ನೀವು ಒಬ್ಬಂಟಿಯಾಗಿ ಮನೆ ನಿರ್ಮಿಸಲು ಸಾಧ್ಯವಿಲ್ಲ. ನಿಮಗೆ ಸಹಾಯ ಮಾಡಲು ಸಮರ್ಥ ತಜ್ಞರ ತಂಡದ ಅಗತ್ಯವಿರುತ್ತದೆ - ಆರ್ಕಿಟೆಕ್ಟ್, ಎಂಜಿನಿಯರ್, ಗುತ್ತಿಗೆದಾರ ಮತ್ತು ಮೇಸ್ತ್ರಿ. ನಿಮ್ಮ ಮನೆ ಎಷ್ಟು ಚೆನ್ನಾಗಿ ನಿರ್ಮಾಣವಾಗುತ್ತದೆ ಎನ್ನುವುದು ನೀವು ಎಷ್ಟು ಉತ್ತಮ ತಂಡವನ್ನು ಆಯ್ಕೆ ಮಾಡಿದ್ದೀರಿ ಎನ್ನುವುದರ ಮೇಲೆ ಅವಲಂಬಿತವಾಗುತ್ತದೆ.
ನೀವು ಗುತ್ತಿಗೆದಾರ ಅಥವಾ ಮೇಸ್ತ್ರಿಯನ್ನು ಸಂಪರ್ಕಿಸುವುದಕ್ಕೆ ಮುನ್ನ, ಅವರ ಕೆಲಸದ ಅನುಭವ ಮತ್ತು ಹಿಂದಿನ ಪ್ರಾಜೆಕ್ಟ್‌ಗಳು ಹಾಗೂ ಅವುಗನ್ನು ಸಮಯಕ್ಕೆ ಸರಿಯಾಗಿ ಮುಗಿಸಿದ್ದಾರೆಯೇ ಇಲ್ಲವೇ ಎಂದು ವಿಚಾರಿಸಿ. ನಿಮ್ಮ ಪರಿಚಿತ ಮನೆಮಾಲೀಕರನ್ನು ಕೇಳುವುದು ಒಳ್ಳೆಯ ಐಡಿಯಾ.
ನಿಮ್ಮ ಗುತ್ತಿಗೆದಾರ ಮತ್ತು ಮೇಸ್ತ್ರಿಯೊಂದಿಗೆ ನೀವು ಸಹಿ ಹಾಕುವ ಒಪ್ಪಂದವು ಯೋಜನೆಗೆ ಮತ್ತು ಪಾವತಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಹಾಗೂ ಹವಾಮಾನದಿಂದ ಉಂಟಾಗಬಹುದಾದ ಯಾವುದೇ ವಿಳಂಬಗಳನ್ನು ಉಲ್ಲೇಖಿಸಿರಬೇಕು. ಸಹಿ ಹಾಕುವುದಕ್ಕೆ ಮೊದಲು ನಿಮ್ಮ ಎಂಜಿನಿಯರ್ ಮತ್ತು ಆರ್ಕಿಟೆಕ್ಟ್ ಅವರಿಂದ ಒಪ್ಪಂದವನ್ನು ಪರಿಶೀಲಿಸಿಕೊಳ್ಳುವುದನ್ನು ಮರೆಯಬೇಡಿ.
ನಿಮ್ಮ ಯೋಜನೆಯ ವಿವರಗಳನ್ನು ನಿಮ್ಮ ಗುತ್ತಿಗೆದಾರ ಮತ್ತು ಮೇಸ್ತ್ರಿಯೊಂದಿಗೆ ಚರ್ಚಿಸಿ ಇದರಿಂದ ಎಲ್ಲರಿಗೂ ವಿಷಯ ಸಮಾನವಾಗಿ ತಿಳಿದಿರುತ್ತದೆ. ಟೈಮ್‌ಲೈನ್‌ಗಳು, ಸಾಮಗ್ರಿಗಳು, ಕಾರ್ಮಿಕ ವೆಚ್ಚಗಳು ಮತ್ತು ಒಟ್ಟಾರೆ ಬಜೆಟ್ ಅನ್ನು ಚರ್ಚಿಸಿ.
ಒಮ್ಮೆ ಈ ಹಂತಗಳನ್ನು ಮುಗಿಸಿದ ಬಳಿಕ, ಆರಂಭಿಸಲು ನೀವು ಸಿದ್ಧರಾಗುತ್ತೀರಿ. ನಿಮ್ಮ ಹೊಸ ಮನೆಯ ನಿರ್ಮಾಣ ಅಸಾಧಾರಣ ಕೆಲಸ ಆದ್ದರಿಂದ ನಿಮಗೆ ಸಹಾಯ ಮಾಡಲು ಜನರನ್ನು ಆಯ್ಕೆ ಮಾಡುವಾಗ, ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ ಮತ್ತು ಅತ್ಯುತ್ತಮ ಜನರನ್ನು ಆಯ್ಕೆ ಮಾಡಿ.
ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಅಂತಹ ಇನ್ನಷ್ಟು ಮಾಹಿತಿಗಾಗಿ ಅಲ್ಟ್ರಾಟೆಕ್ ಸಿಮೆಂಟ್‌ನ #ಮನೆಯಮಾತು ಆಲಿಸಿ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ