ಮನೆ ನಿರ್ಮಾಣ ಮಾಡಲು ಯೋಜಿಸುತ್ತಿದ್ದೀರಾ? ನಿಮ್ಮ ಪ್ರದೇಶದಲ್ಲಿನ ಹವಾಮಾನವನ್ನು ಪರಿಗಣಿಸಿದ್ದೀರಾ? ಇಲ್ಲವಾದರೆ, ದಯವಿಟ್ಟು ಅದನ್ನೂ ಗಮನದಲ್ಲಿಟ್ಟುಕೊಳ್ಳಿ! ಯಾಕೆಂದರೆ, ಸುರಕ್ಷಿತ ಮತ್ತು ಸುಸ್ಥಿರ ನಿರ್ಮಾಣಕ್ಕೆ ಹವಾಮಾನದ ಸ್ಥಿತಿಗಳೂ ಪ್ರಮುಖ ಅಂಶವಾಗುತ್ತದೆ. ನಮ್ಮ ದೇಶಾದ್ಯಂತ ವಿಭಿನ್ನ ಹವಾಮಾನ ವಲಯಗಳಿವೆ. ಪ್ರತಿಯೊಂದೂ ತನ್ನದೇ ಆದ ಹವಾಮಾನಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಹೊಂದಿರುತ್ತವೆ. ಹೀಗಾಗಿ, ಚಳಿ ಇರುವ ವಲಯದಲ್ಲಿ ಬಿಸಿಲಿನ ವಾತಾವರಣಕ್ಕೆ ಹೊಂದುವ ನಿರ್ಮಾಣ ಯೋಜನೆಯನ್ನು ನೀವು ಮಾಡಲು ಸಾಧ್ಯವಿಲ್ಲ.
- ಸೂರ್ಯನ ಬೆಳಕಿನಿಂದ ಮನೆ ಬಿಸಿಯಾಗುತ್ತದೆ. ಹೀಗಾಗಿ, ಮೇಲ್ಛಾವಣಿ ಪೇಂಟಿಂಗ್ ಮಾಡುವುದು ಮತ್ತು ಉಷ್ಣ ಪ್ರತಿಫಲಕ ಪೇಂಟ್ನಿಂದ ಪ್ಲಾಸ್ಟರ್ ಮಾಡುವುದರಿಂದ ಉಷ್ಣತೆ ಕಡಿಮೆ ಹೀರಿಕೊಳ್ಳಲು ಸಹಾಯವಾಗುತ್ತದೆ
- ಮುಖ್ಯ ದ್ವಾರವು ಉತ್ತರ-ದಕ್ಷಿಣ ದಿಕ್ಕಿಗೆ ಇರಬೇಕು. ಸೂರ್ಯನ ಬೆಳಕನ್ನು ತಡೆಯಲು, ಪಶ್ಚಿಮದ ಕಡೆಗೆ ಬಾಗಿಲುಗಳು ಮತ್ತು ಕಿಟಕಿಗಳನ್ನು ಇಡಬೇಡಿ.
- ಹಾಲೋ ಕಾಂಕ್ರೀಟ್ ಬ್ಲಾಕ್ಗಳು ಉತ್ತಮ ಇನ್ಸುಲೇಶನ್ ಆಗಿ ಕೆಲಸ ಮಾಡುತ್ತವೆ. ಇದರಿಂದ ಮನೆಯ ಒಳಗೆ ತಾಪಮಾನವನ್ನು ಇವು ನಿಯಂತ್ರಿಸುತ್ತವೆ.
- ವೆಂಟಿಲೇಶನ್ ಮತ್ತು ಕ್ರಾಸ್ ವೆಂಟಿಲೇಶನ್ ಸಿಸ್ಟಮ್ಗಳನ್ನು ಗಮನವಿಟ್ಟು ಯೋಜಿಸಿ.
- ಬಾಗಿಲುಗಳು ಮತ್ತು ಕಿಟಕಿಗಳ ಮೇಲೆ ಲಿಂಟಲ್ ಬೀಮ್ಗಳನ್ನು ನಿರ್ಮಾಣ ಮಾಡಿ
- ಮೇಲ್ಛಾವಣಿಯನ್ನು ಇಳಿಜಾರಿನಲ್ಲಿ ವಿನ್ಯಾಸ ಮಾಡಿ. ಇದರಿಂದ, ನೀರು ಸುಲಭವಾಗಿ ಹರಿದು ಹೋಗುತ್ತದೆ.
- ನಿಮ್ಮ ಮನೆ ನಿರ್ಮಾಣವನ್ನು ವಾಟರ್ಪ್ರೂಫ್ ಮಾಡಲು ಮರೆಯಬೇಡಿ
- ಉತ್ತರ ಮತ್ತು ಪಶ್ಚಿಮಕ್ಕೆ ಬಾಗಿಲು ಮತ್ತು ಕಿಟಕಿಗಳನ್ನು ನಿರ್ಮಾಣ ಮಾಡಿ, ಇದರಿಂದ ನಿಮ್ಮ ಮನೆಗೆ ಬೆಚ್ಚನೆಯ ಸೂರ್ಯನ ಬೆಳಕು ಬರುವಂತಾಗುತ್ತದೆ
- ಕಿಟಕಿಗಳು, ಬಾಗಿಲುಗಳು ಮತ್ತು ನೆಲವನ್ನು ಮಾಡುವಾಗ ಉತ್ತಮ ಇನ್ಸುಲೇಟ್ ಆಗುವ ಸಾಮಗ್ರಿಯನ್ನು ಬಳಸಿ
ವಿಭಿನ್ನ ಹವಾಮಾನ ಸ್ಥಿತಿಗಳಲ್ಲಿ ಮನೆ ನಿರ್ಮಾಣ ಮಾಡುವ ಕುರಿತು ಇವು ಕೆಲವು ಸಲಹೆಗಳು.
ಇನ್ನಷ್ಟು ಮನೆ ನಿರ್ಮಾಣ ಪರಿಹಾರಕ್ಕಾಗಿ ಮತ್ತು ಸಲಹೆಗಾಗಿ ಅಲ್ಟ್ರಾಟೆಕ್ ಸಿಮೆಂಟ್ನ #ಮನೆಯ ಬಗ್ಗೆ ಮಾತನಾಡೋಣ ಫಾಲೋ ಮಾಡಿ.
ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ