ನಿಮ್ಮ ಮನೆಯ ಪ್ಲ್ಯಾಸ್ಟರಿಂಗ್ ಅನ್ನು ಹೇಗೆ ಮಾಡುವುದು

25 ನೇ ಆಗಸ್ಟ್, 2020

ಪ್ಲ್ಯಾಸ್ಟರಿಂಗ್ ಸಮಸ್ಯೆಗಳನ್ನು ತಪ್ಪಿಸಲು ಈ 5 ಕೆಲಸಗಳನ್ನು ಮಾಡಿ.
ಪ್ಲ್ಯಾಸ್ಟರಿಂಗ್ ನಂತರ ಗೋಡೆಯ ಮೇಲ್ಮೈಯಲ್ಲಿ ಕೆಲವು ಸಮಸ್ಯೆಗಳು ಕಾಣಬಹುದು: ಬಿರುಕುಗಳು ಮತ್ತು ಹೂವಿನ ರೀತಿ ಅಥವಾ ಬಿಳಿ ತೇಪೆಗಳು. ನಿಮ್ಮ ಜೀವನದ ಪ್ರಮುಖ ಯೋಜನೆಗಳಲ್ಲಿ ಒಂದಾದ ನಿಮ್ಮ ಮನೆಯ ಸೌಂದರ್ಯವನ್ನು, ಇವುಗಳು ಹೆಚ್ಚಾಗಿ ಹಾನಿಗೊಳಿಸಬಹುದು.

ಪ್ಲ್ಯಾಸ್ಟರಿಂಗ್ ಸಮಸ್ಯೆಗಳನ್ನು ತಪ್ಪಿಸಲು ಅಥವಾ ಸರಿಪಡಿಸಲು ಈ ಕೆಳಗಿನ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

  • ಗಾರೆಯನ್ನು ಮೆತ್ತಿದ ನಂತರ, ಅತಿಯಾದ ಕರಣೆ ಕಾಮಗಾರಿಯನ್ನು ತಪ್ಪಿಸಿ ಏಕೆಂದರೆ ಅದು ನಂತರದಲ್ಲಿ ಶುಷ್ಕತೆ ಮತ್ತು ಬಿರುಕುಗಳಿಗೆ ಕಾರಣವಾಗಬಹುದು.
  • ಉತ್ತಮ ಗುಣಮಟ್ಟದ ಮರಳನ್ನು ಮಾತ್ರವೇ ಬಳಸಿ. ಮರಳಿನಲ್ಲಿ ಹೆಚ್ಚುವರಿ ಹೂಳು ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
  • ಹತ್ತು ದಿನಗಳವರೆಗೆ ಸಾಕಷ್ಟು ಕ್ಯೂರಿಂಗ್ ಅನ್ನು ಮಾಡಲು ಮರೆಯದಿರಿ. ಇದು ಗಾರೆಯನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತದೆ.
  • ಅಂತಿಮ ಘಟ್ಟದಲ್ಲಿ ಪ್ಲಾಸ್ಟರ್ ಮೇಲ್ಮೈಯಲ್ಲಿ ಸಿಮೆಂಟ್ ಅನ್ನು ಸಿಂಪಡಿಸಬೇಡಿ.
  • ಗೋಡೆಯ ಮೇಲ್ಮೈಯಲ್ಲಿ ಬಿಳಿ ತೇಪೆಗಳು ರೂಪುಗೊಂಡಲ್ಲಿ, ಒಣ ಬ್ರಷ್ ಬಳಸಿ ಪ್ರದೇಶವನ್ನು ಸ್ವಚ್ಚಗೊಳಿಸಿ, ದುರ್ಬಲಗೊಳಿಸಿದ ಆಮ್ಲ ದ್ರಾವಣದ ಲೇಪನವನ್ನು ಅನ್ವಯಿಸಿ ಹಾಗೂ ಒಣಗಲು ಬಿಡಿ.

ನಿಮ್ಮ ಮನೆಯಲ್ಲಿ ಪ್ಲ್ಯಾಸ್ಟರಿಂಗ್ ಸಮಸ್ಯೆಗಳನ್ನು ತಪ್ಪಿಸಲು ಮತ್ತು ಪರಿಹರಿಸಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇವಾಗಿವೆ.


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ