Avoid Unnecessary Cost While Home Construction

ನಿಮ್ಮ ಮನೆ ಕನ್‌ಸ್ಟ್ರಕ್ಷನ್ ವೆಚ್ಚವನ್ನು ಕಡಿಮೆ ಮಾಡುವ ವಿಧಾನಗಳು

ನಿಮ್ಮ ಮನೆಯ ನಿರ್ಮಾಣದ ಸಂದರ್ಭದಲ್ಲಿ. ತಾವು ತಮ್ಮ ಜೀವನದಲ್ಲಿ ಮಾಡಿರಬಹುದಾದ ಉಳಿತಾಯದ ಗಣನೀಯ ಭಾಗವನ್ನು ಖರ್ಚು ಮಾಡಬೇಕಾಗುತ್ತದೆ. ಅನಗತ್ಯವಾಗಿ ಮಾಡಬಹುದಾದ ಖರ್ಚುಗಳನ್ನು ಕಡಿಮೆಗೊಳಿಸುವ ಸಲುವಾಗಿ ನಿಮಗೆ ಸಹಾಯ ಮಾಡಬಹುದಾದ ಕೆಲವು ಸಲಹೆಗಳು ಇಲ್ಲಿವೆ.

ತಗುಲಬಹುದಾದ ವೆಚ್ಚವನ್ನು ವಿನ್ಯಾಸದ ಸಮಯದಲ್ಲಿಯೇ ಹೇಗೆ ಕಡಿಮೆಗೊಳಿಸುವುದು

 ಮನೆಯನ್ನು ವಿನ್ಯಾಸಗೊಳಿಸುತ್ತಿರುವಾಗಲೇ ನಿಮ್ಮ ಕುಟುಂಬದ ಭವಿಷ್ಯದ ಅಗತ್ಯತೆಗಳನ್ನು ಪರಿಗಣಿಸಬೇಕಾಗುತ್ತದೆ ಉದಾ. ನಿಮ್ಮ ಮಗು ದೊಡ್ಡವನಾದ ಮೇಲೆ ಅವನಿಗೆ ಬೇಕಾಗುವ ಹೆಚ್ಚುವರಿ ಕೋಣೆ ಮುಂತಾದವು. ನಿಮ್ಮ ಮನೆಯ ನಿರ್ಮಾಣವು ಒಮ್ಮೆ ಮುಗಿದ ನಂತರ, ಅದಕ್ಕೆ ಮಾಡುವ ಸೇರ್ಪಡೆಗಳು ತುಂಬಾ ದುಬಾರಿಯಾಗುತ್ತವೆ ಎನ್ನುವ ಎಚ್ಚರವು ಇರಲಿ.

ನೆನಪಿಟ್ಟುಕೊಳ್ಳಿ, ಅಡ್ಡವಾಗಿ ನಿರ್ಮಿಸುವುದಕ್ಕಿಂತ ಲಂಬವಾಗಿ ನಿರ್ಮಿಸುವುದು ಅಗ್ಗವಾಗುತ್ತದೆ, ಅಂದರೆ ನೆಲದ ಮಟ್ಟದಲ್ಲಿಯೇ ಮೂರು ಕೊಠಡಿಗಳನ್ನು ನಿರ್ಮಿಸುವ ಬದಲು ನಿಮ್ಮ ಮನೆಗೆ ಮತ್ತೊಂದು ಮಹಡಿಯನ್ನು ಸೇರಿಸುವುದು ಆರ್ಥಿಕವಾಗಿ ಹೆಚ್ಚು ಲಾಭದಾಯಕ.

 

ತಗುಲಬಹುದಾದ ವೆಚ್ಚವನ್ನು ವಿನ್ಯಾಸದ ಸಮಯದಲ್ಲಿಯೇ ಹೇಗೆ ಕಡಿಮೆಗೊಳಿಸುವುದು

ಅಗತ್ಯಕ್ಕೆ ಅನುಗುಣವಾಗಿಯೇ ಸಾಮಗ್ರಿಗಳನ್ನು ಖರೀದಿ ಮಾಡಿಕೊಳ್ಳಿ ಹಾಗೂ ದೊಡ್ಡ ಪ್ರಮಾಣ ಅಥವಾ ಒಂದೇ ಬಾರಿ ಅಲ್ಲ, ಏಕೆಂದರೆ ಇದು ಅಪವ್ಯಯವಾಗುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಮ್ಮ ಕಟ್ಟಡಕ್ಕೆ ಬೇಕಾದ ಸಾಮಗ್ರಿಗಳನ್ನು ಹತ್ತಿರದ ಸ್ಥಳದಲ್ಲಿಯೇ ಹುಡುಕಿ. ಇದು ನಿಮಗೆ ಪೂರೈಕೆಯ ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಲು ಅವಕಾಶ ನೀಡುವುದರ ಜೊತೆಗೆ ಸಾರಿಗೆ ವೆಚ್ಚದಲ್ಲಿ ಕೂಡಾ ಸಾಕಷ್ಟು ಉಳಿತಾಯ ಮಾಡುತ್ತದೆ.

ಸಾಮಗ್ರಿಗಳ ಬಳಕೆ ಹಾಗೂ ವೆಚ್ಚಗಳ ಜಾಡನ್ನು ಸರಿಯಾಗಿ ಇರಿಸಿಕೊಳ್ಳುವ ಸಲುವಾಗಿ ಸ್ಥಳದಲ್ಲಿನ ಕಟ್ಟಡ ಸಾಮಗ್ರಿಗಳ ಸಂಗ್ರಹ ಹಾಗೂ ಉಪಯೋಗಿಸಿದ ದೈನಂದಿನ ಲೆಕ್ಕಾಚಾರವನ್ನು ಇಟ್ಟುಕೊಳ್ಳಿ.

ಸಾಮಗ್ರಿಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡುವುದು ಹೇಗೆ

ನಿಮ್ಮ ಮನೆಯಲ್ಲಿ ಬಿರುಕುಗಳನ್ನು ತಪ್ಪಿಸಲು ನಿಮ್ಮ ಮನೆಯ ನಿರ್ಮಾಣದ ಸಮಯದಲ್ಲಿ ಕ್ಯೂರಿಂಗ್ ಕುರಿತು ಕೆಲವು ಸಲಹೆಗಳು ಇವು. ಅಂತಹ ಹೆಚ್ಚಿನ ಸಲಹೆಗಳಿಗಾಗಿ, www.ultratechcement.com ಗೆ ಭೇಟಿ ನೀಡಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ