ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ

ಹೊರಗಿನ ಗೋಡೆಗೆ ಬಣ್ಣವನ್ನು ಆಯ್ಕೆ ಮಾಡುವುದು ಹೇಗೆ?

ನಿಮ್ಮ ಮನೆಯ ಹೊರಗೋಡೆಗೆ ಬಣ್ಣ ಆಯ್ಕೆ ಮಾಡುವುದು ಹೇಗೆ ಎನ್ನುವ ಕುರಿತು ನೀವು ಗೊಂದಲಕ್ಕೊಳಗಾಗಿದ್ದರೆ, ಈ ಲೇಖನ ಬಣ್ಣದ ಆಯ್ಕೆಯನ್ನು ಸುಲಭ ಮತ್ತು ವೇಗವಾಗಿಸುತ್ತದೆ.

ನಮ್ಮ ಮನೆಯೊಳಗೆ ಬರುವ ಯಾರಿಗಾದರೂ ಅಚ್ಚಳಿಯದ ಪ್ರಭಾವ ಬೀರಲು ಸಾಮಾನ್ಯವಾಗಿ ನಾವು ಮನೆಯೊಳಗಿನ ಅಲಂಕಾರದ ಕುರಿತು ಗಮನ ಹರಿಸುತ್ತೇವೆ, ಆದರೆ ನಮ್ಮ ಮನೆಯ ಹೊರಗಿನ ನೋಟವು ನಮ್ಮ ಮನೆ ಮತ್ತು ನಮ್ಮ ಕುರಿತು ಸಂದರ್ಶಕರಿಗೆ ಮೊದಲ ಪ್ರಭಾ ಬೀರುತ್ತದೆ ಎನ್ನುವುದನ್ನು ನಾವು ಎಂದಿಗೂ ಪರಿಗಣಿಸುವುದಿಲ್ಲ. ಹೊರಗಿನ ಗೋಡೆಗೆ ಸರಿಯಾದ ಬಣ್ಣ ಆರಿಸುವುದು ಭಯಾನಕ ಮತ್ತು ಭಾರೀ ತ್ರಾಸದಾಯಕ ಅನುಭವ ಎರಡೂ ಆಗಿರಬಹುದು, ಏಕೆಂದರೆ ಒಂದು ವೇಳೆ ನಾವು ತಪ್ಪಾದ ಬಣ್ಣವನ್ನು ಆಯ್ಕೆ ಮಾಡಿದರೆ, ನಿಮ್ಮ ಮನೆಯ ಹೊರಭಾಗ ಕಳಾಹೀನ ಮತ್ತು ಬೋರಿಂಗ್ ಆಗಿ ಕಾಣಿಸಬಹುದು. ಮನೆಯ ಹೊರಗೋಡೆಗೆ ನೀವು ಪ್ರಖರ ಬಣ್ಣವನ್ನು ಆಯ್ಕೆ ಮಾಡಿದರೆ, ಅದು ಅತಿಯಾದ ಮತ್ತು ಕಣ್ಣಿಗೆ ರಾಚುವಂತೆ ಕಾಣಬಹುದು ಹಾಗೂ ನೆರೆಮನೆಯ ವಿನ್ಯಾಸ ಮತ್ತು ವಿವರಗಳ ಜೊತೆ ಸಂಘರ್ಷಕ್ಕೆ ಕಾರಣವಾಗಬಹುದು. ಆದರೆ ನಿಮ್ಮ ಮನೆಯ ಹೊರಾಂಗಣ ಬಣ್ಣಗಳನ್ನು ಮತ್ತು ಅತ್ಯುತ್ತಮ ಬಣ್ಣದ ಸಂಯೋಜನೆಗಳನ್ನು ಆಯ್ಕೆ ಮಾಡುವುದು ಹೇಗೆ ಎಂದು ತಿಳಿದಿದ್ದರೆ, ನಿಮ್ಮ ಮನೆಯ ಅಂದಕ್ಕೆ ಹೊರಗೋಡೆಗಳು ಇನ್ನಷ್ಟು ಮೆರುಗು ನೀಡುತ್ತವೆ.
 

ಹೊರಗಿನ ಗೋಡೆಗೆ ಬಣ್ಣವನ್ನು ಆಯ್ಕೆ ಮಾಡುವುದಕ್ಕಾಗಿ ಸಲಹೆಗಳು
 

How to Choose Colour for Exterior Walls

ನಿಮ್ಮ ಮನೆ ನಿರ್ಮಾಣದ ಪಯಣದಲ್ಲಿ ಅತ್ಯಂತ ರೋಚಕ ಹಂತವೆಂದರೆ ನಿಮ್ಮ ಮನೆಯ ಬಣ್ಣಗಳು. ಮತ್ತು ನೀವು ಆಯ್ಕೆ ಮಾಡುವ ಬಣ್ಣಗಳು ನಿಮ್ಮ ಮನೆಯ ದೃಶ್ಯಾತ್ಮಕ ಅನುಭವವನ್ನು ನಿರ್ಧರಿಸುತ್ತವೆ. ಮನೆಯ ಹೊರ ಗೋಡೆಯ ಆಯ್ಕೆ ಮತ್ತು ಗ್ರಹಿಕೆಯ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರುತ್ತವೆ. ಆದ್ದರಿಂದ ಗಮನದಲ್ಲಿಟ್ಟುಕೊಳ್ಳಲು ನಾವು ನಿಮಗೆ ಕೆಲವು ಸಂಗತಿಗಳನ್ಉನ ತಿಳಿಸುತ್ತಿದ್ದೇವೆ, ಇದರಿಂದ ನೀವು ಸರಿಯಾದ ಬಣ್ಣಗಳನ್ನು ಆಯ್ಕೆ ಮಾಡಬಹುದು :

 

  • 1. ಸಂಯೋಜನೆಗಳು: ಕಡಿಮೆ ಅಂದರೆ ಹೆಚ್ಚು :
    ಬಹಳಷ್ಟು ಬಣ್ಣಗಳನ್ನು ಬಳಸಿದರೆ ಗೋಜಲಾಗಬಹುದು ಎನ್ನುವುದನ್ನು ನೆನಪಿಡಿ. ಸರಳತೆಗೆ ಒತ್ತು ನೀಡಿ, ನಿಮ್ಮ ಮನೆಗೆ ಒಂದು ಅಥವಾ ಎರಡು ಹೊರಾಂಗಣ ಬಣ್ಣಗಳನ್ನು ಆಯ್ಕೆ ಮಾಡುವುದು ಸೂಕ್ತ. ಏಕತಾನತೆ ಉಂಟಾಗುತ್ತಿದೆ ಎಂದು ನೀವು ಭಾವಿಸಿದರೆ ಒಂದೇ ಬಣ್ಣದ ಹಲವು ಛಾಯೆಗಳನ್ನು ನೀವು ಆಯ್ಕೆ ಮಾಡಬಹುದು.

  • 2. ಬಣ್ಣಗಳ ಆಯ್ಕೆ :
    ಬಣ್ಣಗಳ ಆಯ್ಕೆಯ ವಿಷಯದಲ್ಲಿ, ನೀವು ಆದರ್ಶವಾಗಿ ಹಲವು ಆಯ್ಕೆಗಳನ್ನು ಅನ್ವೇಷಿಸಬೇಕು. ನಿಮಗೆ ಯಾವ ಬಣ್ಣಗಳು ಇಷ್ಟ ಎಂದು ನೀವು ಆಯ್ಕೆ ಮಾಡುತ್ತಿರುವ ಸಂದರ್ಭ, ಸ್ಫೂರ್ತಿ ಮತ್ತು ಉಲ್ಲೇಖಗಳಿಗಾಗಿ ಹುಡುಕಿ ಮತ್ತು ನಂತರ ಅವುಗಳ ಸಂಯೋಜನೆಗಳನ್ನು ಅಂತಿಮಗೊಳಿಸಿ. ಸುಲಭವಾಗಿ ಧೂಳು ಹಿಡಿಯುವ ಕಪ್ಪು ಮತ್ತು ಗಾಢ ಬಣ್ಣಗಳನ್ನು ಬಳಸಬೇಡಿ.

  • 3. ಬೆಳಕಿನ ಅಂಶ :
    ಕಾಗದದ ಮೇಲೆ ಮುದ್ರಿಸಿರುವ ಬಣ್ಣಗಳು ನಿಮ್ಮ ಮನೆಯ ಹೊರಗಿನ ಗೋಡೆಗೆ ಹಚ್ಚಿದಾಗ, ಗೋಡೆಯ ಮೇಲೆ ಬೀಳುವ ಬೆಳಕಿನ ಗುಣಮಟ್ಟ ಮತ್ತು ವಿಧವನ್ನು ಆಧರಿಸಿ ಭಿನ್ನವಾಗಿ ಕಾಣಿಸಬಹುದು. ಹಾಗಾಗಿ ಮೊದಲು ಕೆಲವು ಬಣ್ಣಗಳನ್ನು ಗೋಡೆಯ ಮೇಲೆ ಸ್ವಲ್ಪ ಹಚ್ಚಿ ನೋಡುವುದರಿಂದ ಅದು ಹೇಗೆ ಕಾಣಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.

  • 4. ನೆರೆಹೊರೆಯ ಪರಿಸರ ಮುಖ್ಯ :
    ನಿಮ್ಮ ಮನೆಯ ಹೊರಗಿನ ಬಣ್ಣಗಳನ್ನು ಆಯ್ಕೆ ಮಾಡುವಾಗ ನಿಮ್ಮ ಮನೆ ಇರುವ ಸ್ಥಳ ಮತ್ತು ಅದರ ಸುತ್ತಮುತ್ತ ಇರುವುದನ್ನು ಪರಿಗಣಿಸುವುದು ಮುಖ್ಯವಾಗಿದೆ. ನಿಮ್ಮ ಮನೆ ಎದ್ದು ಕಾಣಬೇಕು ಎಂದು ನೀವು ಬಯಸುವುದರಲ್ಲಿ ತಪ್ಪಿಲ್ಲ, ಆದರೆ ನಿಮ್ಮ ಸುತ್ತಮುತ್ತಲು ಮತ್ತು ಹಿನ್ನೆಲೆಯೊಂದಿಗೆ ಹೊಂದಾಣಿಕೆಯಾಗುವ ರೀತಿಯಲ್ಲಿ ಬಣ್ಣಗಳನ್ನು ಆಯ್ಕೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ.

  •  5. ಬಣ್ಣಗಳಿಂದಾಚೆ ಯೋಚನೆ ಮಾಡಿ :
    ಬಾಗಿಲು ಮತ್ತು ಕಿಟಕಿಗಳ ಹೊರತಾಗಿ ನಿಮ್ಮ ಮನೆಯ ಹೊರಾಂಗಣ ಪೀಠೋಪಕರಣ, ಕಲಾಕೃತಿಗಳು ಮತ್ತು ಗಿಡಗಳಿಂದ ತಾಜಾ ನೋಟವನ್ನು ಹೊಂದಬಹುದು. ಸರಿಯಾದ ಸಾಮಗ್ರಿ ಮತ್ತು ಬೆಳಕನ್ನು ಆಯ್ಕೆ ಮಾಡಿ, ಇದರಿಂದ ನಿಮ್ಮ ಹೊರಾಂಗಣ ಬಣ್ಣಗಳು ಸೂಕ್ತವಾಗಿ ಹೊಂದಾಣಿಕೆಯಾಗುತ್ತವೆ. ಜೊತೆಗೆ, ಟ್ರಿಮ್‌ಗಳು ಮತ್ತು ಆಸೆಂಟ್‌ಗಳಿಗೆ ಉತ್ತಮ ಬಣ್ಣದ ಸಂಯೋಜನೆಯನ್ನು ಆಯ್ಕೆ ಮಾಡಿ.

  • 6. ಬಾಳಿಕೆ :
    ನಿಮ್ಮ ಮನೆಯ ಹೊರಾಂಗಣ ಪೇಂಟ್ ಅನ್ನು ನಿರ್ವಹಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ. ಬಣ್ಣಗಳ ಪರಿಗಣನೆಯಿಲ್ಲದೆ, ಪೇಂಟ್ ಆಯ್ಕೆ ಮಾಡುವ ಸಂದರ್ಭ ಬಾಳಿಕೆ ಬರುವ ಮತ್ತು ಕಡಿಮೆ ನಿರ್ವಹಣೆ ಅಗತ್ಯವಿರುವ ಪೇಂಟ್‌ಗಳನ್ನು ಆಯ್ಕೆ ಮಾಡಿ. ಸಾಮಾನ್ಯವಾಗಿ "ಸ್ಯಾಟಿನ್" ಮತ್ತು "ಎಗ್‌ಶೆಲ್" ಪೇಂಟ್‌ಗಳು ಸುದೀರ್ಘ ಬಾಳಿಕೆ ಬರುತ್ತದೆ ಮತ್ತು ಸ್ವಚ್ಛಗೊಳಿಸಲು ಸುಲಭವಾಗಿವೆ. ಅವು ನಿಮ್ಮ ಬಣ್ಣಗಳಿಗೆ ನಯವಾದ ಫಿನಿಶ್ ಅನ್ನೂ ಸಹ ಒದಗಿಸುತ್ತವೆ.

  • 7. ಥೀಮ್ :
    ನಿಮ್ಮ ಮನೆಗೆ ಹೊರಾಂಗಣ ಪೇಂಟ್ ಅನ್ನು ಆಯ್ಕೆ ಮಾಡುವುದು ಹೇಗೆ ಎನ್ನುವ ಕುರಿತ ಗೊಂದಲ ನಿವಾರಿಸಲು, ನೀವು ಮೊದಲು ಥೀಮ್ ಸೆಟ್ ಮಾಡುವ ಕುರಿತು ಕಾರ್ಯನಿರ್ವಹಿಸಬೇಕು. ಮನೆಯ ಹೊರಗಿನ ಬಣ್ಣಕ್ಕಾಗಿ ಒಂದು ಥೀಮ್ ಆಯ್ಕೆ ಮಾಡಿಕೊಳ್ಳುವುದರಿಂದ ಕೇವಲ ನಿಮ್ಮ ಹೊರ ಗೋಡೆಗಳಿಗೆ ಸರಿಯಾದ ಬಣ್ಣ ಆಯ್ಕೆ ಮಾಡುವುದಕ್ಕೆ ನಿಮಗೆ ಸಹಾಯ ಮಾಡುವುದಷ್ಟೇ ಅಲ್ಲ, ಅದರ ಜೊತೆಗೆ ನಿಮ್ಮ ಮನೆ ಸುಂದರವಾಗಿಯೂ ಕಾಣುವಂತೆ ಮಾಡುತ್ತದೆ.

  • 8. ಋತು :
    ಸರಿಯಾದ ಋತುವಿನಲ್ಲಿ ಪೇಂಟ್ ಮಾಡಿದರೆ ಹೊರಾಂಗಣ ಗೋಡೆಯ ಪೇಂಟಿಂಗ್ ಶ್ರಮರಹಿತ ಕೆಲಸವಾಗಬಹುದು. ಬೇಸಿಗೆ ಋತುವಿನಲ್ಲಿ ಪೇಂಟ್ ಮಾಡಿದರೆ ಹೊರಾಂಗಣ ಗೋಡೆಗಳ ಬಾಳಿಕೆ ಹೆಚ್ಚುತ್ತದೆ. ಬೇಸಿಗೆಯಲ್ಲಿ ಸೂಕ್ತ ತಾಪಮಾನದಲ್ಲಿ ಬಣ್ಣ ಸಮರ್ಪಕವಾಗಿ ಒಣಗುತ್ತದೆ. ಚಳಿಗಾಲ ಅಥವಾ ಮಳೆಗಾಲದಲ್ಲಿ ನೀವು ಹೊರಗಿನ ಗೋಡೆಗಳಿಗೆ ಪೇಂಟ್ ಮಾಡಿದರೆ, ನೀವು ಹೊರಗಿನ ಗೋಡೆಗೆ ಪದೇಪದೆ ಪೇಂಟ್ ಮಾಡಬೇಕಾಗುತ್ತದೆ.

  • 9. ಪರೀಕ್ಷೆ :
    ಹೊರಗಿನ ಗೋಡೆಗಳಿಗೆ ನೀವು ಸರಿಯಾದ ಬಣ್ಣವನ್ನು ಆಯ್ಕೆ ಮಾಡಿದ ಬಳಿಕ, ಬಣ್ಣದ ಮಾದರಿಗಳನ್ನು ಪಡೆಯಿರಿ ಮತ್ತು ಹೊರಗಿನ ಗೋಡೆಯ ಮೇಲೆ ದೊಡ್ಡ ಜಾಗದಲ್ಲಿ ಬಣ್ಣವನ್ನು ಹಚ್ಚಿ. ದಿನದ ಭಿನ್ನ ಸಮಯಗಳಲ್ಲಿ ಈ ಬಣ್ಣಗಳನ್ನು ಗಮನಿಸಿ ನೋಡಿ. ಸೂರ್ಯನ ಬೆಳಕು ಮತ್ತು ನೆರಳಿನಲ್ಲಿ ಬಣ್ಣ ಹೇಗೆ ಕಾಣುತ್ತದೆ ಎಂದು ಗಮನಿಸಿ; ಇದು ನಿಮ್ಮ ಹೊರಗಿನ ಗೋಡೆಗೆ ಸರಿಯಾದ ಬಣ್ಣ ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ನೀವು ವೃತ್ತಿಪರ ವಿನ್ಯಾಸಕರಿಂದ ಸಹಾಯ ಕೇಳಬಹುದು ಅಥವಾ ಯಾವ ಬಗೆಯ ಹೊರಾಂಗಣ ಚೆನ್ನಾಗಿ ಕಾಣುತ್ತದೆ ಎನ್ನುವ ಕುರಿತು ಈಗಲೂ ಗೊಂದಲದಲ್ಲಿದ್ದರೆ ಆತ್ಮೀಯ ಸ್ನೇಹಿತರಿಂದ ಸಹಾಯ ಕೇಳಬಹುದು.

ತಜ್ಞರಿಂದ ಸಹಾಯ ಕೋರಿ
ದೋಷರಹಿತ ಪೇಂಟಿಂಗ್ ಅನುಭವ ಹೊಂದಲು ಸಹಾಯ ಮತ್ತು ಮಾರ್ಗದರ್ಶನಕ್ಕಾಗಿ ಅಲ್ಟ್ರಾಟೆಕ್‌ನ ಕಟ್ಟಡ ಗುತ್ತಿಗೆದಾರರನ್ನು ಸಂಪರ್ಕಿಸಿ.

ಈ ಮಾರ್ಗದರ್ಶಿಯ ಸಹಾಯದೊಂದಿಗೆ, ನೀವು ಸುಂದರವಾದ ಹೊರಾಂಗಣವನ್ನು ಹೊಂದುತ್ತೀರಿ, ಆದರೆ ಇಂಟೀರಿಯರ್ಸ್ ವಿನ್ಯಾಸ ಮಾಡುವುದು ಹೇಗೆ? ನಿಮ್ಮ ಇಂಟೀರಿಯರ್ಸ್‌ಗೆ ವಿಶಿಷ್ಟ ನೋಟವನ್ನು ಒದಗಿಸಲು, ನೀವು ಭಿನ್ನ ವಾಲ್ ಫಿನಿಶ್‌ಗಳೊಂದಿಗೆ ಪ್ರಯೋಗ ನಡೆಸಬೇಕು. ಇನ್ನಷ್ಟು ತಿಳಿಯಲು ಬ್ಲಾಗ್ ಓದಿ - Types of Wall Finishing for a Beautiful Interior