25 ನೇ ಮಾರ್ಚ್, 2019
ಮನೆ ನಿರ್ಮಾಣದ ಸಮಯದಲ್ಲಿ, ನಿವೇಶನದ ಜಾಗದಲ್ಲಿ ಇರುವ ಕಾರ್ಮಿಕರ ಯೋಗಕ್ಷೇಮವನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯು ನಿಮ್ಮ ಮೇಲಿರುತ್ತದೆ. ಕಾಮಗಾರಿಯನ್ನು ಪ್ರಾರಂಭಿಸುವ ಮೊದಲು, ನಿಮ್ಮ ಗುತ್ತಿಗೆದಾರರೊಂದಿಗೆ ನೀವು ಸುರಕ್ಷತಾ ಕ್ರಮಗಳನ್ನು ಚರ್ಚಿಸಬೇಕು ಮತ್ತು ಯಾವುದೇ ಸಮಸ್ಯೆಗಳಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಬೇಕು.
ನೀವು ನಿವೇಶನದಲ್ಲಿನ ಕಾಮಗಾರಿಯನ್ನು ವೈಯಕ್ತಿಕ ಸಾಮರ್ಥ್ಯದಲ್ಲಿ ಮೇಲ್ವಿಚಾರಣೆ ಮಾಡುವುದಿದ್ದಲ್ಲಿ, ಇದನ್ನು ಖಚಿತಪಡಿಸಿಕೊಳ್ಳಿ:
• ಕಾಮಗಾರಿಯ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಲಭ್ಯವಿದೆ
• ಇಟ್ಟಿಗೆ ಮತ್ತು ಬ್ಲಾಕ್ ಗಾರೆಯವರು ಗಟ್ಟಿಯಾದ ಟೋಪಿ ಮತ್ತು ಕನ್ನಡಕಗಳನ್ನು ಧರಿಸಿದ್ದಾರೆ
• ಎಲ್ಲಾ ಕಾರ್ಮಿಕರು ಜಾರದೇ ಇರುವಂತಹ ಕೆಲಸದ ಬೂಟುಗಳನ್ನು ಧರಿಸಿರುತ್ತಾರೆ
• ಅನುಭವ ಹೊಂದಿರುವ ಯಾರಾದರೂ ಸ್ಕ್ಯಾಫೋಲ್ಡಿಂಗ್ ಕೆಲಸವನ್ನು ನಿರ್ವಹಿಸುತ್ತಾರೆ
• ಬಳಕೆ ಮಾಡುವ ಮೊದಲು, ಏಣಿಗಳನ್ನು ಮೇಲುಗಡೆ ಮತ್ತು ಕೆಳಭಾಗದಲ್ಲಿ ಕಟ್ಟಲಾಗುತ್ತಿದೆ
• ಪಾಳಿಯ ಕೊನೆಯಲ್ಲಿ, ನಿವೇಶನದಲ್ಲಿರುವ ಯಾವುದೇ ತೀಕ್ಷ್ಣವಾದ ವಸ್ತುಗಳು ಮತ್ತು ವಿದ್ಯುತ್ ಉಪಕರಣಗಳನ್ನು ತೆರವುಗೊಳಿಸಲಾಗುತ್ತಿದೆ
• ಎಲ್ಲಾ ರಾಸಾಯನಿಕ ಪಾತ್ರೆಗಳಲ್ಲಿಯೂ ರಾಸಾಯನಿಕ ಅಪಾಯದ ಚಿಹ್ನೆ ಇವೆ
• ಪ್ರತಿದಿನ ಪ್ರಾರಂಭದಲ್ಲಿ, ಗುತ್ತಿಗೆದಾರರಿಂದ ಸುರಕ್ಷತೆಯ ಬಗ್ಗೆ ಪಾಠವನ್ನು ನಡೆಸಲಾಗುತ್ತಿದೆ.
ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ, ಕಾರ್ಮಿಕರು ಸಾಕಷ್ಟು ನೀರನ್ನು ಸೇವಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಕೆಲಸಗಾರನು ತನ್ನ ಆರೋಗ್ಯದ ಬಗ್ಗೆ ದೂರು ನೀಡಿದಲ್ಲಿ, ನೀವು ಅದನ್ನು ತಕ್ಷಣ ನಿಮ್ಮ ಗುತ್ತಿಗೆದಾರರೊಂದಿಗೆ ಚರ್ಚಿಸಬೇಕು.
ಒಬ್ಬ ಜವಾಬ್ದಾರಿಯುತ ಮನೆ ನಿರ್ಮಿಸುವವರಾಗಿ ಮತ್ತು ನಿಮ್ಮ ನಿರ್ಮಾಣ ಸ್ಥಳದಲ್ಲಿ ಹೆಚ್ಚಿನ ಗುಣಮಟ್ಟದ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಮೂಲಕ, ಯೋಜನೆಯ ಸಮಯೋಚಿತ ಪೂರ್ಣಗೊಳಿಸುವಿಕೆಯು ಎಲ್ಲಾ ಕಾರ್ಮಿಕರಿಗೆ ಕನಿಷ್ಠ ಅಪಾಯದೊಂದಿಗೆ ಆಗುತ್ತದೆ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ