ನಿಮ್ಮ ಮನೆಗಾಗಿ ಉತ್ತಮವಾದ ಸಿಮೆಂಟ್ ಅನ್ನು ಆಯ್ಕೆ ಮಾಡಲು ತ್ವರಿತ ಮಾರ್ಗದರ್ಶಿ

25 ನೇ ಮಾರ್ಚ್, 2019

ಮನೆ ನಿರ್ಮಿಸುವ ಪ್ರಕ್ರಿಯೆಯು ಸಾಮಾನ್ಯವಾಗಿ ಅನೇಕ ಘಟ್ಟಗಳನ್ನು ಒಳಗೊಂಡಿರುತ್ತದೆ ಮತ್ತು ಈ ಹೆಚ್ಚಿನ ಘಟ್ಟಗಳಲ್ಲಿ, ನಿಮ್ಮ ಸಿಮೆಂಟ್ ಆಯ್ಕೆಯು ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಮನೆ ನಿರ್ಮಿಸಲು ಮೂರು ಪ್ರಮುಖ ರೀತಿಯ ಸಿಮೆಂಟ್‌ಗಳು ಲಭ್ಯವಿದೆ - OPC, PPC ಮತ್ತು PSC. ಈ ಮೂರರಲ್ಲಿ, OPC ಬಹುತೇಕ ಎಲ್ಲೆಡೆ ಲಭ್ಯವಿದೆ ಎನ್ನುವುದನ್ನು ನೀವು ಕಾಣಬಹುದು, ಆದರೆ PPC ಮತ್ತು PSC ಗಳು ಉತ್ತಮ ಶಕ್ತಿ ಮತ್ತು ಅತ್ಯುತ್ತಮ ಬಾಳಿಕೆಯನ್ನು ನೀಡುತ್ತವೆ.

ಸಿಮೆಂಟ್ ಅನ್ನು ಖರೀದಿಸುವ ಮೊದಲು, ಉತ್ಪಾದನಾ ದಿನಾಂಕವನ್ನು ಪರೀಕ್ಷಿಸಲು ಖಚಿತಪಡಿಸಿಕೊಳ್ಳಿ. ಸಿಮೆಂಟ್ ಚೀಲವು 90 ದಿನಗಳಿಗಿಂತ ಹಳೆಯದಾಗಿದ್ದಲ್ಲಿ, ನೀವು ನಿಮ್ಮ ಎಂಜಿನಿಯರ್ ಅನ್ನು ಸಂಪರ್ಕಿಸಬೇಕಾಗುತ್ತದೆ. ಬ್ಯಾಗ್‌ನ ಬದಿಯಲ್ಲಿ ಮುದ್ರಿಸಲಾದ MRP ಮತ್ತು ISI ಸ್ಟಾಂಪ್‌ನಂತಹ ಇತರ ಪ್ರಮುಖ ವಿವರಗಳೊಂದಿಗೆ ನೀವು ಉತ್ಪಾದನಾ ದಿನಾಂಕವನ್ನು ಕೂಡಾ ಕಾಣಬಹುದು. ಗಟ್ಟಿಯಾದ ಹಾಗೂ ಉಂಡೆಗಳುಳ್ಳ ಸಿಮೆಂಟ್ ನಿರ್ಮಾಣಕ್ಕೆ ಸೂಕ್ತವಲ್ಲದ ಕಾರಣ ಅದಕ್ಕಾಗಿ ಸಿಮೆಂಟ್ ಚೀಲವನ್ನು ಪರೀಕ್ಷಿಸುವುದನ್ನು ಖಚಿತಪಡಿಸಿಕೊಳ್ಳಿ.

ಸೂಕ್ತವಾದ ಸಿಮೆಂಟ್ ಆಯ್ಕೆ ಮಾಡಿಕೊಳ್ಳುವಾಗ, ಕೇವಲ ಅದರ ಬೆಲೆಯಿಂದ ಪ್ರಭಾವಿತರಾಗಬೇಡಿ. ಅಲ್ಪಾವಧಿಯಲ್ಲಿ ನೀವು ಚೌಕಾಶಿ ಮಾಡಿ ಹಣವನ್ನು ಉಳಿಸಲು ಪ್ರಯತ್ನಿಸಿದರೆ, ದೀರ್ಘಾವಧಿಯಲ್ಲಿ ನೀವು ಅದಕ್ಕೆ ದೊಡ್ಡ ಬೆಲೆ ಪಾವತಿಸುವ ಅಪಾಯವಿರುತ್ತದೆ. ನೀವು ಖರೀದಿ ಮಾಡುತ್ತಿರುವಾಗ, ನೀವು ಹೆಸರಾಂತ ಕಂಪನಿಗಳನ್ನು ಆರಿಸಿಕೊಳ್ಳುವುದು ಒಳ್ಳೆಯದು. ಬಲವಾದ ಮನೆ ಎಂದರೆ ಅದು ಬಹಳ ಕಾಲ ಬಾಳುತ್ತದೆ ಮತ್ತು ಸರಿಯಾದ ಸಿಮೆಂಟ್ ಅನ್ನು ಆರಿಸುವುದರಿಂದ ಶಾಶ್ವತ ಪರಿಣಾಮ ಬೀರುತ್ತದೆ.


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ