ಇದಕ್ಕಾಗಿಯೇ, ಅಡಿಪಾಯ ಹಾಕುವಾಗ ಮೇಲ್ವಿಚಾರಣೆ ಅತ್ಯಗತ್ಯ ಎನ್ನುವುದು

25 ನೇ ಮಾರ್ಚ್, 2019

ಬಲವಾದ ಮನೆಯ ರಹಸ್ಯವು ಅದರ ಬಲವಾದ ಅಡಿಪಾಯದಲ್ಲಿರುತ್ತದೆ. ಆದ್ದರಿಂದ, ಅಡಿಪಾಯ ಹಾಕುವ ಸಮಯದಲ್ಲಿ ಮೇಲ್ವಿಚಾರಣೆ ಮಾಡುವಾಗ ನೀವು ಜಾಗರೂಕರಾಗಿರುವುದು ಅತ್ಯಗತ್ಯವಾಗಿರುತ್ತದೆ. ಒಳಾಂಗಣಕ್ಕೆ ಹೋಲಿಸಿದಲ್ಲಿ, ಒಮ್ಮೆ ಹಾಕಿದ ಅಡಿಪಾಯವನ್ನು ಮತ್ತೆ ಬದಲಾಯಿಸಲು ಆಗುವುದಿಲ್ಲ.

ನಿಮ್ಮ ಮನೆಯ ಅಡಿಪಾಯವು ನಿಮ್ಮ ನಿವೇಶನದಲ್ಲಿನ ಮಣ್ಣನ್ನು (ಕಠಿಣ ಅಥವಾ ಮೃದುವಾದ) ಮತ್ತು ಮನೆಯ ಎತ್ತರವನ್ನು ಅವಲಂಬಿಸಿರುತ್ತದೆ. ಉತ್ತಮ ತಿಳುವಳಿಕೆ ಪಡೆಯಲು, ನಿಮ್ಮ ವಾಸ್ತುಶಿಲ್ಪಿಯನ್ನು ಸಂಪರ್ಕಿಸಿ.

ಮೊದಲಿಗೆ, ಎಲ್ಲಾ ಪೊದೆಗಳು ಮತ್ತು ಕಳೆಗಳನ್ನು ನಿವೇಶನದಿಂದ ತೆಗೆದುಹಾಕಬೇಕು. ಅಡಿಪಾಯದ ಗುರುತುಗಳು - ಗೋಡೆಗಳು, ಸ್ತಂಭಗಳು - ಅವುಗಳ ಭಾರ ಹೊರುವ ಸಾಮರ್ಥ್ಯವನ್ನು ಹೆಚ್ಚಿಸಲು ಅಂತರವನ್ನು ಹೊಂದಿರಬೇಕು. ಉತ್ಖನನದ ನಂತರ, ನಿಮ್ಮ ಗುತ್ತಿಗೆದಾರರು ಯಾವುದೇ ಟೊಳ್ಳಾದ ಜಾಗಗಳನ್ನು ಪರೀಕ್ಷಿಸಬೇಕಾಗುತ್ತದೆ ಹಾಗೂ ಅವುಗಳನ್ನು ಕಾಂಕ್ರೀಟ್‌ನಿಂದ ತುಂಬಿಸಬೇಕಾಗುತ್ತದೆ. 

ಸ್ತಂಭಗಳನ್ನು ಸರಿಯಾಗಿ ಜೋಡಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಈ ಸ್ತಂಭಗಳ ನಿರ್ಮಾಣದ ನಂತರ, ಮತ್ತೆ ಯಾವುದೇ ಟೊಳ್ಳಾದ ಜಾಗಗಳಿದ್ದರೆ ಅವುಗಳನ್ನು ಭರ್ತಿ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಏಳರಿಂದ ಹದಿನಾಲ್ಕು ದಿನಗಳವರೆಗೆ ಅಡಿಪಾಯವನ್ನು ಕ್ಯೂರಿಂಗ್ ಮಾಡಲಾಗಿದೆಯೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಅಗೆಯುವಿಕೆ ನಂತರ ಮತ್ತು ಅಡಿಪಾಯ ಪೂರ್ಣಗೊಂಡ ನಂತರ ಗೆದ್ದಲು-ವಿರೋಧಿ ಕಾಮಗಾರಿಯನ್ನು ಕೈಗೊಳ್ಳಬಹುದು.


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ