ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ
ನೀವು ಸಿಮೆಂಟ್‌ನಿಂದ ಹಿಡಿದು ಕಾಂಕ್ರೀಟ್‌ನ ಸಮಗ್ರ ಬಲದವರೆಗೆ ಮನೆ ನವೀಕರಣದ ಹಾದಿಯಲ್ಲಿ ತುಂಬಾ ಆಸಕ್ತಿ ವಹಿಸಿದವರಾಗಿದ್ದರೆ ಮತ್ತು ಮನೆಯ ಪೇಂಟಿಂಗ್ ಕೂಡ ಮಾಡಲು ಬಯಸಿದ್ದರೆ, ಸರಿಯಾದ ಬಣ್ಣ ಮತ್ತು ದೀರ್ಘಬಾಳಿಕೆಯ ಪೇಂಟ್ ಆಯ್ಕೆ ಮಾಡಲು ನಿಮಗಾಗಿ ಕೆಲವು ಮನೆ ಪೇಂಟಿಂಗ್ ಸಲಹೆಗಳನ್ನು ನಾವಿಲ್ಲಿ ಒದಗಿಸಿದ್ದೇವೆ. ಈ ಮನೆ ಪೇಂಟಿಂಗ್ ಮಾರ್ಗದರ್ಶಿ ಪೇಂಟಿಂಗ್ ಸಲಹೆಗಳಿಂದ ಹಿಡಿದು ಗೋಡೆಗಳನ್ನು ಪೇಂಟ್ ಮಾಡಲು ಬಳಸುವ ತಂತ್ರಗಳವರೆಗೆ ಎಲ್ಲವನ್ನೂ ಒಳಗೊಂಡಿದೆ. ಈಗ ಆರಂಭಿಸೋಣ!
ಈ ಪೇಂಟಿಂಗ್ ಸಲಹೆಗಳು ಸ್ವತಃ ನೀವೇ ಸಂಪೂರ್ಣ ಪೇಂಟಿಂಗ್ ಕೈಗೊಳ್ಳಲು ನಿಮ್ಮನ್ನು ಪ್ರೇರೇಪಿಸಿದ್ದರೆ, ಆರಂಭಿಸುವುದಕ್ಕೆ ಮೊದಲು ಈ ಲೇಖನ ಓದುವಂತೆ ನಾವು ನಿಮಗೆ ಸಲಹೆ ನೀಡುತ್ತೇವೆ :
https://www.ultratechcement.com/home-building-explained-single/how-to-choose-the-right-exterior-paint-colours-for-your-home
ಪದೇಪದೇ ಕೇಳುವ ಪ್ರಶ್ನೆಗಳು
1. ಹಳೆಯ ಪೇಂಟ್ ಮೇಲೆ ನೇರವಾಗಿ ಪೇಂಟ್ ಮಾಡಬಹುದೇ ?
ಹಳೆಯ ಪೇಂಟ್ ಮತ್ತು ಹೊಸ ಪೇಂಟ್ ರಾಸಾಯನಿಕವಾಗಿ ಒಂದೇ ಆಗಿದ್ದರೆ (ಉದಾಹರಣೆಗೆ ಆಯ್ಲ್ ಆಧರಿತ) ಬಹುಶಃ ನಿಮಗೆ ಪ್ರೈಮರ್ ಅಗತ್ಯ ಬರುವುದಿಲ್ಲ. ಒಂದು ವೇಳೆ ಪ್ರಸ್ತುತ ಗೋಡೆ ನುಣುಪು ಮತ್ತು ಸ್ವಚ್ಛವಾಗಿದ್ದರೆ, ಹಳೆಯ ಪೇಂಟ್ ಮೇಲೆ ನೀವು ನೇರವಾಗಿ ಹೊಸ ಪೇಂಟ್ ಬಳಸಬಹುದು.
2. ನೀವು ಹಚ್ಚಬೇಕಾದ ಕನಿಷ್ಟ ಪೇಂಟ್ ಕೋಟ್ ಎಷ್ಟು ?
ಕನಿಷ್ಟ ಎರಡು ಕೋಟ್ ಪೇಂಟ್ ಹೊಡೆಯಬೇಕು ಎನ್ನುವುದು ನಿಯಮವಾಗಿದೆ. ಅದಾಗ್ಯೂ, ಸಾಮಗ್ರಿ ಮತ್ತು ಗೋಡೆಗೆ ಹಿಂದೆ ಹೊಡೆದಿರುವ ಬಣ್ಣ ಈ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು, ಉದಾಹರಣೆಗೆ, ಬಣ್ಣ ಹೊಡೆಯದೆ ಇರುವ ಒಣಗೋಡೆಗೆ, ನೀವು ಪ್ರೈಮರ್ ಅಥವಾ ಅಂಡರ್‌ಕೋಟ್ ಪೇಂಟ್ ಅನ್ನೂ ಬಳಿಯಬೇಕಾಗುತ್ತದೆ.
3. ಪೇಂಟ್ ಮಾಡುವುದಕ್ಕೆ ಮೊದಲು ನೀವು ನಿಮ್ಮ ಗೋಡೆಗೆ ಪ್ರೈಮರ್ ಹಚ್ಚದಿದ್ದರೆ ಏನಾಗುತ್ತದೆ ?
ಒಂದು ವೇಳೆ ಪ್ರೈಮರ್ ಹಚ್ಚದಿದ್ದರೆ, ನಿಮ್ಮ ಪೇಂಟ್ ಕಿತ್ತು ಬರುವ ಅಧಿಕ ಅಪಾಯವಿರುತ್ತದೆ, ವಿಶೇಷವಾಗಿ ಆರ್ದ್ರ ಪರಿಸ್ಥಿತಿಗಳಲ್ಲಿ. ಇದರ ಜೊತೆಗೆ, ಅಂಟಿಕೊಳ್ಳುವಿಕೆ ಇಲ್ಲದಿದ್ದಲ್ಲಿ ಪೇಂಟ್ ಒಣಗಿದ ತಿಂಗಳುಗಳ ಬಳಿಕ ಸ್ವಚ್ಛಗೊಳಿಸುವಿಕೆಯನ್ನು ಕಠಿಣವಾಗಿಸಬಹುದು. ಕೊಳೆ ಅಥವಾ ಬೆರಳಚ್ಚನ್ನು ನಿವಾರಿಸಲು ನೀವು ಪ್ರಯತ್ನಿಸುವಾಗ ಪೇಂಟ್ ಕಿತ್ತುಬರುವುದನ್ನು ನೀವು ಕಾಣಬಹುದು.