Stages of Building New Home Stages of Building New Home

ಒಂದು ಹೊಸ ಮನೆಯ ನಿರ್ಮಾಣದ ವಿವಿಧ ಘಟ್ಟಗಳು

ನಿಮ್ಮ ಮನೆಯನ್ನು ನಿರ್ಮಿಸುವುದು ನಿಮ್ಮ ಜೀವನದ ಅತಿ ದೊಡ್ಡ ನಿರ್ಧಾರಗಳಲ್ಲಿ ಒಂದಾಗಿರುತ್ತದೆ. ನಿಮ್ಮ ಮನೆಯು ನಿಮ್ಮ ಗುರುತಾಗಿರುತ್ತದೆ. ಅದಕ್ಕಾಗಿಯೇ ನಿಮ್ಮ ಮನೆಯ ನಿರ್ಮಾಣದ ಪ್ರತಿಯೊಂದು ಘಟ್ಟದಲ್ಲೂ ಏನು ಮಾಡಬೇಕೆಂದು ನಿಮಗೆ ತಿಳಿದಿರುವುದು ನಿರ್ಣಾಯಕವಾಗಿರುತ್ತದೆ. ನಿಮ್ಮ ಹೊಸ ಮನೆಯ ನಿರ್ಮಾಣವನ್ನು ಯೋಜಿಸಬೇಕಾಗುತ್ತದೆ ಮತ್ತು ಟ್ರ್ಯಾಕ್ ಮಾಡಬೇಕಾಗುತ್ತದೆ, ಹಾಗಾಗಿ ನಿಮ್ಮ ಮನೆಯನ್ನು ಕಟ್ಟುವ ಪ್ರಯಾಣದಲ್ಲಿನ ವಿವಿಧ ಘಟ್ಟಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ

ನಿಮ್ಮ ಮನೆಯ ನಿರ್ಮಾಣವನ್ನು ಸೂಕ್ತವಾಗಿ ಯೋಜಿಸುವುದು ನಿಮ್ಮ ಅಂದಾಜು ಲೆಕ್ಕಾಚಾರಕ್ಕೆ ಸಹಾಯ ಮಾಡುವುದಲ್ಲದೇ ದುಬಾರಿ ತಪ್ಪುಗಳನ್ನು ಮಾಡುವುದನ್ನು ತಡೆಯುತ್ತದೆ. ನಿಮ್ಮ ಮನೆಯ ನಿರ್ಮಾಣವನ್ನು ನೀವು ಸೂಕ್ತ ರೀತಿಯಲ್ಲಿ ಯೋಜಿಸಿದಾಗ, ನಿಮಗೆ ವಸ್ತುಗಳ ಗುಣಮಟ್ಟವನ್ನು, ಒಳಾಂಗಣಗಳ ಲೆಕ್ಕಾಚಾರವನ್ನು ನಿರ್ಧರಿಸಲು ಹಾಗೂ ಪ್ರತಿ ಘಟ್ಟದಲ್ಲೂ ಬೇಕಾದ ಅಗತ್ಯವಾದ ಹಣದ ಹರಿವನ್ನು ವ್ಯವಸ್ಥೆಗೊಳಿಸಲು ಅನುಕೂಲವಾಗುತ್ತದೆ.

ಅದೃಷ್ಟವಶಾತ್ ನಿಮ್ಮ ಮನೆಯ ನಿರ್ಮಾಣದ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡುವ ಭಾರತದ ನಂ.1 ಸಿಮೆಂಟ್ ಇಲ್ಲಿದೆ. ಯೋಜನೆ ಮಾಡುವುದರಿಂದ ಹಿಡಿದು ಪೂರ್ಣಗೊಳಿಸುವವರೆಗಿನ ಪ್ರತಿ ಹಂತದಲ್ಲಿಯೂ ಸೂಕ್ತ ಉಪಾಯಗಳು ಮತ್ತು ತಜ್ಞರ ಸಲಹೆಯೊಂದಿಗೆ, ನಿಮ್ಮ ಮನೆಯನ್ನು ನಿರ್ಮಿಸಲು ನೀವು ಸಿದ್ಧರಾಗಬಹುದು.

ಮನೆಯ ನಿರ್ಮಾಣದ ವಿವಿಧ ಘಟ್ಟಗಳು ಇಲ್ಲಿವೆ,
ಉತ್ತಮ ನಿರ್ಮಾಣಕ್ಕಾಗಿ ನಿಮಗೆ ಸಹಾಯ ಮಾಡಲು:

1

ನಿವೇಶನವನ್ನು ಸಿದ್ಧಪಡಿಸುವುದು ಮತ್ತು
ಅಡಿಪಾಯವನ್ನು ಹಾಕುವುದು

1

ನಿವೇಶನವನ್ನು ಸಿದ್ಧಪಡಿಸುವುದು ಮತ್ತು
ಅಡಿಪಾಯವನ್ನು ಹಾಕುವುದು

ನಿಮ್ಮ ಮನೆಯನ್ನು ನಿರ್ಮಿಸುವ ಮೊದಲ ಹೆಜ್ಜೆಯು ಬಲವಾದ ಮತ್ತು ಭದ್ರವಾದ ಅಡಿಪಾಯವನ್ನು ಹಾಕುವುದಾಗಿರುತ್ತದೆ. ಮೊದಲಿಗೆ, ನಿವೇಶನದಲ್ಲಿ ಬಂಡೆಗಳು ಮತ್ತು ಭಗ್ನಾವಶೇಷಗಳಿದ್ದಲ್ಲಿ, ಅವುಗಳನ್ನು ತೆರವುಗೊಳಿಸಬೇಕಾಗುತ್ತದೆ. ಅಗೆತವನ್ನು ಪ್ರಾರಂಭಿಸುವ ಮೊದಲು, ನಿವೇಶನದಲ್ಲಿನ ಗುರುತುಗಳು ಯೋಜನೆಯ ಪ್ರಕಾರ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ನಿರ್ಮಾಣ ತಂಡವು ನಿವೇಶನವನ್ನು ಸಮತಟ್ಟಾಗಿಸಬೇಕು ಮತ್ತು ಅಡಿಪಾಯವನ್ನು ಹಾಕಲು ಗುಂಡಿಗಳು ಮತ್ತು ಕಂದಕಗಳನ್ನು ಅಗೆಯಬೇಕು.

ಕಾಂಕ್ರೀಟ್ ಅನ್ನು ಸುರಿದ ನಂತರ, ಅದು ಹೊಂದಿಕೆ ಆಗಲು ಬಿಡಬೇಕು ಮತ್ತು ನಂತರ ಸಂಪೂರ್ಣವಾಗಿ ಕ್ಯೂರ್ ಮಾಡಬೇಕಾಗುತ್ತದೆ. ಕ್ಯೂರ್ ಮಾಡಿದ ನಂತರ ಜಲನಿರೋಧಕ ಹಾಗೂ ಗೆದ್ದಲು-ನಿರೋಧಕ ಪ್ರಕ್ರಿಯೆಗಳನ್ನು ಮಾಡುವುದು ಉತ್ತಮ. ತೇವ ವಿರೋಧಿ ಪಾಯವನ್ನು ಹಾಕಲು ಅಲ್ಟ್ರಾಟೆಕ್ ILW ಅತ್ಯಂತ ಸೂಕ್ತವಾಗಿರುತ್ತದೆ. ನಂತರ, ನಿಮ್ಮ ತಂಡವು ಅಡಿಪಾಯದ ಗೋಡೆಗಳ ಸುತ್ತಲಿನ ಪ್ರದೇಶವನ್ನು ಮಣ್ಣಿನಿಂದ ತುಂಬಿಸಬೇಕಾಗುತ್ತದೆ.

2

ಕಟ್ಟಡವನ್ನು ನಿರ್ಮಿಸುವುದು

2

ಕಟ್ಟಡವನ್ನು ನಿರ್ಮಿಸುವುದು

ಅಡಿಪಾಯವು ಸಿದ್ಧವಾದ ನಂತರ, ಮುಂದಿನ ಹಂತವಾಗಿ ಮನೆಯ ಕಟ್ಟಡವನ್ನು ನಿರ್ಮಿಸುವುದಾಗಿರುತ್ತದೆ. ಇದರಲ್ಲಿ ಕಿಟಕಿಗಳು ಮತ್ತು ಬಾಗಿಲುಗಳ ಚೌಕಟ್ಟುಗಳ ಜೊತೆಗೆ ಸ್ತಂಭಗಳು, ಅಡ್ಡಕಟ್ಟುಗಳು, ಕಾಲಮ್‌ಗಳು, ಗೋಡೆಗಳು, ಛಾವಣಿಯ ಸ್ಲ್ಯಾಬ್‌ಗಳ ಸ್ಥಾಪನೆಗಳು ಸೇರಿರುತ್ತವೆ. ನೀವು ಹೊಸದಾಗಿ ನಿರ್ಮಿಸುವ ಮನೆಯು ಹೇಗೆ ಕಾಣುತ್ತದೆ ಎನ್ನುವುದನ್ನು ತೋರಿಸಲು ಕೋಣೆಗಳನ್ನು ಪ್ರತ್ಯೇಕಿಸಲಾಗುತ್ತದೆ. 1 ಮತ್ತು ಮನೆಯ ಸುತ್ತಲೂ ಇರುವ ಕಾಲಮ್‌ಗಳ ಟಿಪ್ಪಣಿ ಮಾಡಿಕೊಳ್ಳಿ, ಏಕೆಂದರೆ ಅವುಗಳು ರಚನೆಯಲ್ಲಿನ ಹೆಚ್ಚಿನ ಭಾರವನ್ನು ಹೊರುತ್ತವೆ. ಇದು ನಿಮ್ಮ ಮನೆಯ ಶಕ್ತಿ ಮತ್ತು ನಿರ್ಮಿತಿಯನ್ನು ನಿರ್ಧರಿಸುವುದರಿಂದ ನಿರ್ಮಾಣದ ಒಂದು ಪ್ರಮುಖ ಹಂತವಾಗಿದೆ. ಆದ್ದರಿಂದ ನಿಮ್ಮ ಹೊಸ ಮನೆಯ ನಿರ್ಮಾಣ ಕಾರ್ಯದಲ್ಲಿ ಮೇಲ್ವಿಚಾರಣೆಯು ಬಹಳ ಮುಖ್ಯ ಪಾತ್ರ ವಹಿಸುತ್ತದೆ.

3

ಕೊಳಾಯಿ ಮತ್ತು ವಿದ್ಯುತ್ ಕಾಮಗಾರಿಗಳು

3

ಕೊಳಾಯಿ ಮತ್ತು ವಿದ್ಯುತ್ ಕಾಮಗಾರಿಗಳು

ನಿಮ್ಮ ಮನೆಯ ಕಾಂಕ್ರೀಟ್ ನಿರ್ಮಿತಿಯು ಸಿದ್ಧವಾದ ನಂತರ, ನೀವು ಕೊಳಾಯಿ ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಅಳವಡಿಸಲು ಪ್ರಾರಂಭಿಸಬಹುದು. ವಿದ್ಯುತ್ ಬೋರ್ಡ್‌ಗಳು ಹಾಗೂ ಸ್ವಿಚ್ಚುಗಳು ನಿಮಗೆ ಸಿಗುವ ಜಾಗಗಳಲ್ಲಿ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕಲುಷಿತವನ್ನು ತಪ್ಪಿಸುವ ಸಲುವಾಗಿ ಕೊಳಚೆ ನೀರಿನ ಕೊಳವೆಗಳು ಯಾವಾಗಲೂ ಕುಡಿಯುವ ನೀರಿನ ಕೊಳವೆಗಳಿಗಿಂತ ಕೆಳ ಮಟ್ಟದಲ್ಲಿರಬೇಕು. ವಿದ್ಯುತ್ ವೈರ್‌ಗಳು ಗೋಡೆಯ ಒಳಕ್ಕೆ ಅಳವಡಿಸುವುದಕ್ಕಾಗಿ, ಪ್ಲ್ಯಾಸ್ಟರ್ ಮಾಡುವ ಮೊದಲು ಗೋಡೆಗಳ ಒಳಗೆ ತಂತಿಗಳ ಪೈಪ್‌ಗಳನ್ನು ಹೊಂದಿರುವ ಪಿವಿಸಿ ಕೊಳವೆಗಳನ್ನು ಅಳವಡಿಸಬೇಕು. ಇದು ನೋಡಲು ಚೆನ್ನಾಗಿ ಕಾಣುವುದು ಮಾತ್ರವಲ್ಲದೇ, ತೇವಾಂಶ, ತಾಪಮಾನ ಮತ್ತು ಇಲಿ-ಹೆಗ್ಗಣಗಳಿಂದ ತಂತಿಗಳನ್ನು ರಕ್ಷಿಸುತ್ತದೆ. ಈ ಕಾಮಗಾರಿಯನ್ನು ಮುಗಿಸಿದ ನಂತರವೇ, ಗೋಡೆಗಳಿಗೆ ಪ್ಲಾಸ್ಟರ್ ಮಾಡಬೇಕಾಗುತ್ತದೆ.

4

ಬಾಗಿಲುಗಳು ಹಾಗೂ ಕಿಟಕಿಗಳ
ಅಳವಡಿಕೆ

4

ಬಾಗಿಲುಗಳು ಹಾಗೂ ಕಿಟಕಿಗಳ
ಅಳವಡಿಕೆ

ಗೋಡೆಗಳನ್ನು ವಾಲ್ ಫಿನಿಷ್ ಉಪಯೋಗಿಸಿ ಪ್ಲ್ಯಾಸ್ಟರ್ ಮಾಡಿದ ನಂತರ, ಕಿಟಕಿಗಳು ಮತ್ತು ಬಾಗಿಲುಗಳನ್ನು ಅಳವಡಿಸಬೇಕಾಗುತ್ತದೆ. ಕಿಟಕಿಗಳು ಮತ್ತು ಬಾಗಿಲುಗಳು ಪ್ರತ್ಯೇಕತೆ ಮತ್ತು ಗಾಳಿ ಬೆಳಕನ್ನು ಒದಗಿಸುತ್ತದೆ, ಆದ್ದರಿಂದ ಅದಕ್ಕಾಗಿ ಬಳಸಬೇಕಾದ ಸೂಕ್ತವಾದ ಸಾಮಗ್ರಿಗಳ ಬಗ್ಗೆ ನಿಮ್ಮ ಗುತ್ತಿಗೆದಾರರೊಂದಿಗೆ ಮೊದಲೇ ಮಾತನಾಡಿಕೊಳ್ಳಿ.

5

ಫಿನಿಶಿಂಗ್

5

ಫಿನಿಶಿಂಗ್

ಅಂತಿಮವಾಗಿ, ನಿಮ್ಮ ನಿರ್ಮಾಣ ತಂಡವು ಟೈಲ್‌ಗಳನ್ನು ಹಾಕಬೇಕಾಗುತ್ತದೆ, ವಿದ್ಯುತ್ ಬೋರ್ಡ್‌ಗಳು, ಕ್ಯಾಬಿನೆಟ್‌ಗಳು, ಕಿಚನ್ ಕೌಂಟರ್‌ಟಾಪ್‌ಗಳು ಇತ್ಯಾದಿಗಳನ್ನು ಅಳವಡಿಸಬೇಕಾಗುತ್ತದೆ. ಎಲ್ಲಾ ಭಾಗಗಳನ್ನು ಅಳವಡಿಸಿದ ನಂತರ, ನಿಮ್ಮ ಮನೆಯನ್ನು ವಾಲ್‌ಪೇಪರ್‌ಗಳಿಂದ ಪ್ಲ್ಯಾಸ್ಟರ್ ಮಾಡಬಹುದು ಅಥವಾ ಪೈಂಟಿಂಗ್ ಮಾಡಬಹುದು. ನಿಮ್ಮ ಮನೆಯ ಅಂತಿಮ ಸಜ್ಜುಗೊಳಿಕೆಯ ಬಗ್ಗೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಮಾಲೋಚಿಸಿ.

ನೆನಪಿಡಿ, ಮನೆ ನಿರ್ಮಾಣದ ಪ್ರತಿಯೊಂದು ಘಟ್ಟವೂ ನಿಮ್ಮ ನಿಯಂತ್ರಣದಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮೇಲ್ವಿಚಾರಣೆಯು ಅತಿ ಮುಖ್ಯವಾಗಿರುತ್ತದೆ. ಸೂಕ್ತವೆಂದರೆ, ಪ್ರಗತಿ ಮತ್ತು ದಾಸ್ತಾನುಗಳ ಸಂಗ್ರಹದ ಬಗ್ಗೆ ವಿವರಗಳನ್ನು ಪಡೆಯಲು ನೀವು ಪ್ರತಿದಿನ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡುವುದು. ನಿಮ್ಮ ಹೊಸ ಮನೆಯ ನಿರ್ಮಾಣದ ಯಾವುದೇ ಘಟ್ಟದಲ್ಲಿ ನಿಮಗೆ ಸಹಾಯ ಬೇಕಾದಲ್ಲಿ ತಜ್ಞರ ಸಲಹೆಯನ್ನು ಪಡೆಯಲು ಅಥವಾ ಸೂಕ್ತವಾದ ಕಟ್ಟಡ ಸಾಮಗ್ರಿಗಳನ್ನು ಹುಡುಕುವ ಸಲುವಾಗಿ ನಿಮ್ಮ ಹತ್ತಿರದ ಅಲ್ಟ್ರಾಟೆಕ್ ಬಿಲ್ಡಿಂಗ್ ಸಲ್ಯೂಷನ್ಸ್ ರವರ ಅಂಗಡಿಗೆ ನೀವು ಭೇಟಿ ನೀಡಬಹುದು.

ಅಲ್ಟ್ರಾಟೆಕ್ ಸಿಮೆಂಟ್‌ರವರ ಮನೆ ಕಟ್ಟುವಿಕೆಯ ಬಗೆಗಿನ ಸೂಚನೆ ಹಾಗೂ ಸಲಹೆಗಳಿಗಾಗಿ #ಮನೆಯ ಬಗ್ಗೆ ಮಾತನಾಡೋಣ ಯನ್ನು ಆಲಿಸಿ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ