ಬಯೋಗ್ಯಾಸ್‌ ಘಟಕ ನಿರ್ಮಾಣಕ್ಕೆ ಸಲಹೆಗಳು

ಸಾಂಪ್ರದಾಯಿಕ ಶಕ್ತಿ ಮೂಲಕ್ಕೆ ಬಯೋಗ್ಯಾಸ್‌ ಅತ್ಯುತ್ತಮ ಪರ್ಯಾಯವಾಗಿದೆ. ಇದು ಶುದ್ಧ ಇಂಧನ. ಜೈವಿಕ ತ್ಯಾಜ್ಯದಲ್ಲಿ ಉತ್ಪಾದನೆಯಾಗುವ ಬ್ಯಾಕ್ಟೀರಿಯಾದಿಂದ ಇದನ್ನು ಉತ್ಪಾದನೆ ಮಾಡಲಾಗುತ್ತದೆ. ಅಪಾಯಕಾರಿ ಕಾರ್ಬನ್‌ ಹೊರಸೂಸುವಿಕೆಯಿಂದ ಭೂಮಿಯನ್ನು ಸುರಕ್ಷಿತವಾಗಿರಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಎಲ್ಲ ಪ್ರದೇಶಗಳಿಗೂ ವಿದ್ಯುತ್‌ ಸೌಲಭ್ಯ ಸಿಗುತ್ತದೆ ಎಂಬುದನ್ನು ಖಚಿತಪಡಿಸಲು ಬಯೋಗ್ಯಾಸ್ ಒಂದು ದಕ್ಷ ವಿಧಾನವಾಗಿದೆ.

Let's learn how a Biogas plant is built.
 
1
ನೆಲದಡಿಯಲ್ಲಿನ ಡೈಜೆಸ್ಟರ್‌ ಟ್ಯಾಂಕ್‌ ಅನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಅಗೆದು, ಅಗ್ರಿಗೇಟ್‌ಗಳ ಲೇಯರ್‌ನಿಂದ ಅದನ್ನು ಭರ್ತಿ ಮಾಡಿ. ನಂತರ, ಅದರ ಮೇಲೆ 15 ಸೆಂ.ಮೀ ದಪ್ಪದ ಕಾಂಕ್ರೀಟ್ ಡೈಜೆಸ್ಟರ್‌ ಫೌಂಡೇಶನ್‌ ಹಾಕಿ.
2
ನಂತರ, ಟ್ಯಾಂಕ್‌ನ ಬ್ರಿಕ್‌ ಕಟ್ಟುವ ಕೆಲಸ ಮುಗಿಸಿ ಮತ್ತು ವಿಭಜನೆಯ ಗೋಡೆ ನಿರ್ಮಾಣ ಮಾಡಿ.
3
ಡೈಜೆಸ್ಟರ್‌ ಟ್ಯಾಂಕ್‌ನ ಛಾವಣಿಯನ್ನು ಮಾಡಿ. ಇದನ್ನು ಕಾಂಕ್ರೀಟ್ ಅಥವಾ ಲೋಹದಿಂದ ಮಾಡಲಾಗುತ್ತದೆ. ಈ ಛಾವಣಿ ಡೋಮ್‌ನಿಂದ ಗ್ಯಾಸ್‌ ಪೈಪ್‌ ಹೊರಗೆ ಬರುತ್ತದೆ. ಇದಕ್ಕೆ ಒಂದು ವಾಲ್ವ್‌ ಅಳವಡಿಸಿ ನಿಯಂತ್ರಣ ಮಾಡಲಾಗುತ್ತದೆ.
4
ನೆಲದ ಮೇಲೆ ಒಂದು ಫೀಡರ್ ಹೊಂಡ ಮಾಡಿ. ಇದು ಡೈಜೆಸ್ಟರ್‌ ಟ್ಯಾಂಕ್‌ ಪಕ್ಕದಲ್ಲಿ ಇರಬೇಕು. ನೀರು ಮತ್ತು ಜೈವಿಕ ತ್ಯಾಜ್ಯವು ಈ ಹೊಂಡದ ಮೂಲಕ ಡೈಜೆಸ್ಟರ್‌ ಟ್ಯಾಂಕ್‌ಗೆ ಪ್ರವೇಶಿಸುತ್ತದೆ.
5
ಎದುರು ಬದಿಯಲ್ಲಿ ಒಂದು ಓವರ್‌ಫ್ಲೋ ಟ್ಯಾಂಕ್‌ ನಿರ್ಮಾಣ ಮಾಡಿ.
6
ಟ್ಯಾಂಕ್‌ನಲ್ಲಿ ಬಯೋಗ್ಯಾಸ್‌ ನಿರ್ಮಾಣಕ್ಕಾಗಿ ಜೈವಿಕ ತ್ಯಾಜ್ಯವನ್ನು ಬ್ಯಾಕ್ಟೀರಿಯಾಗಳು ಕೊಳೆಯಿಸುತ್ತವೆ. ಒತ್ತಡದಿಂದಾಗಿ, ಹೆಚ್ಚುವರಿ ಸ್ಲರಿಯು ಓವರ್‌ಫ್ಲೋ ಟ್ಯಾಂಕ್‌ಗೆ ಹರಿಯುತ್ತದೆ.
7
ಸ್ಲರಿಯನ್ನು ತೆಗೆದು, ಗಿಡಗಳಿಗೆ ಗೊಬ್ಬರವನ್ನಾಗಿ ಬಳಸಬಹುದು.
8
ಗ್ಯಾಸ್ ಅನ್ನು ಅಡುಗೆ ಮನೆಗೆ
ಪೈಪ್ ಮೂಲಕ ತಲುಪಿಸಬಹುದು. ಇದು
ಅಡುಗೆ ಮಾಡಲು ಮತ್ತು ಇತರ
ಉದ್ದೇಶಗಳಿಗೆ ಬಳಕೆಯಾಗಬಹುದು.
 ಇವು ಬಯೋಗ್ಯಾಸ್ ಘಟಕವನ್ನು ನಿರ್ಮಾಣ ಮಾಡುವಾಗ ಗಮನಿಸಬೇಕಿರುವ 
ಕೆಲವು ಸಂಗತಿಗಳು.

ಇನ್ನಷ್ಟು ಮನೆ ನಿರ್ಮಾಣ ಪರಿಹಾರಕ್ಕಾಗಿ ಮತ್ತು ಸಲಹೆಗಾಗಿ ಅಲ್ಟ್ರಾಟೆಕ್‌ ಸಿಮೆಂಟ್‌ನ #ಮನೆಯ ಬಗ್ಗೆ ಮಾತನಾಡೋಣ ಫಾಲೋ ಮಾಡಿ.

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಒಂದು ಮಾನ್ಯವಾದ ಹೆಸರನ್ನು ನಮೂದಿಸಿ
ಒಂದು ಮಾನ್ಯವಾದ ಸಂಖ್ಯೆಯನ್ನು ನಮೂದಿಸಿ
ಒಂದು ಮಾನ್ಯವಾದ ಪಿನ್‌ಕೋಡ್‌ ನಮೂದಿಸಿ
ಒಂದು ಮಾನ್ಯವಾದ ವರ್ಗವನ್ನು ನಮೂದಿಸಿ
ಒಂದು ಮಾನ್ಯವಾದ ಉಪ ವರ್ಗವನ್ನು ನಮೂದಿಸಿ

ಈ ಫಾರ್ಮ್‌ ಅನ್ನು ಸಲ್ಲಿಸುವ ಮೂಲಕ ಅಲ್ಟ್ರಾಟೆಕ್‌ ಸಿಮೆಂಟ್‌ ನಿಮ್ಮನ್ನು ಸಂಪರ್ಕಿಸಲು ನೀವು ಅನುಮತಿ ನೀಡುತ್ತಿದ್ದೀರಿ.

ಮುಂದುವರೆಯಲು ದಯವಿಟ್ಟು ಈ ಚೌಕದಲ್ಲಿ ಗುರುತುಹಾಕಿ