ನಿಮ್ಮ ಕಾಂಕ್ರೀಟ್ನ ಸಾಮರ್ಥ್ಯ ಮತ್ತು ಗುಣಮಟ್ಟವು ಅದನ್ನು ಸಿದ್ಧಪಡಿಸಲು ಬಳಸಿದ ನೀರಿನ ಮೇಲೆಯೂ ಅವಲಂಬಿಸಿರುತ್ತದೆ. ಕಾಂಕ್ರೀಟ್ ಮಿಶ್ರಣಕ್ಕೆ ಸರಿಯಾದ ಪ್ರಮಾಣದ ನೀರು ಯಾಕೆ ಅಗತ್ಯವಿದೆ ಎನ್ನುವುದರ ಕುರಿತು ಇನ್ನಷ್ಟು ತಿಳಿದುಕೊಳ್ಳೋಣ.
ಸಿಮೆಂಟ್ ಅನ್ನು ಬಲಿಷ್ಟವಾಗಿಸಲು ನೀರು ರಾಸಾಯನಿಕವಾಗಿ ಪ್ರತಿಕ್ರಿಯಿಸುತ್ತದೆ. ಬಳಸಲಾದ ನೀರು ಕಲುಷಿತವಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ, ಕಾಂಕ್ರೀಟ್ ಮಿಶ್ರಣ ಮಾಡುವಾಗ ಕುಡಿಯುವ ನೀರನ್ನು ಬಳಸಲಾಗುತ್ತದೆ
ಕಾಂಕ್ರೀಟ್ ಮಿಶ್ರಣ ಮಾಡುವಾಗ ಉಪ್ಪು ನೀರನ್ನು ಬಳಕೆ ಮಾಡಬೇಡಿ ಏಕೆಂದರೆ ಇದರಿಂದ ಆರ್ಸಿಸಿ ಸ್ಟೀಲ್ ರಾಡ್ ಸವಕಳಿಯಾಗಬಹುದು.
ನೆನಪಿಡಿ, ನಿಮ್ಮ ಕಾಂಕ್ರೀಟ್ ಮಿಶ್ರಣಕ್ಕೆ ಅತಿಯಾಗಿ ನೀರು ಸೇರಿಸುವುದರಿಂದ ಕಾಂಕ್ರೀಟ್ನ ಸಾಮರ್ಥ್ಯ ಮತ್ತು ಬಾಳಿಕೆ ಕಡಿಮೆಯಾಗಬಹುದು
ಒಂದು ವೇಳೆ ಕಾಂಕ್ರೀಟ್ನಲ್ಲಿ ನೀರಿನ ಅನುಪಾತ ಅಗತ್ಯಕ್ಕಿಂತ ಹೆಚ್ಚಿದ್ದರೆ, ಕ್ಯಾಂಪ್ಯಾಕ್ಟಿಂಗ್ ಮಾಡುವಾಗ ಹೆಚ್ಚುವರಿ ನೀರು ಮೇಲಕ್ಕೇರುತ್ತದೆ ಮತ್ತು ಕಾಂಕ್ರಿಟ್ನಲ್ಲಿ ಬಿರುಕುಗಳಿಗೆ ಕಾರಣವಾಗಬಹುದು.
ಯಾವಾಗಲೂ ನೆನಪಿಡಿ, ಒಂದು ಏಕೈಕ ಅಲ್ಟ್ರಾಟೆಕ್ ಸಿಮೆಂಟ್ ಬ್ಯಾಗ್ ಸಾಮಾನ್ಯವಾಗಿ 20 ರಿಂದ 27 ಲೀಟರ್ ನೀರು ಬಳಸುತ್ತದೆ. ಇವು ನಿಮ್ಮ ಮನೆಗಾಗಿ ಸಿಮೆಂಟ್ ಮಿಶ್ರಣ ಮಾಡುವಾಗ ಅನುಸರಿಸಬೇಕಾದ ನೀರು ಮತ್ತು ಕಾಂಕ್ರೀಟ್ ಅನುಪಾತ ಕುರಿತ ಕೆಲವು ಸಲಹೆಗಳಾಗಿವೆ
ಗುಣಮಟ್ಟದ ಕಟ್ಟಡ ಸಾಮಗ್ರಿಗಳು ಮತ್ತು ತಜ್ಞ ಸಲಹೆಗಳನ್ನು ಪಡೆಯಲು, ನಿಮ್ಮ ಸಮೀಪದ ಅಲ್ಟ್ರಾಟೆಕ್ ಬಿಲ್ಡಿಂಗ್ ಸೊಲ್ಯೂಷನ್ಸ್ ಸ್ಟೋರ್ಗೆ ಹೋಗಿ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ