ನಿಮ್ಮ ಮನೆಯನ್ನು ನಿರ್ಮಿಸುವ ಪ್ರಯಾಣದಲ್ಲಿನ ಅತ್ಯಂತ ರೋಚಕ ಘಟ್ಟವೆಂದರೆ ನಿಮ್ಮ ಮನೆಗೆ ಸೂಕ್ತವಾದ ಬಣ್ಣಗಳ ಆಯ್ಕೆಯನ್ನು ಮಾಡುವುದು. ನೀವು ಆಯ್ಕೆ ಮಾಡುವ ಬಣ್ಣಗಳು ಹೆಚ್ಚಿನ ಮಟ್ಟಿಗೆ ನಿಮ್ಮ ಮನೆಯ ಆಕರ್ಷಕ ನೋಟವನ್ನು ನಿರ್ಧರಿಸುತ್ತವೆ. ಮತ್ತು ಮನೆಯ ಹೊರಭಾಗದ ಪೈಂಟ್ ಬಣ್ಣಗಳ ಆಯ್ಕೆ ಮತ್ತು ಗ್ರಹಿಕೆಯ ಮೇಲೆ ಹಲವಾರು ಅಂಶಗಳು ಪರಿಣಾಮ ಬೀರುತ್ತವೆ. ಆದ್ದರಿಂದ ನಿಮಗೆ ಬೇಕಾದ ಬಣ್ಣಗಳನ್ನು ನೀವು ಸೂಕ್ತ ರೀತಿಯಲ್ಲಿ ಆಯ್ಕೆ ಮಾಡುವಾಗ ನೆನಪಿಟ್ಟುಕೊಳ್ಳುವಂತೆ ನಾವು ಕೆಲವು ಸಲಹೆಗಳನ್ನು ನೀಡುತ್ತೇವೆ.
ಹಲವಾರು ಬಣ್ಣಗಳನ್ನು ಉಪಯೋಗಿಸಿದಲ್ಲಿ ಅದು ತುಂಬಾ ಅಸ್ತವ್ಯಸ್ತ ರೀತಿಯಲ್ಲಿ ಕಾಣುತ್ತವೆ ಎನ್ನುವುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಎಲ್ಲವನ್ನೂ ಸರಳವಾಗಿರಿಸುವುದು ಮತ್ತು ನಿಮ್ಮ ಮನೆಯ ಹೊರಭಾಗಕ್ಕೆ ಒಂದು ಅಥವಾ ಎರಡು ಬಣ್ಣಗಳನ್ನು ಆರಿಸುವುದು ಉತ್ತಮ. ವಸ್ತುಸ್ಥಿತಿಯಲ್ಲಿ ವೈವಿಧ್ಯತೆಯು ಇಲ್ಲ ಎಂದು ನೀವು ಭಾವಿಸಿದಲ್ಲಿ ಒಂದೇ ಬಣ್ಣದ ವಿಭಿನ್ನ ಛಾಯೆಗಳನ್ನು ಸಹ ನೀವು ಅನ್ವೇಷಿಸಬಹುದು.
ಬಣ್ಣಗಳನ್ನು ಆರಿಸುವ ಸಂದರ್ಭ ಬಂದಾಗ, ನೀವು ಲಭ್ಯವಿರುವ ಅನೇಕ ಆಯ್ಕೆಗಳಲ್ಲಿ ಅತಿ ಯೋಗ್ಯವಾದುದನ್ನು ಹುಡುಕಬೇಕಾಗುತ್ತದೆ. ನಿಮಗೆ ಇಷ್ಟವಾಗುವ ಬಣ್ಣಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡುವಾಗ, ಬೇರೆಯರಿಂದ ಸ್ಫೂರ್ತಿ ಹಾಗೂ ಉಲ್ಲೇಖಗಳನ್ನು ಪಡೆಯಲು ಪ್ರಯತ್ನಿಸಿ, ಹಾಗೂ ತದನಂತರ ಅವುಗಳ ನಡುವಿನ ಸಂಯೋಜನೆಗಳ ನೆರವಿನಿಂದ ಅಂತಿಮಗೊಳಿಸಿ. ಧೂಳು ಸುಲಭವಾಗಿ ಅಂಟಿಕೊಳ್ಳುವಂತಹ ಕಪ್ಪು ಮತ್ತು ಗಾಢ ಬಣ್ಣಗಳನ್ನು ಉಪಯೋಗಿಸುವುದನ್ನು ತಪ್ಪಿಸಿ.
ಬಣ್ಣವನ್ನು ತೋರಿಸುವ-ಕಾರ್ಡ್‌ನಲ್ಲಿ ನೀವು ಆರಿಸಿದ ಬಣ್ಣ ಮತ್ತು ಶೇಡ್ ನಿಮ್ಮ ಮನೆಯ ಹೊರಭಾಗದಲ್ಲಿ ಪೈಂಟ್ ಮಾಡಿದಾಗ ಅದರ ಮೇಲೆ ಬೀಳುವ ಬೆಳಕಿನ ಗುಣಮಟ್ಟ ಮತ್ತು ಪ್ರಕಾಶವನ್ನು ಅವಲಂಬಿಸಿ ವಿಭಿನ್ನವಾಗಿ ಕಾಣಬಹುದು. ಅದು ಹೇಗೆ ಕಾಣುತ್ತದೆ ಎನ್ನುವುದನ್ನು ಉತ್ತಮವಾಗಿ ತಿಳಿಯುವ ಸಲುವಾಗಿ, ಗೋಡೆಯ ಮೇಲೆ ಕೆಲವು ಬಣ್ಣಗಳು ಮತ್ತು ಶೇಡ್‌ಗಳನ್ನು ಸ್ಯಾಂಪಲ್ ಮಾಡುವುದು ಉತ್ತಮ
ನಿಮ್ಮ ಮನೆಯ ಹೊರಭಾಗಕ್ಕಾಗಿ ಬಣ್ಣಗಳನ್ನುಆಯ್ಕೆ ಮಾಡುವಾಗ ನಿಮ್ಮ ಮನೆಯು ಇರುವ ಸ್ಥಳ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಪರಿಗಣಿಸಬೇಕಾಗುತ್ತದೆ. ನಿಮ್ಮ ಮನೆಯು ಎದ್ದು ಕಾಣಬೇಕೆಂದು ನೀವು ಬಯಸುತ್ತಿದ್ದಲ್ಲಿ, ನಿಮ್ಮ ಸುತ್ತಮುತ್ತಲಿನ ಪರಿಸರದ ಸ್ಥಿತಿ ಮತ್ತು ಹವಾಮಾನ ಇವುಗಳ ಹಿನ್ನೆಲೆಯನ್ನು ಪರಿಗಣಿಸಿ ನೀವು ಬಣ್ಣಗಳನ್ನು ಆಯ್ಕೆ ಮಾಡಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ನಿಮ್ಮ ಮನೆಯ ಹೊರಭಾಗವು ಕೇವಲ ಬಾಗಿಲು ಮತ್ತು ಕಿಟಕಿಗಳಿಗಿಂತ ಕೆಲವು ಪೀಠೋಪಕರಣಗಳು, ಕಲಾಕೃತಿಗಳು ಮತ್ತು ಸಸ್ಯಗಳೊಂದಿಗೆ ನಿಜವಾಗಿಯೂ ಜೀವಂತವಾಗಿ ಕಾಣಬಹುದು. ವಸ್ತು ಮತ್ತು ಬೆಳಕನ್ನು ಸರಿಯಾಗಿ ಆಯ್ಜೆ ಮಾಡಿ, ಇದರಿಂದ ಅದು ನಿಮ್ಮ ಹೊರಭಾಗದ ಬಣ್ಣಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅಲ್ಲದೆ, ಟ್ರಿಮ್‌ಗಳು ಮತ್ತು ಎದ್ದು ಕಾಣುವ ಬಣ್ಣಗಳಿಗೆ ಉತ್ತಮ ಬಣ್ಣ ಸಂಯೋಜನೆಯನ್ನು ಆಯ್ಕೆ ಮಾಡಿ
ನಿಮ್ಮ ಮನೆಯ ಹೊರಭಾಗದ ಬಣ್ಣವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ. ಆಯ್ಕೆಮಾಡುವಾಗ, ಕೇವಲ ಅವುಗಳ ಆಕರ್ಷಕತೆಗಿಂತಲೂ ಹೆಚ್ಚು ಬಾಳಿಕೆ ಬರುವ ಮತ್ತು ಕಡಿಮೆ ನಿರ್ವಹಣೆಯ ಅಗತ್ಯವಿರುವ ಬಣ್ಣಗಳನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಸಾದಾರಣವಾಗಿ, 'ಸ್ಯಾಟಿನ್' ಮತ್ತು 'ಎಗ್‌ಶೆಲ್' ಬಣ್ಣಗಳು ಉತ್ತಮ ಬಾಳಿಕೆ ನೀಡುತ್ತವೆ ಮತ್ತು ಸ್ವಚ್ಚಗೊಳಿಸಲು ಸುಲಭವಾಗಿರುತ್ತವೆ. ಅವುಗಳು ನಿಮ್ಮ ಬಣ್ಣಕ್ಕೆ ಒಂದು ರೀತಿಯ ಮೆರುಗನ್ನು ನೀಡುತ್ತವೆ.
ಮನೆಯ ನಿರ್ಮಾಣದ ಕುರಿತಾಗಿ ಇದೇ ರೀತಿಯ ಹೆಚ್ಚಿನ ಸಲಹೆಗಳಿಗಾಗಿ, ಅಲ್ಟ್ರಾಟೆಕ್ ಸಿಮೆಂಟ್‌ರವರ #ಮನೆಯ ಬಗ್ಗೆ ಮಾತನಾಡೋಣ ಯನ್ನು ಆಲಿಸಿ
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ