ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ
ಮನೆಯಲ್ಲಿ ಪೂಜಾ ಕೋಣೆಯ ಬಳಿಕ ಅಡುಗೆ ಕೋಣೆಯನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಅನ್ನದೇವತೆ ಅನ್ನಪೂರ್ಣಾದೇವಿ ಇಲ್ಲಿ ನೆಲೆಸಿರುತ್ತಾಳೆ. ಅಡುಗೆಮನೆ ಎಂಬುದು ನಮ್ಮ ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸಲು ನಮಗೆ ಶಕ್ತಿ ನೀಡುವ, ನಮ್ಮ ಹಸಿವನ್ನು ನೀಗಿಸುವ ಮತ್ತು ನಮ್ಮನ್ನು ಆರೋಗ್ಯಕರ ಮತ್ತು ಸದೃಢವಾಗಿ ಇರಿಸುವ ದೈನಂದಿನ ಊಟವನ್ನು ಸಿದ್ಧಪಡಿಸುವ ಸ್ಥಳವಾಗಿದೆ.
‘ಅಡುಗೆಮನೆಯ ಸರಿಯಾದ ವಾಸ್ತು, ನಕಾರಾತ್ಮಕ ಶಕ್ತಿಗಳನ್ನು ದೂರ ಇರಿಸುವ ಮೂಲಕ ಸಕಾರಾತ್ಮಕ ವಾತಾವರಣದೊಂದಿಗೆ ಆರೋಗ್ಯಕರ ಬದುಕನ್ನು ಖಾತ್ರಿಪಡಿಸುತ್ತದೆ. ವಾಸ್ತು ಪ್ರಕಾರ ನಿರ್ಮಿಸದೆ ಇರುವ ಅಡುಗೆಮನೆ ಆರ್ಥಿಕ ಹೊರೆ, ಕಾಯಿಲೆ ಮತ್ತು ಕುಟುಂಬದ ವ್ಯಾಜ್ಯ ಇತ್ಯಾದಿಗಳಿಗೆ ಆಹ್ವಾನ ನೀಡುವುದು ಕಂಡುಬಂದಿದೆ.
ಸೂಕ್ತ ಅಡುಗೆಮನೆ ವಾಸ್ತು ಸಲಹೆಗಳ ಪ್ರಕಾರ ಬಾಗಿಲು ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿರಬೇಕು. ಅಡುಗೆಮನೆಗೆ ಇದನ್ನು ಅತ್ಯಂತ ಶುಭಕರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ, ಈ ದಿಕ್ಕುಗಳು ಲಭ್ಯವಿಲ್ಲದಿದ್ದರೆ, ಆಗ್ನೇಯ ದಿಕ್ಕನ್ನು ಕೂಡ ಬಳಸಬಹುದು.
ಈ ಮೇಲಿನವು, ವಾಸ್ತುಸ್ನೇಹಿಯಾದ ಮತ್ತು ಸಕಾರಾತ್ಮಕ ಲಹರಿಯನ್ನು ಸೃಷ್ಟಿಸುವ ಮತ್ತು ನಿಮ್ಮನ್ನು ಹಾಗೂ ನಿಮ್ಮ ಕುಟುಂಬಸದಸ್ಯರನ್ನು ಸದೃಢ ಮತ್ತು ಆರೋಗ್ಯಕರವಾಗಿ ಇರಿಸುವ ಅಡುಗೆಮನೆ ನಿರ್ಮಾಣಕ್ಕೆ ನೀವು ತಿಳಿದುಕೊಳ್ಳಬೇಕಾದ ವಾಸ್ತು ಸಲಹೆಗಳಾಗಿವೆ.
ಮನೆಯ ಇನ್ನೊಂದು ಮಂಗಳಕರ ಭಾಗವಾಗಿದ್ದು, ನಿಮ್ಮ ಮನೆಯಲ್ಲಿ ಪ್ರಶಾಂತತೆ ಮತ್ತು ನೆಮ್ಮದಿಯ ವಾತಾವರಣ ಸೃಷ್ಟಿಸಲು ನಿಮ್ಮ ಗಮನವನ್ನು ಬಯಸುತ್ತದೆ. ಪೂಜಾಕೋಣೆಯ ವಾಸ್ತು ಕುರಿತು ಇನ್ನಷ್ಟು ಓದಿ