ಅಗೆತವು ಮನೆಯ ದೃಢತೆಯ ಮೇಲೆ ಪರಿಣಾಮ ಬೀರಬಹುದೇ?

25 ನೇ ಆಗಸ್ಟ್, 2020

ಮನೆಯೊಂದಕ್ಕೆ ಅಡಿಪಾಯ ಹಾಕುವ ಮೊದಲು ನಿವೇಶನದಲ್ಲಿ ಅಗೆತವನ್ನು ಮಾಡಲಾಗುತ್ತದೆ. ಅಡಿಪಾಯವು ನಿಮ್ಮ ಮನೆಯ ರಚನೆಯ ತೂಕವನ್ನು ಅಡಿಪಾಯದ ಕೆಳಗಿನ ಬಲವಾದ ಮಣ್ಣಿನ ಮೇಲೆ ಹೇರುತ್ತದೆ. ಅಗೆತವನ್ನು ಸರಿಯಾದ ರೀತಿಯಲ್ಲಿ ಮಾಡದಿದ್ದಲ್ಲಿ, ಅಡಿಪಾಯವು ದುರ್ಬಲಗೊಳ್ಳುತ್ತದೆ, ಇದು ಗೋಡೆಗಳು ಮತ್ತು ಸ್ತಂಭಗಳಲ್ಲಿ ಬಿರುಕುಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.

ಅಗೆತ ಮಾಡುವ ಸಮಯದಲ್ಲಿ ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳು ಇಲ್ಲಿವೆ.

1.ಅಗೆತವನ್ನು ಪ್ರಾರಂಭಿಸುವ ಮೊದಲು ನಿವೇಶನದಲ್ಲಿ ಮಾಡಿರುವ ವಿನ್ಯಾಸದ ಗುರುತುಗಳು ಸರಿಯಾಗಿವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

  1. ಅಗೆತದ ಹೊಂಡಗಳ ಗಾತ್ರ, ಮಾದರಿ, ಆಳ ಮತ್ತು ಇಳಿಜಾರು ಸಮನಾಗಿವೆಯೇ ಎಂದು ಪರಿಶೀಲಿಸಿ, ನಂತರ ಅಗೆತದ ನೆಲಮಟ್ಟಗಳ ಮೇಲೆ ನೀರನ್ನು ಸುರಿಯಿರಿ ಮತ್ತು ಅದನ್ನು ದಮ್ಮಸ್ಸುಗಳೊಂದಿಗೆ ಸಮತಟ್ಟು ಮಾಡಲು ಪ್ರಾರಂಭಿಸಿ
  2. ಹೆಚ್ಚುವರಿಯಾದ ಅಗೆತದ ಪ್ರದೇಶಗಳನ್ನು ಪ್ಲಮ್ ಕಾಂಕ್ರೀಟ್‌ನೊಂದಿಗೆ ತುಂಬಿಸಿ. ಟೊಳ್ಳಾದ ಸ್ಥಳಗಳು ಅಥವಾ ಮೃದುವಾದ ಜಾಗಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ
  3. 6 ಅಡಿಗಳಿಗಿಂತ ಹೆಚ್ಚು ಆಳವಾದ ಅಗೆತವನ್ನು ಮಾಡುವ ಸಮಯದಲ್ಲಿ, ಬದಿಗಳನ್ನು ಮರದ ರಚನೆಗಳನ್ನು ಉಪಯೋಗಿಸಿ ಬೆಂಬಲಿಸುವುದು ಸೂಕ್ತವಾಗಿರುತ್ತದೆ.

ನಿಮ್ಮ ಮನೆಗೆ ಬಲವಾದ ಅಡಿಪಾಯವನ್ನು ನೀಡಲು ಮಾಡಬೇಕಾದ ಸರಿಯಾದ ಅಗೆತದ ಪ್ರಕ್ರಿಯೆಗಾಗಿ ಕೆಲವು ಸಲಹೆಗಳು ಹೀಗಿವೆ.


ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ