March 27, 2019
ಪ್ಲಾನಿಂಗ್ ಹಂತದಲ್ಲಿ, ನಿರ್ಮಾಣದ ಹಲವು ಹಂತಗಳ ಉತ್ತಮ ಐಡಿಯಾ ಹೊಂದಿರುವುದು ಅತ್ಯಂತ ಪ್ರಮುಖ. ಈ ಹಂತಗಳನ್ನು ಗಮನದಲ್ಲಿಟ್ಟುಕೊಂಡರೆ, ಮನೆ ಮತ್ತು ಹಣಕಾಸುಗಳನ್ನು ಬಿಲ್ಡರ್ ಉತ್ತಮವಾಗಿ ಯೋಜಿಸಲು ಸಹಾಯವಾಗುತ್ತದೆ.
ವೈಯಕ್ತಿಕ ಮನೆ ಬಿಲ್ಡರ್ ಈ ಮೂರು ಮುಖ್ಯ ನಿರ್ಮಾಣ ಹಂತಗಳ ಮೇಲೆ ಗಮನ ಹರಿಸಬೇಕು: ಯೋಜನೆ, ನಿರ್ಮಾಣ ಮತ್ತು ಫಿನಿಶಿಂಗ್.
ಯೋಜನೆ: ಈ ಹಂತದಲ್ಲಿ, ಯಾವುದೇ ನಿರ್ಮಾಣ ನಡೆಯುವುದಿಲ್ಲ. ಆದರೆ, ಈ ಹಂತದಲ್ಲಿ ನೀವು ಮಾಡುವುದು ನಿಮ್ಮ ಬಜೆಟ್ ನಿಯೋಜನೆ, ಪ್ರಾಡಕ್ಟ್ ಡೆಲಿವರಿ ಕಾಲಾವಧಿ ಮತ್ತು ನಿಮ್ಮ ಮನೆಯ ಒಟ್ಟು ಲುಕ್ ಅನ್ನು ನಿರ್ಧರಿಸುತ್ತದೆ. ಯೋಜನೆಯಲ್ಲಿ ಇವು ಇರುತ್ತವೆ:
• ಬಜೆಟ್ ನಿರ್ಧರಿಸುವುದು
• ದಾಖಲೆ ಮಾಡುವುದು
• ನಿರ್ಮಾಣ ಮುಗಿಸಲು ಪ್ಲಾಟ್ ಆಯ್ಕೆ ಮಾಡುವುದು
• ನಿಮ್ಮ ತಂಡವನ್ನು ಆಯ್ಕೆ ಮಾಡುವುದು – ಗುತ್ತಿಗೆದಾರರು, ವಾಸ್ತುಶಿಲ್ಪಿ, ಇಂಟೀರಿಯರ್ ವಿನ್ಯಾಸಗಾರರು, ಕಾರ್ಮಿಕರು (ನೀವು ಗುತ್ತಿಗೆದಾರರನ್ನು ನೇಮಿಸಿಕೊಳ್ಳದಿದ್ದರೆ)
ನಿರ್ಮಾಣ: ಈ ಹಂತದಲ್ಲಿ ನಿಮ್ಮ ಮನೆ ರೂಪ ಪಡೆದುಕೊಳ್ಳಲು ಆರಂಭಿಸುತ್ತದೆ. ಮೊದಲ ಕೆಲಸವೆಂದರೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಸಾಮಗ್ರಿಗಳನ್ನು ಖರೀದಿ ಮಾಡುವುದು. ಉದಾ., ಸಿಮೆಂಟ್, ಮರಳು, ಕಲ್ಲುಗಳು, ನೀರು, ಅಗ್ರಗೇಟರ್ಗಳು. ಸಾಮಗ್ರಿಗಳನ್ನು ಪಡೆದ ನಂತರ, ನಿಮ್ಮ ತಂಡ ಇದನ್ನು ಮಾಡುತ್ತದೆ:
• ಫೌಂಡೇಶನ್ ಹಾಕುವುದು
• ನಿಮ್ಮ ಫಾರ್ಮ್ವರ್ಕ್ ನಿರ್ಮಿಸುವುದು
• ವಿವಿಧ ಮಿಕ್ಸ್ ಸಿದ್ಧಪಡಿಸುವುದು
• ವಾಟರ್ಪ್ರೂಫ್ ಮಾಡುವುದು
• ವಾಲ್ ಪ್ಲಾಸ್ಟರಿಂಗ್
• ಪ್ಲಂಬಿಂಗ್
• ವೈರಿಂಗ್
ಫಿನಿಶಿಂಗ್: ಈ ಹಂತದಲ್ಲಿ, ಮನೆಯನ್ನು ಸುಂದರಗೊಳಿಸುವುದರ ಮೇಲೆ ಗಮನ ಹರಿಸಲಾಗುತ್ತದೆ ಮತ್ತು ಈ ಹಂತದಲ್ಲಿ ಇಂಟೀರಿಯರ್ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಶೌಚಾಲಯ, ಅಡುಗೆಮನೆ, ವಾಶ್ಬೇಸಿನ್ಗಳಲ್ಲಿ ರೂಫಿಂಗ್, ಫ್ಲೋರಿಂಗ್, ಪೇಂಟಿಂಗ್ ಮತ್ತು ಫಿಟಿಂಗ್ಸ್ ಅನ್ನು ನಿಮ್ಮ ತಂಡ ಮೇಲ್ವಿಚಾರಣೆ ನಡೆಸಲಿದೆ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ