ನಿಮ್ಮ ಗುತ್ತಿಗೆದಾರರೊಂದಿಗೆ ಸಹಿ ಮಾಡಿದ ಒಪ್ಪಂದದ ಮಹತ್ವ

25 ನೇ ಮಾರ್ಚ್, 2019

ನಿಮ್ಮ ಗುತ್ತಿಗೆದಾರರಿಂದ ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳುವ ಒಂದು ಉತ್ತಮ ವಿಧಾನವೆಂದರೆ, ಆತನಿಂದ ಒಪ್ಪಂದಕ್ಕೆ ಸಹಿ ಮಾಡಿಸುವುದು. ಗುತ್ತಿಗೆದಾರನು ತನ್ನ ಸಮಯಸೂಚಿಗೆ ಅನುಗುಣವಾಗಿ ಕಾಮಗಾರಿಯನ್ನು ಮುಗಿಸಿದರೆ, ನೀವು ನಿಮ್ಮ ಬಜೆಟ್‌ನಲ್ಲಿ ಉಳಿತಾಯವನ್ನು ಕಾಣಬಹುದು. ಇದಲ್ಲದೆ, ಇದು ಭವಿಷ್ಯದಲ್ಲಿ ಯಾವುದೇ ವಿವಾದಗಳನ್ನು ತಪ್ಪಿಸಲು ಕೂಡಾ ಸಹಾಯ ಮಾಡುತ್ತದೆ.

ನೀವು ಒಪ್ಪಂದದ ದಾಖಲೆಯನ್ನು ಮಾಡುವ ಮೊದಲು, ಸ್ವಂತ ಮನೆಯನ್ನು ಈಗಾಗಲೇ ನಿರ್ಮಿಸಿರುವ ನಿಮ್ಮ ಸಂಬಂಧಿಕರು, ಪರಿಚಯಸ್ಥರು ಮತ್ತು ನೆರೆಹೊರೆಯವರೊಂದಿಗೆ ಮಾತನಾಡಿ. ಗುತ್ತಿಗೆದಾರರೊಂದಿಗೆ ಉದ್ಭವಿಸಬಹುದಾದ ಸಮಸ್ಯೆಗಳ ಕುರಿತು ಅವರು ನಿಮಗೆ ಕೆಲವು ಒಳನೋಟಗಳನ್ನು ನೀಡಬಹುದು. ನಿಮ್ಮ ಒಪ್ಪಂದವು ಈ ಕೆಳಗಿನವುಗಳನ್ನು ಒಳಗೊಂಡಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ:

•    ಸೇವೆಗಳ ವೆಚ್ಚ ಅಂದರೆ ಗುತ್ತಿಗೆದಾರರ ಶುಲ್ಕ ಮತ್ತು ಕಾರ್ಮಿಕರ ವೆಚ್ಚ

•   ಕಾರ್ಮಿಕರ ನಿಯೋಜನೆ ಮತ್ತು ಕಾಮಗಾರಿಗಳನ್ನು ಮುಗಿಸಬಹುದಾದ ಸಮಯ

•    ಕಾಮಗಾರಿಯು ಪೂರ್ಣಗೊಳ್ಳುವ ದಿನಾಂಕ

•    ಅನಿರೀಕ್ಷಿತ ಅವಶ್ಯಕತೆಗಳಿಗಾಗಿ ತಾತ್ಕಾಲಿಕ ನಿಧಿಗಳು

ಸಾಧ್ಯವಾದಲ್ಲಿ, ನಿಮ್ಮ ಡಾಕ್ಯುಮೆಂಟ್ ಅನ್ನು ಪರೀಕ್ಷಿಸಲು ಕಾನೂನು ತಜ್ಞರ ಸಲಹೆಯನ್ನು ಪಡೆಯಿರಿ ಮತ್ತು ನಂತರ ಮಾತ್ರವೇ ಸಹಿ ಮಾಡಿ. ಗುತ್ತಿಗೆದಾರರು ಮತ್ತು ನೀವು ಸಹಿ ಮಾಡಿದ ನಂತರ, ದಯವಿಟ್ಟು ಒಪ್ಪಂದವನ್ನು ನೋಟರೈಜ್ ಮಾಡಿ.


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ