ಕಾರ್ಪೆಟ್ ಏರಿಯಾ, ಬಿಲ್ಟ್ ಅಪ್ ಏರಿಯಾ, ಸೂಪರ್ ಬಿಲ್ಟ್ ಅಪ್ ಏರಿಯಾಗಳ ವ್ಯತ್ಯಾಸ

ಭಾರತದಲ್ಲಿ, ನಿಮ್ಮ ಮನೆಯ ಪ್ರದೇಶವನ್ನು ಕಾರ್ಪೆಟ್ ಏರಿಯಾ, ಬಿಲ್ಟ್ ಅಪ್ ಮತ್ತು ಸೂಪರ್ ಬಿಲ್ಟ್ ಅಪ್ ಏರಿಯಾ ಎಂದು ಅಳೆಯಬಹುದು. ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಮನೆ ನಿರ್ಮಿಸುವವರು ಈ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ

1

 

 

 

1
 

 

ಕಾರ್ಪೆಟ್ ಪ್ರದೇಶವೆಂದರೆ ಗೋಡೆಯಿಂದ ಗೋಡೆಯ ವರೆಗಿನ ಕಾರ್ಪೆಟ್‌ನಿಂದ ಮುಚ್ಚಬಹುದಾದ ಆಸ್ತಿಯಲ್ಲಿನ ಬಳಸಬಹುದಾದ ಭೂಮಿಯಾಗಿದ್ದು, ಇದು ನಿಮಗೆ ನಿರೀಕ್ಷಿತ ಹೊಸ ಮನೆಯ ಒಂದು ನಿಖರವಾದ ಚಿತ್ರಣವನ್ನು ನೀಡುತ್ತದೆ. ಇದನ್ನು ಅಳೆಯಲು, ಸ್ನಾನಗೃಹಗಳು ಮತ್ತು ಹಾದಿಗಳನ್ನು ಒಳಗೊಂಡಂತೆ ಆಸ್ತಿಯಲ್ಲಿನ ಪ್ರತಿ ಕೋಣೆಯ ಗೋಡೆಯಿಂದ ಗೋಡೆಯ ಉದ್ದ ಮತ್ತು ಅಗಲದ ಮೊತ್ತವನ್ನು ಕಂಡುಹಿಡಿಯಿರಿ. ಇದು ಸರಾಸರಿ ಬಿಲ್ಟ್ ಅಪ್ ಏರಿಯಾದ 70% ಅನ್ನು ಒಳಗೊಳ್ಳುತ್ತದೆ.

2

 

 

 

2
 

 

ಬಿಲ್ಟ್ ಅಪ್ ಏರಿಯಾ = ಕಾರ್ಪೆಟ್ ಏರಿಯಾ + ಗೋಡೆಗಳಿಂದ ಆವೃತವಾಗಿರುವ ಪ್ರದೇಶಗಳು. ಇದು ಬಾಲ್ಕನಿಗಳು, ಟೆರೇಸ್‌ಗಳು (ಮೇಲ್ಛಾವಣಿಯೊಂದಿಗೆ ಅಥವಾ ಅದು ಇಲ್ಲದೆ), ಮೆಜ್ಜನೈನ್ ಫ್ಲೋರ್‌ಗಳು, ಇತರ ಪ್ರತ್ಯೇಕಿಸಬಹುದಾದ ವಾಸಯೋಗ್ಯ ಪ್ರದೇಶಗಳು (ಉದಾಹರಣೆಗೆ ಸೇವಕರ ಕೊಠಡಿಗಳು) ಹಾಗೂ ಇತರ ಪ್ರದೇಶಗಳನ್ನು ಒಳಗೊಂಡಿದೆ. ಇದು ಸಾಮಾನ್ಯವಾಗಿ ಕಾರ್ಪೆಟ್ ಏರಿಯಾಕ್ಕಿಂತ 10-15 ಪ್ರತಿಶತ ಹೆಚ್ಚಿರುತ್ತದೆ.

3

 

 

 

3
 

 

ಸೂಪರ್ ಬಿಲ್ಟ್ ಅಪ್ ಏರಿಯಾ = ಬಿಲ್ಟ್ ಅಪ್ ಏರಿಯಾ + ಅದರ ಸಮಾನುಪಾತದಲ್ಲಿ ಕಾಮನ್ ಏರಿಯಾಗಳ ಪಾಲು. ಈ ಅಳತೆಯನ್ನು 'ಮಾರಾಟ ಮಾಡಬಹುದಾದ ಏರಿಯಾ' ಎಂದೂ ಕರೆಯಲಾಗುತ್ತದೆ. ಅಪಾರ್ಟ್ಮೆಂಟ್ನ ಬಿಲ್ಟ್-ಅಪ್ ಏರಿಯಾದ ಜೊತೆಗೆ, ಇದು ಲಾಬಿ, ಸ್ಟೇರ್‌ಕೇಸ್, ಶಾಫ್ಟ್‌ಗಳು ಮತ್ತು ವಿರಾಮ ಏರಿಯಗಳಂತಹ ಇತರ ಸಾಮಾನ್ಯ ಪ್ರದೇಶಗಳನ್ನೂ ಒಳಗೊಂಡಿರುತ್ತದೆ. ಇದು ಕೆಲವೊಮ್ಮೆ ಈಜುಕೊಳ, ಮತ್ತು ಜನರೇಟರ್ ಕೊಠಡಿಗಳಂತಹ ಸೌಕರ್ಯಗಳನ್ನು ಒಳಗೊಂಡಿರುತ್ತದೆ.

 

ಈ ವ್ಯತ್ಯಾಸಗಳನ್ನು ತಿಳಿದುಕೊಳ್ಳುವ ಮೂಲಕ, ನೀವು ಈಗ ಖರೀದಿಸಲು ಯೋಜಿಸುತ್ತಿರುವ ಭೂಮಿಯ ತುಂಡನ್ನು ಪರಿಶೀಲಿಸಬಹುದು ಮತ್ತು ವಿಶ್ವಾಸದಿಂದ ಬೆಲೆಗಳ ಕುರಿತು ಸಮಾಲೋಚನೆಯಲ್ಲಿತೊಡಗಬಹುದು.

 

ಮನೆ ನಿರ್ಮಾಣದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಅಲ್ಟ್ರಾಟೆಕ್ ಸಿಮೆಂಟ್ ನ #ಮನೆಯ ಬಗ್ಗೆ ಮಾತನಾಡೋಣ ಗೆ ಬನ್ನಿ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ