ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ
ತಮಗೆ ಆತ್ಮೀಯ ಎನ್ನಿಸುವ ರೀತಿಯಲ್ಲಿ ಮನೆಯನ್ನು ವಿನ್ಯಾಸಗೊಳಿಸಲು ಜನರು ಪ್ರಯತ್ನಿಸುತ್ತಾರೆ, ಹಾಗೂ ಅವರು ವಿಶ್ರಾಂತಿ ಪಡೆಯುವ ಸಮಯ ಬಂದಾಗ, ಸರಿಯಾದ ವಾಸ್ತುವಿನೊಂದಿಗಿನ ಬೆಡ್‌ರೂಂ ಸುದೀರ್ಘ ಮತ್ತು ಬಳಲಿಕೆಯ ದಿನದಾಂತ್ಯಕ್ಕೆ ಅವರಿಗೆ ಆರಾಮ ಒದಗಿಸುತ್ತದೆ. ಕೇವಲ ಇಷ್ಟೇ ಅಲ್ಲ, ಕೆಲವು ಕ್ಷಣ ಜಗತ್ತಿನಿಂದ ಪ್ರತ್ಯೇಕವಾಗಿ ಏಕಾಂತವನ್ನು ಕಳೆಯಲು ಸಹ ನಮ್ಮ ಬೆಡ್‌ರೂಂ ಅನುಕೂಲ ಕಲ್ಪಿಸುತ್ತದೆ, ಅಲ್ಲಿ ನಾವು ಕೆಲಸ, ಬರವಣಿಗೆ, ನಮ್ಮ ಹವ್ಯಾಸ ಇತ್ಯಾದಿಗಳಲ್ಲಿ ತೊಡಗಿಕೊಳ್ಳಬಹುದು. ಬೆಡ್‌ರೂಂಗೆ ಸರಿಯಾದ ವಾಸ್ತುಶಾಸ್ತ್ರವು ಕೇವಲ ಆ ಕೋಣೆಯಲ್ಲಿನ ಶಕ್ತಿಕಿರಣಗಳಿಗಷ್ಟೇ ಅಲ್ಲ ಅದರ ಜೊತೆಗೆ ನಮ್ಮ ಆರೋಗ್ಯ, ಸಂಪತ್ತು ಮತ್ತು ಯಶಸ್ಸಿಗೂ ಕೂಡ ನಿರ್ಧಾರಕ ಅಂಶವಾಗಿದೆ.
ದಿಕ್ಕು : ಮಾಸ್ಟರ್ ಬೆಡ್‌ರೂಂ ವಾಸ್ತು ಸಲಹೆಯ ಪ್ರಕಾರ, ಬೆಡ್‌ರೂಂ ನೈರುತ್ಯ ದಿಕ್ಕಿನಲ್ಲಿರಬೇಕು.
ಮುಖ್ಯ ಬಾಗಿಲಿನ ಸ್ಥಾನ :ಮಾಸ್ಟರ್ ಬೆಡ್‌ರೂಂ ಮಾರ್ಗಸೂಚಿಗಳಲ್ಲಿ ಬೆಡ್‌ರೂಂ ಬಾಗಿಲು 90 ಡಿಗ್ರಿ ಕೋನದಲ್ಲಿ ತೆರೆಯಬೇಕು, ಬಾಗಿಲು ಹಾಕುವಾಗ ಅಥವಾ ತೆರೆಯುವಾಗ ಯಾವುದೇ ಕೀರಲು ಶಬ್ದ ಉಂಟುಮಾಡಬಾರದು ಮತ್ತು ಅದು ಒಂದೋ ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ಇರಬೇಕು ಎಂದು ಹೇಳಲಾಗಿದೆ.
ಮಂಚ ಇರಿಸಬೇಕಾದ ಸ್ಥಳ :ವಾಸ್ತು ಸಿದ್ಧಾಂತದ ಪ್ರಕಾರ ಮಂಚವನ್ನು ಅದರ ಕಾಲುಗಳು ಉತ್ತರ ಅಥವಾ ಪೂರ್ವ ದಿಕ್ಕಿಗೆ ಬರುವ ರೀತಿಯಲ್ಲಿ ಒಂದೋ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಬೇಕು. ಅದನ್ನು ಮೂಲೆಯಲ್ಲಿ ಇರಿಸುವ ಬದಲು ಮಧ್ಯದಲ್ಲಿ ಇರಿಸಬೇಕು.
ಬಣ್ಣ :ಮಾಸ್ಟರ್ ಬೆಡ್‌ರೂಂ ವಾಸ್ತು ಮಾರ್ಗಸೂಚಿಗಳ ಅನುಸಾರ ಮಾಸ್ಟರ್ ಬೆಡ್‌ರೂಂಗೆ ಆದರ್ಶವಾದ ಬಣ್ಣಗಳು ಬೂದು, ಹಸಿರು, ಕೆಂಪು ಮತ್ತು ನೀಲಿ, ಐವರಿ ಅಥವಾ ನಸು ಬಣ್ಣವಾಗಿದೆ
ವಾರ್ಡ್‌ರೋಬ್ ಇರಬೇಕಾದ ಜಾಗ :ವಾರ್ಡ್‌ರೋಬ್ ಅನ್ನು ಒಂದೋ ಪಶ್ಚಿಮ, ನೈರುತ್ಯ ಅಥವಾ ದಕ್ಷಿಣ ದಿಕ್ಕಿನಲ್ಲಿ ರಚಿಸಬೇಕು ಏಕೆಂದರೆ ಮಾಸ್ಟರ್ ಬೆಡ್‌ರೂಂ ವಾಸ್ತು ಸಲಹೆಗಳ ಪ್ರಕಾರ ಈ ದಿಕ್ಕುಗಳು ಸಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತವೆ.
ಅಲಂಕಾರ :ಗೋಡೆಯನ್ನು ಭೂದೃಶ್ಯಾವಳಿಗಳು ಅಥವಾ ಸಮುದ್ರದ ದೃಶ್ಯಗಳ ಕಲಾಕೃತಿಗಳಿಂದ ಅಲಂಕರಿಸುವಂತೆ ಶಿಫಾರಸು ಮಾಡಲಾಗಿದೆ ಹಾಗೂ ಮಾಸ್ಟರ್ ಬೆಡ್‌ರೂಂ ವಾಸ್ತು ನಿಯಮಗಳ ಅನುಸಾರ ಹಿಂಸೆಯನ್ನು ಬಿಂಬಿಸುವ ಯಾವುದೇ ಚಿತ್ರಗಳನ್ನು ಇರಿಸಬಾರದು.
ಈಗ ನಿಮ್ಮ ಬೆಡ್‌ರೂಂಗೆ ಸರಿಯಾದ ವಾಸ್ತು ನಿಮಗೆ ತಿಳಿದಿರುವುದರಿಂದ, ನಿಮ್ಮ ಆತ್ಮೀಯ ಸ್ಥಳವನ್ನು ಸಕಾರಾತ್ಮಕ ಮತ್ತು ಮನೋಹರ ದೃಶ್ಯಗಳಿಂದ ತುಂಬಿಸಿ ಮತ್ತು ಅದನ್ನು ನಿಮ್ಮ ವಿಶ್ರಾಂತಿ ಸ್ಥಳವಾಗಿಸಿಕೊಳ್ಳಿ.
ನಿಮ್ಮ ಬೆಡ್‌ರೂಂ ಹೊರತಾಗಿ ನೀವು ಹೆಚ್ಚಿನ ಮತ್ತು ಗಮನಾರ್ಹ ಸಮಯ ಕಳೆಯುವ ಹಾಗೂ ಆಲೋಚನೆ ಮಾಡುವ ಸ್ಥಳವೆಂದರೆ ನಿಮ್ಮ ಶೌಚಕೋಣೆಯಾಗಿದೆ. ಅದನ್ನು ವಾಸ್ತು ಪ್ರಕಾರ ನಿರ್ಮಿಸುವ ಮೂಲಕ ಆಹ್ಲಾದಕರ ಸ್ಥಳವಾಗಿಸುವುದನ್ನು ಖಚಿತಪಡಿಸಿಕೊಳ್ಳಿ. ಶೌಚಕೋಣೆಯ ವಾಸ್ತು ಕುರಿತು ಇನ್ನಷ್ಟು ಓದಿ.