ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ
ಒಂದು ವೇಳೆ ನೀವು ಹೊಸ ಮನೆಗೆ ಹೋಗುತ್ತಿದ್ದರೆ, ಮತ್ತು ನೀವೇ ಸ್ವತಃ ಅಥವಾ ಇಂಟೀರಿರ್ಸ್ ಡಿಸೈನರ್ ಸಹಾಯದೊಂದಿಗೆ ವಿನ್ಯಾಸಗೊಳಿಸಲು ಯೋಜನೆ ಮಾಡುತ್ತಿದ್ದರೆ, ಮನೆಯ ವಾಸ್ತುವನ್ನು ಯಾವಾಗಲೂ ಪರಿಶೀಲಿಸಿ ಎಂದು ಸಲಹೆ ನೀಡುತ್ತೇವೆ. ಮನೆಗಾಗಿ ವಾಸ್ತು ಶಾಸ್ತ್ರವು ವೈಜ್ಞಾನಿಕ ಸಂಶೋಧನೆಯನ್ನು ಆಧರಿಸಿದೆ ಮತ್ತು ಅದು ವಿನ್ಯಾಸ, ವಾಸ್ತು ಮತ್ತು ಸ್ವರೂಪದ ಸಿದ್ಧಾಂತವನ್ನು ವಿವರಿಸುತ್ತದೆ. ಸಕಾರಾತ್ಮಕ ಶಕ್ತಿಯನ್ನು ಹೊರಹೊಮ್ಮಿಸಲು ಮತ್ತು ನಕಾರಾತ್ಮಕ ಶಕ್ತಿಯನ್ನು ತಡೆಯಲು ಮನೆಗಾಗಿನ ವಾಸ್ತು ಸಲಹೆಗಳನ್ನು ಅನುಸರಿಸುವುದು ಅವಶ್ಯಕವಾಗಿದೆ.
ಸಕಾರಾತ್ಮಕತೆ ಮತ್ತು ಮಂಗಳಕರ ಅಲೆಗಳನ್ನು ಪಡೆದುಕೊಳ್ಳಲು ವಾಸ್ತು ವಿಜ್ಞಾನ ಮತ್ತು ನಮ್ಮ ಮನೆಯ ವಿನ್ಯಾಸದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ನೀವು ಇಷ್ಟಪಡುವ ಮತ್ತು ಸಂತೋಷದ ಜೀವನ ನಡೆಸುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅಳವಡಿಸಿಕೊಳ್ಳಬೇಕಾದ ಹಲವಾರು ವಾಸ್ತು ಸಲಹೆಗಳು ಇವೆ. ಒಂದಿಷ್ಟು ಆಯಾಮಗಳು ಇಲ್ಲಿವೆ :
ಮನೆಯ ಸಕಾರಾತ್ಮಕತೆಯಲ್ಲಿ ಮನೆಯ ವಾಸ್ತು ದಿಕ್ಕು ಬಹು ದೊಡ್ಡ ಪಾತ್ರ ವಹಿಸುತ್ತದೆ. ಒಂದು ವೇಳೆ ನೀವು ವಸತಿಗಾಗಿ ಪ್ಲಾಟ್ ಅಥವಾ ಜಮೀನು ಖರೀದಿಸುತ್ತಿದ್ದರೆ, ಆಗ ಪ್ಲಾಟ್‌ನ ವಾಸ್ತು ಅನುಸರಣೆ ಮಾಡುವುದು ಮತ್ತು ಅದಕ್ಕನುಸಾರ ಮುಂದುವರಿಯುವುದು ಅತ್ಯುತ್ತಮವಾಗಿದೆ. ಸೈಟ್‌ನ ಅಭಿಮುಖ, ಮಣ್ಣಿನ ವಿಧ ಮತ್ತು ಪ್ಲಾಟ್‌ನ ಆಕಾರದಂತಹ ಸೂಕ್ಷ್ಮ ವಿವರಗಳನ್ನು ಪರಿಗಣಿಸಬೇಕು.
ರಸ್ತೆಯು ಪ್ಲಾಟ್ ಮೂಲಕ ಹಾದುಹೋಗುವ ಸನ್ನಿವೇಶ ಇದ್ದಲ್ಲಿ ಅದನ್ನು ಬೀದಿ ಶೂಲ ಎನ್ನಲಾಗುತ್ತದೆ. ಕೆಲವು ಬೀದಿ ಶೂಲಗಳು ಸಕಾರಾತ್ಮಕತೆ ಉಂಟು ಮಾಡಿದರೆ ಇನ್ನುಳಿದವು ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಈಶಾನ್ಯದ ಉತ್ತರ, ಈಶಾನ್ಯದ ಪೂರ್ವ ಭಾಗದಲ್ಲಿನ ಬೀದಿ ಶೂಲಗಳನ್ನು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ, ಇದೇ ವೇಳೆ ಆಗ್ನೇಯದ ದಕ್ಷಿಣ, ವಾಯವ್ಯದ ಪಶ್ಚಿಮ ಭಾಗವನ್ನು ಸಾಧಾರಣ ಎಂದು ಪರಿಗಣಿಸಲಾಗುತ್ತದೆ.
ಮನೆಯ ವಾಸ್ತುವನ್ನು ಪರಿಗಣಿಸುವಾಗ, ನೀರಿನ ಸಂಪನ್ಮೂಲ ಪರಿಗಣಿಸಬೇಕಾದ ಇನ್ನೊಂದು ಪ್ರಮುಖ ವಿಷಯವಾಗಿದೆ. ಈಶಾನ್ಯವು ಟ್ಯಾಂಕ್‌ಗಳು, ಬಾವಿ ಅಥವಾ ಇತರ ಯಾವುದೇ ಜಲ ಮೂಲಕ್ಕೆ ಅತ್ಯುತ್ತಮ ದಿಕ್ಕಾಗಿದೆ. ಉತ್ತರದ ದಿಕ್ಕನ್ನು ಮನೆಗಳಲ್ಲಿ ಶುಭಕರ ಎಂದು ಪರಿಗಣಿಸಲಾಗುತ್ತದೆ ಮತ್ತು ಆದ್ದರಿಂದ ಅದನ್ನು ಖಾಲಿ ಬಿಡಬೇಕು. ಖಾಲಿ ಜಾಗದಲ್ಲಿ ನೀರಿನ ಟ್ಯಾಂಕ್ ಇರಿಸುವುದರಿಂದ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ.
ಮುಖ್ಯ ದ್ವಾರದ ವಾಸ್ತು ಅತ್ಯಂತ ಪ್ರಮುಖವಾದ ಆಯಾಮವಾಗಿದೆ ಏಕೆಂದರೆ ಅದು ನಿಮ್ಮ ಮನೆಯ ಪ್ರವೇಶ ದ್ವಾರ. ಮುಖ್ಯ ಬಾಗಿಲು ಯಾವಾಗಲೂ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಮುಖ್ಯ ಬಾಗಿಲನ್ನು ಉತ್ಕೃಷ್ಟ ಗುಣಮಟ್ಟದ ಮರದಿಂದ ನಿರ್ಮಿಸಬೇಕು. ಅದು ಅತ್ಯಂತ ಸುಂದರವಾಗಿ ಕಾಣಿಸಬೇಕು. ಮುಖ್ಯ ಬಾಗಿಲಿನಲ್ಲಿ ಯಾವುದೇ ಕಾರಂಜಿ ಅಥವಾ ಅಲಂಕಾರಿಕ ನೀರಿನ ಕುಂಡಗಳನ್ನು ಇರಿಸಬೇಡಿ.
ಹಾಲ್, ಮನೆಯಲ್ಲಿ ಅತಿ ಹೆಚ್ಚಿನ ಚಟುವಟಿಕೆ ನಡೆಯುವ ಸ್ಥಳವಾಗಿದೆ. ಅದು ನಿಮ್ಮ ಮನೆಯ ಕುರಿತ ಮೊದಲ ಪ್ರಭಾವ ಉಂಟುಮಾಡುತ್ತದೆ, ಆದ್ದರಿಂದ ಅದನ್ನು ಗೋಜಲು ಇಲ್ಲದಂತೆ ಇರಿಸಿ. ಅದು ಪೂರ್ವ, ಉತ್ತರ ಅಥವಾ ಈಶಾನ್ಯಕ್ಕೆ ಅಭಿಮುಖವಾಗಿರಬೇಕು. ಭಾರೀ ಪೀಠೋಪಕರಣಗಳನ್ನು ಹಾಲ್‌ನ ಪಶ್ಚಿಮ ಅಥವಾ ದಕ್ಷಿಣದ ದಿಕ್ಕಿನಲ್ಲಿ ಇರಿಸಬೇಕು.
ಸಾಮಾನ್ಯವಾಗಿ, ನೈರುತ್ಯ ದಿಕ್ಕಿನಲ್ಲಿರುವ ಬೆಡ್‌ರೂಂ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಖಚಿತಪಡಿಸುತ್ತದೆ. ಮಂಚವನ್ನು ಬೆಡ್‌ರೂಂನ ನೈರುತ್ಯ ಮೂಲೆಯಲ್ಲಿ ಇರಿಸಬೇಕು. ಮಂಚದ ಮುಂದೆ ಕನ್ನಡಿ ಅಥವಾ ಟಿವಿಯನ್ನು ಇರಿಸಬೇಡಿ.
ಮಕ್ಕಳ ಕೋಣೆಯು ಈಶಾನ್ಯದಲ್ಲಿ ಇರಬೇಕು ಏಕೆಂದರೆ ಇದು ಬುದ್ಧಿಮತ್ತೆ, ಸಾಮರ್ಥ್ಯ ಮತ್ತು ಶಕ್ತಿಯನ್ನು ಖಚಿತಪಡಿಸುತ್ತದೆ. ಅದೇ ದಿಕ್ಕಿನಲ್ಲಿ ಮಂಚವನ್ನು ಇರಿಸುವುದರಿಂದ ಮಗುವಿನಲ್ಲಿ ಸಕಾರಾತ್ಮಕತೆ ಮೂಡುತ್ತದೆ.
ಆಗ್ನೇಯ ದಿಕ್ಕು ಅಡುಗೆ ಮನೆಗೆ ಅತ್ಯಂತ ಸೂಕ್ತ ಎಂದು ಪರಿಗಣಿಸಲ್ಪಟ್ಟಿದೆ. ಗೋಡೆಗೆ ಹಳದಿ, ಗುಲಾಬಿ, ಕಿತ್ತಳೆ, ಕೆಂಪು ಮತ್ತು ಕಪ್ಪು ಬಣ್ಣಗಳಂತಹ ಪ್ರಖರ ಬಣ್ಣಗಳನ್ನು ಆಯ್ಕೆ ಮಾಡಿ. ಒಲೆಯನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸುವುದನ್ನು ಖಚಿತಪಡಿಸಿಕೊಳ್ಳಿ.
ಸಾಮಾನ್ಯವಾಗಿ, ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಊಟ ಮಾಡಬೇಕು. ನಿಯಮಿತವಾಗಿ ದಕ್ಷಿಣಾಭಿಮುಖವಾಗಿ ಊಟ ಮಾಡುವುದರಿಂದ ಆರೋಗ್ಯದ ಸಮಸ್ಯೆಗಳು ಉಂಟಾಗಬಹುದು. ಡೈನಿಂಗ್ ಟೇಬಲ್ ಚೌಕ ಅಥವಾ ಆಯತಾಕಾರದಲ್ಲಿರಬೇಕು ಮತ್ತು ವೃತ್ತ ಅಥವಾ ಅಸಹಜ ಆಕಾರವನ್ನು ಹೊಂದಿರಬಾರದು.
ಪ್ರಾರ್ಥನಾ ಕೋಣೆಗೆ ಪೂರ್ವ ಅಥವಾ ಈಶಾನ್ಯ ಅತ್ಯುತ್ತಮ ಸ್ಥಳವಾಗಿದೆ. ಪವಿತ್ರ ಸ್ಥಳವನ್ನು ನಿರ್ಮಿಸಿ ಮತ್ತು ಅಗರ್‌ಬತ್ತಿ, ಧೂಪಗಳಿಂದ ಅದನ್ನು ಅಲಂಕರಿಸಿ. ಬಿಳಿ, ಬೀಜ್, ತಿಳಿ ಹಳದಿ ಅಥವಾ ಹಸಿರು ಗೋಡೆಗಳಿಗೆ ಅದ್ಭುತ ಬಣ್ಣದ ಆಯ್ಕೆಗಳಾಗಿವೆ.
ವಾಸ್ತು ಪ್ರಕಾರ, ವಾಶ್‌ಬೇಸಿನ್ ಮತ್ತು ಶವರ್ ಪ್ರದೇಶವು ಬಾತ್‌ರೂಂನ ಪೂರ್ವ, ಉತ್ತರ ಮತ್ತು ಈಶಾನ್ಯ ಭಾಗದಲ್ಲಿರಬೇಕು. ಬಾತ್‌ರೂಂ ಮತ್ತು ಟಾಯ್ಲೆಟ್‌ನಲ್ಲಿ ನೀರು ಹೊರಹೋಗುವ ಸ್ಥಳದ ಸರಿಯಾದ ವಾಸ್ತು ದಿಕ್ಕು ಉತ್ತರ, ಪೂರ್ವ ಅಥವಾ ಈಶಾನ್ಯವಾಗಿದೆ.
ಬಾಲ್ಕನಿಗಳನ್ನು ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸಬೇಕು. ಆಗ್ನೇಯ ಅಥವಾ ದಕ್ಷಿಣ ದಿಕ್ಕಿನಲ್ಲಿ ಬಾಲ್ಕನಿಗಳನ್ನು ನಿರ್ಮಿಸಬಾರದು.
ನಿಮ್ಮ ಮನೆ ಸಂತೋಷ, ಯಶಸ್ಸು ಮತ್ತು ಉತ್ತಮ ಆರೋಗ್ಯದಿಂದ ತುಂಬಿದೆ ಎಂದು ಖಚಿತಪಡಿಸಿಕೊಳ್ಳಲು ಈ ವಾಸ್ತು ಸಲಹೆಗಳನ್ನು ಒಳಗೊಳ್ಳಬೇಕು.