ನಿಮ್ಮ ಮನೆಯ ಗೋಡೆಗಳನ್ನು ಪ್ಲಾಸ್ಟರಿಂಗ್ ಮಾಡುವುದರಿಂದ ಸುಗಮ ಫಿನಿಶ್ ನೀಡುವ ಬಣ್ಣವನ್ನು ಸುಲಭವಾಗಿ ಬಳಿಯಬಹುದಾಗಿದೆ. ಇದು ಹವಾಮಾನದಲ್ಲಿ ಆಗಬಹುದಾದ ಬದಲಾವಣೆಗಳಿಂದಲೂ ಕೂಡಾ ನಿಮ್ಮ ಮನೆಯನ್ನು ರಕ್ಷಿಸುತ್ತದೆ. ನಿಮ್ಮ ಮನೆಯ ಪ್ಲಾಸ್ಟರಿಂಗ್ ಮಾಡುವಾಗ ಅನುಸರಿಸಬಹುದಾದ 4 ಪ್ರಮುಖ ಸಲಹೆಗಳು ಇಲ್ಲಿವೆ.
ಗೋಡೆಗಳು ಪ್ಲ್ಯಾಸ್ಟರ್‌ನಿಂದ ನೀರನ್ನು ಹೀರಿಕೊಳ್ಳುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ, ಗೋಡೆಗಳ ಮೇಲೆ ಸ್ವಲ್ಪ ನೀರನ್ನು ಮೊದಲೇ ಸಿಂಪಡಿಸುವುದು ಸೂಕ್ತವಾಗಿರುತ್ತದೆ
ವೃಥಾ ಹಾಳಾಗುವುದನ್ನು ತಪ್ಪಿಸಲು, ಪ್ಲ್ಯಾಸ್ಟರ್ ಅನ್ನು ಸಣ್ಣ ಪ್ರಮಾಣದಲ್ಲಿ ಬೆರೆಸಿಕೊಳ್ಳಿ ಹಾಗೂ ಅದನ್ನು ತಕ್ಷಣವೇ ಬಳಸಿ
ಗೋಡೆಗಳು ಅಸಮರ್ಪಕವಾಗಿದ್ದಲ್ಲಿ, ಪ್ಲಾಸ್ಟರ್‌ನ 2-3 ದಪ್ಪ ಪದರಗಳನ್ನು ಹಚ್ಚಿ
ಪ್ಲ್ಯಾಸ್ಟರ್ ಅನ್ನು ಅನ್ವಯಿಸಿದ ನಂತರ, ಮುಂದಿನ 7-8 ದಿನಗಳವರೆಗೆ ಕ್ಯೂರಿಂಗ್ ಕೆಲಸವನ್ನು ಕೈಗೊಳ್ಳಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ
ನಿಮ್ಮ ಮನೆಯಲ್ಲಿನ ಪ್ಲ್ಯಾಸ್ಟರಿಂಗ್ ಅದರ ಒಟ್ಟಾರೆ ನೋಟ ಮತ್ತು ಗುಣಮಟ್ಟದಲ್ಲಿ ಸುಧಾರಣೆ ತರುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಮನೆಯ ಪ್ಲ್ಯಾಸ್ಟರಿಂಗ್ ಕೆಲಸವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವುದು ಹಾಗೂ ಗುತ್ತಿಗೆದಾರನನ್ನು ಅದರ ಬಗ್ಗೆ ಆಗ್ಗಾಗ್ಗೆ ಮಾಹಿತಿ ನೀಡುತ್ತಿರುವುದು ಒಳ್ಳೆಯದು.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ