ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ
ವಸತಿ ಅಥವಾ ವಾಣಿಜ್ಯ ಸ್ಥಳಕ್ಕಾಗಿ ನೀವು ಜಮೀನಿನ ಖರೀದಿ ಮಾಡಲು ಆಯ್ಕೆ ಮಾಡುವಾಗ, ವಾಸ್ತು ಪ್ರಕಾರ ಭೂಮಿಯ ಆಯ್ಕೆ ಮಾಡುವುದು ಬಹಳ ಮುಖ್ಯ. ಏಕೆಂದರೆ ಪ್ಲಾಟ್ ಭೂಮಿ ಸ್ಥಿರವಾಗಿದ್ದು ಚಲಿಸುವುದಿಲ್ಲ. ಆದ್ದರಿಂದ ಅದು ಸಕಾರಾತ್ಮಕ ಕಂಪನಗಳಿಂದ ಕೂಡಿದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಮನೆಗಾಗಿನ ವಾಸ್ತುಶಾಸ್ತ್ರವು ಪ್ಲಾಟ್ ವಾಸ್ತುವಿಗಿಂತ ಭಿನ್ನವಾಗಿದೆ. ಆದ್ದರಿಂದ, ನೀವು ಸರಿಯಾದ ಪ್ಲಾಟ್ ಖರೀದಿಸಿದ್ದೀರೇ ಇಲ್ಲವೇ ಎನ್ನುವ ಕುರಿತು ನೀವು ಚಿಂತಿತರಾಗಿದ್ದರೆ, ಎಲ್ಲವನ್ನೂ ವಿವರವಾಗಿ ತಿಳಿದುಕೊಳ್ಳಲು ಈ ಓದು ನಿಮಗೆ ಸಹಾಯಕವಾಗಲಿದೆ.
ಎಲ್ಲಕ್ಕಿಂತ ಮೊದಲು, ಪ್ಲಾಟ್ ಖರೀದಿಸುವ ಮೊದಲು ಅನುಸರಿಸಬೇಕಾದ ವಾಸ್ತು ಮಾರ್ಗಸೂಚಿಗಳನ್ನು ಅರ್ಥಮಾಡಿಕೊಳ್ಳಿ. ಈ ವಿಭಾಗದೊಳಗೆ ನೆನಪಿಡಬೇಕಾದ ಮೂರು ಅವಶ್ಯಕ ಸಲಹೆಗಳಿವೆ :
ಸಕಾರಾತ್ಮಕತೆಯನ್ನು ಹೊರಸೂಸಲು ನಿಮ್ಮ ಪ್ಲಾಟ್ ಶಾಂತಿ, ನಿಶ್ಶಬ್ಧ ಮತ್ತು ಸುತ್ತ ಸಾಕಷ್ಟು ಹಸಿರಿನಿಂದ ಕೂಡಿರಬೇಕು. ಫಲವತ್ತಾದ ಮಣ್ಣು ಪ್ಲಾಟ್‌ನ ಸುತ್ತ ಉತ್ತಮ ಮಣ್ಣಿದೆ ಎನ್ನುವುದರ ಸೂಚಕವಾಗಿದೆ. ಪ್ಲಾಟ್ ವಾಸ್ತುವಿನೊಂದಿಗೆ ಮುಂದುವರಿಯುವುದಕ್ಕೆ ಮುನ್ನ, ಅಲ್ಲಿ ನಿಂತು ಅಲ್ಲಿನ ಕಂಪನಗಳನ್ನು ಅನುಭವಿಸುವುದು ಉತ್ತಮ. ನೀವು ಅಲ್ಲಿರುವಾಗ ಸಕಾರಾತ್ಮಕ ಭಾವನೆಯನ್ನು ಅನುಭವಿಸಬೇಕು. ಯಾವುದೇ ರೀತಿಯ ಕೆಡುಕಿನ ಅಥವಾ ನಕಾರಾತ್ಮಕ ಭಾವನೆಗಳು ಬರಬಾರದು.
ವಾಸ್ತು ಪ್ರಕಾರ ಸೈಟ್ ಆಯ್ಕೆಯಲ್ಲಿ ಅತಿ ಮುಖ್ಯ ಅಂಶವೆಂದರೆ ಸೈಟ್‌ನ ಅಭಿಮುಖ. ವಾಸ್ತು ಮಾರ್ಗಸೂಚಿಗಳು ವಿಜ್ಞಾನ ಮತ್ತು ತರ್ಕವನ್ನು ಆಧರಿಸಿವೆ. ಯಾವುದೇ ನಗರದಲ್ಲಿ, ರಸ್ತೆಯ ಎರಡೂ ಕಡೆಗಳಲ್ಲಿ ಮನೆಗಳು/ಅಪಾರ್ಟ್‌ಮೆಂಟ್‌ಗಳು ಇರುತ್ತವೆ ಮತ್ತು ಎಲ್ಲ ನಾಲ್ಕು ದಿಕ್ಕುಗಳಲ್ಲಿ ಮನೆಗಳಿದ್ದಾಗ ಅದು ಹೆಚ್ಚು ಸೊಬಗಿನಿಂದ ಕಾಣುತ್ತದೆ. ಆದ್ದರಿಂದ, ವಾಸ್ತು ಪ್ರಕಾರ ಎಲ್ಲ ನಾಲ್ಕು ದಿಕ್ಕುಗಳನ್ನು ಮಂಗಳಕರ ಎಂದು ಪರಿಗಣಿಸಲಾಗಿದೆ. ಪೂರ್ವಾಭಿಮುಖವಾದ ಪ್ಲಾಟ್ ವಿದ್ವಾಂಸರು, ಪೂಜಾರಿಗಳು, ತತ್ವಶಾಸ್ತ್ರಜ್ಞರು, ಪ್ರೊಫೆಸರ್‌ಗಳಿಗೆ ಉತ್ತಮ, ಉತ್ತರಾಭಿಮುಖವಾದ ಪ್ಲಾಟ್ ಅಧಿಕಾರಿಗಳು, ಆಡಳಿತದಲ್ಲಿರುವವರಿಗೆ ಉತ್ತಮ, ದಕ್ಷಿಣಾಭಿಮುಖವಾದ ಸೈಟ್ ವ್ಯವಹಾರ ನಡೆಸುವವರಿಗೆ ಮತ್ತು ಮ್ಯಾನೇಜ್‌ಮೆಂಟ್ ಮಟ್ಟದಲ್ಲಿ ಕೆಲಸ ಮಾಡುವವರಿಗೆ ಹಾಗೂ ಪಶ್ಚಿಮಾಭಿಮುಖವಾದ ಪ್ಲಾಟ್ ಸಮಾಜಕ್ಕೆ ಬೆಂಬಲ ಸೇವೆಗಳನ್ನು ಒದಗಿಸುವವರಿಗೆ ಸೂಕ್ತವಾಗಿದೆ.
ಮನೆ ನಿರ್ಮಾಣದ ವಿವಿಧ ಹಂತಗಳನ್ನು ಆರಂಭಿಸುವುದಕ್ಕೆ ಮುನ್ನ, ಜಮೀನಿನ ಹಿಂದಿನ ಬಳಕೆಯನ್ನು ಪರಿಶೀಲಿಸುವುದು ಮುಖ್ಯ. ಬೆಳೆ ಬೆಳೆಯುವುದಕ್ಕೆ ಸೂಕ್ತವಾದ ಮಣ್ಣು ಅತ್ಯಂತ ಫಲವತ್ತಾಗಿರುವುದರಿಂದ ಅಂತಹ ಪ್ಲಾಟ್ ಆರಿಸುವುದು ಅತ್ಯುತ್ತಮ. ಸಾಮಾನ್ಯವಾಗಿ, ಬೆಳೆ ಬೆಳೆಯುವುದಕ್ಕೆ ಸೂಕ್ತವಾದ ಮಣ್ಣು ಕಟ್ಟಡದ ಅಡಿಪಾಯಕ್ಕೂ ಸೂಕ್ತವಾಗಿರುತ್ತದೆ. ಕಪ್ಪು ಮಣ್ಣು ನೀರು ಮತ್ತು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವುದರಿಂದ ಅಡಿಪಾಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಅದು ಬೆಳೆಗೆ ಹಾಗೂ ಕಟ್ಟಡಗಳಿಗೆ ಸೂಕ್ತವಲ್ಲ. ಜೊತೆಗೆ ಮನೆ ನಿರ್ಮಾಣಕ್ಕೆ ಬಂಡೆಗಳಿರುವ ಜಾಗವನ್ನು ಆರಿಸಿಕೊಳ್ಳಬಾರದು. ಬಹಳಷ್ಟು ಹುಳಗಳಿರುವ ನೆಲವನ್ನು ಆಯ್ಕೆ ಮಾಡಬಾರದು, ಏಕೆಂದರೆ ಅಲ್ಲಿ ಮಣ್ಣು ಸಡಿಲವಾಗಿರುತ್ತದೆ.
ಪ್ಲಾಟ್ ಸುತ್ತ ರಸ್ತೆ ಎಲ್ಲಿದೆ ಎನ್ನುವುದು ಪರಿಗಣಿಸಬೇಕಾದ ಮತ್ತೊಂದು ಸಂಗತಿ. ಕೆಳಗೆ ಕೆಲವು ಮಾರ್ಗದರ್ಶನಗಳಿವೆ :
ಒಳ್ಳೆಯ ಸೈಟ್ :
ಸಾಧಾರಣ ಪ್ಲಾಟ್ :
ಕೆಟ್ಟ ಸೈಟ್ :
ಪ್ಲಾಟ್ ವಾಸ್ತುವಿನ ಇನ್ನೊಂದು ಪ್ರಮುಖ ಅಂಶವೆಂದರೆ ಆಯ್ಕೆ ಮಾಡಿದ ಪ್ಲಾಟ್ ಅಥವಾ ಜಮೀನಿನ ಆಕಾರ. ಅತ್ಯಂತ ಸಾಮಾನ್ಯವಾದ ನಾಲ್ಕು ಆಕಾರಗಳು ಈ ಕೆಳಗಿನಂತಿವೆ :
ಆಯತಾಕಾರದ ಪ್ಲಾಟ್ : 1:2 ಅನುಪಾತದಲ್ಲಿ ಉದ್ದ ಮತ್ತು ಅಗಲವನ್ನು ಹೊಂದಿರುವ ಪ್ಲಾಟ್ ಅನ್ನು ವಾಸ್ತು ಪ್ರಕಾರ ಉತ್ತಮ ಭೂಮಿಯ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಉದ್ದವು ಉತ್ತರ ದಿಕ್ಕಿನಲ್ಲಿದ್ದು ಅಗಲವು ಪಶ್ಚಿಮ ದಿಕ್ಕಿನಲ್ಲಿದ್ದರೆ ಅದನ್ನು ಅತ್ಯಂತ ಸೂಕ್ತ ಎಂದು ಪರಿಗಣಿಸಲಾಗುತ್ತದೆ. ಅಂತಹ ಪ್ಲಾಟ್‌ಗಳು ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತವೆ.
ತ್ರಿಭುಜಾಕಾರದ ಪ್ಲಾಟ್ : ತ್ರಿಭುಜಾಕಾರದ ಪ್ಲಾಟ್ ಒಳ್ಳೆಯದಲ್ಲ. ವಾಸ್ತು ಪ್ರಕಾರ, ಅಂತಹ ಪ್ಲಾಟ್‌ಗಳು ಅಗ್ನಿ ಅನಾಹುತ ಮತ್ತು ಹಾನಿಗೆ ಈಡಾಗುತ್ತವೆ.
ಅಂಡಾಕಾರದ ಪ್ಲಾಟ್ : ಅಂತಹ ಪ್ಲಾಟ್‌ಗಳನ್ನು ಮನೆಯ ನಿರ್ಮಾಣಕ್ಕೆ ಸೂಕ್ತ ಎಂದು ಪರಿಗಣಿಸುವುದಿಲ್ಲ. ವಾಸ್ತು ಪ್ರಕಾರ ಅಂತಹ ಪ್ಲಾಟ್‌ಗಳು ಮಾಲೀಕರಿಗೆ ದುರಾದೃಷ್ಟವನ್ನು ಉಂಟುಮಾಡುತ್ತವೆ.
ವಾಸ್ತು ಪ್ರಕಾರ, ಭೂಮಿ ಆಯ್ಕೆ ಮಾಡುವುದಕ್ಕೆ ಮುನ್ನ ಪ್ಲಾಟ್‌ನ ಏಕರೂಪತೆಯನ್ನೂ ಗಮನಿಸಬೇಕು ಎನ್ನಲಾಗಿದೆ :
ಒಂದು ವೇಳೆ ನೀವು ವಸತಿ ಉದ್ದೇಶಕ್ಕಾಗಿ ಪ್ಲಾಟ್ ಹುಡುಕುತ್ತಿದ್ದರೆ, ಅದು ಚಪ್ಪಟೆಯಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಜಮೀನಿನಲ್ಲಿ ಏರು ತಗ್ಗುಗಳಿದ್ದರೆ, ನೈರುತ್ಯ ಅಥವಾ ಈಶಾನ್ಯದ ಕಡೆ ಇಳಿಜಾರಿದ್ದಲ್ಲಿ ಅದು ಶುಭಸೂಚಕವಾಗಿದೆ. ಒಂದು ವೇಳೆ ಇಳಿಜಾರು ಪಶ್ಚಿಮದ ಕಡೆ ಇದ್ದರೆ, ಅದು ಕುಟುಂಬ ಸದಸ್ಯರ ನಡುವೆ ಮನಸ್ತಾಪಕ್ಕೆ ಕಾರಣವಾಗುತ್ತದೆ ಮತ್ತು ಅನಾರೋಗ್ಯ ಉಂಟುಮಾಡುತ್ತದೆ.
ನಿಮ್ಮ ಪ್ಲಾಟ್ ಯಶಸ್ಸು ಮತ್ತು ಸಂತೋಷದಿಂದ ಕೂಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಇವು ಕೆಲವು ಸಲಹೆಗಳಾಗಿವೆ. ವಾಸ್ತು ಪ್ರಕಾರ ಪ್ಲಾಟ್ ಅಥವಾ ಜಮೀನು ಆಯ್ಕೆ ಮಾಡಲು ತೆರಳುವಾಗ ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ. ಒಂದು ಮನೆ ನಿರ್ಮಾಣದ ಅಂದಾಜನ್ನು ಲೆಕ್ಕಾಚಾರ ಮಾಡುವುದಕ್ಕೆ ಮುನ್ನ ಮತ್ತು ಪ್ಲಾಟ್ ವಾಸ್ತುವನ್ನು ಅಂತಿಮಗೊಳಿಸುವುದಕ್ಕೆ ಮುನ್ನ, ಪ್ಲಾಟ್ ಖರೀದಿಸುವ ಕಾನೂನು ಅಗತ್ಯವನ್ನು ಪರಿಗಣಿಸುವುದು ಸೂಕ್ತ. ಅದನ್ನು ನೀವು ನಮ್ಮ ಲೇಖನದಲ್ಲಿ ವಿವರವಾಗಿ ಅರ್ಥಮಾಡಿಕೊಳ್ಳಬಹುದು : https://www.ultratechcement.com/home-building-explained-single/5-must-have-documents-to-avoid-legal-hassles-later