ಒಂದು ಹೊಸ ಮನೆಯ ನಿರ್ಮಾಣದ ವಿವಿಧ ಘಟ್ಟಗಳು.

27 ನೇ ಅಕ್ಟೋಬರ್, 2020

ತಮ್ಮ ಸ್ವಂತ ಮನೆಯನ್ನು ಕಟ್ಟುವುದು ಪ್ರತಿಯೊಬ್ಬರ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ನಿಮ್ಮ ಮನೆಯು ನಿಮ್ಮ ಗುರುತಾಗಿರುತ್ತದೆ. ಹಾಗಾಗಿ, ಮನೆ ನಿರ್ಮಾಣದ ಎಲ್ಲಾ ಘಟ್ಟಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ, ಇದರಿಂದಾಗಿ ನಿಮ್ಮ ಹೊಸ ಮನೆಯ ನಿರ್ಮಿಸುವ ಕಾರ್ಯವನ್ನು ನೀವು ಪರಿಣಾಮಕಾರಿಯಾಗಿ ಯೋಜಿಸಬಹುದು ಮತ್ತು ಅದರ ಜಾಡನ್ನು ಇರಿಸಬಹುದು.

ಪೂರ್ವಸಿದ್ಧತೆಯಾಗಿ ಯೋಜನೆ ಮಾಡಿಕೊಳ್ಳುವುದು ಏಕೆ ಮುಖ್ಯವಾಗುತ್ತದೆ:

ಮನೆ ನಿರ್ಮಾಣಕ್ಕಾಗಿ ಸೂಕ್ತವಾದ ಯೋಜನೆ ಹಾಕಿಕೊಳ್ಳುವುದು, ಬಜೆಟ್ ಹಂಚಿಕೆ ಮಾಡುವುದು, ಯೋಜನೆಯ ಅವಧಿಯನ್ನು ನಿರ್ಧರಿಸಲು ನಿಮಗೆ ಸಹಾಯ ಮಾಡುತ್ತದೆ, ಇದು ನಿಮ್ಮ ಮನೆಯ ಒಟ್ಟಾರೆ ಗುಣಮಟ್ಟವನ್ನು ಖಾತ್ರಿಪಡಿಸುತ್ತದೆ. ಸರಿಯಾಗಿ ಸಿದ್ಧಪಡಿಸಿದ ಯೋಜನೆಯೊಂದಿಗೆ, ನಿಮ್ಮ ಮನೆ ನಿರ್ಮಾಣ ಕಾರ್ಯದ ನಿಯಂತ್ರಣವನ್ನು ನೀವು ಹೊಂದುವುದಲ್ಲದೇ, ನಿಮ್ಮ ಬಜೆಟ್‌ನಲ್ಲಿ ಸುಮಾರು 30% ವರೆಗೆ ವೆಚ್ಚವನ್ನು ಉಳಿಸಲು ಸಾಧ್ಯವಾಗುತ್ತದೆ.

ನಿಮ್ಮ ಮನೆ ಕಟ್ಟಡದ ನಿರ್ಮಾಣ ಕಾರ್ಯವನ್ನು ಯೋಜಿಸಲು ನಿಮಗೆ ಸಹಾಯ ಮಾಡುವ ಮನೆ ನಿರ್ಮಾಣದಲ್ಲಿನ ವಿವಿಧ ಘಟ್ಟಗಳು ಇಲ್ಲಿವೆ:

1. ನಿವೇಶನವನ್ನು ಸಿದ್ಧಪಡಿಸುವಿಕೆ ಹಾಗೂ ಅಡಿಪಾಯ ಹಾಕುವಿಕೆ

ಬಲವಾದ ಮತ್ತು ಭದ್ರವಾದ ಅಡಿಪಾಯವನ್ನು ಹಾಕುವುದು ನಿಮ್ಮ ಮನೆಯನ್ನು ನಿರ್ಮಿಸುವ ಮೊದಲ ಹೆಜ್ಜೆಯಾಗಿರುತ್ತದೆ. ಮೊದಲಿಗೆ, ನಿವೇಶನದಲ್ಲಿರುವ ಬಂಡೆಗಳು ಮತ್ತು ಭಗ್ನಾವಶೇಷಗಳನ್ನು ತೆರವುಗೊಳಿಸಬೇಕಾಗುತ್ತದೆ. ನೆಲವನ್ನು ಅಗೆಯಲು ಪ್ರಾರಂಭಿಸುವ ಮೊದಲು, ನಿವೇಶನದಲ್ಲಿ ನೀರಿನ ಪರೀಕ್ಷೆಯನ್ನು ಮಾಡಿಕೊಳ್ಳಿ ಹಾಗೂ ಯೋಜನೆಯ ಪ್ರಕಾರ ವಿನ್ಯಾಸದ ಗುರುತುಗಳನ್ನು ಮಾಡಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ನಿರ್ಮಾಣ ತಂಡವು ನಿವೇಶನವನ್ನು ಸಮತಟ್ಟು ಮಾಡಬೇಕಾಗುತ್ತದೆ ಹಾಗೂ ಅಡಿಪಾಯವನ್ನು ಹಾಕಲು ಗುಂಡಿಗಳು ಮತ್ತು ಕಂದಕಗಳನ್ನು ಅಗೆಯಬೇಕಾಗುತ್ತದೆ.

ಕಾಂಕ್ರೀಟ್ ಅನ್ನು ಸುರಿದ ನಂತರ, ಅದು ಹೊಂದಿಕೆ ಆಗಲು ಬಿಡಬೇಕು ಮತ್ತು ನಂತರ ಸಂಪೂರ್ಣವಾಗಿ ಕ್ಯೂರ್ ಮಾಡಬೇಕಾಗುತ್ತದೆ. ಸರಿಯಾಗಿ ಕ್ಯೂರ್ ಮಾಡಿದ ನಂತರ, ಜಲನಿರೋಧಕ ಹಾಗೂ ಗೆದ್ದಲು ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ತೇವ ವಿರೋಧಿ ಪಾಯವನ್ನು ಹಾಕಲು ಅಲ್ಟ್ರಾಟೆಕ್ ILW ಅತ್ಯಂತ ಸೂಕ್ತವಾಗಿರುತ್ತದೆ. ನಂತರ, ನಿಮ್ಮ ತಂಡವು ಅಡಿಪಾಯದ ಗೋಡೆಗಳ ಸುತ್ತಲಿನ ಪ್ರದೇಶವನ್ನು ಮಣ್ಣಿನಿಂದ ತುಂಬಿಸಬೇಕಾಗುತ್ತದೆ.

 

2. ಚೌಕಟ್ಟು ಸಿದ್ಧಪಡಿಸುವಿಕೆ

ಅಡಿಪಾಯವು ಸಿದ್ಧವಾದ ನಂತರ, ಮುಂದಿನ ಹಂತವಾಗಿ ಮನೆಯ ರಚನೆಯನ್ನು / ಚೌಕಟ್ಟನ್ನು ಸಿದ್ಧ ಮಾಡಬೇಕಾಗುತ್ತದೆ. ಕಿಟಕಿಗಳು ಮತ್ತು ಬಾಗಿಲುಗಳ ಚೌಕಟ್ಟುಗಳ ಜೊತೆಗೆ ಮೇಲುಪಾಯಗಳು, ಅಡ್ಡಕಟ್ಟುಗಳು, ಕಾಲಮ್‌ಗಳು, ಗೋಡೆಗಳು, ಛಾವಣಿಯ ಸ್ಲ್ಯಾಬ್ ಗಳ ಸ್ಥಾಪನೆ ಇವುಗಳು ಇದರಲ್ಲಿ ಸೇರಿರುತ್ತದೆ. ಕೊಠಡಿಗಳನ್ನು ವಿಂಗಡಿಸಿ, ನೀವು ಹೊಸದಾಗಿ ನಿರ್ಮಿಸುವ ಮನೆಯು ಹೇಗೆ ಕಾಣುತ್ತದೆ ಎನ್ನುವುದನ್ನು ತೋರಿಸುತ್ತದೆ. ಮನೆಯ ಸುತ್ತಲೂ ಬರುವ ಬೀಮ್‌ಗಳು ಮತ್ತು ಕಾಲಮ್‌ಗಳ ಟಿಪ್ಪಣಿ ಮಾಡಿಕೊಳ್ಳಿ, ಏಕೆಂದರೆ ಅವುಗಳು ನಿಮ್ಮ ನಿರ್ಮಾಣದ ಭಾರದಲ್ಲಿ ಹೆಚ್ಚಿನ  ಅಂಶವನ್ನು ಹೊರುತ್ತವೆ. ಇದು ನಿಮ್ಮ ಮನೆಯ ಸದೃಢತೆ ಮತ್ತು ರಚನೆಯನ್ನು ನಿರ್ಧರಿಸುವುದರಿಂದ, ಈ ಘಟ್ಟವು ನಿರ್ಮಾಣದ ಒಂದು ಪ್ರಮುಖ ಹಂತವಾಗಿದೆ. ಆದ್ದರಿಂದ ನಿಮ್ಮ ಹೊಸ ಮನೆಯ ಮೇಲ್ವಿಚಾರಣೆ ಬಹಳ ಮುಖ್ಯವಾಗುತ್ತದೆ.

 

3. ಬಾಗಿಲುಗಳು ಮತ್ತು ಕಿಟಕಿಗಳ ಅಳವಡಿಸುವಿಕೆ

ಗೋಡೆಗಳನ್ನು ವಾಲ್ ಫಿನಿಷ್ ಉಪಯೋಗಿಸಿ ಪ್ಲ್ಯಾಸ್ಟರ್ ಮಾಡಿದ ನಂತರ, ಕಿಟಕಿಗಳು ಮತ್ತು ಬಾಗಿಲುಗಳನ್ನು ಅಳವಡಿಸಬೇಕಾಗುತ್ತದೆ. ಕಿಟಕಿಗಳು ಮತ್ತು ಬಾಗಿಲುಗಳು ಪ್ರತ್ಯೇಕತೆ ಮತ್ತು ಗಾಳಿ ಬೆಳಕನ್ನು ಒದಗಿಸುತ್ತದೆ, ಆದ್ದರಿಂದ ಅದಕ್ಕಾಗಿ ಬಳಸಬೇಕಾದ ಸೂಕ್ತವಾದ ಸಾಮಗ್ರಿಗಳ ಬಗ್ಗೆ ನಿಮ್ಮ ಗುತ್ತಿಗೆದಾರರೊಂದಿಗೆ ಮೊದಲೇ ಮಾತನಾಡಿಕೊಳ್ಳಿ.

 

4. ಕೊಳಾಯಿ ಹಾಗೂ ವಿದ್ಯುತ್ ಕಾಮಗಾರಿ

ನಿಮ್ಮ ಮನೆಯ ಕಾಂಕ್ರೀಟ್ ನಿರ್ಮಿತಿಯು ಸಿದ್ಧವಾದ ನಂತರ, ನೀವು ಕೊಳಾಯಿ ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಅಳವಡಿಸಲು ಪ್ರಾರಂಭಿಸಬಹುದು. ನೀವು ಮನೆಯ ಒಳಗೆ ಪ್ರವೇಶಿಸಿದ ನಂತರ ವಿದ್ಯುತ್ ಬೋರ್ಡ್‌ಗಳು ಮತ್ತು ಸ್ವಿಚ್‌ಗಳಿಗೆ ಅನಿರ್ಬಂಧಿತ ಪ್ರವೇಶವನ್ನು ಹೊಂದಿರುವಿರಾ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕಲ್ಮಶವನ್ನು ತಪ್ಪಿಸುವ ಸಲುವಾಗಿ ಕೊಳಚೆ ನೀರಿನ ಕೊಳವೆಗಳು ಯಾವಾಗಲೂ ಕುಡಿಯುವ ನೀರಿನ ಕೊಳವೆಗಳಿಗಿಂತ ಕೆಳ ಮಟ್ಟದಲ್ಲಿರಬೇಕು.

 

5. ಅಂತಿಮಗೊಳಿಸುವಿಕೆ

ಅಂತಿಮವಾಗಿ, ನಿಮ್ಮ ನಿರ್ಮಾಣ ತಂಡವು ಟೈಲ್ ಗಳನ್ನು ಹಾಕಬೇಕಾಗುತ್ತದೆ, ವಿದ್ಯುತ್ ಬೋರ್ಡ್‌ಗಳು, ಕ್ಯಾಬಿನೆಟ್‌ಗಳು, ಕಿಚನ್ ಕೌಂಟರ್‌ಟಾಪ್‌ಗಳು ಇತ್ಯಾದಿಗಳನ್ನು ಅಳವಡಿಸಬೇಕಾಗುತ್ತದೆ. ನಿಮ್ಮ ಮನೆಯ ಅಂತಿಮ ಸಜ್ಜುಗೊಳಿಕೆಯ ಬಗ್ಗೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಮಾಲೋಚಿಸಿ.

ನೆನಪಿಡಿ, ಮನೆ ನಿರ್ಮಾಣದ ಪ್ರತಿಯೊಂದು ಘಟ್ಟವೂ ನಿಮ್ಮ ನಿಯಂತ್ರಣದಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮೇಲ್ವಿಚಾರಣೆಯು ಅತಿ ಮುಖ್ಯವಾಗಿರುತ್ತದೆ. ಪ್ರಗತಿ ಮತ್ತು ದಾಸ್ತಾನುಗಳ ಸಂಗ್ರಹದ ಬಗ್ಗೆ ವಿವರಗಳನ್ನು ಪಡೆಯಲು ನೀವು ಪ್ರತಿದಿನ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡುವುದು ಒಳ್ಳೆಯದು. ನಿಮ್ಮ ಹೊಸ ಮನೆಯ ನಿರ್ಮಾಣದ ಯಾವುದೇ ಘಟ್ಟದಲ್ಲಿ ನಿಮಗೆ ಸಹಾಯ ಬೇಕಾದಲ್ಲಿ, ತಜ್ಞರ ಸಲಹೆಯನ್ನು ಪಡೆಯಲು ಅಥವಾ ಸೂಕ್ತವಾದ ಕಟ್ಟಡ ಸಾಮಗ್ರಿಗಳನ್ನು ಹುಡುಕುವ ಸಲುವಾಗಿ ನಿಮ್ಮ ಹತ್ತಿರದ ಅಲ್ಟ್ರಾಟೆಕ್ ಬಿಲ್ಡಿಂಗ್ ಸಲ್ಯೂಷನ್ಸ್ ರವರ ಅಂಗಡಿಗೆ ನೀವು ಭೇಟಿ ನೀಡಬಹುದು.

ಅಲ್ಟ್ರಾಟೆಕ್ ಸಿಮೆಂಟ್ ರವರ ಮನೆ ಕಟ್ಟುವಿಕೆಯ ಬಗೆಗಿನ ಸೂಚನೆ ಹಾಗೂ ಸಲಹೆಗಳಿಗಾಗಿ #ಮನೆಯ ಬಗ್ಗೆ ಮಾತನಾಡೋಣ ಯನ್ನು ಆಲಿಸಿ

 


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ