ಕಾಂಕ್ರೀಟ್ ಕ್ಯೂರಿಂಗ್'ನ  ಪ್ರಾಮುಖ್ಯತೆ

25 ನೇ ಮಾರ್ಚ್, 2019

ನೀವು ನಿರ್ಮಿಸುವ ಮನೆಯು ಸಾಕಷ್ಟು ಬಾಳಿಕೆ ಬರುವಂತಿರಬೇಕು. ಇಲ್ಲದಿದ್ದಲ್ಲಿ ನೀವು ರಿಪೇರಿ ಮತ್ತು ನವೀಕರಣಕ್ಕಾಗಿ ಸಾಕಷ್ಟು ಹಣ ಮತ್ತು ಸಮಯವನ್ನು ವ್ಯರ್ಥ ಮಾಡಬೇಕಾಗುತ್ತದೆ.

ಅಸಹ್ಯವಾದ ಬಿರುಕುಗಳು ಸರಿಯಾಗಿ ನಿರ್ಮಾಣವಾಗಿಲ್ಲದ ಮನೆಯ ಸಂಕೇತವಾಗಿರುತ್ತದೆ. ಆರಂಭಿಕ ಹಂತದಲ್ಲಿ ಕಾಂಕ್ರೀಟ್ ನೀರಿನ ಕೊರತೆ ಉಂಟಾದಾಗ, ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಗುತ್ತಿಗೆದಾರರು ಅಥವಾ ಗಾರೆಯವನ ಕಡೆಯಿಂದ ಯಾವುದೇ ನಿರ್ಲಕ್ಷ್ಯವಾಗಿದ್ದಲ್ಲಿ ಇದು ಸಂಭವಿಸುತ್ತದೆ.

ಬಿರುಕುಗಳನ್ನು ತಪ್ಪಿಸುವ ಸಲುವಾಗಿ, ಸರಿಯಾದ ಕ್ಯೂರಿಂಗ್ ಅಥವಾ ನೀರುಹಾಕುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಕ್ಯೂರಿಂಗ್ ಮಾಡುವ ಮುಖ್ಯ ಉದ್ದೇಶವೆಂದರೆ ಕಾಂಕ್ರೀಟ್ ಮೇಲ್ಮೈಯನ್ನು ಎಲ್ಲಾ ಸಮಯದಲ್ಲೂ ತೇವವಾಗಿರಿಸುವುದು, ಸಮಯ ಕಳೆದಂತೆ ಕಾಂಕ್ರೀಟ್ ಬಲಗೊಳ್ಳಲು ಅದು ಅನುವು ಮಾಡಿಕೊಡುತ್ತದೆ.

ದಯವಿಟ್ಟು ಇದನ್ನು ಖಚಿತಪಡಿಸಿಕೊಳ್ಳಿ

ಕಾಂಕ್ರೀಟ್ ಹಾಕುವ ಎಲ್ಲಾ ಹಂತಗಳಲ್ಲಿ ಕ್ಯೂರಿಂಗ್ ಅನ್ನು ಮಾಡಬೇಕಾಗುತ್ತದೆ
ಕ್ಯೂರಿಂಗ್ ಅನ್ನು ಏಳರಿಂದ ಹತ್ತು ದಿನಗಳವರೆಗೆ ಮುಂದುವರಿಸಬೇಕಾಗುತ್ತದೆ
ನೆನಪಿಡಿ, ಸಮಯಕ್ಕೆ ಸರಿಯಾಗಿ ತೆಗೆದುಕೊಂಡ ಕ್ರಮವು ಮುಂದಾಗುವ ದೊಡ್ಡ ಅನಾಹುತವನ್ನು ತಪ್ಪಿಸುತ್ತದೆ.  ರಿಪೇರಿಗಾಗಿ ಹಣವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಲು ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ಜಾಗರೂಕರಾಗಿರಿ.


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ