವಾರು ವೆಚ್ಚಗಳು

3%

ಕಾಂಕ್ರೀಟ್ ಅಡಿಪಾಯಕ್ಕಾಗಿ ಸಾಮಾನ್ಯ ಮಣ್ಣಿನಲ್ಲಿ ಮಾಡುವ ಅಗೆಯುವಿಕೆ

5%

ಮೇಲ್ಪಾಯದವರೆಗಿನ ಇಟ್ಟಿಗೆ ಕೆಲಸ / ಕಲ್ಲಿನ ಕಾಮಗಾರಿ

25%

ಮೇಲ್ಬಾಗದ ಕಟ್ಟಡದ ಇಟ್ಟಿಗೆ ಕಾಮಗಾರಿ

20%

ಜಲನಿರೋಧಕ ಅಳವಡಿಕೆಯನ್ನು ಸೇರಿಸಿದ ಮೇಲ್ಛಾವಣಿಯ ಕಾಮಗಾರಿ

6%

ನೆಲಹಾಸು ಕಾಮಗಾರಿ

15%

ಮರಗೆಲಸ, ಅಂದರೆ ಜೋಡಣೆಗಳು, ಬಾಗಿಲುಗಳು ಮತ್ತು ಕಿಟಕಿಗಳ ಆಂತರಿಕ

6%

ಪೂರ್ಣಗೊಳಿಕೆಗಳು

3%

ಹೊರಭಾಗದ ಪೂರ್ಣಗೊಳಿಕೆಗಳು

4%

ನೀರು ಸರಬರಾಜು

8%

ಸ್ಯಾನಿಟರಿ ಕಾಮಗಾರಿ

5%

ವಿದ್ಯುತ್‌ ಸಂಬಂಧಿ ಕಾಮಗಾರಿಗಳು

ನೀವು ನಿರ್ಮಾಣವನ್ನು ಪ್ರಾರಂಭಿಸುವ ಮೊದಲೇ ಒಂದು ದೊಡ್ಡ ಮೊತ್ತವನ್ನು ಹೊಂದಿಸಿಕೊಳ್ಳುವ ಪ್ರಮೇಯವಿರುವುದಿಲ್ಲ. ಪ್ರತಿ ಘಟ್ಟದಲ್ಲಿನ ಅಗತ್ಯತೆಯ ಪ್ರಕಾರ ನಿಮ್ಮ ಹಣವನ್ನು ಹೊಂದಿಸಿಕೊಳ್ಳಿ, ಆಗ ಕಾಮಗಾರಿಯು ಪೂರ್ಣಗೊಳ್ಳುವ ಮೊದಲು ಅದರ ವೆಚ್ಚವು ನಿಮ್ಮ ಬಜೆಟ್ ಮೀರಿರುವುದಿಲ್ಲ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ